ರೈತರಿಗೆ ಕೇಂದ್ರ ಸರಕಾರದಿಂದ ಮುಷ್ಟಿ ಸಹಾಯ.

ಇಂದು ಗ್ರಾಮೀಣ ಭಾಗದ ಸಣ್ಣ – ಅತೀ ಸಣ್ಣ ರೈತರು, ಈಗಾಗಲೇ ಸರಾಸರಿ ತಲಾ 1 ಲಕ್ಷಕ್ಕೂ ಹೆಚ್ಚಿನ ಸಾಲದಲ್ಲಿ ಮುಳುಗಿದ್ದಾರೆ. ದೊಡ್ಡ ರೈತರ ಬದುಕೇ ಸಾಲ. ಇದರ ಮೇಲೆ ಇವರಿಗೆ ಮತ್ತೆ ಸಾಲ ಕೊಡುವ ಪ್ಲಾನ್ ನಲ್ಲಿದೆ ಕೇಂದ್ರ ಸರಕಾರ. ವಿಶೇಷ ಪ್ಯಾಕೇಜ್ ಮೂಲಕ ಸಾಲಕೊಟ್ಟು ಭಾರತದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸಾಧ್ಯವೇ ? ಇದರ ಪರಿಣಾಮ ಏನಾಗಬಹುದು?

ಫೊಟೋ: internet tweeter
  • ಕೇಂದ್ರ ಸರಕಾರ ರೈತರ ಕಲ್ಯಾಣಕ್ಕಾಗಿ ಭಾರೀ ಸವಲತ್ತುಗಳನ್ನು ನೀಡಲಿದೆ ಎಂಬ  ಪ್ರತೀಯೊಬ್ಬ ರೈತರ ಆಶಯ  ಹುಸಿಯಾಗಿದೆ.
  • ದೇಶದಲ್ಲಿ ರೈತರಿಗೆ  ಹೆಚ್ಚು ಹೆಚ್ಚು ಸಾಲ ಕೊಡುವ ಕೃಪೆ ತೋರಿದೆ. ವಿತ್ತ ಮಂತ್ರಿಗಳು ಈ ದಿನ ಕೆಲವು ಕೃಷಿಕರ ಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ.
  • ಸಾಲ ತೀರುವಳಿಗೇ ಮರು ಸಾಲಮಾಡುವ ನಮ್ಮ ದೇಶದ ರೈತರು ಇನ್ನೂ ಹೆಚ್ಚಿನ ಸಾಲಕ್ಕೆ  ತಾಳಿಕೊಳ್ಳಬಲ್ಲರೇ?
  • ಹಾಗೆಂದು ಕೇಂದ್ರ ಸರಕಾರವನ್ನು ದೂರುವುದು ಸೂಕ್ತವಲ್ಲ.
  • ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ನೆರವಿಗೂ ಬಂದಿದೆ.
  • ಪರಿಸ್ಥಿತಿಯನ್ನು  ಅಚ್ಚುಕಟ್ಟಾಗಿ ನಿಭಾಯಿಸಿದೆ.

ನಮ್ಮ ರಾಜಕೀಯ ಮುಖಂಡರಿಗೆ ಸರಿಯಾದ ಮಾರ್ಗದರ್ಶನ ಕೊಡುವವರು ಇಲ್ಲ ಎನ್ನಿಸುತ್ತದೆ. ರೈತರಿಗೆ ಸಾಲ ಬೇಕಾಗಿಲ್ಲ. ಬೆಳೆಗೆ ಬೆಲೆ ಬೇಕಾಗಿದೆ. ಆಪತ್ಕಾಲದಲ್ಲಿ ನೆರವು ಬೇಕಾಗಿದೆ.  ಒಂದಲ್ಲ ಒಂದು ದಿನ ಭಾರತದ ಕೃಷಿಕ ಸಾಲ ಮುಕ್ತನಾಗಬೇಕೇ ಬೇಡವೇ? ಹಾಗೆ ನೋಡಿದರೆ ಸಮಾಜದಲ್ಲಿ ಉದ್ಯೋಗಾವಕಾಶ ನೀಡಿ ಆರ್ಥಿಕತೆಗೆ ಕೊಡುಗೆ ನೀಡುವವರು ಮಧ್ಯಮ(5-10 ಎಕ್ರೆ) ಅರೆಮಧ್ಯಮ ಹಿಡುವಳಿಯ (10-25 ಎಕ್ರೆ)   ಕೃಷಿಕರೇ. ಇವರನ್ನೂ ಸಂಕಷ್ಟಕ್ಕೊಳಗಾದ ಕೃಷಿಕರು ಎಂದು ಪರಿಗಣಿಸಲೇ ಬೇಕು. 

