ತೆಂಗಿನ ಕಾಯಿಯ ನೀರಿನಲ್ಲಿದೆ ಅಸಾಧಾರಣ ಶಕ್ತಿ.

ಹೆಚ್ಚಿನವರು ತೆಂಗಿನ ಕಾಯಿ ಒಡೆದು ಆ ನೀರನ್ನು ಚೆಲ್ಲುತ್ತಾರೆ. ಅದನ್ನೇ ಕುಡಿದಿರೆಂದಾದರೆ ನಿಮಗೆ ಯಾವ ರೋಗಗಳೂ ಬಾರದು.
ತೆಂಗಿನ ಕಾಯಿಯ ಒಳಗೆ ಇರುವ ನೀರು ಸಾಧಾರಣ ನೀರು ಎಂದು ಭಾವಿಸದಿರಿ. ಇದರಲ್ಲಿ ಬಹಳಷ್ಟು  ಸತ್ವಗಳು ಅಡಗಿವೆ. ನಾವು ಕಾಲಬುಡದಲ್ಲಿರುವ ನೈಸರ್ಗಿಕ ಸತ್ವವನ್ನು ಬಿಸಾಡಿ, ಕೃತಕ ವಿಟಮಿನ್ ಮಿನರಲ್ ಮಾತ್ರೆಗಳನ್ನು ಸೇವಿಸುತ್ತೇವೆ. ತೆಂಗಿನ ಕಾಯಿಯನ್ನು ಒಡೆಯುವಾಗ ಅದರ ನೀರನ್ನು ಒಂದು ಬೊಟ್ಟೂ ವ್ಯಯ ಮಾಡದೆ ಕುಡಿಯುತ್ತಿದ್ದರೆ ನಿಮ್ಮ ದೇಹಾರೋಗ್ಯಕ್ಕೆ ಬೇಕಾಗುವ ಬಹುತೇಕ ಪೋಶಕಾಂಶಗಳು ಅದರಲ್ಲೇ ದೊರೆಯುತ್ತದೆ.

ತೆಂಗಿನ ಕಾಯಿ ನೀರು

  • ತೆಂಗಿನ ಕಾಯಿ ನೀರಿನಲ್ಲಿ ಏನೆನೆಲ್ಲಾ ಇದೆ ಎಂಬುದನ್ನು ನೀವು ಯಾರಿಂದಲೂ ಕೇಳಿ ತಿಳಿಯಬೇಕಾಗಿಲ್ಲ.
  • ಒಂದು ಕಾಯಿ ತನ್ನ ಮೊಳಕೆಯನ್ನು ಬರೇ 50-100 ಮಿಲಿಯಷ್ಟು ನೀರಿನಲ್ಲಿ 6-8 ತಿಂಗಳ ತನಕ ಸಾಕುತ್ತದೆ ಎಂದಾದರೆ ಯೋಚಿಸಿ ಅದಕ್ಕೆ ಎಷ್ಟೊಂದು ಶಕ್ತಿ ಇರಲಿಕ್ಕಿಲ್ಲ ಎಂದು.
  • ಭೂಲೊಕದಲ್ಲಿ ಅಮೃತ ಸಮಾನವಾದ ಜಲ ಇದ್ದರೆ ಅದು ಎಳನೀರು ಮತ್ತು ತೆಂಗಿನ ಕಾಯಿಯ ಒಳಗೆ ಇರುವ ನೀರು.
  • ಇದನ್ನು ಬರೇ ಮನುಷ್ಯರು ಕುಡಿಯಲು ಬಳಸುವುದಲ್ಲದೆ ಬೇರೆ ಬೇರೆ ಬಳಕೆಗೂ ಉಪಯೋಗಿಸಬಹುದು.

ಏನಿದೆ ತೆಂಗಿನ ಕಾಯಿಯ ನೀರಿನಲ್ಲಿ:

  • ತೆಂಗಿನ ಕಾಯಿಯ ನೀರು ಕಾಯಿಯ ಒಳಗೆ ಇದ್ದಾಗ ಅದು ವಿಶೇಷ ಶಕ್ತಿಯನ್ನು ಹೊಂದಿರುತ್ತದೆ.
  •   ಅದು ಹೊರಗೆ ಬಂದ ಮೇಲೆ, ಅದು ಎಳನೀರಾಗಲಿ ಅಥವಾ ಕಾಯಿಯ ನೀರಾಗಲಿ, ಕ್ರಮೇಣ ಹುಳಿ ಬಂದು ತನ್ನ ಮೂಲ ರೂಪವನ್ನು ಕಳೆದು ಕೊಳ್ಳುತ್ತದೆ.
  • ಅದನ್ನು ಸೇಂದಿ ಎಂದರೂ ತಪ್ಪಾಗಲಾರದು.
  • ತೆಂಗಿನ ಕಾಯಿ ನೀರಿನಲ್ಲಿ ಮನುಷ್ಯ ದೇಹಕ್ಕೆ, ಸೂಕ್ಷ್ಮಾಣು ಜೀವಿಗಳಿಗೆ, ಸಸ್ಯಗಳಿಗೆ ಬೇಕಾಗುವ ಪೋಷಕ ಅಂಶಗಳಿವೆ.

