ಅತೀ ಕಡಿಮೆ ಖರ್ಚಿನ ಹಣ್ಣಿನ ಬೆಳೆ- ಅನನಾಸು

ಅನಾನಾಸು ತೋಟಗಾರಿಕಾ ಬೆಳೆಗಳಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ತಾಜಾ ಹಣ್ಣು ಮತ್ತು ಸಂಸ್ಕರಣೆಗೆ ಬಳಕೆಯಾಗುವಂತದ್ದು. ಪ್ರಸ್ತುತ ಗ್ರಾಹಕರ ಅಭಿರುಚಿಗಾಗಿ ಬೆಳೆಗಾರರು  ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟರೆ ಈ ಬೆಳೆಗೆ ಕೀಟ ನಾಶಕ- ರೋಗ ನಾಶಕ ಬಳಕೆಯೇ ಬೇಕಾಗಿಲ್ಲ.

 • ಇದು ಬೇಸಿಗೆ ಕಾಲದ ಪ್ರಮುಖ ಪೌಷ್ಟಿಕ  ಹಣ್ಣಿನ ಬೆಳೆ ಇದು.
 • ಅನನಾಸಿನ  ವಿಶೇಷ ಎಂದರೆ ಉಳಿದ ಹಣ್ಣು ಹಂಪಲಿನಂತೆ ಇದಕ್ಕೆ ಹಣ್ಣು ನೊಣ ಇಲ್ಲ.
 • ಕೀಟ ರೋಗ ಬಾಧೆಗಳು  ತೀರಾ ಕಡಿಮೆ.
 • ಇದನ್ನು ಒಂದು ರಾಸಾಯನಿಕ ಮುಕ್ತ ಹಣ್ಣು ಎಂದೇ ಕರೆಯಬಹುದು.
 • ಕೆಲವರು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸುರಕ್ಷಿತ ಎಂದು ಪರಿಗಣಿಸಲ್ಪಟ್ಟ ಹಾರ್ಮೋನುಗಳನ್ನು ಬಳಸುವುದಿದೆ.
 • ಗ್ರಾಹಕರು ದೊಡ್ಡ ಗಾತ್ರದ  ಹಣ್ಣು ಬಯಸುವ ಕಾರಣ  ಸ್ವಲ್ಪ  ರಾಸಾಯನಿಕ ಗೊಬ್ಬರ ಬಳಸಲಾಗುತ್ತದೆ.
 • ನೈಜ  ಗಾತ್ರದ  ಹಣ್ಣು ಪಡೆಯಲು ರಾಸಾಯನಿಕ ಗೊಬ್ಬರ ಸಸ್ಯ ಸಂರಕ್ಷಗಳ ಅಗತ್ಯ ಇರುವುದಿಲ್ಲ.

ಎಲ್ಲಿ ಬೆಳೆಯಬಹುದು?

 • ಅನನಾಸನ್ನು ಈಗ ಕರಾವಳಿ ಮಲೆನಾಡಿನಲ್ಲಿ ವ್ಯಾಪಕವಾಗಿ  ಬೆಳೆಯಲಾಗುತ್ತದೆ.
 • ಹಾಗೆಂದು ಉಳಿದ ಪ್ರದೇಶಗಳಲ್ಲಿ ಬೆಳೆಯಲಾಗದು ಎಂದಿಲ್ಲ.
 • ಕಾಶ್ಮೀರದ ಸೇಬು, ದೊಡ್ದ ಬಳ್ಳಾಪುರದಲ್ಲಿ ಬೆಳೆಯುವಾಗ  ನಮ್ಮ ರಾಜ್ಯದ ಬೆಳೆಯನ್ನು ಬಹುತೇಕ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಬಹುದು.
 •  ನೀರು ಬಸಿದು ಹೋಗುವ ಮಣ್ಣು  ಬೇಕು.
 • ಹಗಲಿನ  ತಾಪಮನ ಸುಮಾರಾಗಿ 35 -36 ಡಿಗ್ರಿ ಗಿಂತ ಹೆಚ್ಚು ಇರಬಾರದು.
 • ಉಳಿದಂತೆ  ಸ್ವಲ್ಪ ಆಮ್ಲೀಯ ಮಣ್ಣು ಇದಕ್ಕೆ ಹೊಂದಿಕೆಯಾಗುತ್ತದೆ.
 • ವಾತಾವರಣದಲ್ಲಿ ಆರ್ಧ್ರತೆ ಹೆಚ್ಚು ಇದ್ದರೆ ಉತ್ತಮ.