  • ದೇಶದ ಅರ್ಥ ವ್ಯವಸ್ಥೆಗೆ  ಸಣ್ಣ ಮತ್ತು ಅತೀ ಸಣ್ಣ ರೈತರ ಕೊಡುಗೆಗಿಂತಲೂ ಹೆಚ್ಚಿನ ಕೊಡುಗೆಯನ್ನು ಇತರ ಕೃಷಿಕರು ಕೊಡುವವರು. ಇವರು ಇಂದು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್

 ಸಾಲ ಮನ್ನಾ ಮಾಡಬಹುದಿತ್ತು:

  • ದೇಶದಲ್ಲಿ ಬಹುತೇಕ  ಪೂರ್ಣಾವಧಿ ಕೃಷಿಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
  • ಒಂದಿಲ್ಲೊಂದು ದಿನ ಆ ಸಾಲ ಅವರಿಗೆ ಕೃಷಿಯಲ್ಲಿ ಮುಂದುವರಿಯಲು ಬಿಡುವುದಿಲ್ಲ.
  • ಬಹುತೇಕ ಕೃಷಿ ಭೂಮಿ ಮಾರಾಟ ಮಾಡುವವರೂ ಇವರೇ ಆಗಿದ್ದಾರೆ.
  • ಇವರ ನೆರವಿಗೆ ಬಂದು ಒಂದು ಬಾರಿ ಶರತ್ತು ಬದ್ಧ ಸಾಲವನ್ನು ಮನ್ನಾ,ಅಥವಾ ಬಡ್ಡಿ ಮನ್ನಾವಾದರೂ ಮಾಡಬಹುದಿತ್ತು.
  • ಅದು ಕೃಷಿ ಉದ್ದಾರದ ನೈಜ ಕಳಕಳಿಯಾಗುತ್ತಿತ್ತು.

ರೈತರನ್ನು ಒಡೆಯಬೇಡಿ:

  •  ಕೃಷಿ ಎಂದರೆ ಏನು? ಇದು ಆಟ ಅಲ್ಲ. ಇದು ಸಮಾಜದಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಪೋಷಿಸುತ್ತದೆ.
  • ಇದರಿಂದಾಗಿ ದೇಶಕ್ಕೆ ಅದೆಷ್ಟೋ ಹೊರೆ ಕಡಿಮೆಯಾಗುತ್ತದೆ.
  • ದೇಶದ ಸುಮಾರು 20% ಜನರಿಗೆ  ಉದ್ಯೋಗಾವಕಾಶವನ್ನು ಕೊಡುತ್ತದೆ.
  • ಅದು ಸಣ್ಣ ಮತ್ತು ಅತೀ ಸಣ್ಣ ರೈತರಲ್ಲ. ಮಧ್ಯಮ ಮತ್ತು ಅರೆ ಮಧ್ಯಮ ಪ್ರಮಾಣದ ಕೃಷಿಕರು.
  • ನಮ್ಮ ದೇಶದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಎಲ್ಲದಕ್ಕಿಂತ ಹೆಚ್ಚು ಇರುವ ಕಾರಣ ರಾಜಕೀಯ ಲಾಭಕ್ಕಾಗಿ  ಸ್ವಾತಂತ್ರ್ಯಾ ನಂತರ ಬಂದ ಎಲ್ಲಾ ಸರಕಾರಗಳೂ ಇದನ್ನೇ ಮಾಡುತ್ತಾ ಬಂದಿವೆ.
  • ಇವರು ಕೃಷಿಕರೂ ಜೊತೆಗೆ ಕೃಷಿ ಕೂಲಿ ಕಾರ್ಮಿಕರೂ ಆಗಿದ್ದಾರೆ.
  • ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಪತ್ರ, ESI ಕೊಡಬೇಕು ಎಂದಿದ್ದಾರೆ. ಇದು ಕೃಷಿ ಕೂಲಿ ಕಾರ್ಮಿಕರಿಗೂ ಅನ್ವಯವೇ ಎಂಬುದರ ಸ್ಪಷ್ಟತೆ ಇಲ್ಲ.

 ಮುಂದೆ ಹೀಗಾಗಬಹುದು:

