ವಿಪರೀತ ಬಿಸಿಲಿನ ವಾತಾವರಣದ ಬಳ್ಳಾರಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ ಮಾಡಬಹುದು ಎಂಬುದನ್ನು ಹೊಸಪೇಟೆಯ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.
ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿನ 57 ವರ್ಷದ ಇಂಜಿನಿಯರ್ ರಾಜಶೇಖರ್ ದ್ರೋಣವಲ್ಲಿ ಎಂಬವರು, ತಮ್ಮ ಆರು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ಮಾಡಿ ಅದರಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಮೂಲ ಕೃಷಿಕ ಕುಟುಂಬದವರಾಗಿದ್ದರೂ ಹೈದರಾಬಾದಿನಲ್ಲಿ ಇಂಜಿನಿಯರ್ ವೃತ್ತಿಯಲ್ಲಿ ತೊಡಗಿದ್ದರು. ಮೂರು ವರ್ಷದ ನಂತರ ಈ ವೃತ್ತಿಗೆ ವಿದಾಯ ಹೇಳಿ ಆರಿಸಿಕೊಂಡದ್ದು, ಕೃಷಿ ಮತ್ತು ಕೋಳಿ ಸಾಕಾಣಿಕೆ ವೃತ್ತಿಯನ್ನು. ಇವೆರಡರಲ್ಲೂ ಇವರು ಪಾಸ್,ನೌಕರಿಗಿಂತ ಇದರಲ್ಲಿ ಹೆಚ್ಚಿನ ಆದಾಯವನ್ನು ಕಂಡುಕೊಂಡರು.
ಡ್ರಾಗನ್ ಪ್ರೂಟ್- ಯಾಕೆ ಆಯ್ಕೆ ಮಾಡಿದರು:
- ರಾಜಶೇಖರ್ ಇವರಿಗೆ ಒಟ್ಟು 13 ಎಕರೆ ಭೂಮಿ ಇದೆ.
- ಈ ಮೊದಲು ಪಾರಂಪರಿಕ ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆಯುತ್ತಿದ್ದರು.
- ಮುಂಡರಗಿಯ ಸಂಬಂಧಿಕರ ಹೊಲದಲ್ಲಿ ಡ್ರ್ಯಾಗನ್ ಹಣ್ಣಿನ ಬೆಳೆಯನ್ನು ಕಂಡು ತಾವು ಈ ಹಣ್ಣನ್ನು ಬೆಳೆಯಲು ದೃಢಸಂಕಲ್ಪ ಮಾಡಿದರು.
- ಡ್ರಾಗನ್ ಪ್ರುಟ್ ಬೆಳೆಗೆ ಉಷ್ಣ ಹವೆ ಹೊಂದಾಣಿಕೆಯಾಗುತ್ತದೆ.
- ಇದಕ್ಕೆ ಭಾರೀ ನೀರಾವರಿ ಬೇಡ. ವಿಶೇಷ ನೀರೂ ಬೇಡ.
- ಕೀಟ ರೋಗ ಸಮಸ್ಯೆಗಳು ತುಂಬಾ ಕಡಿಮೆ.ಉತ್ತಮ ಬೇಡಿಕೆ ಇದೆ.
- ಬೆಲೆಯೂ ಇದೆ. ಹಾಗಾಇ ಇವರುಈ ಬೆಳೆಯನ್ನು ಆಯ್ಕೆ ಮಾಡಿದರು.
ನೆಡುವ ವಿಧಾನ:
- ನೆಡುವ ಮುಂಚೆ 2 ಎಕರೆಗೆ 25-35 ಟನ್ ಕೋಳಿಗಳ ತ್ಯಾಜ್ಯ ಹಾಕಿ ಭೂಮಿ ಚೆನ್ನಾಗಿ ಹದಗೊಳಿಸಿದರು.
- ನಂತರ 2018 ರ ಫೆಬ್ರವರಿಯಲ್ಲಿ ಸಂಬಂಧಿಕರ ತೋಟದಿಂದ ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು(Pink with bright red-pink flesh Cuttings) ತಂದರು.
