ನಮ್ಮ ದೇಶದಲ್ಲಿ ಹಣ್ಣು ಹಂಪಲುಗಳನ್ನು ಬೇಗ ಹಣ್ಣು ಮಾಡಲು ಕೆಲವು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ಬಹಿರಂಗ ವಿಚಾರ. ಇನ್ನು ಮುಂದೆ ಈ ರೀತಿ ಮಾಡಿದರೆ ಮಾಡಿದವನಿಗೆ ಜೈಲು ಶಿಕ್ಷೆ ಆಗುತ್ತದೆ. ಇದು ದೆಹಲಿ ಹೈಕೋರ್ಟು ನೀಡಿದ ತೀರ್ಪು.
ಹಿನ್ನೆಲೆ:
- ಹಣ್ಣುಹಂಪಲುಗಳನ್ನು ಗಿರಾಕಿಗಳು ಕೊಳ್ಳುವುದು ಅದರ ಆಕರ್ಷಕ ಮೈ ಬಣ್ಣ ಮತ್ತು ಗಾತ್ರವನ್ನು ನೋಡಿ.
- ಹಣ್ಣು ಹಂಪಲುಗಳಿಗೆ ಅತೀ ದೊಡ್ಡ ಸಮಸ್ಯೆ ಎಂದರೆ ಹಣ್ಣಿನ ಒಳಗೆ ಹುಳ ಆಗುವುದು ಮತ್ತು ಸಿಪ್ಪೆ ಕೊಳೆಯುವುದು.
- ಇದರಿಂದ ರೈತರಿಗೂ ನಷ್ಟ. ವ್ಯಾಪಾರಿಗಳಿಗೂ ನಷ್ಟ. ಈ ನಷ್ಟ ಸರಿದೂಗಿಸಲು ಹಣ್ಣು ಮಾಡುವ ವಿಧಾನಕ್ಕೆ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ.
ಹುಳ ಆಗುವ ಹಣ್ಣು ನೊಣದ ಕಾಟ ಮತ್ತು ಸಿಪ್ಪೆ ಕೊಳೆಯುವ ಆಂತ್ರಾಕ್ನೋಸ್ ನಿಂದ 50 % ಕ್ಕೂ ಹೆಚ್ಚಿನ ಹಣ್ಣು ಹಂಪಲುಗಳು ಹಾಳಾಗುತ್ತದೆ. ರಸಾಯನಿಕ ಬಳಸಿ ತ್ವರಿತವಾಗಿ ಹಣ್ಣುಗಳನ್ನು ಮಾಗಿಸಿದರೆ ಅದೆಲ್ಲ ತಪ್ಪುತ್ತದೆ. ಗ್ರಾಹಕರಿಗೆ ನೋಟದ ಹಣ್ಣು ಹಂಪಲು ಸಿಗುತ್ತದೆ. ಆರೋಗ್ಯ ಎಂಬ ಪ್ರಶ್ಣೆಗೆ ಅವಕಾಶ ಇಲ್ಲ.
- ಅವ್ಯಾಹತವಾಗಿ ಕ್ಯಾಲ್ಸಿಯಂ ಕಾರ್ಬೇಡ್ ಎಂಬ ಮಾರಣಾಂತಿಕ ರಾಸಾಯನಿಕ ಬಳಸಿಯೇ ಹಣ್ಣು ಹಂಪಲುಗಳನ್ನು ಹಣ್ಣು ಮಾಡಲಾಗುತ್ತಿದೆ.
- ಇದರಿಂದಾಗಿ ಆಗುವ ಆರೋಗ್ಯ ಹಾನಿಯ ಬಗ್ಗೆ ಯಾರು ಏನೇ ಹೇಳಿದರೂ ಅದು ಅನುಷ್ಟಾನಕ್ಕೆ ಬರುತ್ತಿಲ್ಲ.
- ಇದಕ್ಕೆಈಗ ಸರ್ವೋಚ್ಚ ನ್ಯಾಯಾಲಯವೇ ಮಧ್ಯಪ್ರವೇಶ ಮಾಡಿದೆ.