ಅದ್ಯಯನಗಳಿಂದ ತಿಳಿದುಬಂದಂತೆ ತೆಂಗಿನ ಕಾಯಿ ನೀರಿನ pH 4.95- 4.45 ತನಕ ಇರುತ್ತದೆ. ಅಲ್ಲದೆ ಜೀವ ಸತ್ವಗಳಾದ,

  • ಕೆಲವು ಖನಿಜಗಳು,(0.53-0.54)
  • ಸಾರಜನಕ (10.90-37.20,100gm/mg)
  • ಪ್ರೊಟೀನುಗಳು, (18.00-82.50,100gm/mg) 
  • ಕೊಬ್ಬು, (1.50-83.00,100gm/mg) 
  • ಪೊಟ್ಯಾಶಿಯಂ  (291.00-247.00,100gm/mg)
  • ಸೋಡಿಯಂ (42.00-48.00,100gm/mg),
  • ಕ್ಲೋರಿನ್(75.00-108.00,100gm/mg)  ,
  • ಕ್ಯಾಲ್ಸಿಯಂ (44.00-40.00,100gm/mg),
  • ಮೆಗ್ನೀಶಿಯಂ (10.00-15.00100gm/mg)  ,
  • ಗಂಧಕ (58.00-80.00,100gm/mg),
  • ರಂಜಕ (9.20-6.30,100gm/mg),
  • ಕಬ್ಬಿಣಾಂಶ (106.00-79.00,100gm/micro gram),
  • ಮತ್ತು ತಾಮ್ರದ(26.00-26.00,100gm/mg)  ಅಂಶ ಇರುತ್ತದೆ.

ಜೊತೆಗೆ ಸಕ್ಕರೆ(5.70%-2.00%)  ಅಂಶವೂ ಇರುತ್ತದೆ.ಅಂಕಿ ಅಂಶಗಳಲ್ಲಿ ಮೊದಲ ಸಾಲಿನದ್ದು ಎಳನೀರು (7 ತಿಂಗಳ ಬೆಳವಣಿಗೆ) ಎರಡನೆಯದ್ದು, ಬಲಿತ 12 ತಿಂಗಳ ಕಾಯಿಯದ್ದಾಗಿದೆ. ಬರೇ ಇಷ್ಟೇ ಅಲ್ಲದೆ ಈ ನೀರಿನಲ್ಲಿ ಬೆಳವಣಿಗೆ ಪ್ರಚೋದಕ ಅಂಶಗಳೂ ಇವೆ.

Coconut water - ತೆಂಗಿನ ಕಾಯೀ ನೀರು

  • ಇದು ಸಸ್ಯ ಮತ್ತು ಸೂಕ್ಷ್ಮಾಣು ಜೀವಿಗಳ ಜೀವ ಕೋಶಗಳ ಜೊತೆ ಸೇರಿಕೊಳ್ಳುತ್ತದೆ.
  • ಎಳೆಯದಾಗಿರುವಾಗ ಈ ಅಂಶ ಹೆಚ್ಚಾಗಿರುತ್ತದೆ.
  • ಬೆಳೆದ ತೆಂಗಿನ ಕಾಯಿಯ ನೀರಿನಲ್ಲಿ ಅಮೈನೋ ಅಮ್ಲಗಳು ಹೇರಳವಾಗಿದ್ದು,
  • ಇದು ಮನುಷ್ಯ ಮತ್ತು ಸಸ್ಯಗಳ ಬೆಳವಣಿಗೆಗೆ ಸಹಾಯಕ.
  • ಅಮೈನೋ ಆಮ್ಲಗಳಾದ Gulutamic acid,Agrinine, Leucie, Proline, Asparic acid, Alanine, Histidnne, Phenylalanine, Serine, Cystine, Thyosine)ಗಳಿವೆ.

