ಮೆಣಸಿನ ಎಲೆ ಮುರುಟುವಿಕೆ ನಿಯಂತ್ರಣ

by | Feb 19, 2020 | Chilli (ಮೆಣಸಿನ ಕಾಯಿ) | 0 comments

ಮೆಣಸಿನ ಕಾಯಿಯ ಅತೀ ದೊಡ್ದ ಆರ್ಥಿಕ ಬೆಳೆಯಾಗಿದ್ದು, ಮೆಣಸು ಬೆಳೆಗಾರರು ಈ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪಾಲು ಕೀಟ ನಿರ್ವಹಣೆಗೇ ತಗಲುತ್ತದೆ. ಈ ಕೀಟಗಳಲ್ಲಿ ಮುಖ್ಯವಾದುದು, ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿ. ಯಾರೇ ಬೆಳೆ ಬೆಳೆದರೂ ಈ ಕೀಟ ಅವರನ್ನು  ಬಿಟ್ಟಿದ್ದಿಲ್ಲ. ಇನ್ನೇನು ಸಸಿ ಬೆಳೆದು ಹೂ ಬಿಡಲು ಪ್ರಾರಂಭವಾಗುತ್ತದೆ ಎನ್ನುವಾಗಈ ಕೀಟ ಹಾಜರ್. ಎಲೆಗಳು ಮುರುಟಿಕೊಂಡು ಅಲ್ಲಿಗೇ ಬೆಳೆವಣಿಗೆ ಕುಂಠಿತವಾಗುತ್ತದೆ.

ಥಿಪ್ಸ್ ನುಶಿ ಏನು – ಹೇಗೆ:

 • ಇದು ಒಂದು ರಸ ಹೀರುವ ಕೀಟ ಇಅದರ ಹೆಸರು  Scirtothrips dorsalis and yellow mitePolyphagotarsonemus latus
 • ಇದು ಬೆಳೆಯ  ಯಾವುದೇ ಹಂತದಲ್ಲಿ  ಬರಬಹುದಾದ ಕೀಟ.
 • ಈ ಕೀಟ ಅತೀ ಸಣ್ಣದಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ.
 • ಇವು ಎಲೆಯ ಕೆಳ ಭಾಗದಲ್ಲಿ  ಕುಳಿತು ರಸ ಹೀರುತ್ತವೆ.
 • ಎಲೆಗಳು ತುದಿಯಿಂದ ಒಳಮೈಗೆ  ಮುದುಡಿಕೊಳ್ಳುತ್ತವೆ.
 • ಈ ರೀತಿ ಮುರುಟುವುದಕ್ಕೆ ಇದನ್ನು  ಮುರುಟು ರೋಗ ಎನ್ನುತ್ತಾರೆ.
 • ಚಂಡಿ ರೋಗ ಎಂಬುದಾಗಿಯೂ ಕರೆಯುತ್ತಾರೆ.
 • ಪ್ರಾರಂಭದಲ್ಲಿ  ಇದು ಸ್ವಲ್ಪ ಸ್ವಲ್ಪ ಇರುತ್ತದೆ. ನುಶಿಯ ಸಂಖ್ಯಾಭಿವೃದ್ದಿಯಾದಂತೆ ಹೆಚ್ಚಾಗುತ್ತಾ ಬರುತ್ತದೆ.
 • ಸಸಿ ಮಡಿಯಲ್ಲಿಯೂ ಈ ಕೀಟ ಬಾಧೆ ಕಂಡು ಬರುತ್ತದೆ.
 • ನಾಟಿ ಮಾಡಿದ  1-2 ತಿಂಗಳಲ್ಲಿಯೂ ಕಂಡು ಬರುತ್ತದೆ.
 • ಇದು ಹೆಚ್ಚಾದರೆ  ಇಡೀ ಬೆಳೆಯೇ ಹೋಯಿತು ಎಂದರ್ಥ.

ಈ ನುಶಿಗಳು ರಸ ಹೀರುವುದು ಮಾತ್ರವಲ್ಲ. ಮುರುಟು ರೋಗದ ನಂಜಾಣುವನ್ನು ಗಿಡದಿಂದ ಗಿಡಕ್ಕೆ ಹರಡುತ್ತದೆ.  ಹೂ ಬಿಡುವ ಮುಂಚೆ ಆದರೆ ಹೂ ಮೊಗ್ಗು ಬರಲು ತಡೆಯೊಡ್ಡುತ್ತದೆ. ಹೂ ಬಿಡುವ ಹಂತದಲ್ಲಿ ಹೂ ಮೊಗ್ಗುಗಳು ಉದುರುತ್ತವೆ. ಮಿಡಿಯಾಗುವ ಹಂತದಲ್ಲಿ ಮಿಡಿಗಳು ಉದುರುತ್ತವೆ.

