ಭಾರತ ಪೆಟ್ರೋಲಿಯಂ ಇಂಧನ ಕ್ಷೇತ್ರದಲ್ಲಿ ಸ್ವಾವಲಂಭಿಯಲ್ಲ. ಇಲ್ಲಿಗೆ ಬೇಕಾಗುವ ಎಲ್ಲಾ ನಮೂನೆಯ ಇಂಧನಕ್ಕೂ ಬೇರೆ ದೇಶಗಳ ಅವಲಂಬನೆ ಆಗಲೇ ಬೇಕು. ಸ್ವಾವಲಂಭಿ ಭಾರತದ ಕನಸನ್ನು ಹೊತ್ತ ಕೇಂದ್ರ ಸರಕಾರ, ಇಂಧನ ಕ್ಷೇತ್ರದಲ್ಲಿ ಪರಾವಲಂಭನೆ ಕಡಿಮೆ ಮಾಡಲು ಬಯೋಗ್ಯಾಸ್ (Bio gas with natural gas) ಅನ್ನು ನೈಸರ್ಗಿಕ ಗ್ಯಾಸ್ ಆಗಿ ಪರಿವರ್ತಿಸಲು ಚಿಂತನೆ ನಡೆಸಿದೆ.
- ಜೈವಿಕ ಇಂಧನಗಳಲ್ಲಿ ಮೂರು ವಿಧಗಳು.
- ಒಂದು ಇಥೆನಾಲ್ ಇದು ಸಕ್ಕರೆ ಕಾರ್ಖಾನೆಯಲ್ಲಿ ಲಭ್ಯ.
- ಇಮ್ಮೊಂದು ಜೈವಿಕ ಸಸ್ಯ ಜನ್ಯ ಇಂಧನಗಳು. ಇವೆರದನ್ನೂ ಪೆಟ್ರೋಲ್ ಜೊತೆ ಬ್ಲೆಂಡ್ ಮಾಡಲಾಗುತ್ತದೆ.
- ಇನ್ನೊಂದು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG )ಬದಲಿಗೆ ಬಳಸಬಹುದುದಾದ ಬಯೋ ಗ್ಯಾಸ್.
- ಈ ಮೂರು ಭಾರತದ ಇಂಧನ ಸ್ವಾವಲಂಬನೆಗೆ ಸೂಕ್ತವಾದುದು.
ಬಯೋಗ್ಯಾಸ್ ಸಿಲಿಂಡರ್ ಗೆ ತುಂಬಬಹುದು:
- ನಾವು ಉತಾದಿಸುವ ಬಯೋ ಗ್ಯಾಸ್ ಅನ್ನು ಶುದ್ಧೀಕರಿಸಿ ಸಿಲಿಂಡರ್ ಗಳಿಗೆ ತುಂಬಿಸಲಿಕ್ಕೆ ಆಗುತ್ತದೆ.
- ಅದರಲ್ಲಿ ಅಡುಗೆ ಇಂಧನದ ತರಹವೇ ಅಡುಗೆ ಮಾಡಲಿಕ್ಕೆ ಆಗುತ್ತದೆ.
- ಅದೇ ರೀತಿ ಕಾರು ಇತ್ಯಾದಿ ಪೆಟ್ರೋಲ್ ವಾಹನ ಓಡಿಸಲಿಕ್ಕೂ ಆಗುತ್ತದೆ.
- ಅದರೆ ಅದಕ್ಕೆ ಸರಕಾರದ ಪೂರ್ಣ ಬೆಂಬಲ ಬೇಕು.
- ಪೆಟ್ರೋಲಿಯಂ ಲಾಭಿ ಇಲ್ಲವಾದರೆ ಇದು ಗ್ರಾಮೀಣ ಪ್ರದೇಶದಲ್ಲಿ ಕೆಲವರಿಗೆ ಒಂದು ಲಾಭದಾಯಕ ವೃತ್ತಿಯಾಗಬಲ್ಲದು.
- ಇದನ್ನು ಮಾಡಿದವರೂ ಇದ್ದಾರೆ.
ಬಯೋ ಗ್ಯಾಸ್ ಹಳ್ಳಿಗಳಿಗೆ ವರ:
- ಹಳ್ಳಿಯಲ್ಲಿ ಹಸು ಸಾಕಣೆ, ಕೋಳಿ ಸಾಕಣೆ ಮಾಡುವವರು ಬರೇ ಅದನ್ನೊಂದೇ ಮಾಡುವ ಬದಲಿಗೆ ಅದರಲ್ಲಿ ಮತ್ತಷ್ಟು ಸಂಪಾದನೆ ಮಾಡಬಹುದು.
