ಒಂದು ಕಾಲದಲ್ಲಿ ವೆನಿಲ್ಲಾ ಎಂಬ ಬೆಳೆ ಎಲ್ಲರ ಗಮನಸೆಳಿದಿತ್ತು. ಅದು ಹಾಗೆಯೇ ಅಳಿಸಿಹೋಯಿತು. ಈಗ ಮತ್ತೊಂದು ಹಣ್ಣಿನ ಬೆಳೆ ಬಹುತೇಕ ಎಲ್ಲರ ಗಮನ ಸೆಳೆಯಲಾರಂಭಿಸಿದೆ. ಅದುವೇ ಕಿಲೋಗೆ 200 ರೂ. ತನಕ ಬೆಲೆ ಇರುವ ಬಟರ್ ಫ್ರೂಟ್ ಹಣ್ಣು. ಇದು ಮರ ಬೆಳೆ. ಮರಕ್ಕೆ 2-3 ಕ್ವಿಂಟಾಲಿಗೂ ಹೆಚ್ಚು ಇಳುವರಿ ಕೊಡಬಲ್ಲ ಜಗತ್ತಿನಾದ್ಯಂತ ಬೇಡಿಕೆ ಇರುವ ಹಣ್ಣು ಇದು.
ಬೆಣ್ಣೆ ಹಣ್ಣು (AVOCADO OR BUTTER FRUIT) ಒಂದು ಮೈನರ್ ಫ್ರೂಟ್ ಆಗಿ ನಮ್ಮ ಸುತ್ತಮುತ್ತ ಶತಮಾನಗಳಿಂದಲೂ ಇತ್ತು. ಈಗ ಅದು ಭಾರೀ ಮಹತ್ವ ಪಡೆಯುತ್ತಿದ್ದು, ಇಡೀ ಜಗತ್ತೇ ಬೆಣ್ಣೆ ಹಣ್ಣಿನ ಹಿಂದೆ ಇದೆ ಎಂಬ ಮಾಹಿತಿ ಇದೆ. ಇಷ್ಟಕ್ಕೂ ಈ ಬೆಣ್ಣೆ ಹಣ್ಣು ಏನು, ಇದನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.
- ಬೆಣ್ಣೆ ಹಣ್ಣು ಮಾನವ ದೇಹದ ಇಮ್ಯೂನ್ ಸಿಸ್ಟಮ್ ಉತ್ತೇಜಿಸುವ ಹಣ್ಣು.
- ರೋಗ ರುಜಿನಗಳಿಗೆ ನಮ್ಮ ದೇಹವು ಪ್ರವೇಶಾವಕಾಶವನ್ನು ನೀಡಬೇಕಾದರೆ ನಮ್ಮಲ್ಲಿ ಇಮ್ಯೂನ್ ಸಿಸ್ಟಮ್ ದುರ್ಬಲವಾಗಿರಬೇಕು.
- ಈ ಹಣ್ಣು ಇಮ್ಯೂನ್ ಸಿಸ್ಟಮ್ ಅನ್ನು ಬಲಗೊಳಿಸುತ್ತದೆ.
- ಹಿಂದೆ ಅಂಗ್ಲೋ ಇಂಡಿಯನ್ ಗಳು ಇದನ್ನು ತಮ್ಮ ಆಹಾರದ ಜೊತೆಗೆ ಈ ಹಣ್ಣು ಬಳಕೆ ಮಾಡುತ್ತಾ ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದರು.
- ಸಾಮಾನ್ಯ ಜನರೂ ಸಹ ತಮ್ಮ ಆರೋಗ್ಯ ಸುಧಾರಣೆಗೆ ಇಂತಹ ಹಣ್ಣು ಹಂಪಲುಗಳನ್ನು ಬಳಸುವಂತಾಗಬೇಕು , ಇದರ ಬೆಳೆ ಹೆಚ್ಚಬೇಕು, ಎಂಬ ಆಕಾಂಕ್ಷೆಯೊಂದಿಗೆ ಇಂದು ಬೆಣ್ಣೆ ಹಣ್ಣು ಬೆಳೆಯ ಪ್ರಚಾರ ನಡೆಯುತ್ತಿದೆ.
- ಈ ಹಣ್ಣು ಮಂಗಗಳು ತಿನ್ನದ ಹಣ್ಣು. ಕಾರಣ ಇದರ ಸಿಪ್ಪೆ ಹಹಿ. ಹಾಗಾಗಿ ಬೆಳೆಯಲು ಕಷ್ಟ ಇಲ್ಲ.