- ಕಂಬದಿಂದ ಕಂಬಕ್ಕೆ 6 ಅಡಿ ಮತ್ತು ಸಾಲಿನಿಂದ ಸಾಲಿಗೆ 14 ಅಡಿಯಂತೆ ಒಟ್ಟು 900 ಕಂಬಕ್ಕೆ ಒಂದು ಕಂಬಕ್ಕೆ 4 ಸಸಿಗಳಂತೆ ಒಟ್ಟು 3600 ಬಳ್ಳಿಗಳನ್ನು ಹರಡಿಸಿದ್ದಾರೆ.
- ಈ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವೂ ಇದೆ.
- ಇವರ ಸಹಾಯದಿಂದ 2021ರ ಫೆಬ್ರುವರಿ ಮೊದಲ ವಾರದಲ್ಲಿ ಇನ್ನೂ 4 ಎಕರೆ ಕ್ಷೇತ್ರದಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಿಂದ ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ವಿಸ್ತರಿಸಿದ್ದಾರೆ.
- ಕಂಬದಿಂದ ಕಂಬಕ್ಕೆ 6 ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಂತೆ ಒಟ್ಟು 2700 ಕಂಬಕ್ಕೆ 10800 ಬಳ್ಳಿಗಳನ್ನು ಹರಡಿಸಿದ್ದಾರೆ.
- ಈಗ ಒಟ್ಟು ಆರು ಎಕರೆ ಬೆಳೆ ಪ್ರದೇಶ ಇದೆ. ಬೆಳೆಗೆ ಪ್ರತಿ 2-3 ತಿಂಗಳಿಗೊಮ್ಮೆ ಸುಮಾರು 10-12 ಕೆ.ಜಿ.ಯಷ್ಟು ಕೋಳಿಗಳ ತ್ಯಾಜ್ಯವನ್ನು ಪ್ರತಿಯೊಂದು ಬಳ್ಳಿಗೆ ಹಾಕುತ್ತಿದ್ದಾರೆ.
- ಜಮೀನಿನಲ್ಲಿರುವ ಕೊಳವೆಬಾವಿ ಮತ್ತು ಕೃಷಿ ಹೊಂಡವೇ ನೀರಿನ ಮೂಲವಾಗಿದೆ.
- ತೋಟಗಾರಿಕೆ ಇಲಾಖೆಯಿಂದ ಈ ಬೆಳೆಗೆ ಹನಿ ನೀರಾವರಿ ಅಳವಡಿಸಿಕೊಂಡು ತೋಟಗಾರಿಕೆ ಅಧಿಕಾರಿಗಳ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಡ್ರ್ಯಾಗನ್ ಬೇಸಾಯ ಕ್ರಮಗಳನ್ನು ಅನುಸರಿಸಿದ್ದಾರೆ.
ಲಾಭ ಮತ್ತು ಮಾರುಕಟ್ಟೆ:
- ಎಂಟು ತಿಂಗಳಿನಿಂದಲೇ ಇಳುವರಿ ಪ್ರಾರಂಭವಾಗುತ್ತದೆ, 2019ರಲ್ಲಿ 16-18 ಟನ್ ಡ್ರ್ಯಾಗನ್ ಹಣ್ಣಿನ ಇಳುವರಿ ಪಡೆದಿದ್ದಾರೆ.
- ಒಂದು ಹಣ್ಣಿನ ತೂಕ 250-500 ಗ್ರಾಂವಿದ್ದು, ಒಂದು ಕೆ.ಜಿ.ಗೆ 80-90ರೂ.
- ಸಿಗುತ್ತದೆ. ಪ್ರಾರಂಭದಲ್ಲಿ ಕೋಳಿ ಫಾರ್ಮಿನ ಮೊಟ್ಟೆ ಮಾರಾಟ ಮಳಿಗೆಗಳ ಮೂಲಕ ಡ್ರ್ಯಾಗನ್ ಹಣ್ಣು ಮಾರುತ್ತಿದ್ದರು.
