ಕಲ್ಲಿನ ಕೂರೆಯ ಹುಡಿಯೂ ಉತ್ತಮ ಗೊಬ್ಬರ ಗೊತ್ತೇ?

ಸಸ್ಯ ಪೋಷಕವಾಗಿ ನಮಗೆ ರಾಕ್ ಫೋಸ್ಫೇಟ್ ಬಳಕೆ ಗೊತ್ತು.ಇದು ಕಲ್ಲಿನ ಹುಡಿ. ಅದೇ ರೀತಿ ನಮ್ಮ ಸುತ್ತಮುತ್ತ ಬೇರೆ ಬೇರೆ  ಶಿಲೆಗಳನ್ನು ಕಾಣಬಹುದು. ಶಿಲೆಗಳೆಲ್ಲವೂ ಜ್ವಾಲಾಮುಖಿಯ ಮೂಲಕ ಸೃಷ್ಟಿಯಾದವುಗಳು.

 • ಅದರಲ್ಲಿ ಬೆಳೆ ಪೋಷಣೆಗೆ ಬೇಕಾಗುವ ವಿವಿಧ ಪೋಷಕಾಂಶಗಳು ಇವೆ. 
 • ಇದನ್ನುಮೊತ್ತ ಮೊದಲ ಬಾರಿಗೆ  ಮಂಡ್ಯದ ಕೃಷಿ ಮಹಾವಿಧ್ಯಾಲಯದ  ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯ ಅಸ್ತಿತ್ವಕ್ಕೆ ಮಣ್ಣೇ ಆಧಾರ. ಬೆಳೆಗಳಿಗೆ ಮರಗಿಡಗಳಿಗೆ ಆಸರೆ ನೀಡುತ್ತದೆ. ಪೋಷಕಾಂಶವನ್ನು ಒದಗಿಸುತ್ತದೆ. ನೀರನ್ನುಹಿಡಿದಿಟ್ಟುಕೊಂಡು ಬೇಕಾದಾಗ ಪೂರೈಸುತ್ತದೆ.

 • ಮಣ್ಣು ಸಕಲ ಪೋಷಕಾಂಶಗಳನ್ನೂ ಒಳಗೊಂಡಿದೆ.
 • ನಾವು ಬೆಳೆಯುವ ಬೆಳೆಗಳ ಬೆಳೆವಣಿಗೆಗೆ ಬೇಕಾದ ಎಲ್ಲಾ ನಮೂನೆಯ ಪ್ರಧಾನ ಪೋಷಕಗಳು ಮತ್ತು ಅಪ್ರಧಾನ ಪೋಷಕಗಳು ಮತ್ತು ಲಘು ಪೋಷಕಗಳ ಮೂಲ ಮಣ್ಣೇ ಆಗಿರುತ್ತದೆ.
 • ಮಣ್ಣು ಎಂದರೆ ಅದರಲ್ಲಿ ಒಳಗೊಂಡ ಹಲವು ಬಗೆಯ ಶಿಲೆಗಳೂ ಇದರ ಆಕರ.

 

ಕಲ್ಲಿನ  ಪುಡಿಗಳು:

 • ರಾಜಸ್ಥಾನದ ಮಸ್ಸೂರಿಯ ಶಿಲೆಯ ಪುಡಿ ಶಿಲಾ ರಂಜಕ.
 • ಅದರ ನಯವಾದ ಪುಡಿಯೇ ಗೊಬ್ಬರ.
 • ಆದೇ ರೀತಿಯಲ್ಲಿ ಈಗ ಕೆಲವು ಪೋಷಕಾಂಶ ಪೂರೈಕೆದಾರರು ಜ್ವಾಲಾಮುಖಿಯ ಶೇಷಗಳನ್ನು ವಿದೇಶಗಳಿಂದ ಆಮದು ಮಾಡಿ ಪೋಷಕವಾಗಿ ಮಾರಾಟ ಮಾಡುತ್ತಿದ್ದಾರೆ.
 • ನಾವು ಬಳಕೆ ಮಾಡುವ ಡೊಲೋ ಮೈಟ್, ಅದೇ ರೀತಿ ಮೆಗ್ನಿಶಿಯಂ , ಕಬ್ಬಿಣ, ತಾಮ್ರ, ಸತು ಮ್ಯಾಂಗನೀಸ್, ಪೊಟ್ಯಾಶ್ ಎಲ್ಲವೂ ಒಂದೊಂದು ಬಗೆಯ ಶಿಲೆಗಳ  ಸಂಸ್ಕರಿತ ಜಿನುಗು ಪುಡಿಗಳೇ ಆಗಿವೆ.

