1 ಕಿಲೋ ಪೇಪರ್ ಸಿದ್ಧವಾಗಲು ಬೇಕು- 1000 ಲೀ. ನೀರು.

ನದಿ, ಕೊಳವೆ  ಬಾವಿ, ಅಣೆಕಟ್ಟು  ಮುಂತಾದ ನೀರಿನ ಮೂಲಗಳಿಂದ ಅತ್ಯಧಿಕ ಪ್ರಮಾಣ ಉಪಯೋಗವಾಗುವುದು ಉದ್ದಿಮೆಗಳಿಗೆ.ಒಂದು ನೀರಾವರಿ ಯೋಜನೆ ಊರಿಗೆ ಮಂಜೂರಾಗುತ್ತದೆ ಎಂದರೆ ಅದರ ಹಿಂದೆ  ಯಾವುದೋ ಒಂದು ಉದ್ದಿಮೆಗೆ ನೀರು ಸರಬರಾಜು ಅಗಲಿದೆ ಎಂದರ್ಥ. ಒಂದೊಂದು ಉದ್ದಿಮೆಗಳು ಕೃಷಿಕರು ಬಳಕೆ ಮಾಡುವ ನೀರಿನ ಹತ್ತು ಪಟ್ಟು  ಹೆಚ್ಚು ನೀರನ್ನು ಬಳಸುತ್ತವೆ..

ಉದ್ದಿಮೆಗಳು ಬಳಸಿ ನದಿಗೆ ಹೊರ ಹಾಕಿದ ಮಲಿನ ನೀರು
 • ಕೈಗಾರಿಕೆಗಳಲ್ಲಿ  ಬಳಕೆಯಾಗಿ  ಹೊರ ಹಾಕುವ ನೀರು ಕಲುಷಿತ ನೀರಾಗಿರುತ್ತದೆ.
 • ರೈತ ಬಳಕೆ ಮಾಡಿದ ನೀರು ಮರಳಿ ಭೂಮಿಗೆ ಮರಳಿ ಸೇರಲ್ಪಡುವ ಶುದ್ಧ ನೀರೇ ಆಗಿರುತ್ತದೆ.

ರೈತ ಪೋಲು ಮಾಡುವುದಲ್ಲ:

 • ರೈತರು  ನೀರನ್ನು ಅತಿಯಾಗಿ ಬಳಕೆ ಮಾಡುತ್ತಾರೆ.
 • ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಜನ ಆಡಿಕೊಳ್ಳುತ್ತಾರೆ.
 • ವ್ಯವಸ್ಥೆಗಳೂ ಅದನ್ನೇ ಹೇಳುತ್ತವೆ. ಆದರೆ ವಾಸ್ತು ಸ್ತಿತಿ ಭಿನ್ನ.
 • ರೈತ ಕೃಷಿ ಮಾಡುವುದರಿಂದ ಅಲ್ಲಿ ಬಳಕೆಯಾಗುವ ನೀರು ಮತ್ತೆ ನೆಲಕ್ಕೆ  ಸೇರುತ್ತದೆ.
 • ಅಂತರ್ಜಲಕ್ಕೂ ಸೇರುತ್ತದೆ.
 • ಅದು ಶುದ್ಧ ನೀರಾಗಿಯೇ. ರೈತನ ನೀರಿನ ಬಳಕೆ ಪ್ರಕೃತಿ ಪೂರಕವಾಗಿಯೇ ಇದೆ.
ಹೆಸರಿಗೆ ರೈತ- ಬಳಕೆ ಬೇರೆಯೇ ಆಗಿರುತ್ತದೆ. ಇದು ಉದ್ದಿಮೆಗಳಿಗೆ ನೀರು ಸರಬರಾಜು ವ್ಯವಸ್ಥೆ

ನಿಮಗೆ ಇದು ಗೊತ್ತೇ:

 • ಒಂದು ಪೆಟ್ರೋಕೆಮಿಕಲ್ ಉದ್ದಿಮೆಯಲ್ಲಿ  ಒಂದು ಬ್ಯಾರಲ್  ಕಚ್ಚಾ ಎಣ್ಣೆ ( ಕ್ರೂಡ್ ಆಯಿಲ್)  ಅನ್ನು ಸಂಸ್ಕರಣೆಗೆ 2106 ಲೀ. ಗಳಷ್ಟು ನೀರು    (ತಂಪು ಮಾಡಲು) ಬೇಕಾಗುತ್ತದೆ.
 • ನಮ್ಮ ದೇಶದಲ್ಲಿ  ದಿನಕ್ಕೆ 4,443,000  ಬ್ಯಾರಲ್ ಗೂ ಅಧಿಕ ಕಚ್ಚಾ ತೈಲ ಸಂಸ್ಕರಣೆ ಆಗುತ್ತದೆ.
 • ಇದು ಹೊಲಕ್ಕೆ  ರೈತರು ಬೆಳೆ ಬೆಳೆಯಲು ಬಳಕೆ ಮಾಡುವ ನೀರಿಗಿಂತ ಹೆಚ್ಚಿನ ನೀರನ್ನು ಉಪಯೋಗಿಸುತ್ತದೆ.
 • ಇದು ಯಾವುದೂ ಪುನರ್ ಬಳಕೆ ಆಗದೆ ಸಮುದ್ರ, ಅಥವಾ ನದಿಗಳಿಗೆ ಕಲುಷಿತ ನೀರಾಗಿ ಎಸೆಯಲ್ಪಡುತ್ತದೆ.
 • ನಾವು ಬಳಕೆ ಮಾಡುವ ರಾಡ್ ಇತ್ಯಾದಿಗಳ ಒಂದು ಕಿಲೋ ಉಕ್ಕು ತಯಾರಿಕೆಗೆ  250  ಲೀ. ನೀರು ಬೇಕಾಗುತ್ತದೆ.
 • ನಾವು ಓದುವ ಪತ್ರಿಕೆ, ಪುಸ್ತಕ  ತಯಾರಾಗು ಒಂದು ಕಿಲೋ ಕಾಗದಕ್ಕೆ 1000 ಲೀ ನೀರು ಬೇಕಾಗುತ್ತದೆ.

