ಬಣ್ಣದ ಕ್ಯಾಪ್ಸಿಕಂ- 16 ಲಕ್ಷ ಆದಾಯ.

by | Feb 6, 2020 | Polyhouse cultivation (ಹಸುರು ಮನೆ ಕೃಷಿ) | 1 comment

ಕೆಲವು ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳಿವೆ. ಅದರಲ್ಲಿ  ಒಂದು ದೊನ್ನೆ ಮೆಣಸು. ಇದು ತಿನ್ನುವ  ತರಕಾರಿ ಬೆಳೆಯಾದ ಕಾರಣ ಬೇಡಿಕೆಗೆ ಸಮಸ್ಯೆ ಇಲ್ಲ. ಇದನ್ನು ಪಾಲೀ ಹೌಸ್ ಒಳಗೆ ಯಾರು ಎಲ್ಲಿಯೂ ಬೆಳೆಸಬಹುದು.

 • ಭವಿಷ್ಯದಲ್ಲಿ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಉತ್ಪಾದನೆ ಮಾಡುವ ತಂತ್ರ ಹಸುರು ಮನೆ.
 • ಸಾಕಷ್ಟು ಜನ ರೈತರು ಈ ತಂತ್ರಜ್ಞಾನದ ಮೂಲಕ ಬೇರೆ ಬೇರೆ ಬೆಳೆ ಬೆಳೆಯುತ್ತಿದ್ದಾರೆ.
 • ಇದಕ್ಕೆ  ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ಸಹಾಯ ಧನವೂ ಇದೆ.
 • ದೊನ್ನೆ ಮೆಣಸು ಬೆಳೆಯನ್ನು ಪಾಲೀಹೌಸ್ ಒಳಗೆ  ಬೆಳೆದರೆ ಉತ್ತಮ ಆದಾಯ ಪಡೆಯಲು ಸಾಧ್ಯ.
 • ದೊನ್ನೆ ಮೆಣಸಿನಲ್ಲಿ ಬಣ್ಣದ ಮೆಣಸಿಗೆ ಭಾರೀ ಬೇಡಿಕೆ  ಇದ್ದು, ಅದನ್ನು ಸುರಕ್ಷಿತ ವಾತಾವರಣವಾದ ಹಸುರು ಮೆನೆಯಲ್ಲಿ  ಬೆಳೆಯುದು ಸುಲಭ ಎನ್ನುತ್ತಾರೆ IIHR ನ ವಿಜ್ಞಾನಿ ಶಿವರಾಂ ಹೆಬ್ಬಾರ್ ರವರು.

ಪಾಲೀ  ಹೌಸ್ ಹೇಗೆ:

 • ಹಸುರು ಮನೆ ಅಥವಾ ಪಾಲೀ ಹೌಸ್ ಎಂದರೆ ಸೂರ್ಯನ ಬೆಳಕಿಗೆ ಹಾಳಾಗದ ಗುಣಮಟ್ಟದ ಪ್ಲಾಸ್ಟಿಕ್ ಶೀಟುಗಳನ್ನು ಹೊದಿಸಿದ ಮನೆ.
 • ಸುತ್ತಲೂ ಯಾವುದೇ ಸಣ್ಣ ಕೀಟವೂ ಒಳ ನುಗ್ಗಲು ಸಾಧ್ಯವಾಗದ ಬೆಲೆಯ ಮೂಲಕ ಮುಚ್ಚಲ್ಪಟ್ಟ ರಚನೆ.
 • ಅಗತ್ಯವಾದಾಗ ಗಾಳಿ ಹೊರ ಹೋಗಲು ಮತ್ತು ಮುಚ್ಚಲು ವ್ಯವಸ್ಥೆಗಳಿರುತ್ತವೆ.
 • ವಿಷೇಷವಾಗಿ ಮೂರೂ ಋತುಮಾನಗಳೂ ಇದರ ಒಳಗೆ ಒಂದೇ ಆಗಿರುತ್ತದೆ.
 • ಅದೇ ಕಾರಣಕ್ಕೆ ಇದನ್ನು ಸುರಕ್ಷಿತ ಮನೆ ಎಂದು ಕರೆಯಲಾಗುತ್ತದೆ.
 • ಹಸುರು ಮನೆ ಎಂದರೆ ಇದರಲ್ಲಿ ಕೆಲವು ಹೆಚ್ಚುವರಿ ಸ್ವಯಂಚಾಲಿತ  ವಾತಾವರಣ ನಿಯಂತ್ರಕ ವ್ಯವಸ್ಥೆಗಳಿರುತ್ತವೆ.
 • ಅಂಥಹ ಹೆಚ್ಚು ಖರ್ಚಿನ ವ್ಯವಸ್ಥೆಗಳು ಇದಕ್ಕೆ ಬೇಕಾಗಿಲ್ಲ.
 • ಒಂದು ಹಸುರು ಮನೆ ಸುಮಾರು 25 ಸೆಂಟ್ಸ್ ಸ್ಥಳದಲ್ಲಿ  ಇರುತ್ತದೆ.
 • ಇದಕ್ಕೆ ಒಂದಕ್ಕೆ ಸುಮಾರು 30-35 ಲಕ್ಷ  ಖರ್ಚು ಇರುತ್ತದೆ.
 • ಇದಕ್ಕೆ  ಸರಕಾರದ ಇಲಾಖೆಗಳ ಮೂಲಕ 50% ದಷ್ಟು ಸಹಾಯಧನ ಇರುತ್ತದೆ.
 • ಇದರ ಒಳಗೆ ಬೆಳೆ ಬೆಳೆದಾಗ ಹೊರ ವಾತಾವರಣಕ್ಕಿಂತ ಭಿನ್ನ  ವಾತಾವರಣ ಒಳಗೆ  ಇದ್ದು ಬೆಳೆ ಬೆಳೆಯುವುದು ಸರಳವಾಗಿರುತ್ತದೆ.

