ಸ್ವಸ್ಥ ಆರೋಗ್ಯಕ್ಕೆ ಬೇಕು – ಸುರಕ್ಷಿತ ಆಹಾರ.

by | Jun 7, 2020 | Current Affairs (ಪ್ರಚಲಿತ ವಿಧ್ಯಮಾನಗಳು) | 0 comments

ನಾವು ತಿನ್ನುವ ಆಹಾರ ಸುರಕ್ಷಿತವಾಗಿದ್ದರೆ ಎಲ್ಲವೂ ಕ್ಷೇಮ. ಇಂದು ಆಗುತ್ತಿರುವ ಕೆಲವು ಅನಾಹುತಗಳಿಗೆ ಮೂಲ ಕಾರಣ ನಮ್ಮ ಆಹಾರ ಅಭ್ಯಾಸಗಳು. ಇದನ್ನು ಸ್ವಲ್ಪ ಸ್ವಲ್ಪವೇ ಸರಿ  ಮಾಡಿಕೊಂಡು ಬದುಕುವುದನ್ನು ಕಲಿಯೋಣ. ಈ ದಿನದಿಂದಲೇ  ಅದನ್ನು ಪ್ರಾರಂಭಿಸೊಣ.

 • ಕೃಷಿ ಕ್ಷೇತ್ರದಲ್ಲಿ ಆಹಾರ ಉತ್ಪಾದನೆಯಾಗುವಾಗಲೇ ಅದು  ಆರೋಗ್ಯಕ್ಕೆ ಕಂಠಕವಾದ ಒಳಸುರಿಗಳಿಂದ ಕಲುಷಿತವಾಗುತ್ತದೆ.
 • ಇನ್ನು ದಾಸ್ತಾನು ಕ್ಷೇತ್ರದಲ್ಲಿ ಇನ್ನಷ್ಟು ಅದು ಕಲುಷಿತವಾಗುತ್ತದೆ.
 • ಮಾರಾಟ ಕ್ಷೇತ್ರದಲ್ಲಿ   ಎಲ್ಲಾ ಕಡೆಯಲ್ಲೂ ಕಲುಷಿತಗೊಂಡು ಅದು ಗ್ರಾಹಕನಿಗೆ ದೊರೆಯುತ್ತದೆ.
 • ಅದು ಒಟ್ಟಾರೆ ಯಾಗಿ ಮನುಕುಲದ ದೇಹಾರೋಗ್ಯಕ್ಕೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.
 • ಸಮಾಜವೇ ಅನಾರೋಗ್ಯ ಮತ್ತು ಅಸ್ವಾಸ್ಥ್ಯಗಳಿಗೆ ತುತ್ತಾಗಿ ಭೂಲೋಕದ ನರಕ -ಆಸ್ಪತ್ರೆಯ ಸಹವಾಸವನ್ನು ಹೊಂದಬೇಕಾಗುತ್ತಿದೆ.

ಕೃಷಿ ಮತ್ತು ಆಹಾರ ಸುರಕ್ಷೆ:

 • ಕೃಷಿ ಎಂದರೆ ಜಗತ್ತು ಮಾನ್ಯಮಾಡಿದ ಸುರಕ್ಷಿತ ಆಹಾರ  ತಯಾರಿಕಾ ಘಟಕ.
 • ಜಗತ್ತಿನ ಆಹಾರಅಗತ್ಯಗಳಿಗಾಗಿ ಮತ್ತು ಕೃಷಿಕನ ಬದುಕಿನ ಕಾರಣಕ್ಕಾಗಿ ಕೃಷಿ ಹೆಚ್ಚು ಹೆಚ್ಚು ವಾಣಿಜ್ಯೀಕರಣಕ್ಕೊಳಗಾಗಿದೆ.
 • ಇದರಿಂದಾಗಿ  ನಾವೆಲ್ಲಾ ತಿಳಿದಂತೆ ಕೃಷಿ ಉತ್ಪನ್ನಗಳು ಆರೋಗ್ಯ ಸುರಕ್ಷಿತವಾಗಿ ಉಳಿದಿಲ್ಲ.
 •   ಉತ್ಪಾದನಾ  ಕ್ಷೇತ್ರದಿಂದ ಪ್ರಾರಂಭವಾಗಿ ದಾಸ್ತಾನು, ಮಾರಾಟ ಮತ್ತು ಬಳಕೆ ಎಲ್ಲಾ ಕ್ಷೇತ್ರಗಳಲ್ಲೂ ಇದು ನೈಜತೆಯನ್ನು ಕಳೆದುಕೊಳ್ಳುತ್ತಿದೆ.

