ಅನನಾಸು ಬೆಳೆಗಾರರ ಪಾಲಿಗೆ ಇದು ಕರಾಳ ವರ್ಷ.

ಅನನಾಸು ಬೆಳೆಗಾರರು ಬೆಳೆ ಬೆಳೆಸಿ ಈ ತನಕ  ಮಾಡಿದ ಸಂಪಾದನೆಯನ್ನೆಲ್ಲಾ ಈ ವರ್ಷ ಕಳೆದುಕೊಳ್ಳುವಂತಾಗಿದೆ. ಸಾಲಗಳು ಮೈಮೇಲೆ ಬಂದಿದೆ.

  • ಕೃಷಿ ಉತ್ಪನ್ನದ ಮಾರುಕಟ್ಟೆ ಎಂಬುದು ಬಹಳ ಜಠಿಲ ಸಂಗತಿ.
  • ಸಣ್ಣ ಪುಟ್ಟ ಘಟನೆಗಳೂ, ವದಂತಿಗಳೂ ರೈತರ ಬದುಕಿನಲ್ಲಿ ಆಟ ಆಡುತ್ತವೆ.
  • ಈ ವರ್ಷ ಬಹುತೇಕ ಕೃಷಿಕರ ಬದುಕಿನಲ್ಲಿ  ಕೊರೋನಾ ಸಂಕ್ರಾಮಿಕ ರೋಗ ಆಟ ಆಡಿದೆ.
  • ಈ ರೈತರು ಇನ್ನು ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುವ ಸಾಧ್ಯತೆ ಇದೆ.

ಸಂಪೂರ್ಣ ನಷ್ಟ:

  • ಕರಾವಳಿಯ ಜಿಲ್ಲೆಗಳಲ್ಲಿ ಸುಮಾರು 2000 ಎಕ್ರೆಗೂ ಅಧಿಕ ಅನನಾಸು ಬೆಳೆ ಇದೆ.
  • ಮಲೆನಾಡಿನ, ತೀಥಹಳ್ಳಿ, ಸಾಗರ, ಸೊರಬ, ಆನವಟ್ಟಿ ಬನವಾಸಿ ತನಕ ಸುಮಾರು 2000 ಹೆಕ್ಟೇರಿಗೂ ಹೆಚ್ಚು ಬೆಳೆ  ಇರಬಹುದು.
  • ಕೆಲವು ರೈತರು ಹತ್ತಿರ ಹತ್ತಿರ ಕೋಟಿ ರೂ ತನಕವೂ ಈ ಬೆಳೆಗೆ ಖರ್ಚು ಮಾಡಿ ದ್ದು ಉಂಟು.
  •  ಈ ವರ್ಷದ ಪರಿಸ್ಥಿತಿಯಲ್ಲಿ ಖರ್ಚು ಮಾಡಿದ   ಚೂರು ಪಾರು  ಸಹ ಆದಾಯ ಬರುವ ನಿರೀಕ್ಷೆ ಇಲ್ಲ.
  • ಒಂದು ಲೊಡು ಅನನಾಸೂ ಸಹ ಮಾರಾಟ ಆಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಯೂ ಇಲ್ಲ.
ಅಲ್ಲಲ್ಲಿ ಸುತ್ತುತ್ತಿದ್ದ ಈ ಲಾರಿಗಳು ಈಗ ಇಲ್ಲವೇ ಇಲ್ಲ

ಸೊರಬ  ಸಮೀಪದ ಕಡಸೂರಿನ ರೈತರೊಬ್ಬರು ಈ ವರ್ಷ ಸುಮಾರು 40 ಎಕ್ರೆಗೂ ಹೆಚ್ಚು ಅನನಾಸು ಬೆಳೆದಿದ್ದು, ಸುಮಾರು 1000 ಟನ್ ಗೂ ಹೆಚ್ಚು ಉತ್ಪತ್ತಿಯನ್ನು ನಿರೀಕ್ಷಿಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ  ಸ್ವಲ್ಪ ಮಾರಾಟ ಮಾಡಿದ್ದು, ಉಳಿದ 95% ಇನ್ನೇನು  ಕಠಾವಿಗೆ  ಸಿದ್ಧವಾಗಿದೆ.

