ಹತ್ತಿ ಬೀಜದ ದರ ಏರಿದೆ- ರಾಯಧನ ಇಳಿದಿದೆ.

ಜೈವಿಕ ತಂತ್ರಜ್ಞಾನದ ಬಿಟಿ ಹತ್ತಿಗೆ ಬೇಯರ್ ಕಂಪೆನಿಗೆ ಕೊಡಬೇಕಾದ ರಾಯಲ್ಟಿಯನ್ನು  ಭಾರತ ಸರಕಾರ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಆದರ ಪರಿಣಾಮ ಇಲ್ಲಿ ಹತ್ತಿ ಬೀಜದ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಬೆಲೆ  ಮಾತ್ರ 2.5 %  ಹೆಚ್ಚಳವಾಗಿದೆ.

  • ನಾವು ಬೆಳೆಯುವ ಬಿಟಿ ಹತ್ತಿಯ ಬಿಟಿ ತಂತ್ರಜ್ಞಾನದ ಮೂಲ ಅಮೆರಿಕಾ ದೇಶದ ಮಾನ್ಸಂಟೋ ಕಂಪೆನಿ.  (ಈ ಕಂಪೆನಿಯನ್ನು ಜರ್ಮನ್ ಮೂಲದ ಬೇಯರ್ ಎಂಬ ಔಷಧ ಕಂಪೆನಿ ಖರೀದಿಸಿದೆ)
  • ಇಲ್ಲಿ ಯಾವುದೇ ಕಂಪೆನಿ ಬಿಟಿ ಹತ್ತಿ ಬೀಜ ಉತ್ಪಾದಿಸಿದರೂ ಅದರ ಬೀಜ ಮಾರಾಟ ಮಾಡುವಾಗ 100 ರೂ. ಗೆ 49 ರೂ. ಗಳನ್ನು ಅದರ ತಂತ್ರಜ್ಞಾನದ ಮೂಲಕಂಪೆನಿಗೆ ಕೊಡಬೇಕಿತ್ತು.
  • ಇದು  ಹಲವಾರು ವರ್ಷಗಳಿಂದಲೂ ನಡೆಯುತ್ತಿತ್ತು,
  • ಭಾರತದ ಹಲವಾರು ಕಂಪೆನಿಗಳು ಬಿಟಿ ಹತ್ತಿ ಬೀಜ ಉತ್ಪಾದಿಸುತ್ತವೆ.
  • ಆದರೆ ಅದರ ಮೂಲ ಕಂಪೆನಿ ಅವರಲ್ಲ.
  • ತಳಿ ಮೂಲವನ್ನು ಅವರಿಂದ  ಪಡೆದು ಇಲ್ಲಿ ಬೀಜೋತ್ಪಾದನೆ ಮಾಡಬೇಕು ಮತ್ತು ಅದರ ಬಗ್ಗೆ ರಾಯಧನ (Royalty) ಕೊಡಬೇಕು.

ಏನು ಈ ಬಿಟಿ:

  • ಹತ್ತಿ ಬೆಳೆಯಲ್ಲಿ ಕಾಯಿ ಕೊರಕ, ಮೊಗ್ಗು ಕೊರಕ ನಿಯಂತ್ರಣಕ್ಕೆ ಕೀಟನಾಶಕ ಬಳಸುವ ಬದಲು ಅದನ್ನು ಜೈವಿಕವಾಗಿ ಕೀಟನಾಶಕ ಬಳಸದೆ ನಿಯಂತ್ರಣ ಮಾಡಲು ಬಂದ ತಾಂತ್ರಿಕತೆ,  ಜೆನೆಟಿಕಲಿ ಮೋಡಿಫೈಡ್  ಬೀಜಗಳು.
  • ಇದು ವಂಶ ಗುಣದಲ್ಲೇ ಕಾಯಿ ಕೊರಕಕ್ಕೆ ನಿರೋಧಕ ಶಕ್ತಿ ಹೊಂದಿದ್ದು, ಬೋರರ್ ಹುಳವು ಇದರ ಸುದ್ದಿಗೇ ಬರುವುದಿಲ್ಲ.

2006  ನೇ ಇಸವಿಯಿಂದ ಈ ತಂತ್ರಜ್ಞಾನದ ಹತ್ತಿ ಬೀಜಗಳು ಭಾರತದ ಹತ್ತಿ ಬೆಳೆಗಾರರ ಹೊಲದಲ್ಲಿ ಬೆಳೆಸಲ್ಪಡುತ್ತಿವೆ.ಇದನ್ನು ಇಲ್ಲಿಯ  ಕಂಪೆನಿಗಳೇ ಅವರ ಪರವಾನಿಗೆಯ ಮೇಲೆ ಬೀಜೋತ್ಪಾದನೆ ಮಾಡುತ್ತವೆ. ಅದಕ್ಕೆ ಬೇಕಾಗುವ ಪೇರೆಂಟಲ್ ಸೀಡ್ ಅನ್ನು ಮೂಲ ಕಂಪೆನಿ ಕೊಡುತ್ತದೆ.