- ಈಗ ಮುಂಬಯಿ, ಹೈದ್ರಾಬಾದ, ಬೆಂಗಳೂರು, ಪುಣೆ ಮತ್ತಿತರ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಹಣ್ಣನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದಾರೆ.
- ಎರಡು ಎಕರೆ ಬೇಸಾಯಕ್ಕೆ ಒಟ್ಟು 10 ಲಕ್ಷ ರೂ.
- ಖರ್ಚಾಗಿರುವ ಹಣ ಮೊದಲ ವರ್ಷ 2019ರಲ್ಲೇ ಮರಳಿ ಬಂದಿದೆ.
- ಸದರಿ ವರ್ಷ 16-18 ಟನ್ ಡ್ರ್ಯಾಗನ್ ಹಣ್ಣಿನ ಇಳುವರಿಯಾಗಿದೆ.
- ತೋಟಗಾರಿಕೆ ಇಲಾಖೆಯು ಒಂದು ಲಕ್ಷ ರೂ. ಆರ್ಥಿಕ ನೆರವು ನೀಡಿದೆ.
- ಕಳೆದ 2020ರಲ್ಲಿ ಒಟ್ಟು 30 ಟನ್ ಡ್ರ್ಯಾಗನ್ ಹಣ್ಣಿನ ಇಳುವರಿ ಬಂದಿದ್ದು, ಇದರಿಂದ ಸುಮಾರು 25 ಲಕ್ಷ ರೂ. ಲಾಭ ಗಳಿಸಿದ್ದಾರೆ.
ಪ್ರಮುಖ ನಗರಗಳ ಪ್ರತಿಷ್ಠಿತ ಮಳಿಗೆಗಳಲ್ಲಿ ಸಿಗುವ ಡ್ರ್ಯಾಗನ್ ಹಣ್ಣು ಮೊದಲು ಬೇರೆ ಕಡೆಗಳಿಂದ ಬರುತ್ತಿತ್ತು. ಈಗ ನಮ ರಾಜ್ಯದಲ್ಲೂ ಇದು ಬೆಳೆಯುತ್ತಿದ್ದು, ರಾಜ್ಯದಲ್ಲಿ ಕಳೆದ ಎರಡ್ಮೂರು ವರ್ಷದಲ್ಲಿ ಸುಮಾರು 500 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ವಿಸ್ತರಣೆಯಾಗಿದೆ.
- ಅಮೇರಿಕ ಮೂಲದ ಮತ್ತು ಕ್ಯಾಕ್ಟಸ್ ಜಾತಿಗೆ ಸೇರಿದ ಡ್ರ್ಯಾಗನ್ ಹಣ್ಣನ್ನು ಹೆಚ್ಚಾಗಿ ರಷ್ಯಾ, ಫ್ಲೋರಿಡಾ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳಲ್ಲಿ ಬೆಳೆಯುತ್ತಾರೆ.
- ತೋಟಗಾರಿಕೆ ಇಲಾಖೆಯ ಪ್ರೋತ್ಸಾಹದಿಂದ ಬಳ್ಳಾರಿ ಜಿಲ್ಲೆಯ ಕೆಲ ರೈತರು ಈ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ.
- ಪಿಂಕ್ ವಿಥ್ ವ್ಹೈಟ್ ಫ್ಲೆಶ್, ಪಿಂಕ್ ವಿಥ್ ಬ್ರೈಟ್ ರೆಡ್/ಪಿಂಕ್ ಫ್ಲೆಶ್ ಮತ್ತು ಯೆಲ್ಲೋ ವಿಥ್ ವ್ಹೈಟ್ ಫ್ಲೆಶ್ ಬಣ್ಣಗಳಿಂದ ಕೂಡಿರುವ ಸದರಿ ಹಣ್ಣು ವಿಲಕ್ಷಣ ಮತ್ತು ರುಚಿಕರವಾಗಿದೆ.