 ಯಾವ ತಳಿ?

 • ಬಣ್ಣದ ಅಥವಾ ಹಸುರು ಕ್ಯಾಪ್ಸಿಕಂ ಬೆಳೆಯಲು ಸೂಕ್ತವಾದ ತಳಿಯ ನಿಜ ( ಹೈಬ್ರೀಡ್ ) ಬೀಜಗಳನ್ನೇ ಬಳಕೆ ಮಾಡಲಾಗುತ್ತದೆ.
 • ಬೇರೆ ಬೇರೆ ಕಂಪೆನಿಗಳು ಈ ಬೀಜಗಳನ್ನು ಉತ್ಪಾದಿಸುತ್ತಾರೆ.
 • ಯಾವುದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆಯೋ ಅದನ್ನು ಆಯ್ಕೆ ಮಾಡಬೇಕು.
 • ಅದು ಹೊಸ ತಳಿ ಬಂದಾಗ ಬದಲಾವಣೆ ಆಗುತ್ತದೆ.
 • ಪಸ್ತುತ ನೆದರ್ ಲ್ಯಾಂಡ್ ನ ಬೀಜ  ಕಂಪೆನಿಯಾದ RIJK Zwaan ರಿಜ್ಕ್ ವಾನ್ ಕಂಪೆನಿಯ ಬೀಜಗಳು ಹೆಚ್ಚು ಚಾಲ್ತಿಯಲ್ಲಿವೆ.

ಬೆಳೆಯುವ ವಿಧಾನ:

 • ಕಂಪೆನಿಯ ಅಧಿಕೃತ ಬೀಜಗಳನ್ನು ಖರೀದಿ ಮಾಡಿ ಅದನ್ನು ನೆಟ್ ಪಾಟ್ ಗಳಲ್ಲಿ ಸುಮಾರು ನಾಲ್ಕು ಎಲೆಗಳು ಬರುವ ತನಕ(30 ದಿನ) ಬೆಳೆಸಿ ನಂತರ ನಾಟಿ ಮಾಡಬೇಕು.
 • ಸಸ್ಯೋತ್ಪಾದನೆಯನ್ನೂ ಪಾಲೀ ಹೌಸ್ ಒಳಗೇ ಮಾಡಿಕೊಳ್ಳಬೇಕು.
 • ಈಗ ಇದರ ಸಸ್ಯಗಳನ್ನೇ ಮಾಡಿಕೊಡುವವರೂ ಇದ್ದಾರೆ.
 • ಪಾಲೀ ಹೌಸ್ ಒಳಗೆ ಉತ್ತಮ ಗುಣಮಟ್ಟದ ಸೋಲರೈಸ್ ಮಾಡಿದ ಮಣ್ಣನ್ನು ಹಾಕಿ 1 ಮೀ. ಅಗಲದ 20 ಸೆಂ ಮೀ. ಎತ್ತರದ  ಸಾಲುಗಳನ್ನು ಮಾಡಬೇಕು.
 • ಮಣ್ಣಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ಕೊಡಬೇಕು.
 • ಬೇವಿನ ಹಿಂಡಿಯನ್ನೂ ಕೊಡಬೇಕು. ಮಣ್ಣು ತೇವವಾದ ನಂತರ ಸಸಿಗೆ ರೋಗ ಕೀಟಗಳಿಂದ ರೋಗ ನಿರೋಧಕ ಶಕ್ತಿ ಬರಲು ಜೈವಿಕ ಗೊಬ್ಬರಗಳನ್ನೂ ಕೊಡಬೇಕು.
 • ಸಾಲುಗಳ ಮಧ್ಯೆ ಸುಮಾರು 4 ಅಡಿ ಅಂತರ ಇರಬೇಕು. ಈ ಮಡಿಯಲ್ಲಿ ಎರಡು ಸಾಲುಗಳಲ್ಲಿ ಸಸಿಯನ್ನು ನಾಟಿ ಮಾಡಬೇಕು.
 • ಸಸಿಯಿಂದ ಸಸಿಗೆ 35-40 ಸೆಂ. ಮೀ. ಅಂತರದಲ್ಲಿ ನಾಟಿ ಮಾಡಬೇಕು.
 • ಈ ಅಂತರಕ್ಕೆ ಸರಿಯಾಗಿ ನೀರು ತೊಟ್ಟಿಕ್ಕುವ ಇನ್ ಲೈನ್ ಡ್ರಿಪ್ಪರನ್ನು ಹಾಕಿ ಅದರ ಮೇಲೆ  ಪಾಲಿಥೀನ್ ಶೀಟನ್ನು  ಹಾಕಬೇಕು.
 • ಪಾಲಿಥೀನ್ ಶೀಟಿಗೆ ಸಸಿ ನೆಡುವ ಅಂತರಕ್ಕನುಗುಣವಾಗಿ ತೂತು ಮಾಡಿ ಅದರಲ್ಲಿ ರೂಟ್  ಟ್ರೈನರ್ ಟ್ರೇ ಯಲ್ಲಿ ಮಾಡಿದ ಸಸಿಯನ್ನು ನಾಟಿ ಮಾಡಬೇಕು.
 • ಪ್ರತೀ ಗಿಡದ ಬುಡಕ್ಕೂ ನೀರು ಬೀಳುವಂತಿರಬೇಕು.

ಆರೈಕೆ:

 • ನಾಟಿ ಮಾಡಿದ ಸಸಿ ಅಗತ್ಯಕ್ಕನುಗುಣವಾಗಿ ದಿನಾ ನೀರುಣಿಸಬೇಕು.
 • ಪೋಷಾಂಶಗಳನ್ನೂ ಸ್ವಯಂ ಚಾಲಿತ ವ್ಯವಸ್ಥೆಗಳ ಮೂಲಕ ದಿನಾ ಕೊಡಬೇಕು.
 • ಥ್ರಿಪ್ಸ್ ಮತ್ತು ಇನ್ನಿತರ ಕೀಟಗಳ ನಿವಾರಣೆಗೆ ಪ್ರಾರಂಭದಲ್ಲಿ ನೀರಿನಲ್ಲಿ ಕರಗುವ ಗಂಧಕದ ಸಿಂಪರಣೆ ಮಾಡಬೇಕು.
 • ಸಿಂಪರಣೆ ಮಾಡುವಾಗ ಎಲೆಯ ಅಡಿ ಭಾಗಕ್ಕೆ ಬೀಳುವಂತೆ ಸಿಂಪರಣೆ ಮಾಡಬೇಕು.
 • ನಂತರ ಅಗತ್ಯ ಇದ್ದರೆ ಇಮಿಡಾ ಕ್ಲೋಫ್ರಿಡ್ ಮತ್ತು ರೀಜೆಂಟ್ ಕೀಟನಾಶಕವನ್ನು ಸಿಂಪಡಿಸಿದರೆ ಯಾವುದೇ ಸಮಸ್ಯೆ ಬರಲಾರದು.
 • ಅತಿಯಾದ ನೀರು ರೋಗಕ್ಕೆ ಕಾರಣ.


ಬಣ್ಣದ ಕ್ಯಾಪ್ಸಿಕಂ ನಲ್ಲಿ ಬೇರೆ ಬೇರೆ ಆಕಾರದವು ಇವೆ.