ಯಾವ ತಳಿಗಳು:

ಕಿಂಗ್ ಅಥವಾ ರಾಜ ತಳಿ
 • ಅನನಾಸಿನಲ್ಲಿ ಪ್ರಚಲಿತದಲ್ಲಿರುವ ತಳಿಗಳಲ್ಲಿ ಕಿಂಗ್ ಮತ್ತು ಕಿವ್ ಮುಖ್ಯವಾದವುಗಳು.
 • ಇದಲ್ಲದೆ ಮಾರೀಶಿಯಸ್ ಎಂಬ  ತಳಿಯೂ ಇದೆ.
 • ಇತ್ತೀಚೆಗೆ ಹೊಸ ಫಿಲಿಫೈನ್ಸ್ ತಳಿಯೂ ಪ್ರವೇಶವಾಗಿದೆ.
 • ಕಿಂಗ್ ಅಥವಾ ರಾಜ ತಳಿ ಹೆಚ್ಚಾಗಿ ಕರ್ನಾಟಕದ ಮಲೆನಾಡಿನಲ್ಲಿ ಬೆಳೆಯಲ್ಪಡುವ ತಳಿ.
 • ಕರಾವಳಿಯಲ್ಲೂ ಇದೇ ಹೆಚ್ಚಾಗಿ ಇತ್ತು.
 • ಇತ್ತೀಚೆಗೆ ಕೇರಳದವರು ಕಿವ್  ತಳಿಯನ್ನು  ಬೆಳೆಸಲು ಪ್ರಾರಂಭಿಸಿದ್ದಾರೆ.
 • ರಾಜ ತಳಿಯು ಹೆಚ್ಚು ರಸವನ್ನು ಹೊಂದಿದ್ದು, ಪೋಷಕಾಂಶಗಳನ್ನು  ಚೆನ್ನಾಗಿ ಒದಗಿಸಿದಾಗ 2-3 ಕಿಲೋ ತನಕ ಕಾಯಿ ಕೊಡುತ್ತದೆ.
 • ಈ ತಳಿಗೆ ಗರಿಯಲ್ಲಿ ಹೆಚ್ಚು ಮುಳ್ಳುಗಳಿಲ್ಲ. ಕಾಯಿಯ ಕಣ್ಣುಗಳು ( battons) ಸ್ವಲ್ಪ ಅಗಲವಾಗಿರುತ್ತದೆ. ಇದರ ನೈಜ ಗಾತ್ರ ಸರಾಸರಿ 1.5 ಕಿಲೋ.
ಕಿವ್ (Kew) ತಳಿ
 • ಕಿವ್ (Kew) ಇದು ಕೇರಳದಲ್ಲೆಲ್ಲಾ ಬೆಳೆಯಲ್ಪಡುವ ತಳಿ.
 • ಇದರ ಹಣ್ಣು ಸ್ವಲ್ಪ ಗಟ್ಟಿ. ಹೆಚ್ಚು ರಸ ಇರುವುದಿಲ್ಲ.
 • ಇದು ಕ್ಯಾನಿಂಗ್ ಉದ್ದೇಶಕ್ಕೆ  ಹೆಚ್ಚು ಸೂಕ್ತವಾದ ತಳಿ.
 • ಇದರ ಸರಾಸರಿ ತೂಕ 1 ಕಿಲೋ.  2 ಕಿಲೋ ತನಕವೂ ತೂಕ ಬರುತ್ತದೆ.
 • ಇದರಲ್ಲೂ ಎರಡು ವಿಧಗಳಿವೆ.
 • ಮಾರೀಶಿಯಸ್ ಇದನ್ನು ಹೆಚ್ಚಾಗಿ ವಾಣಿಜ್ಯಿಕವಾಗಿ ಬೆಳೆಯುವುದು ಕಡಿಮೆ.
ಮಾರೀಶಿಯಸ್ ತಳಿ
 • ಇದರಲ್ಲಿ ಪಿಂಕ್ ಬಣ್ಣ ಮತ್ತು, ಹಳದಿ  ಬಣ್ಣ  ಇರುತ್ತದೆ.
 • ಹಣ್ಣಾಗುವಾಗ ಹಳದಿ ಬಣ್ಣ. ಇದರ ಗಾತ್ರ ಸರಾಸರಿ 1 ಕಿಲೋ. ಪೋಷಕಗಳನ್ನು ಕೊಟ್ಟು 2 ಕಿಲೋ  ತನಕವೂ ಬೆಳೆಯಬಹುದು.
 • ಉತ್ತಮ ಸುವಾಸನೆ ಮತ್ತು ರುಚಿಯನ್ನು ಹೊಂದಿದೆ.