ಮೂಲ ಯಾವುದು?
- ಬೆಣ್ಣೆ ಹಣ್ಣಿನ ಮೂಲ ಸ್ಥಾನ ಅಮೇರಿಕಾ ಖಂಡದ ಮೆಕ್ಸಿಕೋ, ಗ್ವಾಟೆಮಾಲಾ, ಹಾಗೂ ವೆಸ್ಟ್ ಇಂಡೀಸ್ ದ್ವೀಪಗಳು.
- ಬ್ರಿಟೀಷರು ಈ ಹಣ್ಣನ್ನು 19-20 ನೇ ಶತಮಾನದಲ್ಲಿ ಭಾರತ ಹಾಗೂ ಶ್ರೀಲಂಕಾ ದೇಶಕ್ಕೆ ಪರಿಚಯಿಸಿದರು.
- ಮೈಸೂರು ಸಂಸ್ಥಾನದ ಸಾರ್ವಜನಿಕ ಉದ್ಯಾನಗಳ ಮೇಲ್ವಿಚಾರಕರಾಗಿದ್ದ, ಜಾನ್ ಕೆಮರಾನ್ ಇವರು ಬೆಣ್ಣೆ ಹಣ್ಣನ್ನು ಮೊಟ್ಟ ಮೊದಲು 1900 ನೇ ಇಸವಿಯಲ್ಲಿ ಲಾಲ್ ಬಾಗ್ ಉದ್ಯಾನವನದಲ್ಲಿ ಪರಿಚಯಿಸಿದರು.
- ಈ ಸಮಯದಲ್ಲೇ ಬ್ರಿಟೀಷರು ತಮ್ಮ ಒಡೆಯನದಲ್ಲಿದ್ದ ಕಾಫೀ ತೋಟಗಳಲ್ಲಿ ಹಾಗೂ 1910-20 ರಲ್ಲಿ G H Krumbiegel ಎಂಬವರು ಬೆಂಗಳೂರಿನ ಕಾಂಟೋನ್ಮೆಂಟ್ ಪ್ರದೇಶಗಳಲ್ಲಿನ ಕೆಲವು ಮನೆ ಹಿತ್ತಲುಗಳಲ್ಲಿ ಬೆಳೆಸಲು ಪ್ರಾರಂಭಿಸಿದರು.
- 1925 ರ ಸುಮಾರಿಗೆ ಖ್ಯಾತ ತೋಟಗಾರಿಕಾ ವಿಜ್ಞಾನಿ, ಆ ಕಾಲದಲ್ಲಿ ಅಮೇರಿಕಾದಲ್ಲಿ ಕೃಷಿ ವಿಜ್ಞಾನ ಅಭ್ಯಾಸ ಮಾಡಿದವರಾದ ಉಡುಪಿ ಜಿಲ್ಲೆಯ ಭವಾನಿ ಶಂಕರ್ ನೈರೋಡಿ ಇವರು ಅಮೇರಿಕಾ ದಲ್ಲಿ ಅವಕಾಡೋ ಬಗ್ಗೆ ತಳಿ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡರು.
- ಹಾಗೆಯೇ ಬೇರೆ ಬೇರೆ ತಳಿಯ ಬೆಣ್ಣೆ ಹಣ್ಣುಗಳನ್ನು ಬೆಂಗಳೂರಿಗೆ ಪರಿಚಯಿಸಿದರು.
- 1960-70 ರ ಸುಮಾರಿಗೆ ಕರ್ನಾಟಕದ ತೋಟಗಾರಿಕಾ ಮಹಾಸಂತ ಎಂದೇ ಹೆಸರು ಪಡೆದ ಡಾ. ಎಂ ಎಚ್ ಮರಿಗೌಡ ಇವರು ನೂರಾರು ಬೆಳೆಗಾರರಿಗೆ ಬೆಣ್ಣೆ ಹಣ್ಣು ಬೆಳೆಯಲು ಪ್ರೇರಣೆ ನೀಡಿದರು.
- ನರ್ಸರಿ ಮಾಡುವುದನ್ನು ಪ್ರೋತ್ಸಾಹಿಸಿದರು.
