ಹಿರಿಯ ಕೃಷಿ ವಿಜ್ಞಾನಿ ಪದ್ಮಭೂಷಣ ಡಾ. ಎಂ. ಮಹದೇವಪ್ಪ ನಮ್ಮನ್ನಗಲಿದ್ದಾರೆ.

ಅಂತರ ರಾಷ್ಟ್ರೀಯ ಖ್ಯಾತಿಯ ಕನ್ನಡ ನಾಡಿನ ಹಿರಿಯ ಕೃಷಿ ವಿಜ್ಞಾನಿ ಡಾ. ಎಂ. ಮಹದೇವಪ್ಪನವರು ಕೃಷಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯ.
ಕಳೆದ 60 ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ ನಮ್ಮೆಲ್ಲರ ಗುರುಗಳು ಆಗಿದ್ದ ಡಾ. ಮಹಾದೇವಪ್ಪ ಇಂದು ನಮ್ಮನ್ನಗಲಿದರು. ನಾವು ಉಣ್ಣುವ ಅನ್ನದ ಜೊತೆಗೆ ಅವರ ಹೆಸರು ಇದೆ ಎಂಬುದು ಎಲ್ಲಾ ಕೃಷಿಕರಿಗೂ ತಿಳಿದಿರಬೇಕು.

Dr. M Mahadevappa

 • ಮೈಸೂರಿನವರಾದ  ಮಾದಾಪುರ ಮಹದೇವಪ್ಪ ಇವರು ಓರ್ವ ತಳಿ ವಿಜ್ಞಾನಿ.Genetics and Plant breeder
 • ಇವರನ್ನು ಅನ್ನದ ವಿಜ್ಞಾನಿ ಎಂದೇ ಕರೆಯಲಾಗುತ್ತದೆ.
 • 1937 ರಲ್ಲಿ ಹುಟ್ಟಿ, ಕೃಷಿ ವಿಜ್ಞಾನದಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ, ತಮಿಳುನಾಡು ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಯನ್ನು ಮಾಡಿದವರು.
 • ಧಾರವಾಡ ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ 2 ಬಾರಿ ಉಪಕುಲಪತಿಗಳಾಗಿದ್ದವರು.
 • ಇದೆಲ್ಲಕ್ಕಿಂತಲೂ ಮುಖ್ಯವಾಗಿ ಹೈಬ್ರೀಡ್ ತಳಿಗಳ ಬಗ್ಗೆ ಅದರಲ್ಲೂ ಭತ್ತದಲ್ಲಿ ಹೈಬ್ರೀಡ್ ತಳಿ ತರುವಲ್ಲಿ ಇವರ ಪ್ರಯತ್ನ ದೊಡ್ಡದು.

ಇವರ ಸ್ಮರಣೀಯ ಸಾಧನೆ:

 • ಭತ್ತದಲ್ಲಿ ಬೆಂಕಿರೋಗ ನಿರೋಧಕ ಶಕ್ತಿಯುಳ್ಳ ಇಂಟಾನ್ ಎಂಬ ತಳಿಯನ್ನು ಅಭಿವೃದ್ದಿಪಡಿಸಿದವರು.
 • ಕಾಲುವೆ ನೀರಾವರಿ ಪ್ರದೇಶಕ್ಕೆ  ತಡವಾಗಿ ನೀರು ಲಭ್ಯವಾದಾಗ ಬೆಳೆ ಬೆಳೆಯಲು ಅನುಕೂಲವಾಗುವಂತೆ ಸೂಕ್ತವಾದ ಅಲ್ಪಾವಧಿ ತಳಿಗಳಾದ ಮಧು ಮತ್ತು ಮಂಗಳ ಎಂಬ ತಳಿಯನ್ನು ಅಭಿವೃದ್ದಿಪಡಿಸಿದವರು.
 • ಸವಳು ಮಣ್ಣಿನ ಪ್ರದೇಶಗಳಿಗೆ ಹೊಂದಿಕೆಯಾಗುವ ಭತ್ತದ ತಳಿ ಪ್ರಗತಿಯನ್ನು ಅಭಿವೃದ್ದಿಪಡಿಸಿದ ವಿಜ್ಞಾನಿ ಇವರು.
 • ಚಳಿ ತಡೆದುಕೊಳ್ಳುವಂತಹ ಮುಕ್ತಿ ಎಂಬ ತಳಿಯನ್ನು ಅಭಿವೃದ್ದಿಪಡಿಸಿದವರು.
 • ಮುಖ್ಯವಾದ ಕೆಲಸ ಭತ್ತದಲ್ಲಿ ಹೈಬ್ರೀಡ್ ಭತ್ತ ತಳಿಯನ್ನು ಇಲ್ಲಿಗೆ ಪರಿಚಯ ಮಾಡಿಸಿದವರು KRH- 1 KRH -2 ಮತ್ತು KRH -4 ಈಗ ಬಹಳಷ್ಟು ಪ್ರಚಾರದಲ್ಲಿವೆ.
 • ಭತ್ತದ ಮಾಹಿತಿಯ ಖಣಜ ಎಂದೇ ಇವರನ್ನು ಕರೆಯಬಹುದು.

