ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ.
- ಇದು ಒಂದು ನಂಜಾಣು ರೋಗದ ಲಕ್ಷಣ. ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ.
- ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ.
- ಇಂತಹ ಬಾಳೆ ಕೆಲವೊಮ್ಮೆ ಸರಿಯಾಗುವುದೂ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಬಾಳೆ ರೋಗಕ್ಕೆ ತುತ್ತಾಗಿ ಸಾಯುತ್ತದೆ.
ಯಾವ ರೋಗ:
- ಇದನ್ನು ಬನಾನಾ ಬ್ರಾಕ್ಟ್ ಮೊಸೈಕ್ ವೈರಸ್ (Banana Bract mosaic virus) ಎಂಬುದಾಗಿ ಕರೆಯುತ್ತಾರೆ.
- ಇದಕ್ಕೆ ಇನ್ನೊಂದು ಹೆಸರು ಕೊಕನ್ ರೋಗ( Kokan disease) ಬಾಳೆ ಬೆಳೆಯಲಾಗುತ್ತಿರುವ ಎಲ್ಲಾ ಕಡೆ ಈ ರೋಗ ಇದೆ.
- ನೇಂದ್ರ ಬಾಳೆಗೆ ಈ ರೋಗ ಹೆಚ್ಚಾಗಿ ಬಾಧಿಸುತ್ತದೆ. ಇತರ ಬಾಳೆಗೂ ಇಲ್ಲದಿಲ್ಲ.
ಚಿನ್ಹೆಗಳು:
- ಮೊದ ಮೊದಲು ಇಂತಹ ಬಾಳೆಯ ಮುಖ್ಯ ದಂಟಿನಲ್ಲಿ ಹಳದಿ ಅಥವಾ ತಿಳಿ ಕೆಂಪು ಬಣ್ಣದ.
- ಕೆನ್ನೀಲಿ ಬಣ್ಣದ ಗೆರೆಗಳು ಕಂಡು ಬರುತ್ತದೆ. ಇದು ಎಲೆ ತೊಟ್ಟು ಭಾಗ ಅಂದರೆ ಕಾಂಡ ರಚನೆಯಾಗುವ ಭಾಗದಲ್ಲಿ ಕಂಡು ಬರುತ್ತದೆ.
- ಎಲೆಯ ಬುಡ ಭಾಗ ಕಾಂಡದಿಂದ ಬೇರ್ಪಟ್ಟಂತೆ ಇರುತ್ತದೆ.
- ಗಿಡಗಳಿಗೆ ಹೆಚ್ಚಾಗಿ ಕಂಡು ಬರುತ್ತದೆ. ಬಾಳೆ ಕಾಂಡ ಬಹಳ ಸಪುರವಾಗಿ ಇರುತ್ತದೆ.
- ಎಲೆಗಳು ಅನುಕ್ರಮವಾಗಿರುವುದಿಲ್ಲ.ಸಾಮಾನ್ಯವಾಗಿ ಇದು ಗೊನೆ ಹಾಕುವ ತನಕ ಉಳಿಯುವುದೇ ಇಲ್ಲ.
- ಉಳಿದರೂ ಗೊನೆಯಲ್ಲಿ ಸಣ್ಣ ಕಾಯಿಗಳು ಮತ್ತು ಅದು ಗೊನೆ ಹಾಕಿದ ತಕ್ಷಣ ಬಿದ್ದು ಬಿಡುತ್ತದೆ.
- ಬಾಳೆ ಕಾಯಿ ಅಸಹಜವಾಗಿರುತ್ತದೆ.
ನೇಂದ್ರವಲ್ಲದೆ, ಮೈಸೂರು, ಕ್ಯಾವೆಂಡೀಶ್, ರಸಬಾಳೆ , ಕರ್ಪೂರವಳ್ಳಿ ಬಾಳೆಗಳು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತವೆ.
