ಬಾಳೆ 9-11 ತಿಂಗಳ ಬೆಳೆ. ಈ ಅವಧಿಯಲ್ಲಿ ಕೆಲವು ಲೆಕ್ಕಾಚಾರ ಹಾಕಿಕೊಂಡು ಮಿಶ್ರ ಬೆಳೆಯನ್ನು ಬೆಳೆಸಲಿಕ್ಕಾಗುತ್ತದೆ. ಕೆಲವು ಬೆಳೆಗಳ ಜೊತೆಗೆ ಬಾಳೆ ಮಿಶ್ರ ಬೆಳೆಯೂ ಆಗುತ್ತದೆ. ಇದನ್ನು ಹಲವು ರೈತರು ಮಾಡುತ್ತಾರೆ.ಬಾಳೆ ನಾಟಿ ಮಾಡಿ 3-4 ತಿಂಗಳ ತನಕ ಮಧ್ಯಂತರದಲ್ಲಿ ಸಾಕಷ್ಟು ಬೆಳೆಕು ಇರುತ್ತದೆ. ಈ ಸಮಯದಲ್ಲಿ ಅಲ್ಪಾವಧಿ ಬೆಳೆಗಳನ್ನು ಎಡೆಯಲ್ಲಿ ಬೆಳೆಸಬಹುದು.
- ಕೆಲವು ಬೆಳೆಗಳನ್ನು ಮುಂಚೆಯೇ ಬೆಳೆಸಿ ಅದು ಕಠಾವಿಗೆ 3-4 ತಿಂಗಳು ಇರುವಾಗ ಬಾಳೆ ಹಾಕಿದರೆ ಅದನ್ನು ಕಠಾವು ಅಥವಾ ಒಕ್ಕಣೆ ಮಾಡುವಾಗ ಅದರ ಮಣ್ಣನ್ನು ಬಾಳೆಗೆ ಹಾಕಿದರೆ ಬಾಳೆ ಬೆಳೆ ಚೆನ್ನಾಗಿ ಬರುತ್ತದೆ.
ಬಾಳೆ+ಶುಂಠಿ+ ಅರಶಿನ:
- ಶುಂಠಿ ಅರಶಿನ ಬೆಳೆಸುವ ರೈತರು ಸಾಮಾನ್ಯವಾಗಿ ಮಾರ್ಚ್ ಎಪ್ರೀಲ್ ತಿಂಗಳಲ್ಲಿ ಗಡ್ಡೆ ನಾಟಿ ಮಾಡುತ್ತಾರೆ. ಇದು 8 ತಿಂಗಳ ಬೆಳೆ.
- ಅದು ಅಕ್ಟೋಬರ್ – ನವೆಂಬರ್ ತಿಂಗಳಿಗೆ ಒಕ್ಕಣೆಗೆ ತಯಾರಾಗುತ್ತದೆ.
- ಒಕ್ಕಣೆಯ ಅವಧಿಗೆ 3 ತಿಂಗಳು ಇರುವಾಗ ಸಾಲಿನ ಬದುಗಳಲ್ಲಿ ನಿರ್%B