 
 

ಕಲ್ಲಿನ ಹುಡಿ ಬಳಕೆ ವಿಧಾನ:

 •  ಕೆಲವು ಕೈಗಾರಿಕೆಗಳು ತಮ್ಮ ಉತ್ಪನ್ನಗಳ ತಯಾರಿಕೆಗೆ  ಶಿಲೆಗಳನ್ನು ಮೂಲವಸ್ತುವಾಗಿ ಬಳಸುತ್ತಾರೆ.
 • ಇದರಲ್ಲಿ ಎಲ್ಲವೂ ಬಳಕೆಯಾಗುವುದಿಲ್ಲ.
 • ಅದರ ಡಸ್ಟ್ ನಿರುಪಯುಕ್ತ ವಸ್ತುವಾಗಿರುತ್ತದೆ.
 • ಇದನ್ನು ಕೃಷಿಯಲ್ಲಿ ಬಳಕೆ ಮಾಡಬಹುದು.
 • ಸಿಮೆಂಟ್ ಉದ್ದಿಮೆಯಲ್ಲಿ  ಡೋಲೋಮೈಟ್ ಬಳಸುತ್ತಾರೆ.
 • ಅದಕ್ಕೆ ಬಳಕೆಯಾಗಿ ಉಳಿದ ತ್ಯಾಜ್ಯಗಳಲ್ಲಿ ಸುಣ್ಣದ ಮತ್ತಿನ್ನಿತರ ಅಂಶ ಇರುತ್ತದೆ.
 • ಅದೇ ರೀತಿಯಲ್ಲಿ ಮ್ಯಾಂಗನೀಸ್ ಅದಿರು ಬಳಸಿ ಅಲ್ಲಿ ನಿರುಪಯುಕ್ತವಾಗಿ  ಸಿಗುವ ಡಸ್ಟ್  ಮ್ಯಾಂಗನೀಸ್ ಸತ್ವದ ಪೋಷಕವಾಗಿರುತ್ತದೆ.
 • ಹೀಗೆ ಬೇರೆ ಬೇರೆ ಶಿಲೆಗಳು ಬೇರೆ ಬೇರೆ ಪೋಷಕಗಳನ್ನು ಹೊಂದಿರುತ್ತವೆ.

 
 

ಡಸ್ಟ್ ನ ಪ್ರಯೋಜನಗಳು:

 • ಇದು ನೈಸರ್ಗಿಕ ಪೋಷಕವಾಗಿದ್ದು, ಮಣ್ಣಿನ ಬೌತಿಕ ಸ್ಥಿತಿ ಸುಧಾರಣೆಗೆ ಇದು ಸಹಕಾರಿ. 
 • ಮಣ್ಣಿನಲ್ಲಿ  ಗಟ್ಟಿತನ ನಿವಾರಣೆಯಾಗಿ  ಗಾಳಿಯಾಡುವಿಕೆ ಮತ್ತು ನೀರು ಇಂಗುವಿಕೆಗೆ ಇದು ಅನುಕೂಲ ಮಾಡಿಕೊಡುತ್ತದೆ. 
 • ಮಣ್ಣಿನ ಸೂಕ್ಷ್ಮ ಜೀವಿಗಳ ಉಳಿವಿಗೆ ಈ ಪೋಷಕಗಳು ಸಹಕಾರಿ.
 • ಮಣ್ಣಿಗೆ ಸಮಸ್ಥಿತಿಯನ್ನುಒದಗಿಸಿ, ಸಸ್ಯಗಳಿಗೆ ರೋಗ ನಿರೋಧಕ ಶಕ್ತಿಯನ್ನು, ಬರ, ಕೀಟ,ರೋಗ ತಡಕೊಳ್ಳುವ ಶಕ್ತಿಯನ್ನು ಕೊಡುತ್ತದೆ. 
 • ರಾಸಾಯನಿಕ ಮೂಲದ ಗೊಬ್ಬರ, ಕೀಟನಾಶಕ, ರೋಗನಾಶಕದ ಬಳಕೆಯನ್ನು ಕಡಿಮೆ ಮಾಡುತ್ತದೆ.
 • ಮಣ್ಣಿನಲ್ಲಿ ಇಂಗಾಲದ ಅನುಪಾತವನ್ನು ಹೆಚ್ಚಿಸುತ್ತದೆ.
 • ಇದು ಧೀರ್ಘ ಕಾಲಿಕ ಫಲಿತಾಂಶವನ್ನು ಕೊಡುವ ಪೋಷಕಗಳಾಗಿವೆ. 