ಕೃಷಿಕ   ಬೆಳೆ ಉಳಿಸಲು ಕೀಟನಾಶಕ- ರೋಗ ನಾಶಕ- ರಸಗೊಬ್ಬರ ಮುಂತಾದವುಗಳನ್ನು ಆದ್ಯತೆಯಲ್ಲಿ ಬಳಸುತ್ತಾನೆ. ಕಾರಣ ಅವನಿಗೆ ಉತ್ಪಾದನೆ ಹೆಚ್ಚು ಬೇಕು. ಅವನು  ತನ್ನ ಬದುಕನ್ನೂ  ಸಹ ಅದರಲ್ಲೇ ಕಟ್ಟಿಕೊಳ್ಳಬೇಕು. ಇಲ್ಲಿ ಕೃಷಿಕ ತಪ್ಪುಗಾರನಲ್ಲ. ಅವನು ಕಾಲಸ್ಥಿತಿಗೆ ಅನುಗುಣವಾಗಿ  ಅನಿವಾರ್ಯವಾಗಿ ಇದನ್ನು ಮಾಡಲೇ ಬೇಕಾಗುತ್ತದೆ.

 • ನಮ್ಮ ದೇಶದಲ್ಲಿನ ಬಹುತೇಕ ಕೃಷಿ ಅವಲಂಭಿತರು ಆ ಕ್ಷೇತ್ರದ ಪೂರ್ಣ ಮಾಹಿತಿಯನ್ನು ಹೊಂದಿದ ಪ್ರಭುದ್ಧರಲ್ಲ.
 • ಜೀವನೋಪಾಯಕ್ಕಾಗಿ ಆ ಕ್ಷೇತ್ರವನ್ನು ಆರಿಸಿಕೊಂಡವರು.
 • ಕೃಷಿ ವಿಜ್ಞಾನದ ತಿಳುವಳಿಕೆ ಉಳ್ಳವರಲ್ಲ.
 • ಹೇಳಿದ್ದನ್ನು, ಕೇಳಿದ್ದನ್ನು  ಅನುಸರಿಸುವವರು.
 • ಇವರನ್ನು ಯಾವ ದೃಷ್ಟಿಯಲ್ಲೂ ದೂರುವುದು ಸಮಂಜಸವಲ್ಲ.

ಕೃಷಿಕರಿಗೆ  ಮಾಹಿತಿ ಲಭ್ಯವಾಗುವ ಸಂಶೋಧನೆ , ವಿಸ್ತರಣಾ ಕ್ಷೇತ್ರ ಗಳಲ್ಲೂ  ರೈತನಿಗೆ ಸರಿಯಾದ ಮಾರ್ಗದರ್ಶನ ಇಲ್ಲ.  ಎಲ್ಲರೂ ಪುಸ್ತಕದ ಹುಳುಗಳಾಗಿಯೇ ಮಾರ್ಗದರ್ಶನ ಕೊಡುವವರು. ನಮ್ಮ ದೇಶದ ರೈತ ಸುರಕ್ಷಿತ ಆಹಾರ ಉತ್ಪಾದನೆ ಮಾಡುವಂತಾಗಬೇಕಾದರೆ ಅವನಿಗೆ ಸರಿಯಾದ ಮಾರ್ಗದರ್ಶನ ಬೇಕು. ಇದು ಲಭ್ಯವಾದಲ್ಲಿ  ಕೃಷಿಕ ಖಂಡಿತವಾಗಿಯೂ ಸುರಕ್ಷಿತ ಆಹಾರ ಉತ್ಪಾದನೆಗೆ ಸಜ್ಜಾಗಬಲ್ಲ.

ಆಹಾರ ಸುರಕ್ಷೆಗೆ ಕಷ್ಟ ಇಲ್ಲ.