  • ಅದನ್ನು ರೈತರ ಮೂಲಕ ಬೀಜೋತಾದನೆ ಮಾಡಿಸಲಾಗುತ್ತದೆ.
  • ಮತ್ತೆ ಅದನ್ನು ರೈತರಿಗೆ ಬೆಳೆಸಲು ಕೊಡಲಾಗುತ್ತದೆ.
  • ಇದಕ್ಕೆ  ಈ ತನಕ ಮೂಲ ಕಂಪೆನೆಗೆ ಕೊಡಬೇಕಾಗಿದ್ದ ರಾಯಧನ 49% .
  • 2016 ನೇ ಇಸವಿಯಿಂದಲೂ ಈ ರಾಯಧನ ಇಳಿಕೆ ಬಗ್ಗೆ  ಭಾರತ ಸರಕಾರ ಮತ್ತು ಮಾನ್ಸಾಂಟೋ  ಕಂಪೆನಿ ನಡುವೆ ಚರ್ಚೆಗಳಾಗುತ್ತಿತ್ತು.
  • ಈ ಸಲ ದೃಢ  ಮಾಡುವ ಮೂಲಕ  25  ಮಾರ್ಚ್ ನಂದು ಇದನ್ನು ಶೇ. ವಾರಿನಿಂದ 450  ಗ್ರಾಂ ನ ಪ್ಯಾಕೆಟ್ ಗೆ ಕೇವಲ ರೂ.20 ಎಂದು ನಿರ್ಧರಿಸಿದೆ.

ರೈತರಿಗೆ ಲಾಭವಾಗಲಿಲ್ಲ: 

  • ಸರಕಾರ ರಾಯಧನವನ್ನೇನೋ ಇಳಿಸಿದೆ. ಆದರೆ ಅದರ ಪ್ರತಿಫಲವನ್ನು ರೈತರಿಗೆ ಕೊಡಲಿಲ್ಲ.
  • ಅದರ ಬದಲು ಹಿಂದೆ ಇದ್ದ ಪ್ಯಾಕೆಟ್  ಹತ್ತಿ ಬೀಜದ ದರವನ್ನು  730 ರೂ. ಗಳಿಗೆ ಏರಿಸುವ ಮೂಲಕ 2.8 % ಏರಿಸಿದೆ ಎಂದು ಬೇಯರ್ ಮಾನ್ಸಂಟೋ ಕಂಪೆನಿ ಹೇಳಿಕೊಂಡಿದೆ.
  • ಜೊತೆಗೆ ಕೇಂದ್ರದ ಆಡಳಿತಾರೂಢ ಸರಕಾರ ಮಾನ್ಸಂಟೋ ಎಂಬ ವಿದೇಶೀ ಕಂಪೆನಿಯ ಕೃಷಿಯಲ್ಲಿ ಜೈವಿಕ ಉನ್ನತೀಕರಿಸಿದ ತಂತ್ರಜ್ಞಾನವನ್ನು  ವಿರೋಧಿಸುತ್ತದೆ ಎಂದು ಹೇಳಿದೆ.

ಈ ಪರಿಸ್ಥಿತಿಯಿಂದ ಭಾರತದ ಮಾರುಕಟ್ಟೆಯಲ್ಲಿ ನಮಗಲ್ಲದೆ ಇತರ ಬಹುರಾಷ್ಟೀಯ ಕಂಪೆನಿಗಳಿಗೂ ಸಹ ವ್ಯವಹಾರ ಕಷ್ಟವಾಗಿದೆ ಎಂಬ ನಿರಾಶಾ ಭಾವನೆಯನ್ನೂ ಇದು ತಳೆದಿದೆ.

ಭಾರತದ ಹತ್ತಿ ಬೆಳೆ ಈಗ ಪೂರ್ಣ ಪ್ರಮಾಣದಲ್ಲಿ ಬಿಟಿ ಹತ್ತಿಗೇ ಪರಿವರ್ತನೆಯಾಗಿದ್ದು, ಮುಂದೆ ಇದರಿಂದ ಹತ್ತಿ ಬೆಳೆಗಾರರಿಗೆ ತೊಂದರೆ ಆಗದಿರಲಿ.

 

Leave a Reply

Your email address will not be published. Required fields are marked *

error: Content is protected !!