ಇದಲ್ಲದೆ ಅನನಾಸಿನಲ್ಲಿ ಉತ್ತರ ಭಾರತದ ಪಶ್ಚಿಮ ಬಂಗಾಲದಲ್ಲಿ ಬರಿಪುರ್ (Baruipur local) ಆಂದ್ರ ಪ್ರದೇಶದಲ್ಲಿ ಸಿಂಹಾಚಲಮ್  (Simhachalam) ಮತ್ತು ದಾರ್ಜಿಲಿಂಗ್ ನಲ್ಲಿ ಹರಿಚರಣ್ ವಿಟಾ  (Haricharanvita) ಎಂಬ ತಳಿಗಳೂ,  ಜಲಧೂಪ್ (Jaldhup)ಎಂಬ ಹುಳಿಯಾದ ತಳಿ, ಲಖಾತ್ (Lakhat) ಎಂಬ ಸಿಹಿಯಾದ ರಾಣಿ ಜಾತಿಯ ತಳಿಗಳೂ ಭಾರತದಲ್ಲಿ  ಬೆಳೆಯುತ್ತಿವೆ. ರಾಣಿ ತಳಿಯಲ್ಲಿ 5 ವಿಧಗಳು ಇವೆ.

 • ಸ್ಪಾನಿಶ್ ತಳಿಗಳಲ್ಲಿ ಕೆಂಪು ಸ್ಪಾನಿಶ್, ಸಿಂಗಾಪುರ್ ಸ್ಪಾನಿಶ್, ಮಸ್ಮೆರಾ (Masmerah) ಹೀಗೆ ದೇಶ ವಿದೇಶಗಳಲ್ಲಿ ಸುಮಾರಾಗಿ 25 ಕ್ಕೂ ಹೆಚ್ಚು ತಳಿಗಳು ಬೆಳೆಯಪಡುತ್ತಿವೆ.

ಬೆಳೆಯುವ ವಿಧಾನ:

 • ಹಿಂದೆ ಅನನಾಸನ್ನು ಟ್ರೆಂಚ್  ಪದ್ದತಿಯಲ್ಲಿ ಬೆಳೆಯುತ್ತಿದ್ದರು.
 • ಈಗ ಅದು ತುಂಬಾ ಕಡಿಮೆಯಾಗಿ ಸಾಲು ಮಾಡಿ ನಾಟಿ ಮಾಡಲಾಗುತ್ತದೆ.
 • ನೆಲದಲ್ಲಿ ಸಾಲು ಮಾಡಿ ಜೋಡಿ ಸಾಲುಗಳಲ್ಲಿ ನಾಟಿ ಮಾಡುವುದು ಈಗ ಸಾಮಾನ್ಯವಾಗಿದೆ.
 • ನೆಲವನ್ನು ಕಳೆಗಲಿಲ್ಲದಂತೆ ತೆಗೆದು, ಭೂಮಿಯ ರಚನೆಗೆ ಅನುಗುಣವಾಗಿ ನೆಲವನ್ನು ಸಿದ್ದಪಡಿಸಿ, ನಾಟಿ ಮಾಡಬೇಕು.

ಸಸಿಯಿಂದ ಸಸಿಗೆ 1X1 ಅಡಿ ಅಂತರ , ಸಾಲಿನಿಂದ ಸಾಲಿಗೆ 4 ಅಡಿ ಅಂತರದಲ್ಲಿ ನಾಟಿ ಮಾಡಿದಾಗ ಎಕ್ರೆಗೆ ಸುಮಾರು 15,000 ಸಸಿಗಳನ್ನು ಹಿಡಿಸಬಹುದು. ಅವಕಾಶ ಹೊಂದಿ 20,000  ತನಕವೂ ಹಿಡಿಸಬಹುದು. ಗಿಡ ಒತ್ತೊತ್ತಾಗಿದ್ದಷ್ಟು ಕಾಯಿಗೆ ಬಿಸಿಲಿನ ರಕ್ಷಣೆ  ದೊರೆಯುತ್ತದೆ. ನೀರಾವರಿಗೂ ಅನುಕೂಲ.