 • ನಮ್ಮ ದೇಶದ ರೈತನಿಗೆ ಪ್ರಾಮುಖ್ಯವಾಗಿ ಕೃಷಿಯ ಬಗ್ಗೆ ಸಮರ್ಪಕ ತರಬೇತಿಯ ಅಗತ್ಯವಿದೆ.
 • ಉತ್ತಮ ತಿಳುವಳಿಕೆ ಉಳ್ಳ ತಜ್ಞರ ಮೂಲಕ ರೈತನ ಕೃಷಿ ಚಟುವಟಿಕೆಯನ್ನು ಸುಧಾರಿಸಲು ಅಗತ್ಯ ತರಬೇತಿ ಬೇಕು.
 • ಕೃಷಿಗೆ ವೈಜ್ಞಾನಿಕ ಸ್ಪರ್ಶ (Touch) ಬೇಕು. ಅದರ ಜೊತೆಗೆ ಸಾಂಪ್ರದಾಯಿಕ  ಹಿಡಿತ ಕಳಚಿಕೊಳ್ಳದೆ ಇರಬೇಕು.
 • ವೈಜ್ಞಾನಿಕ  ಕೃಷಿಗೂ ತಳಹದಿ ಸಾಂಪ್ರದಾಯಿಕ   ಕೃಷಿ ಕ್ರಮವೇ ಆಗಿರುವ ಕಾರಣ ಅದನ್ನು ಕಡೆಗಣಿಸಬಾರದು.
 • ಕೃಷಿಯಲ್ಲಿ  ಎಲ್ಲವನ್ನೂ ರಾಸಾಯನಿಕಗಳಿಂದ ಸರಿಪಡಿಸಲು ಆಗುತ್ತದೆ ಎಂಬುದು ಶುದ್ಧ ಸುಳ್ಳು.
 • ಸಾಕಷ್ಟು ಸುರಕ್ಷಿತ ವಿಧಾನಗಳಿಂದ ಸಾಧಿಸಲು ಸಾಧ್ಯವಾಗುತ್ತದೆ.
 • ಇದನ್ನು ಅಭಿವೃದ್ದಿಪಡಿಸಬೇಕು.  ಜೈವಿಕ, ಸಸ್ಯ ಜನ್ಯ ಕೀಟ ರೋಗ ನಿಯಂತ್ರಣದ  ಬಗ್ಗೆ ಆದ ಸಂಶೋಧನೆಗಳನ್ನು  ಇನ್ನಷ್ಟು  ಉತ್ತಮಪಡಿಸಬೇಕು.
 • ಪ್ರತೀಯೊಂದು ನೂತನ ತಾಂತ್ರಿಕತೆಯ ಹಿಂದೆ ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿ ಅಗತ್ಯವಾಗಿ ಬೇಕು.
 • ರೈತರು  ಸಾವಯವ ಕೃಷಿಗೆ ಸದಾ ಸಿದ್ದರು.
 • ಇವರಿಗೆ ಅದಕ್ಕೆ ಬೇಕಾದ ಒಳಸುರಿಗಳನ್ನು ಮಿತ ದರದಲ್ಲಿ ಅಥವಾ ಉಚಿತವಾಗಿ ಒದಗಿಸುವ ವ್ಯವಸ್ಥೆ ಬೇಕು.
 • ಕೆಲವು ಉದ್ದಿಮೆಗಳ ತ್ಯಾಜ್ಯಗಳು ಉತ್ತಮ ಬೆಳೆ ಪೋಷಕಗಳಾಗಿದ್ದು,  ಇದನ್ನು ರೈತನ  ಹೊಲಕ್ಕೆ ನೇರವಾಗಿ ಸರಬರಾಜು ಮಾಡುವ ವ್ಯವಸ್ಥೆ ಬೇಕು.
 • ಆಗ   ನಿರಾಯಾಸವಾಗಿ ನಮ್ಮ ರೈತರು ಸಾವಯವ ಕೃಷಿಗೆ ಗಮನಹರಿಸಬಲ್ಲರು.

 ಭವಿಷ್ಯದಲ್ಲಿ ಕೃಷಿಕರು ಎಷ್ಟು ಬೇಕಾದರೂ  ಉತ್ಪಾದನೆ ಮಾಡಬಹುದು. ಅದನ್ನು ಗುಡ್ಡೆ ಹಾಕಬಹುದು. ಆದರೆ ಅದು ಸಪ್ಪೆ ಯಾಗಬಾರದು. ಜನಕೋಟಿ ತಿನ್ನುವ ಆಹಾರ ಆರೋಗ್ಯಕ್ಕೆ ಉತ್ತಮವಾಗಿದ್ದು, ದೇಶದ ಮಾನವ ಸಂಪನ್ಮೂಲ ಆರೋಗ್ಯವಾಗಿರುವಂತಾಗಬೇಕು.

 
.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!