ಹತೋಟಿ:
- ನೆಡಲು ಬಳಸುವ ಕಂದುಗಳು ರೋಗ ಮುಕ್ತವಾಗಿರಬೇಕು. ಅಂಗಾಂಶ ಕಸಿಯ ಗಿಡಗಳಾಗಿದ್ದರೂ ಸಹ ಈ ರೋಗ ಬರುವುದಿಲ್ಲ ಎಂದಿಲ್ಲ.
- ಕಂದು ಆಯ್ಕೆ ಮಾಡುವಾಗ ರೋಗ ಇಲ್ಲದ ತೋಟದಿಂದ ಆಯ್ಕೆ ಮಾಡಬೇಕು.
- ಕತ್ತಿ ಕಂದುಗಳನ್ನು(Sword sucker) ಆಯ್ಕೆ ಮಾಡಬೇಕು.
- ಹೆಚ್ಚಾಗಿ ನೀರ್ ಕಂದುಗಳನ್ನು( Water sucker) ಆಯ್ಕೆ ಮಾಡಿದಲ್ಲಿ ಈ ಸಮಸ್ಯೆ ಉಂಟಾಗುತ್ತದೆ.
- ನೀರ್ ಕಂದುಗಳು ಹೆಚ್ಚಾಗಿ ನಂಜಾಣು ರೋಗಕ್ಕೆ ಬೇಗ ತುತ್ತಾಗುತ್ತವೆ. ಇದನ್ನು ನೆಡಲು ಬಳಸಬೇಡಿ.
ಇಂತಹ ಬಾಳೆಯನ್ನು ಉಳಿಸಿಕೊಳ್ಳುವುದು ವ್ಯರ್ಥ. ಇದು ಸರಿಯಾಗುವ ರೋಗ ಅಲ್ಲ. ಈ ರೋಗ ಲಕ್ಷಣ ಕಂಡು ಬಂದ ಬಾಳೆ ಸಸ್ಯವನ್ನು ತಕ್ಷಣ ತೆಗೆದರೆ ಉಳಿದ ಬಳೆಗೂ ರೋಗ ಹರಡುವುದನ್ನು ತಡೆಯಬಹುದು. ಗಡ್ಡೆಯನ್ನು ಕವುಚಿ ಹಾಕಿ ನಾಟಿ ಮಾಡಬೇಕು. ಎಲೆ ಇರುವ ಸಸ್ಯವನ್ನು ನಾಟಿ ಮಾಡಬಾರದು. ಗಡ್ಡೆಯನ್ನು ನೆಟ್ಟಾಗ ಅದು ಮೊಳಕೆ ಬರುವ ಲಕ್ಷಣದಲ್ಲಿ ಇದು ಉತ್ತಮ ಬಾಳೆಯೇ ಎಂದು ಗುರುತಿಸಬಹುದು.
ಇಂತಹ ಸಮಸ್ಯೆ ಎಲ್ಲಾ ಬಾಳೆಗೂ ಬರುವುದಿಲ್ಲ. ಇದರ ಶೇಕಡವಾರು ಕೇವಲ 2-4 ಮಾತ್ರ. ಇದನ್ನು ತಕ್ಷಣ ತೆಗೆದು ಬಿಡುವುದೇ ಪರಿಹಾರ. ಎಲೆ ಬರುವ ಲಕ್ಷಣ ಸರಿಯಾಗಿದ್ದರೆ ಯಾವುದೇ ಮುರುಟುವಿಕೆ ಇಲ್ಲದಿದರೆ, ಕಾಂಡಕ್ಕೆ ಬೇರ್ಪಟ್ಟ ಎಲೆ ದಂಟನ್ನು ಕಟ್ಟಿದರೆ ಅದರ ಹಗದಿಂದಲೇ ಕಟ್ಟಿದರೆ ನಂತರ ಬರುವಂತದ್ದು ಸರಿಯಾಗುತ್ತದೆ.