ಇವೆಲ್ಲಾ ನೀರೂ ಪರಿಸರ ಮಾಲಿನ್ಯಕ್ಕೆ  ಕಾರಣವಾಗುವಂತದ್ದು. ಇದು ಅಂತರ್ಜಲಕ್ಕೆ ಸೇರಿದರೂ ಅದು ಕಲುಷಿತವಾಗುತ್ತದೆ.

ನದಿಗಳ ನೀರಿಗೂ ಖನ್ನ ಹಾಕಲಾಗುತ್ತದೆ.

ಏನು ಆಗುತ್ತಿದೆ:

 • ರೈತರು ಬಳಕೆ ಮಾಡುವ ಕೊಳವೆ ಬಾವಿ, ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚುತ್ತಿದೆ.
 • ನೀರು ಪರಿಶುದ್ಧವಾಗಿರುವುದಿಲ್ಲ.  ಕೆಸರು, ಮಡ್ ಮುಂತಾದವು  ಬರುತ್ತವೆ.
 • ಇದಕ್ಕೆಲ್ಲಾ ಕಾರಣ  ಅತಿಯಾಗಿ ಕಲುಷಿತ ನೀರನು  ಭೂಮಿಗೆ ಬಿಡುವುದೇ ಆಗಿರುತ್ತದೆ.

ನದಿ ಸಮುದ್ರಗಳಿಗೆ ಕಲುಷಿತ ನೀರನ್ನು ಬಿಡುವುದರಿಂದ ಅದುವೇ  ಪ್ರಧಾನ ಅಂತರ್ಜಲ ಪೂರಕ  ಪ್ರಾಕೃತಿಕ ವ್ಯವಸ್ಥೆಗಳಾದ ಕಾರಣ ಕೊಳಚೆ ನೀರು ಸಹ  ಅಂತರ್ಜಲಕ್ಕೆ  ಸೇರ್ಪಡೆಯಾಗುವ ಸಾಧ್ಯತೆ ಇರುತ್ತದೆ.

ಇದು ತಪ್ಪು:

 • ಕೈಗಾರಿಕೆಗಳು  ಅಮೂಲ್ಯ ಸಂಪನ್ಮೂಲಗಳನ್ನು ಅದರಲ್ಲೂ ಅಂತರ್ಜಲ  ಮೂಲದ ನೀರನ್ನು ಬಳಕೆ ಮಾಡುವುದು ಅಥವಾ ನೀರನ್ನು ಕಲುಷಿತ ಮಾಡುವುದು ಸರಿಯಲ್ಲ.
 • ಇದೇ ನೀರನ್ನು ಮತ್ತೆ ಶುದ್ಧಿಕರಿಸಿ  ಬಳಕೆ ಮಾಡಬಹುದಾದರೂ ಅದನ್ನು ಮಾಡುತ್ತಿಲ್ಲ.
 • ಬೆಂಗಳೂರಿನಂತಹ ಕಡಿಮೆ ಮಳೆಯಗುವ ಪ್ರದೇಶದಲ್ಲಿ ಒಂದು ಎಕ್ರೆ  ನೆಲದ ಮೇಲೆ ಬೀಳುವ ಮಳೆ ನೀರನ್ನು ಹಿಡಿದಿಟ್ಟರೆ(  ಚಿತ್ರ: ಗ್ರೀನ್ ಹೌಸ್ ಮಾಡಿನಲ್ಲಿ  ಸೆರೆ ಹಿಡಿದ ನೀರು) ಅದು ಕೊಟ್ಯಾಂತರ ಲೀಟರು ನೀರಾಗುತ್ತದೆ. ಇದನ್ನು ಉದ್ದಿಮೆಗಳು ಮಾಡಬೇಕು.

 • ತಮ್ಮಲ್ಲಿರುವ ಬಂಡವಾಳದಲ್ಲಿ ಇವರು ಮಳೆ ನೀರನ್ನೂ ಇದಕ್ಕಾಗಿ ಸಂಗ್ರಹಿಸಬಹುದು.
 • ಉದ್ದಿಮೆಗಳುಅತಿಯಾಗಿ ಉಪಯೋಗಿಸುವ  ನೀರಿನಿಂದಾಗಿ ಅಂತರ್ಜಲದ ಮಟ್ಟವನ್ನು ಕುಸಿಯುತ್ತಿದೆ ಎನ್ನಬಹುದು.

ಇಂದು ಅಂತರ್ಜಲ ಕುಸಿತಕ್ಕೆ, ಮತ್ತು ಮಲಿನವಾಗಲು ಕಾರಣ ಔದ್ಯಮಿಕ ಮತ್ತು ಕೃಷಿಯೇತರ ನೀರಿನ ಬಳಕೆ ಮತ್ತು ಅದರ ವಿಲೇವಾರಿ. ಇದನ್ನು ಸರಿಪಡಿಸಿದರೆ ನೀರಿನ ಮಾಲಿನ್ಯ ಕಡಿಮೆಯಾಗಬಹುದು.

 
 
 
 
 

Leave a Reply

Your email address will not be published. Required fields are marked *

error: Content is protected !!