 • ಬೇಸಿಗೆ ಕಾಲದ ಬೆಳೆಗೆ ಮತ್ತು ಚಳಿಗಾಲದ ಬೆಳೆಗೆ ಈ ನುಶಿಯ ಹಾವಳಿ ಹೆಚ್ಚು.
 • ಒಣ ವಾತಾವರಣ ಇದ್ದಾಗ ಇದರ ಸಂಖ್ಯಾಭಿವೃದ್ದಿ ಹೆಚ್ಚುತ್ತಾ ಹೋಗುತ್ತದೆ.
 • ಮಳೆ ಬಂದರೆ ತಂತತಿ ಕ್ಷೀಣಿಸುತ್ತದೆ. ಗಾಳಿಯ ಮೂಲಕ ಗಿಡದಿಂದ ಗಿಡಕ್ಕೆ  ಹರಡುತ್ತದೆ.
 • ಬೆಳೆದ ಕೀಟವು ಎಲೆಯ ಕೆಳಗೆ 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ.
 • 4-5 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.
 • ಬೆಳೆದ ಕೀಟವು 10-15 ದಿನಗಳ ತನಕ ಜೀವಿಸುತ್ತದೆ.
 • ಡಿಸೆಂಬರ್ ಜನವರಿ ತಿಂಗಳಲ್ಲಿ ಈ ಕೀಟದ ಹವಳಿ ಜಾಸ್ತಿ.

ತೀವ್ರವಾದಾಗ ಈ ರೀತಿ ಆಗುತ್ತದೆ. ಇದನ್ನು ತಕ್ಷಣ ತೆಗೆಯಬೇಕು.

ನಿಯಂತ್ರಣ:

 • ಹೆಚ್ಚಿನ ರೈತರು ಇದರ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳನ್ನೇ ಬಳಕೆ ಮಾಡುತ್ತಾರೆ.
 • ವಾಣಿಜ್ಯಿಕವಾಗಿ ಬೆಳೆ  ಬೆಳೆಸುವಾಗ ಇದು ಅನಿವಾರ್ಯವೂ ಆಗಿರುತ್ತದೆ.
 • ಈ ನುಶಿ ಬಾಧೆಗೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ.

 • ನಿರೋಧಕ ಶಕ್ತಿ ಪಡೆದ ತಳಿಗಳು: ಅರ್ಕಾ ಶ್ವೇತಾ- ಅರ್ಕಾ ಮೇಘನ- ಅರ್ಕಾ ಹರಿತ


  – ಎಸ್- 3 ,  ಪಂಥ್ ಸಿ- 1,  ಪಂಥ್ ಸಿ- 2,  ಜ್ವಾಲಾ, ಮುಸಲವಾಡಿ, ಕೆ. 2425  ಮುಂತಾದ ತಳಿಗಳು  ನಿರೋಧಕ ಶಕ್ತಿ ಪಡೆದಿವೆ.

ಯಾವ ಕಾರಣಕ್ಕೆ ಇದು ಹೆಚ್ಚಾಗುತ್ತಿದೆ:

 • ಮೆಣಸನ್ನು  ಏಕ ಬೆಳೆಯಾಗಿ ಬೆಳೆಸುವಾಗ ಈ ನುಶಿಯ ಸಮಸ್ಯೆ ಹೆಚ್ಚಾಗುತ್ತದೆ.
 • ಇದನ್ನು ತಿನ್ನುವ ಕೆಲವು ಪರಾವಲಂಭಿ ಜೀವಿಗಳಿವೆ. ಗುಲಗುಂಜಿ  ಹುಳ,  ಕೆಲವು ಜೇಡಗಳು, ಕ್ರೈಸೋಫೆರ್ಲಾ ಮುಂತಾದವುಗಳು.
 • ಇವು ನಿರಂತರ ಕೀಟನಾಶಕದ ಬಳಕೆಯ ಕಾರಣದಿಂದ ನಾಶವಾಗಿದೆ.
 • ಮೆಣಸು ಬೆಳೆಯುವ ರೈತರು ಕೀಟ ಬಾರದಂತೆ ಮುನ್ನೆಚ್ಚರಿಕೆಯಾಗಿ ಸಿಂಪರಣೆ ಕೈಗೊಳ್ಳುತ್ತಾರೆ. ಅದು ಪರಭಕ್ಷಕಗಳ ನಾಶಕ್ಕೆ ಕಾರಣವಾಗುತ್ತಿದೆ.
 • ಕೀಟ ನಾಶಕಗಳಲ್ಲಿ ಅಂತರ್ ವ್ಯಾಪೀ ಕೀಟನಾಶಕಗಳ ಬಳಕೆ ಹೆಚ್ಚಾದ ಕಾರಣ ನುಶಿಗಳು ನಿರೋಧಕ ಶಕ್ತಿ ಬೆಳೆಸಿಕೊಂಡಿವೆ.
 • ರೈತರು ಶಿಫಾರಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟ ನಾಶಕ ಬಳಕೆ ಮಾಡುತ್ತಿದ್ದಾರೆ.
 • ಎಲೆಗಳ ಅಡಿ ಭಾಗದಲ್ಲಿ ಕೀಟ ವಾಸವಾಗಿರುತ್ತದೆ, ರೈತರು ಮೇಲ್ಭಾಗದಲ್ಲೇ ಸಿಂಪರಣೆ  ಮಾಡುತ್ತಾರೆ. ಇದು ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿಲ್ಲ.