- ಯಾರು ಈ ರೀತಿ ಹಣ್ಣು ಮಾಡುತ್ತಾರೆಯೋ ಅವರನ್ನು ಜೈಲಿಗೆ ಅಟ್ಟಿ.
- ಅದು 2-3 ದಿನವಾದರೂ ಆಗಬಹುದು. ಇದೊಂದೇ ಅಂತಹ ಕೃತ್ಯ ತಡೆಯಲು ಇರುವ ಮಾರ್ಗ ಎಂದು ಹೇಳಿದೆ.
- ದೆಹಲಿ ಹೈಕೋರ್ಟ್ ನ ಬೆಂಚ್ ನ ನ್ಯಾಯಮೂರ್ತಿಗಳಾದ G S Sistani ಮತ್ತು A J Bambaniಯವರುಗಳು ಈ ತೀರ್ಪನ್ನು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ಹೇಳಿದ್ದಾರೆ.
ಯಾವ ಹಣ್ಣುಗಳು:
- ಮಾವು ಹಣ್ಣು ಎಂಬುದು ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕಾರ್ಬೇಟ್ ಎಂಬ ಕ್ಯಾನ್ಸರ್ ಕಾರಕ ನಿಷೇಧಿಸಲ್ಪಟ್ಟ ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಲ್ಪಡುತ್ತದೆ.
- ಮಾವಿನ ಹಣ್ಣಿಗೆ ಅಧಿಕ ಪ್ರಮಾಣದಲ್ಲಿ ಹಣ್ಣು ನೊಣದ ಉಪಟಳ. ಇದನ್ನು ನಿಯಂತ್ರಿಸಲೂ ಸಹ ರಾಸಾಯನಿಕ ಬಳಕೆ ಅಗತ್ಯ.
- ಒಂದು ವೇಳೆ ಹಣ್ಣು ನೊಣ ನಿಯಂತ್ರಣ ಮಾಡದೇ ಇದ್ದಲ್ಲಿ 100 ಕ್ಕೆ 90% ಹಣ್ಣುಗಳು ಹುಳವಾಗುತ್ತವೆ.
- ಹುಳ ಒಂದೇ ಅಲ್ಲ. ನೈಸರ್ಗಿಕವಾಗಿ ಹಣ್ಣು ಮಾಡಿದಾಗ ಸಿಪ್ಪೆಯಲ್ಲಿ ಕಪ್ಪು ಚುಕ್ಕೆಗಳು ಮೂಡುತ್ತವೆ. ಆದು ದೊಡ್ಡದಾಗುತ್ತಾ ಹಣ್ಣು ಕೊಳೆಯುತ್ತದೆ.
- ತ್ವರಿತ ಹಣ್ಣು ಮಾಡುವ ರಾಸಾಯನಿಕ ಬಳಸಿದಾಗ ಹುಳದ ಮೊಟ್ಟೆ ಮರಿಯಾಗುವುದರ ಒಳಗೆ ಅದು ಬಳಕೆ ಆಗಿರುತ್ತದೆ.
- ನೈಸರ್ಗಿಕವಾಗಿ ಹಣ್ಣು ಆಗಲು ಬೇಕಾಗುವ 5-6 ದಿನಗಳ ಅವಧಿಯನ್ನು ಇದು 2-3 ದಿನಕ್ಕೆ ಸೀಮಿತಗೊಳಿಸುತ್ತದೆ.
- ಹಣ್ಣು ಕೊಳೆಯುವಿಕೆ ಮತ್ತು ಹುಳ ಅಗುವಿಕೆ ಕಡಿಮೆಯಾಗಿ ರೈತರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ.
- ರಾಸಾಯನಿಕದಷ್ಟು ತ್ವರಿತವಾಗಿ ಹಣ್ಣು ಮಾಡಲು ಬೇರೆ ವಿಧಾನಗಳಿಲ್ಲದ ಕಾರಣ ಇದನ್ನು ಕದ್ದು ಮುಚ್ಚಿಯಾದರೂ ಬಹುತೇಕ ಎಲ್ಲರೂ ಮಾಡುತ್ತಾರೆ.