 • ಸಾಲಿಗೆ ಇನ್ ಲೈನ್ ಡ್ರಿಪ್ ಹಾಕಿ ಮಲ್ಚಿಂಗ್ ಶೀಟು ಹಾಕಿಯೂ ಬೆಳೆಯಬಹುದು.
 • ಅನನಾಸು ಸಸ್ಯದ ಗಿಡದ ರಚನೆ ಗುಲಾಬಿ ಎಸಳಿನ ತರಹ ಆಗಿರುವ ಕಾರಣ ಇದಕ್ಕೆ ಕೊಡುವ ನೀರು ಎಲೆ ಕಂಕುಳಲ್ಲಿ ಸಂಗ್ರಹವಾಗಿ ಕಡಿಮೆ ನೀರು ಸಾಕಾಗುತ್ತದೆ.
 • ನೆಡಲು ಅನನಾಸಿನ ಹಿಳ್ಳೆಗಳು( ಸಸಿಯ  ಬುಡದಿಂದ ಬರುವ ಮೊಳಕೆ( sucker) ಗಳನ್ನು ಬಳಕೆ ಮಾಡಲಾಗುತ್ತದೆ.
ನೆಡಲು ಉತ್ತಮ ಸಕ್ಕರುಗಳು
 • ಕಾಯಿಯ ಬುಡದಿಂದ ಬರುವ ಮೊಳಕೆ (ಸ್ಲಿಪ್) ಗಳನ್ನೂ ಬಳಸಬಹುದು.
ಸ್ಲಿಪ್ ಗಳು
 •  ಕಾಯಿಯ ತುದಿಯಲ್ಲಿ ಬರುವ ಜುಟ್ಟು (Crown) ಸಹ ನೆಡು ಸಾಮಾಗ್ರಿಯಾಗಿ ಬಳಕೆ ಮಾಡಬಹುದು.
 • ಸಕ್ಕರ್ ಗಳನ್ನು ನಾಟಿ ಮಾಡಿದರೆ 6-7 ತಿಂಗಳಿಗೆ  ಹೂ ಬರುವ ಹಂತಕ್ಕೆ ಬೆಳೆಯುತ್ತದೆ.
 • ಸ್ಲಿಪ್ ಗಳನ್ನು ನಾಟಿ  ಮಾಡಿದರೆ ಸುಮಾರು 7-8 ತಿಂಗಳು  ಬೇಕು.
 • ಜುಟ್ಟು ಸುಮಾರು 1 ವರ್ಷ ಬೇಕು.

ಫಸಲು ಮತ್ತು ಇಳುವರಿ:

 • ನಾಟಿ ಮಾಡಿ ಹೂ ಬರಲು 7 ತಿಂಗಳು, ಕಾಯಿ ಬೆಳೆಯಲು 3-4 ತಿಂಗಳು ಬೇಕು.
 • ಒಮ್ಮೆ ನೆಟ್ಟ ಗಿಡದಲ್ಲಿ 15-16 ತಿಂಗಳಿಗೆ 2 ಬೆಳೆ ತೆಗೆಯಬಹುದು.
 • ಒಂದು ಎಕ್ರೆಯಲ್ಲಿ 15,000 ಅನನಾಸು   ಸಸಿ ಬೆಳೆದರೆ ಸರಾಸರಿ 2 ಕಿಲೋ ಪ್ರಕಾರ 25ಟನ್ ಇಳುವರಿ ಪಡೆಯಬಹುದು.
 • ಇದರಿಂದ ಸರಾಸರಿ ಕಿಲೋ ಗೆ 15  ರೂ. ನಂತೆ 2 ಲಕ್ಷಕೂ ಹೆಚ್ಚು ಆದಾಯ ಪಡೆಯಬಹುದು.

ಒಮ್ಮೆ ನೆಟ್ಟ ಗಿಡದಿಂದ ಎರಡು ಬೆಳೆ ತೆಗೆದ ಮೇಲೆ ಬರುವ ಕಾಯಿಗಳು  ಚಿಕ್ಕದಾಗುತ್ತವೆ. ಅಡಿಕೆ ತೋಟದಲ್ಲಿ ಮೊದಲ ಎರಡು ವರ್ಷ ಲಾಭದಯಕ ಮಿಶ್ರ ಬೆಳೆ. ತೆಂಗಿನ ತೋಟದಲ್ಲಿ ಯಾವಾಗಲೂ ಬೆಳೆಸಬಹುದು. ಸ್ಥಳೀಯವಾಗಿ  ಉತ್ತಮ ಮಾರುಕಟ್ಟೆ ಇದೆ. 

 

Leave a Reply

Your email address will not be published. Required fields are marked *

error: Content is protected !!