ಪರಭಕ್ಷಕ ಕೀಟ

ಯಾವ ಸಿಂಪರಣೆ  ಉತ್ತಮ:

 • ಕೀಟ ಬರುವ ಮುಂಚೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಂಪರಣೆ ಮಾಡುವಾಗ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪರಣೆ ಮಾಡಬೇಕು. ಇದು ಎಲೆ ಅಡಿ ಭಾಗದಲ್ಲಿ ಲೇಪನವಾದಂತೆ ಅಂಟಿದರೆ ಒಳ್ಳೆಯದು.
 • ಮೆಣಸಿನ ಜೊತೆಗೆ ಬಲೆ ಬೆಳೆಗಳಾದ ಚೆಂಡು ಹೂವು, ಬೆಂಡೆ, ಹತ್ತಿ ಬೆಳೆಸಿದರೆ ಅದಕ್ಕೆ ಮೊದಲು ನುಶಿಗಳು ಹಾನಿ ಮಾಡುತ್ತವೆ.
 • ಪ್ರಾರಂಭದ ಹಂತದಲ್ಲಿ ಎಲೆ ಅಡಿ ಭಾಗಕ್ಕೆ ಬೀಳುವಂತೆ ವೆಟ್ಟೆಬಲ್ ಸಲ್ಫರ್ ಸಿಂಪರಣೆ ಮಾಡಿ.ಇದನ್ನು ರೋಗ ಬರುವ ಮುಂಚೆಯೇ ಮಾಡುವುದು ಉತ್ತಮ.

ಮಧ್ಯಂತರದಲ್ಲಿ ಚೆಂಡು ಹೂವು ಬೆಳೆಯಿರಿ

 • ಯಾವಾಗಲೂ ಕೊನೇ ಹಂತದಲ್ಲಿ ಅನಿವಾರ್ಯವಾದಾಗ ಮಾತ್ರ ಅಂತರ್ವ್ಯಾಪೀ ಕೀಟನಾಶಕ ( ಇಮಿಡಾ ಕ್ಲೋಫ್ರಿಡ್- ರೀಜೆಂಟ್) ಬಳಕೆ ಮಾಡಬೇಕು. ಯವಾಗಲೂ ಶಿಫಾರಸಿಗಿಂತ ಹೆಚ್ಚು ಬಳಸಬಾರದು.
 • ಮೆಣಸಿನ ಹೊಲಕ್ಕೆ ಬೆಳಗ್ಗಿನ ಸಮಯ 10 ನಿಮಿಷ ಕಾಲ ಹೊತ್ತು ತುಂತುರು ನೀರಾವರಿ ಮಾಡುವುದರಿಂದ ಅವು ತೊಳೆದು ಹೋಗಿ ನಾಶವಾಗುತ್ತದೆ. ( ತೆರೆದ ವಾತಾವರಣದಲ್ಲಿ ಬೆಳೆದಾಗ)
 • ಎಲೆ ಅಡಿ ಭಾಗಕ್ಕೆ ಲೇಪನವಾಗುವಂತೆ ಬೂದಿ ಇತ್ಯಾದಿ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಕಾಣಬಹುದು.

ಚಳಿಗಾಲದಲ್ಲಿ ಮೆಣಸಿನ ಬೆಳೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಪರಭಕ್ಷಕ ಕೀಟಗಳು ನಾಶವಾಗುವಂತ ಕೀಟನಾಶಕ ಬಳಸಬೇಡಿ.
 

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!