- 2005 ರ ಸುಮಾರಿಗೆ ನಾಮಧಾರೀ ಸೀಡ್ಸ್ ಕಂಪನಿಯ ಶ್ರೀ ಸತ್ಗುರು ಉದಯ ಸಿಂಗ್ ಇವರು ಅಮೇರಿಕಾ ಮೂಲದ ಹಾಸ್ (HAAS) ತಳಿಯನ್ನು ಮಡಿಕೇರಿ ಪ್ರಾಂತ್ಯಗಳಿಗೆ ಪರಿಚಯಿಸಿದರು.
- ಆ ತನಕ ಈ ಹಣ್ಣಿನ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿತ್ತು.
- ಅವರು ಮಾತ್ರ ಅದನ್ನು ಬಳಸುತ್ತಿದ್ದರೂ.
- ವಿಶೇಷವಾಗಿ ಬ್ರಿಟೀಷರ ಸಂಪರ್ಕ ಉಳ್ಳ, ಕ್ರಿಶ್ಚಿಯನ್ ಸಮುದಾಯದವರು ವಾಸಿಸುತ್ತಿರುವ ಮಂಗಳೂರು, ಕೊಡಗು, ಬಾಳೆ ಹೊನ್ನೂರು ಕಳಸ ಮುಂತಾದ ಕಡೆ ಇದನ್ನು ಕೆಲವರು ತಮ್ಮ ಹಿತ್ತಲಲ್ಲಿ ಬೆಳೆಸಿ ತಮಗೆ ಬೇಕಾದಾಂತೆ ಹಣ್ಣು ಬಳಕೆ ಮಾಡುತ್ತಿದ್ದರು.
- HASS “ಹಾಸ್’ ತಳಿಯ ಪರಿಚಯ, ಹಾಗೆಯೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾದ ತರುವಾಯ ಇದರ ವ್ಯಾಪಕ ಬೇಸಾಯ ಪ್ರಾರಂಭವಾಯಿತು.
- ಸ್ಥಳೀಯವಾಗಿ ಇದ್ದ ಹಲವಾರು ಉತ್ತಮ ತಳಿಗಳೂ ಸಹ ಪುಠಕ್ಕೆ ಬಂದವು.
- ತೋಟಗಾರಿಕಾ ಸಂಶೋಧನಾ ಸಂಸ್ಥೆಗಳೂ ಸಹ ಇದರ ಕುರಿತಾಗಿ ಸಂಶೊಧನೆಗಳನ್ನು ಕೈಗೆತ್ತಿಕೊಂಡವು.
- ನರ್ಸರಿಗಳವರು ಭಾರೀ ಪ್ರಮಾಣದಲ್ಲಿ ಸಸ್ಯೋತಾದನೆಗೆ ತೊಡಗಿದವು .
- ಇವರೆಲ್ಲರ ಶ್ರಮದಿಂದಾಗಿ ಇಂದು ಬೆಣ್ಣೆ ಹಣ್ಣಿನ ಬೆಳೆ ಎಂಬುದು ಒಂದು ಪ್ರಾಮುಖ್ಯ ಬೆಳೆಯಾಗಿ ಮುನ್ನೆಲೆಗೆ ಬಂತು.
ಯಾಕೆ ಬೆಣ್ಣೆ ಹಣ್ಣು ಅಮೂಲ್ಯ:
- ಯಾವುದೇ ಒಂದು ಹಣ್ಣು ಉತ್ತಮ ಹಣ್ಣು ಎಂದು ಪರಿಗಣಿಸಬೇಕಿದ್ದರೆ ಅದರಲ್ಲಿ ಜೀವ ಸತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಇರಬೇಕು.
- ಅದು ಯಾವುದೂ ಅಡ್ದ ಪರಿಣಾಮಗಳನ್ನು ಪಡೆದಿರಬಾರದು.
- ಬೆಣ್ಣೆ ಹಣ್ಣನ್ನು ಆಹಾರ ತಜ್ಞರು ಅಪರೂಪದ ಪೌಷ್ಟಿಕಾಂಶ ಭರಿತ ಹಾಗೂ ಔಷಧೀಯ ಹಣ್ಣು ಎಂದು ಗುರುತಿಸಿದ್ದಾರೆ.
- ಆರೋಗ್ಯ ವರ್ಧನೆಗೆ ಈ ಹಣ್ಣು ತುಂಬಾ ಸಹಾಯವಾಗಿದೆ. ಅಧಿಕ ಕೊಬ್ಬಿನಾಂಶ ಹೊಂದಿದ ಏಕೈಕ ತೋಟಗಾರಿಕಾ ಫಲ ಎಂಬ ಹೆಗ್ಗಳಿಕೆ ಇದೆ.