- ಸ್ವ ಬಳಕೆಗೆ ಶುಧ್ಹೀಕರಣದ ಅಗತ್ಯ ಇಲ್ಲ. ಕಡಿಮೆ ಸಂಪನ್ಮೂಲ ಸಾಕಾಗುತ್ತದೆ. ಬೇಕಾದಷ್ಟು ಇಂಧನ ಲಭ್ಯವಾಗುತ್ತದೆ.
- ವಾಣಿಜ್ಯ ಉದ್ದೇಶಕ್ಕೆ ಮಾಡಲು ವ್ಯವಸ್ಥಿತ ಘಟಕ ಬೇಕು. ಅದಕ್ಕೆ ಬಂಡವಾಳವೂ ಹೆಚ್ಚು ಬೇಕು.
- 20 ಟನ್ ನಷ್ಟು ಹಸುವಿನ ಸಗಣಿ ಅಥವಾ ಕೋಳಿ ಗೊಬ್ಬರ ಹಾಗೆಯೇ ಇನ್ನಿತರ ಕೃಷಿತ್ಯಾಜ್ಯ, ಹಾಳಾಗುವ ಗುಲಾಬಿ, ತರಕಾರಿ, ದ್ರಾಕ್ಷಿ ಇತ್ಯಾದಿ ಗಳನ್ನು ಬಳಸಿ ದಿನಕ್ಕೆ 400 ಕಿಲೋ LPG ಪ್ರಮಾಣದಷ್ಟು ನೈಸರ್ಗಿಕ ಗ್ಯಾಸ್ ಉತ್ಪಾದಿಸಬಹುದು.
- ಇದಕ್ಕೆ 1000 ಕ್ಯುಬಿಕ್ ಮೀಟರಿನ ಘಟಕ ಬೇಕಾಗುತ್ತದೆ. ಸುಮಾರು 4-5 ಕೋಟಿ ಬಂಡವಾಳ ಬೇಕಾಗುತ್ತದೆ.
- ಇದರಿಂದ ದಿನಕ್ಕೆ ಕನಿಷ್ಟ ಗ್ಯಾಸ್ ಒಂದರಿಂದಲೇ 18,000 -20,000 ರೂ.ಸಂಪಾದನೆ ಮಾಡಬಹುದು.
- ಇದರ ಜೊತೆಗೆ ಈ ಗ್ಯಾಸ್ ಗೆ ಬಳಕೆಯಾಗಿ ದೊರೆಯುವ ಪರಿಶುದ್ಧ ಸಾವಯವ ಗೊಬ್ಬರವೂ ಸಹ ಲಾಭದಾಯಕ. ಇದು ನಿರ್ವಹಣೆ ಖರ್ಚಿಗೆ ಸಾಕಾಗುತ್ತದೆ.
- ಇಷ್ಟು ಗ್ಯಾಸ್ ಉತ್ಪಾದನೆಗೆ ದಿನಕ್ಕೆ 60-70 ಯುನಿಟ್ ವಿದ್ಯುತ್ ಬೇಕಾಗುತ್ತದೆ.
- ಮಿಥೇನ್ ಅನಿಲವನ್ನು ಶುದ್ಧೀಕರಿಸಿ ದನ್ನು ಸಿಲಿಂಡರ್ ಗಳಲ್ಲಿ ತುಂಬಬಹುದು. ಇದು ಎಲ್ ಪಿ ಜಿ ಗ್ಯಾಸ್ ಗೆ ಯವ ರೀತಿಯಲ್ಲೂ ಕಡಿಮೆ ಇಲ್ಲ. ಅದಕ್ಕಿಂತಲೂ ಉತ್ತಮ ಎನ್ನುತ್ತಾರೆ.
- ಮಿಥೇನ್ ಅನಿಲವನ್ನು ಸಿಲಿಂಡರ್ ಗೆ ತುಂಬಿಸುವ ತಂತ್ರಜ್ಞಾನವು ಭಾರತ ಸರಕಾರದ ನವೀಕರಿಸಬಹುದಾದ ಇಂಧನ ಇಲಾಖೆಯಲ್ಲಿ MNRE ಲಭ್ಯ.