ತೆಂಗಿನ ನೀರನ್ನು ಬಳಸಿ:

  • ದಿನಾ ಮನೆಯಲ್ಲಿ ಅಡುಗೆಗೆ ತೆಂಗಿನ ಕಾಯಿ ಒಡೆಯುವಾಗ ಅದರ  ನೀರನ್ನು ಸಿಂಕ್ ಗೆ ಚೆಲ್ಲಬೇಡಿ.
  • ಅದನ್ನು ಒಂದು ಗ್ಲಾಸ್ ಗೆ ಹಾಕಿ ಕುಡಿಯಿರಿ.
  • ಅದಕ್ಕೆ ವಯಸ್ಸಿನ ಮಿತಿ ಇಲ್ಲ. ಎಳೆ ಮಕ್ಕಳಿಗೆ ಜ್ಞಾನ ವೃದ್ದಿಗೆ ಬಹಳ ಅನುಕೂಲ.
  • ಮನೆಯಲ್ಲಿ  ಹಲವು ತೆಂಗಿನ ಕಾಯಿ ಒಡೆಯುವ ಸಮಯದಲ್ಲಿ ಅದರ ನೀರನ್ನು ಸಂಗ್ರಹಿಸಿ
  • ಅದಕ್ಕೆ   1:10 ಪ್ರಮಾಣದಲ್ಲಿ ನೀರು ಸೇರಿಸಿ ಬೆಳೆಗಳಿಗೆ ಪೋಷಕವಾಗಿ ಬಳಕೆ ಮಾಡಿ.
  • ಸುಮಾರು 20 ವರ್ಷಕ್ಕೆ ಹಿಂದೆ ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರದಲ್ಲಿ  ಅಲ್ಲಿನ ಸ್ಥಳೀಯ ತರಕಾರಿ ಬೆಳೆಗಾರರಿಗೆ  ತೆಂಗಿನ ನೀರನ್ನು ಕೃಷಿಗೆ ಬಳಕೆ ಮಾಡುವ ಬಗ್ಗೆ ಮಾಹಿತಿ ಕೊಟ್ಟು , ಅದನ್ನು ಹಲವು ಜನ ಬಳಕೆ ಮಾಡಿ ಉತ್ತಮ ಫಲಿತಾಂಶ ಕಂಡದ್ದು ಇದೆ.
  • ಕೇವಲ ಇಷ್ಟೇ ಅಲ್ಲದೆ ತೆಂಗಿನ ಕಾಯಿಯ ನೀರನ್ನು ಕುದಿಸಿ ಅದನ್ನು 10:1 ರ ಪ್ರಮಾಣಕ್ಕೆ ತಂದು ಅದನ್ನು ಗಾಯವಾಸಿ ಮಾಡುವ ಎಣ್ಣೆ ಮಾಡುವುದು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
  • ಹೆಚ್ಚು ತೆಂಗಿನ ಕಾಯಿ ಒಡೆಯುವಲ್ಲಿ ಸಂಗ್ರಹವಾಗುವ ತೆಂಗಿನ ನೀರನ್ನು ಸಾಧ್ಯವಾದಷ್ಟು ತಾಜಾ ಇರುವಾಗಲೇ ಸಂಗ್ರಹಿಸಿರಿ.
  • ಅದನ್ನು ಹೆಚ್ಚು ದ್ರವೀಕರಿಸಿ ಬೆಳೆಗಳಿಗೆ ಸಿಂಪರಣೆ, ಮತ್ತು ಮಣ್ಣಿಗೆ ಎರೆಯುವುದರಿಂದ ಮಣ್ಣಿನಲ್ಲಿ  ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಹೆಚ್ಚುತ್ತದೆ.
  • ಮಣ್ಣಿನಲ್ಲಿ ಎರೆಹುಳು ಜಾಸ್ತಿಯಾಗುತ್ತದೆ. ಬೇರು ಚೆನ್ನಾಗಿ ಬರುತ್ತದೆ.
  • ಫಸಲಿನ ಗುಣಮಟ್ಟ ಉತ್ತಮವಾಗುತ್ತದೆ.
  • ತರಕಾರಿ ಬೆಳೆಗಳಿಗೆ ಇದನ್ನು ಬಳಕೆ ಮಾಡುವುದರಿಂದ ಹೂ ಹೆಚ್ಚುತ್ತದೆ, ಫಲ ಹೆಚ್ಚುತ್ತದೆ.

ನಾವು ಸಾಧ್ಯವಾದಷ್ಟು ನೈಸರ್ಗಿಕ ಮೂಲದ ಆರೋಗ್ಯ ರಕ್ಷಕಗಳನ್ನು ಬಳಕೆ ಮಾಡುವ ಮೂಲಕ  ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು. ಬೆಳೆ ಪೋಷಣೆಗೆ ಯಾವ್ಯಾವುದೋ ಗೊತ್ತಿಲ್ಲದ ಮೂಲದ ಪೋಷಕಗಳನ್ನು ಬಳಸುವ ಬದಲು ನಮ್ಮಲ್ಲಿ ಸುಲಭವಾಗಿ ದೊರೆಯುವ ವಸ್ತುಗಳ ಮಹತ್ವವನ್ನು ಅರಿತು ಬಳಕೆ ಮಾಡಬೇಕು. ಇದು ಸ್ವಾವಲಂಭಿ ಜೀವನ ಮತ್ತು ಸ್ವಾವಲಂಬಿ ಕೃಷಿಯಾಗುತ್ತದೆ.

error: Content is protected !!