 • ಮನೆಯೊಳಗೆ ಬಿಸಿ ಹೆಚ್ಚು ಆದರೆ ಮಿಸ್ಟ್ ಸ್ಪ್ರೇ ಸಹ ಮಾಡಬಾರದು.
 • ಇದರಿಂದಲೂ ಕೊಳೆಯುವ ರೋಗ ಬರಬಹುದು.
 • ನೆರಳು ಬಲೆಯನ್ನು ಮೇಲು ಭಾಗದಲ್ಲಿ ಹಾಕಿ ಅಗತ್ಯ ಬಿದ್ದರೆ  ಬಿಸಿ ಕಡಿಮೆ ಮಾಡಬೇಕು.
 • ಇದಲ್ಲದೆ ಬೇರು ಗಂಟು ನಮಟೋಡುಗಳ ಭಾಧೆ ಇಲ್ಲದಂತೆ ರಕ್ಷಣೆಗೆ ಪೆಸಿಲೋಮೈಸಿಸ್ ಮತ್ತು ಮೆಟರೈಜಿಯಂ ಜೀವಾಣು ಗೊಬ್ಬರವನ್ನು ಕೊಡಬೇಕು.
 • ಸಸಿ ಬೆಳೆದಂತೆ ಕಟ್ಟುತ್ತಾ ಇರಬೇಕು. ಸಸಿ ಬೆಳೆದಾಗ ಸಸಿ 6-8 ಅಡಿ ತನಕ ಉದ್ದವಾಗುತ್ತದೆ.

ಇಳುವರಿ:

3 ನೇ ತಿಂಗಳಿಗೆ ಇಳುವರಿ

 • ನಾಟಿ ಮಾಡಿದ 2 ತಿಂಗಳಿಗೆ ಕಾಯಿ ಕೊಯಿಲು ಪ್ರಾರಂಭವಾಗುತ್ತದೆ.
 • ಇಳುವರಿ 10 ತಿಂಗಳ ತನಕವೂ ಮುಂದುವರಿಯುತ್ತದೆ.
 • ಒಂದು ಸಸಿಯಲ್ಲಿ ಸುಮಾರು 10 ಕಿಲೋ ತನಕ ಇಳುವರಿ ಪಡೆಯಬಹುದು.
 • ಬಣ್ಣದ ಕ್ಯಾಪ್ಸಿಕಂ ಗೆ ಕಿಲೋಗೆ 50ರೂ. ನಿಂದ ಪ್ರಾರಂಭವಾಗಿ 75 ರೂ ತನಕವೂ ಇರುತ್ತದೆ.
 • ಎಡೆಯಲ್ಲಿ ಸತ್ತ ಗಿಡಗಳ ಗ್ಯಾಪ್ ಫಿಲ್ಲಿಂಗ್ ಗೆ ಹಸುರು ದೊಣ್ಣೆ ಮೆಣಸಿನ ಸಸಿಗಳನ್ನು ನೆಡಬೇಕು.

ಒಂದು ಎಕ್ರೆಯಲ್ಲಿ ಸುಮಾರು 50 ಟನ್ ತನಕವೂ ಇಳುವರಿ ಪಡೆಯುವವರಿದ್ದಾರೆ.

ಡಾ| ಕೆ. ಶಿವರಾಂ ಹೆಬ್ಬಾರ್


ಬೆಳೆಯುವ ಆಸಕ್ತ ರೈತರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಶಿವರಾಂ ಹೆಬ್ಬಾರ್ ಇವರನ್ನು ಸಂಪರ್ಕಿಸಬಹುದು.ಸಂಸ್ಥೆಯಲ್ಲಿ ಈ ತಂತ್ರಜ್ಞಾನದಲ್ಲಿ ಬೆಳೆ ಬೆಳೆದ ಪ್ರಾತ್ಯಕ್ಷಿಕೆ  ಇದ್ದು ರೈತರು ಇದನ್ನು ವೀಕ್ಷಿಸಿ ಮುಂದುವರಿದರೆ ಉತ್ತಮ.

ಹಸುರು ಮನೆ ಮಾಡಿ ಬೆಳೆದದ್ದೇ ಆದರೆ ಒಂದು ಎಕ್ರೆ ಹಸುರು ಮನೆಯಲ್ಲಿ ಒಂದು ಬೆಳೆಯಲ್ಲಿ 16 ಲಕ್ಷ  ಆದಾಯ ಇದೆ. ಇದರಲ್ಲಿ ಖರ್ಚು ಎಲ್ಲಾ ಕಳೆದರೆ ಮಾಸಿಕ ಕನಿಷ್ಟ 1 ಲಕ್ಷ  ತನಕ ರೈತನಿಗೆ ನಿವ್ವಳ ಆದಾಯ ಇದೆ.

 

1 Comment

 1. Shashikumar

  ಕ್ಯಾಪ್ಸಿಕಮ್ ಅನ್ನು ತೆಂಗು ಮತ್ತು ಬಾಳೆಯ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆಯಬಹುದೇ ಬೆಳೆದರೆ ಅದರ ನಿರ್ವಹಣೆ ಹೇಗೆ ಮಾಡಬೇಕು

  Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!