ಅಂತರ ರಾಷ್ಟ್ರೀಯ ಭತ್ತದ ಸಂಶೋಧನಾ ಕೇಂದ್ರ ಮಣಿಲಾಕ್ಕೆ ಹೋಗಿ ಬಂದ ನಂತರ ಇವರು ಮಾಡಿದ ಕೆಲಸ ಎಂದರೆ , ಭತ್ತದ  ಬೆಳೆ ತಾಂತ್ರಿಕತೆಯನ್ನು ಸಾಮಾನ್ಯ ಜನರಿಗೂ ತಿಳಿಯುವಂತೆ ಕನ್ನಡದಲ್ಲಿ ಪುಸ್ತಕ ಮಾಲಿಕೆಗಳನ್ನು ತಂದು ಅದನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನವನ್ನು ಮಾಡಿದವರು.

 • ಭತ್ತದ ಬೆಳೆಯ ಬಗ್ಗೆ ಇವರು ಒಂದು ವಿಶ್ವ ಕೋಶವೇ ಆಗಿದ್ದರು ಎಂದರೆ ತಪ್ಪಾಗ;ಲಾರದು.

ನಿವೃತ್ತಿಯ ನಂತರವೂ ಸೇವೆ:

 • ಶ್ರೀಯುತರು ತುಂಬಾ ಚುರುಕು ಮನುಷ್ಯ. ಸುಮಾರು 6 ತಿಂಗಳ ಹಿಂದೆ ಯಾಕೋ ದೂರವಾಣಿ ಕರೆ ಮಾಡಿ ಮನಸಾರೆ ಹೊಗಳಿದ್ದರು.
 •  ಕೃಷಿಯೊಂದಿಗೆ ತನ್ನ ಬದುಕು ಎಂದು ನಂಬಿದ್ದವರು.
 • ಕೃಷಿ ಕಾಯಕ ಎಂಬ ಮಾಸಪತ್ರಿಕೆಯನ್ನು ಹೊರ ತರುತ್ತಿದ್ದರು.
 • ಕೃಷಿ ಬರವಣಿಗೆಗಳ ಮೂಲಕ ರೈತರಿಗೆ ವೈಜ್ಞಾನಿಕ ಶಿಕ್ಷಣ ಕೊಡಬಹುದು ಎಂದು ಯಾವಾಗಲೂ ಹೇಳುತ್ತಿದ್ದರು.
 • ಪಾರ್ಥೇನಿಯಂ ಕಳೆಯ ಬಗ್ಗೆ  ಜೈವಿಕ ನಿಯಂತ್ರಣವನ್ನು ಪ್ರಚಾರಕ್ಕೆ ತಂದವರು.
 • ಧಾರವಾಡ ಕೃಷಿ ವಿಶ್ವ ವಿಧ್ಯಾನಿಲಯದ ಕೀರ್ತಿಯನ್ನು  (ಭಾರತದಲ್ಲೇ ಉತ್ತಮ ಕೃಷ್ಹಿ ವಿಶ್ವ ವಿಧ್ಯಾನಿಲಯ ಎಂಬ ಪ್ರಶಸ್ತಿ) ಉತ್ತುಂಗಕ್ಕೇರಿಸುವಲ್ಲಿ ಇವರ ಶ್ರಮ ಇದೆ.
 • ಕೃಷಿ ಮೇಳಗಳು ಎಂಬ ಪರಿಕಲ್ಪನೆ ಇವರದ್ದು.
 • ನಿವೃತ್ತಿಯ ತರುವಾಯ ಕೃಷಿ ವಿಜ್ಞಾನಿಗಳ ನೇಮಕಾತಿ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದರು.
 • ಮೈಸೂರಿನ ಜೆ ಎಸ್ ಎಸ್ ಸಂಸ್ಥೆಯಲ್ಲಿ ಗ್ರಾಮೀಣಾಭಿವೃದ್ದಿ ವಿಭಾಗದ ನಿರ್ಧೇಶಕರಾಗಿದ್ದರು.
 • ಜೀವನದ ಕೊನೆಯವರೆಗೂ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.
 • ಕಳೆದ ನಾಲ್ಕು ತಿಂಗಳಿಂದ ಅನಾರೋಗ್ಯ ಸಮಸ್ಯೆ ಉಂಟಾಗಿ, ತಮ್ಮ ಜೀವನದ ಕೊನೆಯನ್ನು ಇಂದು ಮುಗಿಸಿದ್ದಾರೆ.

ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ಮಹಾದೇವಪ್ಪನವರು ಸಶರೀರವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ತಲೆಮಾರಿನಿಂದ ತಲೆಮಾರಿಗೆ ನೆನಪಿನಲ್ಲಿ ಇರುವ ಕೆಲಸವನ್ನು ಇವರು ಮಾಡಿದ್ದಾರೆ.
ಮಾಹಿತಿ ಮೂಲ ಒದಗಿಸಿದವರು ಡಾ. ಎ ಎಸ್ ಕುಮಾರಸ್ವಾಮಿಯವರು.

error: Content is protected !!