 
 

ಬಳಸುವ ವಿಧಾನ:

 •  ಮಣ್ಣಿನ ಸ್ಥಿತಿಗತಿಗನುಗುಣವಾಗಿ  ಕಲ್ಲಿನ ಹುಡಿಯ  ಬಳಕೆ  ಬದಲಾಗುತ್ತದೆ.
 • ಮರಳು ಮಣ್ಣಿಗೆ ಸಣ್ಣ ಗಾತ್ರದ   ಹುಡಿ, ಎರೆ ಮಣ್ಣಿಗೆ  ದೊಡ್ಡ ಗಾತ್ರದ ಕಣಗಳೂ ಬೇಕಾಗುತ್ತವೆ.
 • ಹೆಕ್ಟೇರಿಗೆ ಮಣ್ಣಿನ ಗುಣ ಹೊಂದಿ 5-10 ಟನ್ ತನಕ ರಾಕ್ ಡಸ್ಟ್ ಬಳಕೆ ಮಾಡಬಹುದು.
 • ಇದನ್ನು ಹೊಲಕ್ಕೆ ಬಳಕೆ ಮಾಡುವಾಗ ಕೊಟ್ಟಿಗೆ ಬಳಸಲೇ ಬೇಕು.  ಬಿತ್ತನೆ ಮಾಡುವ 15-20 ದಿನ ಮುಂಚೆ ಹೊಲಕ್ಕೆ ಸೇರಿಸಿ ಮಣ್ಣಿನಲ್ಲಿ ಮಿಶ್ರ ಮಾಡಿದರೆ ಅದರ ಫಲಿತಾಂಶ ಹೆಚ್ಚು.

 
 

ಕರ್ನಾಟಕದಲ್ಲಿ ರಾಕ್ ಡಸ್ಟ್:

 • ನಮ್ಮ ರಾಜ್ಯದಲ್ಲಿ  ಶಿಲೆಕಲ್ಲಿನ ಹಲವು ಕೋರೆಗಳಿದ್ದು, ಅಲ್ಲಿ ಎಂ ಸಾಂಡ್ ಹಾಗೂ ಇನ್ನಿತರ  ವಸ್ತುಗಳನ್ನು ತಯಾರಿಸುವಾಗ ದೊರೆಯುವ ನಿರುಪಯುಕ್ತ ಡಸ್ಟ್ ಸುಮಾರು 15 %. 
 • ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದೂ ಸಮಸ್ಯೆ.
 • ಇದನ್ನು ಹೊಲಗಳಿಗೆ ಪೋಷಕವಾಗಿ  ಬಳಕೆ ಮಾಡಬಹುದು. ಇದು ತೀರಾ ಅಗ್ಗವಾದ ಪೋಷಕ, ವಾಗಿದೆ.

 
 

ರಾಸಾಯನಿಕ ಗುಣಲಕ್ಷಣ:

 • ಶಿಲೆಯ ಪುಡಿಯ ರಸಸಾರ ತಟಸ್ಥ. ಪ್ರಧಾನ ಹಾಗೂ ಲಘು ಪೋಷಕವಾದ ರಂಜಕ 0.85, ಪೊಟ್ಯಾಶ್ 5.35  ಕ್ಯಾಲ್ಲ್ಸಿಯಂ 6.48,  ಮೆಗ್ನಿಶಿಯಂ 3.96 ಶೇಕಡಾವಾರು. 
 • ಒಟ್ಟು ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ 27.20 %, ಮ್ಯಾಂಗನೀಸ್ 0.41,  ತಾಮ್ರ 0.23, ಸತು 0.36 ಮಿಲಿ ಗ್ರಾಂ/ ಕಿಲೋ ದಂತೆ ಕಂಡು ಬಂದಿದೆ.
 • ಇದು ಪ್ರದೇಶವಾರು ಬದಲಾವಣೆ ಆಗುತ್ತದೆ.

 
 
ಕಸದಿಂದ ರಸ ಎನ್ನುವ ಹಾಗೇ ಭಾರತದ ಕೃಷಿ ಸಂಶೋಧನೆಯಲ್ಲಿ ಈ ವಿಷಯವಾಗಿ ಮೊತ್ತ ಮೊದಲ ಬಾರಿಗೆ ಮಂಡ್ಯದ ಕೃಷಿ ಮಹಾವಿಧ್ಯಾಲಯದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿದೆ.
ಲೇಖಕರರು ಮತ್ತು ಸಂಶೋಧಕರು: ಪೂಜಾ ಎಸ್ ಪಿ , ಡಾ|| ಎಸ್ ಎಸ್ ಪ್ರಕಾಶ್ ಮತ್ತು ಡಾ|| ಟಿ  ಭಾಗ್ಯಲಕ್ಷ್ಮಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗ. ಕೃಷಿ ಮಹಾವಿಧ್ಯಾಲಯ ಮಂಡ್ಯ.
 

Leave a Reply

Your email address will not be published. Required fields are marked *

error: Content is protected !!