  • ಆದರೆ ಕೊರೋನಾ ಸೋಂಕು ತತ್ಪರಿಣಾಮವಾಗಿ ಮಾರುಕಟ್ಟೆಯ ಕುಸಿತ ಈ ವರ್ಷ ಅನನಾಸಿನ ಧಾರಣೆಯನ್ನು ಕಿಲೋ-ರೂ.6 ಕ್ಕೂ ಕೆಳಗೆ ಇಳಿಸಿದೆ.
  • ಇವರಲ್ಲದೆ ಇನ್ನೂ ಹಲವಾರು ರೈತರ ಹೊಲಾದಲ್ಲಿ ಅನನಾಸು ಹಣ್ಣಾಗಿ ಹಾಳಾಗುತ್ತಿದೆ.
  • ಅನನಾಸಿಗೆ  ಉತ್ತಮ ಬೆಲೆ ದೆಹಲಿ ಕಟ್ಟಿಂಗ್ ಗುಣಮಟ್ಟಕ್ಕೆ.
  • ಅದರ  ಗಾತ್ರ ಸರಾಸರಿ 2 ಕಿಲೋ ಗಿಂತ ಮೇಲೆಯೇ ಇರಬೇಕು.
  • ಉಳಿದ ಸಣ್ಣ ಅಥವಾ ಸ್ಥಳೀಯ ಫ್ಯಾಕ್ಟರಿಗೆ ಬಳಕೆಯಾಗುವ ಕಾಯಿಗಳಿಗೆ  ಕಿಲೋ ರೂ 4 ರ ಆಸುಪಾಸಿನಲ್ಲಿ ಬೆಲೆ ಇದೆ.
  • ಸಾಮಾನ್ಯವಾಗಿ ಫ್ಯಾಕ್ಟರಿ ಮಾಲು ಎಂದರೆ ಅದು ಕೊನೆಗೆ ದೊರೆಯುವ ಕಾಯಿಗಳಾಗಿದ್ದು, ಬಹುಷ: ಈ ವರ್ಷ ತಾಜಾ ಹಣ್ಣಾಗಿ ಮಾರಾಟವಾಗುವ ಕಾಯಿಗಳೆಲ್ಲಾ ಫ್ಯಾಕ್ಟರಿಗೆ  ಹೋಗಬೇಕಾಗಿ ಬರಬಹುದು ಎನ್ನುತಾರೆ ಸೊರಬದ ಓರ್ವ ಅನನಾಸು ಬೆಳೆಗಾರರು.
  • ಪ್ರತೀ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 10-15 % ಬೆಳೆ ಪ್ರದೇಶ ಹೆಚ್ಚಿಗೆ ಇದೆ.
  • ಇನ್ನು ಸಧ್ಯಕ್ಕೆ ಪರಿಸ್ಥಿತಿ ಸುಧಾರಣೆ ಆಗುವ ಸೂಚನೆ ಯಾವುದೂ ಇಲ್ಲದ ಕಾರಣ  ಅನನಾಸು ಗಿಡದಲ್ಲೇ ಕೊಳೆತು  ಹೋಗುವ ಸಾಧ್ಯತೆಗಳು ನಿಚ್ಚಳವಾಗಿದೆ.
  • ಅನನಾಸು ಕೊಳೆಯುವುದರೊಂದಿಗೆ  ಬೆಳೆದರವರ  ಸ್ಥಿತಿ ಹೇಳತೀರದಷ್ಟು ಚಿಂತಾಜನಕ  ಆಗಲಿದೆ.
ಅನನಾಸು ಬೆಳೆಯ ಸೊಬಗು

ಪರಿಸ್ಥಿತಿ ಏನಾಗಿದೆ:

  • ನಮ್ಮೂರಲ್ಲಿ ಬೆಳೆದ ಬಹುತೇಕ ಅನನಾಸು ದೆಹಲಿ, ಕಲ್ಕತ್ತಾ ಮತ್ತು ರಾಜಸ್ಥಾನ ಮುಂತಾದ ಪ್ರದೇಶಗಳಿಗೆ  ರವಾನೆಯಾಗುತ್ತದೆ.
  • ಅನನಾಸು ಬೆಳೆಯ ಅತೀ ದೊಡ್ಡ ಪ್ರದೇಶವಾದ ಸೊರಬ- ಸಾಗರ ಮತ್ತು ಬನವಾಸಿ ಸುತ್ತಮುತ್ತ ಈ ಸೀಸನ್ ನಲ್ಲಿ ದಿನಕ್ಕೆ  5-6 ಟ್ರಕ್ ಲೋಡುಗಳಷ್ಟು ಅನನಾಸು ತುಂಬಿ ಉತ್ತರ ಭಾರತಕ್ಕೆ  ರವಾನೆಯಾಗುತ್ತದೆ.
  • ಈ ವರ್ಷ ದಿನಕ್ಕೆ 1 ಲೋಡ್ ಸಹ ರವಾನೆಯಾಗುತ್ತಿಲ್ಲ.
  • ಅಲ್ಲಿ ಬೇಡಿಕೆ ಇಲ್ಲದಾಗಿದೆ.ಬಹುತೇಕ ಬೀದಿ ಬದಿಯ ವ್ಯಾಪಾರ, ಜ್ಯೂಸ್ ಅಂಗಡಿಗಳು ಮುಚ್ಚಲ್ಪಟ್ಟಿವೆ.
  • ಇಡೀ ದೇಶವೇ ಲಾಕ್ ಡೌನ್ ಆಗಿ ಕೊಳ್ಳುವವರೇ ಇಲ್ಲದ ಸ್ಥಿತಿ ಉಂಟಾಗಿದೆ.

ಶಿರಸಿಯ ಬನವಾಸಿಯಲ್ಲಿ ಎರಡು ಅನನಾಸು ಸಂಸ್ಕ್ರರಣಾ ಘಟಕಗಳಿದ್ದು, ಈ ವರ್ಷದ ಈ ಸ್ಥಿತಿಯಿಂದ ಆ ಫ್ಯಾಕ್ಟರಿ ತೆರೆಯುವುದೇ ಇಲ್ಲವೇನೋ ಎನ್ನುವಷ್ಟು ಪರಿಸ್ಥಿತಿ ಚಿಂತಾಜನಕ ಆಗಿದೆ.

ರೈತರ ಪಾಲಿಗೆ ಯಾವುದೇ  ಸಮಸ್ಯೆಗಳೂ  ನೇರ ಪರಿಣಾಮ ಬೀರುತ್ತವೆ. ಲಾರಿ ಮುಷ್ಕರ ಆದರೂ ಸಾಂಕ್ರಾಮಿಕ ರೋಗ ಬಂದರೂ,ಆರ್ಥಿಕ ಮುಗ್ಗಟ್ಟು ಆದರೂ ಮೊದಲು ತೊಂದರೆಗೆ ಒಳಗಾಗುವವರು ಕೃಷಿಕರು.

 
 

Leave a Reply

Your email address will not be published. Required fields are marked *

error: Content is protected !!