- ಬರೇ ಹಣ್ಣು ಮಾಡುವುದಕ್ಕೆ ಮಾತ್ರವಲ್ಲ, ತರಕಾರಿಗಳ ಗುಣಮಟ್ಟ ಕಾಯ್ದುಕೊಳ್ಳಲೂ ಸಹ ರಾಸಾಯನಿಕ ಬಳಕೆ ಮಾಡಲಾಗುತ್ತದೆ ಎಂಬುದನ್ನೂ ಇಲ್ಲಿ ಉಲ್ಲೇಖ ಮಾಡಲಾಗಿದೆ.
ಕೋರ್ಟು ಏನು ಹೇಳಿದೆ:
- ನ್ಯಾಯಾಲಯವು ಈ ಬಗ್ಗೆ ಫಾಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ (FSSAI) ಮಾಹಿತಿ ಕೇಳಿದೆ.
- ಈ ರೀತಿಯ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾದ ವಿಧಾನಗಳನ್ನು ತಡೆಯುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ಕಲಾಪದಲ್ಲಿ ತಿಳಿಸಲು ಹೇಳಿದೆ.
- ಕೃಷಿ ಮಂತ್ರಾಲಯದಿಂದ, ಗ್ರಾಹಕರು ಇಂತಹ ರಾಸಾಯನಿಕ ಉಪಚರಿತ ಹಣ್ಣುಗಳ ಪತ್ತೆಗೆ ಸುಲಭವಾಗುವ ಯಾವುದಾದರೂ ಕಿಟ್ ಇದೆಯೇ ಎಂಬುದನ್ನು ಕೇಳಿದೆ.
- ಇತರ ಯಾವುದಾದರೂ ಪರೀಕ್ಷೆ ವಿಧಾನಗಳಿವೆಯೇ ಎಂದು ಕೇಳಿದೆ.
- ಇಷ್ಟಲ್ಲದೆ ರೈತರು ವ್ಯಾಪಾರಿಗಳು ಬೆಳೆಬೆಳೆಸುವಾಗ ಮತ್ತು ಸಂಸ್ಕರಣೆ ಮಾಡುವಾಗ ನಿಷೇಧಿಸಲ್ಪಟ್ಟ ರಾಸಾಯನಿಕಗಳನ್ನು ಬಳಸುವುದನ್ನು ತಡೆಯಬೇಕು ಎಂದು ಸೂಚನೆಯನ್ನೂ ನೀಡಿದೆ.
ಇದಲ್ಲದೆ ಹಣ್ಣು ತರಕಾರಿಗಳಿಗೆ ರಾಸಾಯನಿಕ ಬಳಕೆ ಮಾಡುವಾಗ ಜಾಗರೂಕತೆ ವಹಿಸುವುದೇ ಅಲ್ಲದೆ, ಇವುಗಳನ್ನು ಅಗಾಗ ಪರಿಶೀಲಿಸಬೇಕು ಎಂಬ ಸೂಚನೆಯನ್ನೂ ನೀಡಿದೆ. ಯಾವುದಾದರೂ ಶೇಷಗಳು ಕಂಡು ಬಂದರೆ ಅದನ್ನು ಮಾರಾಟಗಾರರು ಅಥವಾ ರೈತರಿಗೆ ವಾಪಾಸು ಕಳುಹಿಸಲು ಸೂಚಿಸಿದೆ.
ರಾಸಾಯನಿಕ ರಹಿತವಾಗಿ ಹಣ್ಣು ಮಾಡುವ ವಿಧಾನಗಳ ಬಗ್ಗೆ ಪ್ರಸ್ತಾಪ ಇಲ್ಲ. ಬದಲಿ ವ್ಯವಸ್ಥೆಗಳ ಬಗ್ಗೆ ಪ್ರಸ್ತಾಪ ಇಲ್ಲ.