  • ಒಂದು ಕಾಲದಲ್ಲಿ ಮುಂಬಯಿಯಲ್ಲಿ ಹೋಟೇಲಿನಲ್ಲಿ ದುಡಿಯುತ್ತಿದ್ದವರು ಅಲ್ಲಿನ ಕಷ್ಟಕ್ಕೆ ಸೋತು ಊರಿಗೆ ಬಂದರು. ಅದು ಸುಮಾರು 20-30 ವರ್ಷಗಳ ಹಿಂದೆ.
  • ಆಗಲೇ ನಮ್ಮ ಕೃಷಿ ವ್ಯವಸ್ಥೆಯಲ್ಲಿ ಸಮಯಾಧಾರಿತ ದುಡಿಮೆ  ಮತ್ತು ಹಣಕ್ಕಾಗಿ ಕೆಲಸ ಎಂಬ ಬೀಜ ಬಿತ್ತನೆಯಾಗಿ ಈಗ ಅದು ಹೆಮ್ಮರವಾಗಿದೆ.
  • ಈಗ ಸರಕಾರ ಎಲ್ಲಾ ಕಾರ್ಮಿಕರಿಗೂ ಇ ಎಸ್ ಐ ಮತ್ತು ನೇಮಕಾತಿ ಪತ್ರ ನೀಡಬೇಕು ಎಂಬ ಸುತ್ತೋಲೆ ಹೊರಡಿಸಿದರೆ ಮುಂದೆ ನೀವು ಬರೇ ಸಂಬಳವಲ್ಲದೆ ನಿಮ್ಮ ಹೊಲದಲಿ ದುಡಿಯುವವರಿಗೆ  ಪಿಎಫ್ ಹಾಗೂ ಗ್ರಾಚುಟಿ ಕೊಡಬೇಕಾದೀತು.
  • ಅದು ಉತ್ತಮ. ಆದರೆ ಕೊಡುವವನೆಷ್ಟು ಸುರಕ್ಷಿತ ಎಂಬುದನ್ನು ಗಮನಿಸಬೇಕಲ್ಲವೇ?

ಸರಕಾರ ಇದನ್ನು ಗಮನಿಸಬೇಕು:

  • ಮಾರ್ಚ್ 23 -2020 ನಂತರದ ದಿನಗಳನ್ನು ಒಮ್ಮೆ ಅವಲೋಕಿಸಿರಿ.
  • ದೇಶದಲ್ಲಿ ಎಲ್ಲಾ ಉದ್ದಿಮೆಗಳೂ ಕೆಲಸ ಇಲ್ಲವೆಂದು ಕೈಕಟ್ಟಿ ಕುಳಿತಾಗ ಮಧ್ಯಮ ಮತ್ತು ದೊಡ್ಡ ಪ್ರಮಾಣದ ಕೃಷಿಕರು ತಮ್ಮ ಹಳ್ಳಿಯ ಜನರಿಗೆ ಉದ್ಯೋಗ ಕೊಟ್ಟವರು[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
    .
  • ಇವರ ಈ ತ್ಯಾಗ ಕೋಟ್ಯಾಂತರ ಕೃಷಿ ಕೂಲಿ ಕಾರ್ಮಿಕರಿಗೆ ಅನ್ನ ನೀಡಿದೆ.
  • ಇಂದು ವಲಸೆ ಕಾರ್ಮಿಕರು ಎಂಬ ವರ್ಗವನ್ನು ಸಂಬಾಳಿಸಿ ಊರು ತೊರೆಯದಂತೆ  ಮಾಡಬಹುದಿತ್ತು.
  • ಇವರೆಲ್ಲರಿಗೂ ಉದ್ಯೋಗ ಕೊಡುವಷ್ಟು ನಮ್ಮ ಕೃಷಿ ವ್ಯವಸ್ಥೆ  ಸಮರ್ಥವಾಗಿತ್ತು ಎಂಬುದು ಯಾವ ವ್ಯಕ್ತಿಗೂ ಕಾಣಿಸಲಿಲ್ಲ ಎಂಬುದು ಬೇಸರದ ವಿಚಾರ.
  • ದುಡಿಯುವವನಿಗೆ ದುಡಿಯುವ ದಾರಿ ತೋರುವ ಯೋಜನೆ  ಬೇಕು.
  •  ಕುಳಿತಲ್ಲೇ ಅನ್ನ ಕೊಡುವ ಯೋಜನೆ ದಯವಿಟ್ಟು ಮಾಡಬೇಡಿ.

ಕೃಷಿ ಉಳಿಸುವ ಬಗ್ಗೆ ಸರಕಾರ ಗಮನಹರಿಸಿದಂತಿಲ್ಲ. ಈಗ ಕೃಷಿ ಉಳಿಸಲು ಬೇಕಾದುದು ಸರಳ ಬಂಡವಾಳ- ಕೆಲಸಗಾರರು. ಇವು ಇಲ್ಲದೆ ಕೃಷಿ ಮುಂದುವರಿಯುವುದು ಕಷ್ಟ. ನಮ್ಮ ಪ್ರಧಾನಿಯವರ ಕನಸಾದ 2022 ಕ್ಕೆ ರೈತರ ಆದಾಯ ದ್ವಿಗುಣ ಆಗಬೇಕಾದರೆ ಭಾರೀ ಚಿಂತನೆಯ ಯೋಜನೆಗಳು ಬೇಕು. ಮುಂದಿನ ದಿನಗಳಲ್ಲಿ ಇಂತಹ ಯೋಜನೆಗಳು ಬರಲಿ ಎಂದು ನಿರೀಕ್ಷಿಸೋಣ.

ನಿಮ್ಮ ಅಭಿಪ್ರಾಯಗಳಿಗೆ  ಸ್ವಾಗತ

Leave a Reply

Your email address will not be published. Required fields are marked *

error: Content is protected !!