- ಅಧಿಕ ಕೊಬ್ಬಿನ ಅಂಶ ಇರುವ ಕಾರಣವೇ ಇದಕ್ಕೆ ಬಟರ್ ಫ್ರೂಟ್ ಎಂದು ಕರೆಯಲಾಗಿದೆ.
- ಆರೋಗ್ಯದ ಬಗ್ಗೆ ಹೆಚ್ಚಿನ ಕಳಕಳಿ ಉಳ್ಳವರು ಕೊಬ್ಬು ಎಂದಾಕ್ಷಣ ಅದನ್ನು ಬಳಸಲು ಹಿಂದೇಟು ಹಾಕುತ್ತಾರೆ.
- ಆದರೆ ಬಟರ್ ಫ್ರೂಟ್ ನಲ್ಲಿರುವ ಕೊಬ್ಬು ಈ ಕಳಂಕದಿಂದ ಹೊರತಾಗಿದೆ.
- ಇದರಲ್ಲಿರುವ ಕೊಬ್ಬು ಸಂಪೂರ್ಣ ಅಪಾಯರಹಿತ ಕೊಬ್ಬಾಗಿರುತ್ತದೆ.
- ಇದೇ ಕಾರಣಕ್ಕೆ ವಿಶ್ವದಾದ್ಯಂತ ಆಹಾರ ತಜ್ಞರು ಬಟರ್ ಫ್ರೂಟ್ ಅನ್ನು ಝಿರೋ ಕೊಲೆಸ್ಟ್ರಾಲ್ ಫಲವೆಂದು ಪ್ರಮಾಣಿಕರಿಸಿದ್ದಾರೆ.
- ಇದರಲ್ಲಿರುವ ಕೊಬ್ಬು ಬರೇ ಮೋನ್ ಅನ್ ಸಾಚ್ಯುರೇಟೆಡ್ ಫ್ಯಾಟೀ ಅಸಿಡ್ Monounsaturated fatty acids ಹಾಗೂ ಪಾಲಿ ಅನ್ ಸ್ಯಾಚ್ಯುರೇಟೆಡ್ ಫಾತೀ ಅಸಿಡ್ Polyunsaturated fats ಹೊಂದಿದ್ದು, ಈ ಕೊಬ್ಬು 100% ಆರೋಗ್ಯಕ್ಕೆ ಸುರಕ್ಷಿತ ಅಗತ್ಯ ಕೊಬ್ಬು ಆಗಿರುತ್ತದೆ.
- ಭವಿಷ್ಯದಲ್ಲಿ ಕೊರೋನಾದಂತಹ ದೇಹದ ಅಂತಃ ಶಕ್ತಿಯನ್ನು ಕುಗ್ಗಿಸುವ ಪಿಡುಗು ಬಂದಾಗ ದೇಹಕ್ಕೆ ಅಂಥಃ ಶಕ್ತಿ (Immune system strong) ಬಲಪಡಿಸಲು ಇಂತಹ ಹಣ್ಣು ಸಹಾಯಕ ಎಂದು ಸಂಶೋಧನೆಗಳು ಹೇಳುತ್ತಿವೆ.
- ಹಾಗಾಗಿ ಇಡೀ ಜಗತ್ತೇ ಬೆಣ್ಣೆ ಹಣ್ಣಿನ ಬೇಸಾಯದ ಕಡೆಗೆ ಮುಖ ಮಾಡಿದೆ.
- ಹಲವಾರು ಸಂಸ್ಕ್ರರಣಾ ಘಟಕಗಳು ಹುಟ್ಟಿಕೊಂಡಿವೆ.
- ಬೇಡಿಕೆ ಬಹಳಷ್ಟು ಹೆಚ್ಚುತ್ತಿದೆ.
- ಜನ ಅಧಿಕ ಬೆಲೆಯ ಮತ್ತು ಬೇಡಿಕೆಯ ಹಣ್ಣು ಎಂಬ ಕಾರಣಕ್ಕೆ ಇದನ್ನು ತೋಟಮಾಡಲು ಪ್ರಾರಂಭಿಸಿದ್ದಾರೆ.
