
ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?
ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …