ಎಲ್ಲಾ ಬೆಳೆಗೂ ಒಂದೇ ಕಳೆ ನಾಶಕ ಅಲ್ಲ. ಬೆಳೆ ಮತ್ತು ಕಳೆಯನ್ನು ಅವಲಂಭಿಸಿ ಬೇರೆ ಬೇರೆ ಕಳೆ ನಾಶಕಗಳನ್ನು ಬಳಸಿ ಕಳೆ ನಿಯಂತ್ರಣ ಮಾಡಬೇಕಾಗುತ್ತದೆ.
ಕಳೆಗಳನ್ನು ಹುಟ್ಟಿದ ಕಳೆಗಳು ಮತ್ತು ಹುಟ್ಟಲಿರುವ ಕಳೆಗಳು ಎಂದು ಎರಡು ವಿಭಾಗ ಮಾಡಬಹುದು. ಹುಟ್ಟಿದ ಕಳೆಗಳೆಂದರೆ ನೆಲದಲ್ಲಿ ಹಾಸಿಕೊಂಡು ಇರುತ್ತವೆ. ಹುಟ್ಟಲಿರುವ ಕಳೆಗಳು ನೆಲದಲ್ಲಿ ಬೀಜದ ರೂಪದಲ್ಲಿ ಇರುತ್ತವೆ. ಬೀಜದ ರೂಪದಲ್ಲಿರುವ ಕಳೆಗಳು ಉಳುಮೆ ಮಾಡಿ ಬಿತ್ತನೆ ,ಆಗಿ ನೀರು ಗೊಬ್ಬರ ಕೊಟ್ಟ ತಕ್ಷಣ ಹುಟ್ಟುತ್ತವೆ. ಇದನ್ನು ಬೀಜವೇ ಮೊಳಕೆ ಬಾರದಂತೆ ಮಾಡುವ ಕಳೆ ನಾಶಕಗಳಿಂದ ನಿರ್ಮೂಲನೆ ಮಾಡಬಹುದು. ಇದನ್ನು ಮೊಳಕೆ ಪೂರ್ವ ಕಳೆ ನಾಶಕ ಎನ್ನುತ್ತಾರೆ.
ಮೊಳಕೆ ಪೂರ್ವದ ಕಳೆನಾಶಕ:
- ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ ಸಮಯದಿಂದ 2 ರಿಂದ 3 ದಿವಸದೊಳಗೆ ನೆಲದಲ್ಲಿ ತೇವಾಂಶವಿರುವಾಗ ನೆಲದ ಮೇಲೆ ಸಿಂಪಡಿಸುವಂತದ್ದು.
- ಹೊಲದ ಎಲ್ಲಾ ಭಾಗಕ್ಕೂ ಬೀಳುವ ಹಾಗೆ ಸಿಂಪರಣೆ ಮಾಡುವುದರಿಂದ ಹುಟ್ಟಲಿರುವ ಬೀಜಗಳು ಮೊಳಕೆ ಒಡೆಯಲಾರದು.
ಬಿತ್ತನೆಯ ನಂತರದ ಕಳೆನಾಶಕ:
- ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ ಸಮಯದಿಂದ 15 ರಿಂದ 25 ದಿವಸಗಳಲ್ಲಿ ಕಳೆಗಳು 2 ರಿಂದ 4 ಎಲೆ ಬಿಟ್ಟ ನಂತರ ಸಿಂಪರಣೆ ಮಾಡುವಂತದ್ದು.
- ಈ ಸಮಯದಲ್ಲಿ ಬೆಳೆಗಳು ಸೇರಿ ಕಳೆಗಳ ಮೇಲೂ ಎಲ್ಲಾ ಭಾಗಕ್ಕೂ ಬೀಳುವ ಹಾಗೆ ಸಿಂಪರಣೆ ಮಾಡುವುದಕ್ಕೆ ಬಿತ್ತನೆ ನಂತರದ ಕಳೆನಾಶಕವೆಂದು ಹೇಳುತ್ತಾರೆ.
ಕಳೆನಾಶಕಗಳ ಬಳಕೆಯಲ್ಲಿ ಮುನ್ನೆಚ್ಚರಿಕೆಯ ಕ್ರಮ:
- ಬೆಳೆಯ ಹಂತ ಮತ್ತು ಕಳೆ ಆಧಾರಿಸಿ ಕಳೆನಾಶಕ ಆಯ್ಕೆ ಮಾಡಬೇಕು.
- ವೇಗವಾದ ಗಾಳಿ ಮತ್ತು ಸುಡುಬಿಸಿಲಿನಲ್ಲಿ ಕಳೆನಾಶಕದ ಸಿಂಪರಣೆ ಮಾಡಬಾರದು.
- ಕಳೆನಾಶಕದ ಸಿಂಪರಣೆ ಮುಂಚೆ ಭೂಮಿಯಲ್ಲಿ ಸಾಕಷ್ಟು ತೇವಾಂಶವಿರುವುದು ಅವಶ್ಯಕ.ಮಳೆ ಬಂದ ಮರುದಿನ ಸಿಂಪಡಿಸಿದರೆ ಫಲ ಹೆಚ್ಚು.
- ಕಳೆ ನಾಶಕ ಸಿಂಪಡಿಸಿದ ನಂತರ 6 ಗಂತೆ ಮಳೆ ಬರಬಾರದು.
- ಕಳೆನಾಶಕದ ಬಳಕೆ ಬೆಳೆಯ ಸಾಧಾರಣ ಬೆಳವಣಿಗೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತಿರಬೇಕು.
- ಕಳೆನಾಶಕದ ಸಿಂಪರಣೆಯ ನಂತರ ಉಳುಮೆ ಮಾಡುವುದು ಅಥವಾ ತುಳಿದಾಡುವುದನ್ನು ಮಾಡಬಾರದು.
- ಸರಿಯಾದ ಹಾಗೂ ಸಮನಾದ ಸಿಂಪರಣೆಗಾಗಿ ಹೆಕ್ಟೇರಿಗೆ 800-1000 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
- ಸಮರ್ಪಕ ಕಳೆನಾಶಕ ಸಿಂಪರಣೆಗಾಗಿ ಫನ್‍ಜೀಟ್ ನೋಝಲ್‍ಡಬ್ಲ್ಯೂ ಎಫ್.ಎಸ್-78 ಬಳಸುವುದು ಸೂಕ್ತ.
- ಸಿಂಪರಣಾ ಸಮಯದಲ್ಲಿ ಕನ್ನಡಕ, ರಬ್ಬರ್ ಕೈಚೀಲ ಮತ್ತು ಇತರೆ ರಕ್ಷಾ ಉಡುಪುಗಳನ್ನು ಉಪಯೋಗಿಸಬೇಕು.
- ಕಾಲಿಗೆ ಮತ್ತು ಚರ್ಮಕ್ಕೆ ಕಳೆನಾಶಕದ ದ್ರಾವಣ ತಗಲಬಾರದು. ಅದು ರೋಮ ನಾಳಗಳ ಮೂಲಕ ದೇಹಕ್ಕೆ ಸೇರುವ ಸಾಧ್ಯತೆ ಇರುತ್ತದೆ.
- ಬೆನ್ನಿಗೆ ಏರಿಸಿ ಸಿಂಪಡಿಸುವ ಸ್ಪ್ರೇಯರ್ ನಲ್ಲಿ ಸಿಂಪಡಿಸುವಾಗ ಅದರಲ್ಲಿ ದ್ರಾವಣ ಎಲ್ಲುವಂತೆ ಇರಬಾರದು. ಅದು ಚರ್ಮಕ್ಕೆ ತಾಗಬಾರದು.
ಸಿಂಪರಣಾ ಕಾರ್ಯ ಮುಗಿದತಕ್ಷಣ ಸಿಂಪರಣಾ ಯಂತ್ರದ ಎಲ್ಲಾ ಭಾಗಗಳನ್ನು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು ಮತ್ತು ದನಕರುಗಳನ್ನು ಮೇಯಲೂ ಬಿಡಬಾರದು. ಹುಲ್ಲನ್ನು ಹ್ದನಕರುಗಳಿಗೆ ಹಾಕಬಾರದು.
ಯಾವ ಬೆಳೆಗೆ ಯಾವ ಕಳೆನಾಶಕ:
- ಧೀರ್ಘಾವಧಿಯ ತೋಟಗಾರಿಕಾ ಬೆಳೆಗಳ ಮಧ್ಯಂತರದಲ್ಲಿ ಹುಟ್ಟುವ ಕಳೆಗಳ ನಿಯಂತ್ರಣಕ್ಕೆ ಗ್ಲೈಫೋಸೆಟ್ ಕಳೆನಾಶಕದ ಬದಲು ಡಯುರಾನ್ 1 ಕಿಲೋ ಮತ್ತು ಆಟ್ರಾಜಿನ್ ½ ಕಿಲೋ , 200 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಉತ್ತಮ.
- ಇದರಲ್ಲಿ ಬೆಳೆಗಳ ಮೇಲೆ ದುಶ್ಪರಿಣಾಮ ಇಲ್ಲ. ಮೆಣಸಿನ ಬಳ್ಳಿ ಸಾಯದು.
- ಸಣ್ಣ ಅಡಿಕೆ ಗಿಡಗಳಿಗೆ ಸ್ವಲ್ಪ ತಗಲಿದರೂ ತೊಂದರೆ ಆಗದು.
- ಹಾಗೆಂದು ಇದು ಸಂಪೂರ್ಣ ಸುರಕ್ಷಿತ ಎನ್ನುವಂತಿಲ್ಲ.
- ಅಂಟು, ಅಥವಾ ಪ್ರಸರಕ ಬಳಸಿ ಸಿಂಪಡಿಸಿದರೆ ಫಲಿತಾಂಶ ಹೆಚ್ಚು
ತೊಗರಿ ಬೆಳೆಗೆ :
- ಅಲಾಕ್ಲೋರ್ 50 ಇಸಿ ಮತ್ತು ಪೆಂಡಿಮೆಥಾಲಿನ್ 30 ಇಸಿ, 1.0 ಲೀಟರ್ +1.3 ಲೀಟರ್ : ಬಿತ್ತಿದಿನ ಅಥವಾ ಮರುದಿನ ಸಿಂಪಡಿಸಬೇಕು.
- ಇಮ್ಯಾಝೆತಾಪೈರ್ 10 ಎಸೆಎಲ್,೦.4 ಲೀಟರ್, ಸಸಿಗೆ 15-25 ದಿನದ ನಂತರ ಸಿಂಪಡಿಸಬೇಕು.
ಉದ್ದು:
- ಪೆಂಡಿಮೆಥಾಲಿನ್ 30 ಇಸಿ ಮತ್ತು ಪ್ಲೊಕ್ಲೋರಾಲಿನ್ 45 ಇಸಿ ಮತ್ತು ಅಲಾಕ್ಲೋರ್ 50 ಇಸಿ 1.3 ಲೀಟರ್ 0.8 ಅಥವಾ 1.2 ಲೀಟರ್
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
- ಕ್ವಿಝಾಲೋಫಾಫ್ ಇಥೈಲ್ 5 ಇಸಿ ಮತ್ತು ಪ್ರೋಪಾಕ್ವಿಝಾಫಾಫ್ 10 ಇಸಿ, 400 ಎಮ್.ಎಲ್ 200 ಎಮ್.ಎಲ್ ಬೆಳೆಗೆ 25-30 ದಿವಸದ ನಂತರ (ಬೀಜದಿಂದ ವೃದ್ಧಿಯಗುವ ಏಕವಾರ್ಷಿಕ ಹುಲ್ಲಿನ ಜಾತಿಗೆ ಸೇರುವ ಕಳೆಗಳಿಗೆ)
ಹೆಸರು:
- ಪೆಂಡಿಮೆಥಾಲಿನ್ 30 ಇಎಸ್, 1.3 ಲೀಟರ್ : ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
ಕಬ್ಬು:
- ಅಟ್ರಜನ್ ಶೆ.50ರ ಪುಡಿ ಮತ್ತು ಡೈಯುರಾನ್ ಶೇ.80ರ ಪುಡಿ ,1.0 ಕಿಲೋ+ 1.0 ಕಿಲೋ,
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
- ಮೆಟ್ರಿಬ್ಯೂಜನ್ ಶೇ.70ರ ಪುಡಿ ಮತ್ತು 2-4 ಡಿ ಲವಣ ಶೇ.80ರ ಪುಡಿ , 0.50 ಕಿಲೋ +1.00 ಕಿಲೋ
- ನೆಟ್ಟು 15-25 ದಿವಸದ ನಂತರ ಸಿಂಪಡಿಸಬೇಕು.
ಹತ್ತಿ:
- ಡೈಯುರಾನ್ ಶೇ.80ರ ಪುಡಿ ಮತ್ತು ಪ್ಲೊಕ್ಲೋರಾಲಿನ್ 45 ಇಸಿ ,ಪೆಂಡಿಮೆಥಾಲಿನ್ 30 ಇಸಿ, ಬ್ಯೂಟಕ್ಲೋರ್ 50 ಇಸಿ ಅಲಾಕ್ಲೋರ್ 50 ಇಸಿ, 1.0 ಕಿಲೋ+ 0.50 ಲೀಟರ್+ 1.3 ಲೀಟರ್+600 ಎಮ್.ಎಲ್ + 600 ಎಮ್.ಎಲ್
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
ಎಣ್ಣೆಕಾಳು ಬೆಳೆಗಳು:
- ಶೇಂಗಾ/ಸೂರ್ಯಕಾಂತಿ: ಅಲಾಕ್ಲೋರ್ 50 ಇಸಿ,ಪೆಂಡಿಮೆಥಾಲಿನ್ 30 ಇಸಿ 1.00 ಲೀಟರ್, 1.3 ಲೀಟರ್,
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
- ಮೆಕ್ಕೆಜೋಳ: ಅಟ್ರಜನ್ ಶೆ.50ರ ಪುಡಿ ಮತ್ತು ಆಕ್ಸಿಪ್ಲೊರೋಫೆನ್ 23.5 ಇಸಿ ಮತ್ತು ಪೆಂಡಿಮೆಥಾಲಿನ್ 30 ಇಸಿ ಮತ್ತು ಪ್ಲೊಕ್ಲೋರಾಲಿನ್ 45 ಇಸಿ, 1.0 ಕೆ.ಜಿ+ 150 ಎಮ್.ಎಲ್+ 600 ಎಮ್.ಎಲ್+ 600 ಎಮ್.ಎಲ್,
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
ನಾಟಿ ಮಾಡಿದ ಉಳ್ಳಾಗಡ್ಡಿ:
- ವೆಟಲಾಕ್ಲೋರ್ 50 ಇಸಿ ಮತ್ತು ಆಕ್ಸಿಪ್ಲೊರೋಫೆನ್ 23.5 ಇಸಿ ಮತ್ತು ಪೆಂಡಿಮೆಥಾಲಿನ್ 30 ಇಸಿ ಮತ್ತು ಅಲಾಕ್ಲೋರ್ 50 ಇಸಿ ,600 ಎಮ್.ಎಲ್+ 200 ಎಮ್.ಎಲ್+ 1.0 ಲೀಟರ್+ 800 ಎಮ್.ಎಲ್
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
ಬಿತ್ತನೆ ಉಳ್ಳಾಗಡ್ಡಿ:
- ಅಲಾಕ್ಲೋರ್ 50 ಇಸಿ ಮತ್ತು ಆಕ್ಸಿಪ್ಲೊರೋಫೆನ್ 23.5 ಇಸಿ ಮತ್ತು ಪೆಂಡಿಮೆಥಾಲಿನ್ 30 ಇಸಿ, 600 ಎಮ್.ಎಲ್ + 160 ಎಮ್.ಎಲ್ 1.0 ಲೀಟರ್
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
- ಮೆಣಸಿನಕಾಯಿ: ಪೆಂಡಿಮೆಥಾಲಿನ್ 30 ಇಸಿ ಮತ್ತು ಅಲಾಕ್ಲೋರ್ 50 ಇಸಿ,1.0 ಲೀಟರ್ + 1.0 ಲೀಟರ್
- ಬಿತ್ತಿದ ದಿನ ಅಥವಾ ಮರುದಿನ ಸಿಂಪಡಿಸಬೇಕು.
ಕಳೆ ನಾಶಕಗಳನ್ನು ಬಳಸುವಾಗ ನಾವು ಅದರ ಅನುಕೂಲ ಮತ್ತು ಅನನುಕೂಲ ಎರಡನ್ನೂ ತಿಳಿದು ಬಳಕೆ ಮಾಡಬೇಕು. ಮನಬಂದಂತೆ ಬಳಕೆ ಮಾಡುವುದು, ಕೈಯಲ್ಲಿ ಕಲಕುವುದು, ಪ್ರಮಾಣಕ್ಕಿಂತ ಹೆಚ್ಚಾಗಿ ಬಳಕೆ ಮಾಡುವುದು ಮಾಡಬಾರದು. ಅತಿಯಾದರೆ ಎಲ್ಲವೂ ಹಾನಿಕಾರಕ. ರಾಸಾಯನಿಕ ಆದ ಕಾರಣ ಸುರಕ್ಷಿತ ಕ್ರಮಗಳನ್ನು ತಪ್ಪದೆ ಪಾಲಿಸಬೇಕು.
ಲೇಖಕರು – 1. ಡಾ. ಯುಸುಫ್ ಅಲಿ ನಿಂಬರಗಿ, ವಿಜ್ಞಾನಿ (ಬೇಸಾಯಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ : 2. ಡಾ. ಶ್ರೀನಿವಾಸ ಬಿ. ವಿ ವಿಜ್ಞಾನಿ (ಮಣ್ಣು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ :3. ಡಾ. ಜಹೀರ್ ಅಹೆಮದ್ ,ವಿಜ್ಞಾನಿ (ಸಸ್ಯರೋಗ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ : 4. ಡಾ. ರಾಜು ಜಿ. ತೆಗ್ಗಳ್ಳಿ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ : 5. ನಿಸರ್ಗ ಹೆಚ್. ಎಸ್, ಕೃಷಿ ವಿಶ್ವವಿದ್ಯಾಲಯ, ರಾಯಚೂರು : 6. ಚೈತ್ರಾ ಜಿ ಎಮ್
ಹಾಗಲಕಾಯಿ ಮತ್ತು ಟೊಮೇಟೊ ಬೆಳೆಗೆ ಯಾವ್ ಕಳೆನಾಸಕ್ ಉಪಯೋಗ ಮಾಡಬೇಕು
ಹಾಗಲ ಕಾಯಿ, ಟೊಮಟೋ ಬೆಳೆಗೆ ನಾಟಿಗೆ ಮುಂಚೆ ಹೊಲಕ್ಕೆ ತೇವ ಮಾಡಿ ಮೊಳಕೆ ಪೂರ್ವ ಕಳೆನಾಶಕವಾದ ಡಯುರಾನ್ 1 ಕಿಲೊ + ಅಟ್ರಾಜಿನ್ 250 ಗ್ರಾಂ, 200 ಲೀ. ನೀರಿಗೆ ಬೆರೆಸಿ ಸಿಂಪಡಿಸಿ. ನಂತರ ಮಲ್ಚಿಂಗ್ ಶೀಟು ಹಾಕಿ ಬೆಳೆ ಬೆಳೆಸಿ. ಕಳೆ ಬರಲಾರದು.ಕಳೆ ನಾಶಕ ಗಿಡ ಹಾಕಿದ ನಂತರ ಸಿಂಪಡಿಸಬೇಡಿ. ಸಣ್ಣ ಪುಟ್ಟ ಕಳೆಗಳನ್ನು ಕೈಯಲ್ಲಿ ಪ್ರಾರಂಭದಲ್ಲೇ ಕೈಯಲ್ಲಿ ತೆಗೆಯಿರಿ.
ನಿಮ್ಮ ಮಾಹಿತಿಗಾಗಿ ತುಂಬಾ ಧನ್ಯವಾದಗಳು….
ಪ್ರೀತಿ ಇರಲಿ. ನಿಮ್ಮ ಮಿತ್ರರಿಗೂ ಈ ವೆಬ್ ಒಳ್ಳೆಯದಿದ್ದರೆ ತಿಳಿಸಿ. ನಿಮ್ಮ ಹಾರೈಕೆಗೆ ಅಭಿನಂದನೆಗಳು.
Cabbage nalli yava spary madbodu
ಕ್ಯಾಬೇಜ್ ಬೆಳೆಗೆ ಬಿತ್ತನೆಗೆ ಮುಂಚೆ ಮೊಳಕೆ ಪೂರ್ವ ಕಳೆನಾಶಕವಾದ ಡಯುರಾನ್ 1 ಕಿಲೊ + ಅಟ್ರಾಜಿನ್ 250 ಗ್ರಾಂ, 200 ಲೀ. ನೀರಿಗೆ ಬೆರೆಸಿ ಸಿಂಪಡಿಸಿ. ನಂತರ ಮಲ್ಚಿಂಗ್ ಶೀಟು ಹಾಕಿ ಬೆಳೆ ಬೆಳೆಸಿ. ಕಳೆ ಬರಲಾರದು.ಕಳೆ ನಾಶಕ ಗಿಡ ಹಾಕಿದ ನಂತರ ಸಿಂಪಡಿಸಬೇಡಿ. ಸಣ್ಣ ಪುಟ್ಟ ಕಳೆಗಳನ್ನು ಕೈಯಲ್ಲಿ ಪ್ರಾರಂಭದಲ್ಲೇ ಕೈಯಲ್ಲಿ ತೆಗೆಯಿರಿ.
25 ಅಡಿ ಎತ್ತರದ ತಾಳೆ ಮರ ಗಳನ್ನು ಸಾಯಿಸಲು ಯಾವ ಔಷಧಿ ಬಳಸಬೇಕು
ಯಾಂತ್ರಿಕ ಗರಗಸದಲ್ಲಿ ತೂತಿನಂತೆ ಕೊರೆಯಿರಿ. ಅದು ಓರೆಯಾಗಿರಲಿ. ಅದರ ಒಳಗೆ ಕಳೆನಾಶಕ ೧೦೦ ml ಹಾಕಿ. ನೀರು ಬೇಡ. (ಯಾವ ದಿಕ್ಕಿಗೆ ಬೀಳಬೇಕೋ ಆ ದಿಕ್ಕಿಗೆ ವಿರುದ್ಧವಾಗಿ) ನಂತರ ಸುಮಾರು ೧ ತಿಂಗಳಲ್ಲಿ ಗರಿ ಬಾಡಿ ಸಾಯುತ್ತದೆ. ತಕ್ಷಣ ಕಡಿಯಬೇಕು. ಇಲ್ಲವಾದರೆ ಕೆಂಪು ಮೂತಿ ಹುಳ ಬರುತ್ತದೆ.
ಪಾರ್ಥೇನಿಯ ಹತೋಟಿಗೆ ಯಾವ ಕಳೆನಾಶಕಉತ್ತಮ
ಹುಲ್ಲು ಹಾಳಗಬಾರದು
mera 71 use. add spreddar