- ಇದನ್ನು ಅಳವಡಿಸಿಕೊಳ್ಳಲು ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದ ಜೈವಿಕ ಅನಿಲ ಮಾಹಿತಿ ಕೇಂದ್ರ ಸಹಕರಿಸುತ್ತದೆ.
- ಪುಣೆಯ MAILHEM engineers pvt limited ಇವರು ತಂತ್ರಜ್ಞಾನ ಮತ್ತು ನಿರ್ವಹಣೆ ಮಾರ್ಗದರ್ಶನ ಮಾಡುತ್ತಾರೆ.
- ಇವರು ಬಯೋ ಮಾಸ್ ನಿಂದ ಇಂಧನ ಉತ್ಪಾದನೆ ಬಗ್ಗೆ ದೇಶ ವಿದೇಶಗಳಲ್ಲಿ ಕೆಲಸ ಮಾಡಿದವರಾಗಿರುತ್ತಾರೆ.
- ಇಂಥಹ ಒಂದು ಘಟಕವು ಕರ್ನಾಟಕದ ದೊಡ್ದಬಳ್ಳಾಪುರದ ಹುಸ್ಕೂರು ಇಲ್ಲಿ ಸ್ಥಾಪಿತವಾಗಿದೆ.
ಸರಕಾರ ಬೆಂಬಲಿಸುತ್ತದೆ:
- ಭಾರತ ಕೃಷಿ ಪ್ರಧಾನ ದೇಶವಾಗಿದ್ದು,ಇಲ್ಲಿ ಅಗಾಧ ಪ್ರಮಾಣದಲ್ಲಿ ಕೃಷಿ ತ್ಯಾಜ್ಯಗಳ ಲಭ್ಯತೆ ಇದೆ.
- ಇದೆಲ್ಲವೂ ಬಳಕೆಯಾಗದೆ ಮಾಲಿನ್ಯಕಾರಕವಾಗುತ್ತಿದೆ. ಇದನ್ನು ಅನಿಲ ಉತ್ಪಾದನೆಗೆ ಬಳಕೆ ಮಾಡಿಕೊಂಡರೆ ಅದರ ಸಧ್ಬಳಕೆ ಆದಂತಾಗುತ್ತದೆ. ಇಂಧನ ಸ್ವಾವಲಂಭನೆಯೂ ಆಗುತ್ತದೆ.
- ಇಂಥ ಘಟಕಗಳಿಗೆ ಭಾರತ ಸರಕಾರದ ನವೀಕರಿಸಬಹುದಾದ ಇಂಧನ ಮಂತ್ರಾಲಯದಿಂದ ಸಹಾಯಧನ ಸೌಲಭ್ಯ ಇರುತ್ತದೆ.
ಎಲ್ಲೆಲ್ಲಿ ಮಾಡಬಹುದು:
- ಹಣ್ಣು ತರಕಾರೀ ಸಂಸ್ಕರಣಾ ಘಟಕ ಇರುವ ಕಡೆ ಇದನ್ನು ಸ್ಥಾಪಿಸಬಹುದು.
- ಗೋ ಶಾಲೆ, ದೊಡ್ದ ಪ್ರಮಾಣದ ಹೈನುಗಾರಿಕೆ ಇರುವ ಕಡೆ ಸ್ಥಾಪಿಸಬಹುದು.
- ಕೋಳಿ ಸಾಕಾಣಿಕಾ ಕೇಂದ್ರಗಳು ಇರುವ ಪ್ರದೇಶಗಳಲ್ಲಿ ಮಾಡಬಹುದು.
- ಪಟ್ಟಣದ ಸಮೀಪ ಹಸಿ ತ್ಯಾಜ್ಯ ವಿಲೇವಾರಿ ಮಾಡಲು ಇದನ್ನು ಬಳಕೆ ಮಾಡಬಹುದು.
ಭಾರತ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆದಾಯ ಹೆಚ್ಚಳಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇಂತದ್ದರಲ್ಲಿ ಕೃಷಿ ಪೂರಕವಾದ ಇಂಥಹ ಯೋಜನೆಗಳೂ ಸೇರಿವೆ.
End of the article:———————————————————————–
search words: bio gas# bio gas conversion to LPG# natural gas# cow dung gas# Poultry waste gas# agro industry waste management# Gobar gas#