- ಹೆಚ್ಚಿನ ನೀರಿನಾಂಶ, ನಾರಿನಾಂಶ, ಪ್ರೋಟೀನ್, ಓಮೇಗಾ-3 ಹಾಗೂ ಓಮೇಗಾ-6 ಕೊಬ್ಬಿನ ಆಮ್ಲಗಳಿಂದ ಕೂಡಿದೆಯಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
- ರಕ್ತದಲ್ಲಿನ ಸಕ್ಕರೆಯಂಶ ಸ್ಥಿರವಾಗಿರಿಸುವಲ್ಲಿ, ಕೊಲೆಸ್ಟ್ರಾಲ್ ಕಡಿಮೆಗೊಳಿಸುವಲ್ಲಿ, ಬಿಳಿರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಮತ್ತು ಡೆಂಗ್ಯೂ ಜ್ವರಕ್ಕೆ, ಕ್ಯಾನ್ಸರ್ ಮತ್ತು ಹೃದ್ರೋಗಕ್ಕೂ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಾರೆ.
ಕೋಳಿ ಸಾಕಾಣಿಕೆಯೊಂದಿಗೆ ಕೃಷಿ :
- ರಾಜಶೇಖರ್ ಹೊಸಪೇಟೆಯ ರಾಯರಕೆರೆ ಬಳಿಯ ಜಂಬುನಾಥನಹಳ್ಳಿಯಲ್ಲಿ ಸುಮಾರು 25 ವರ್ಷಗಳಿಂದ ಕೋಳಿ ಸಾಕಾಣಿಕೆ ಸಹ ಮಾಡುತ್ತಿರುವರು.
- ಸುಮಾರು 60000 ಕೋಳಿಗಳಿದ್ದು, ಇದರಿಂದ ವರ್ಷಕ್ಕೆ 5-6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯುತ್ತಿದ್ದಾರೆ.
- “ಇಲ್ಲಿ ಯಾರಿಗೂ ಪರಿಚಯವಿಲ್ಲದ ಈ ಹೊಸ ಡ್ರ್ಯಾಗನ್ ಹಣ್ಣಿನ ಬೆಳೆಯ ಬಗ್ಗೆ ಸುತ್ತಮುತ್ತಲಿನ ರೈತರಿಗೆ ಮತ್ತು ಸಾರ್ವಜನಿಕರಿಗೆ ಇದನ್ನು ಬೆಳೆಯುವ ವಿಧಾನ ಮತ್ತು ಇದರಿಂದಾಗುವ ಆರೋಗ್ಯಕರ ಲಾಭದ ಬಗ್ಗೆ ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಿದ್ದಾರೆ.
- ಪತ್ನಿ ವಾಣಿಯೊಂದಿಗೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಈ ಹಣ್ಣನ್ನು ಉಚಿತವಾಗಿ ನೀಡಿ ಪರಿಚಯಿಸಲಾಗುತ್ತಿದೆ.
- ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ ನೀಡುವ ಇದು ಹೆಚ್ಚು ಲಾಭದಾಯಕ ಬೆಳೆಯಾಗಿದೆ.
ಸದರಿ ತೋಟಕ್ಕೆ ಕರ್ನಾಟಕ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಹಾಗೂ ತಮಿಳುನಾಡಿನ ತೋಟಗಾರಿಕೆ ಮತ್ತು ಪ್ಲ್ಯಾಂಟೇಶನ್ ಕ್ರಾಪ್ಸ್ ನಿರ್ದೇಶಕರು ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ” ಎಂಬುದು ಅವರ ಅನಿಸಿಕೆ. ಇವರ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ 9448131806.
ವರದಿ:ಜಿ.ಚಂದ್ರಕಾಂತ ನಿವೃತ್ತ ಉಪ ನಿರ್ದೇಶಕರು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕಲಬುರಗಿ ಮೊ:9480107133
ಛಾಯಾಚಿತ್ರಗಳು:ವೆಂಕೋಬಾ ಪಿ.