- ಲಕ್ಷ ಲಕ್ಷ್ಹ ಸಂಖ್ಯೆಯಲ್ಲಿ ಸಸಿಗಳು ಉತ್ಪಾದನೆಯಾಗುತ್ತಿವೆ. ಮಾರಾಟವಾಗುತ್ತಿವೆ.
- ಎಲ್ಲೆಂದರಲ್ಲಿ ರೈತರು ಬೆಣ್ಣೆ ಹಣ್ಣು ಬೆಳೆ ಬಗ್ಗೆ ಮಾತಾಡುತ್ತಿದ್ದಾರೆ.
- ಬೆಣ್ಣೆ ಹಣ್ಣಿನ ಬೇಸಾಯ ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ , ಹೇಸರ ಘಟ್ಟ ಬೆಂಗಳೂರು ಇಲ್ಲಿ ಸಂಶೊಧನೆಗಳು ನಡೆಯುತ್ತಿವೆ.
- ಹಾಗೆಯೇ ತೋಟಗಾರಿಕಾ ಬೆಳೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಸಾಧಾರಣ ತೋಟಗಾರಿಕಾ ವಿಜ್ಞಾನಿಗಳೂ ಆದ ಡಾ. ಎಸ್ ವಿ ಹಿತ್ತಲಮನಿ ಇವರು ಇದರ ಬಗ್ಗೆ ಸಾಕಷ್ಟು ಅಧ್ಯಯನ ಕೈಗೊಂಡವರು.
- ಇವರು ಬಟರ್ ಫ್ರೂಟ್ ಹಣ್ಣು ಬೆಳೆಗಾರರಿಗೆ ಒಬ್ಬ ಪ್ರಾಮಾಣಿಕ ಗುರುಗಳಿದ್ದಂತೆ.
- ಇವರ ಅನುಭವಗಳು ಮತ್ತು ಸಲಹೆಗಳನ್ನು ರೈತರಿಗೆ ತಿಳಿಯಪಡಿಸುವ ಸಲುವಾಗಿ ದಿನಾಂಕ27-11-2021 ರ ಶನಿವಾರ ಬೆಂಗಳೂರಿನ ಕೃಷಿ ವಿಶ್ವವಿಧ್ಯಾನಿಲಯದ ಹಳೆ ವಿಧ್ಯಾರ್ಥಿ ಸಂಘದ ಸಭಾಭವನದಲ್ಲಿ ಕಾರ್ಯಕ್ರಮ ನೆರವೇರಿತು.
- ದೇಶದ ಬೇರೆ ಕಡೆಗಳಿಂದ ನೂರಾರು ಜನ ಬಟರ್ ಫ್ರೂಟ್ ಬೆಳೆಗಾರರು ಭಾಗವಹಿಸಿದ್ದರು.
- ಈ ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆ,ಡಾ. ಎಂ ಎಚ್ ಮರಿಗೌಡ ತೋಟಗಾರಿಕಾ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಟಾನ, ತೋಟಗಾರರ ಅಸೋಸಿಯೇಶನ್ ಆಫ್ ಇಂಡಿಯಾ , ಬೆಂಗಳೂರು, ಮತ್ತು ಸೃಷ್ಟಿ ಮೀಡಿಯಾ ಸಹಯೋಗದೊಂದಿಗೆ ಈ ಕಾರ್ಯಕ್ರಮ ನೆರವೇರಿತು.
- ಸಮಾರಂಭದಲ್ಲಿ ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆಯ ನಿರ್ಧೇಶಕರು ಡಾ. ಬಿ ಎನ್ ಶ್ರೀನಿವಾಸ ಮೂರ್ತಿ, ಇವರು ಹಾಸ್ ತಳಿಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದರು.
- ಬೆಣ್ಣೆ ಹಣ್ಣು ಬೆಳೆಗಾರರಿಗೆ ಬೇಕಾಗುವ ಅಮೂಲಾಗ್ರ ಮಾಹಿತಿಯನ್ನು ನಿವೃತ್ತ ಹೆಚ್ಚುವರಿ ತೋಟಗಾರಿಕಾ ನಿರ್ಧೇಶಕರಾಗಿದ್ದ ಡಾ. ಎಸ್ ವಿ ಹಿತ್ತಲಮನಿಯವರು ನೀಡಿದರು.
ಬೆಣ್ಣೆ ಹಣ್ಣು ಬೆಳೆಯುವ ವಿಧಾನ ಬಗ್ಗೆ ಮುಂದೆ ಲೇಖನ ಇದೆ.