ಕಾಲಸ್ಥಿತಿಗನುಗುಣವಾಗಿ ಮನುಷ್ಯನ ಆಹಾರಾಭ್ಯಾಸಗಳು ಮೇಲ್ದರ್ಜೆಗೇರುತ್ತವೆ. ಈಗ ಅಧಿಕ ಸತ್ವಾಂಶಗಳ ವಿದೇಶೀ ತರಕಾರಿಗಳ ಸರದಿ. ಈ ಸೊಪ್ಪು –ತರಕಾರಿಗಳಲ್ಲಿ ದೇಹ ಪೋಷಕ ಗಳು ಹೇರಳವಾಗಿದ್ದು, ಬೆಳೆಸಿದವರಿಗೆ ಕೈತುಂಬಾ ಸಂಪಾದನೆಯೂ ದೊರೆಯುತ್ತದೆ. ಇದು ನಮ್ಮ ರಾಜ್ಯದ ಎಲ್ಲಾ ಕಡೆ ಬೆಳೆಯುತ್ತದೆ.
- ನಮ್ಮಲ್ಲಿ ಉತ್ತರ ಕರ್ನಾಟಕದ ಕಡೆ ಉಟದ ಜೊತೆಗೆ ಕೆಲವು ಸೊಪ್ಪು ತರಕಾರಿ- ಈರುಳ್ಳಿ, ಮೂಲಂಗಿ ಕೊಡುವುದು ವಾಡಿಕೆ.
- ಅದೇ ರೀತಿಯಲ್ಲಿ ವಿದೇಶಗಳಲ್ಲಿ ಕೆಲವು ಸೊಪ್ಪು ತರಕಾರಿಗಳನ್ನು ಜೊತೆಗೆ ಕೊಡುತ್ತಾರೆ.
- ಈ ಅಭ್ಯಾಸ ಈಗ ನಮ್ಮ ನಗರಗಳ ಪ್ರತಿಷ್ಟಿತ ಹೋಟೇಲುಗಳಿಗೂ ಪಸರಿಸಿದೆ.
- ಹೋಟೇಲುಗಳ ಬೇಡಿಕೆಯನ್ನು ಪೂರೈಸುವಷ್ಟು ನಮ್ಮಲ್ಲಿ ಉತ್ಪಾದೆನೆ ಇಲ್ಲ.
- ಆದ ಕಾರಣ ಬೆಳೆ ಬೆಳೆಯುವುದಕ್ಕೆ ಅವಕಾಶ ಇದೆ.
ಮೈಸೂರಿನ ಉದ್ಭೂರು ಸಮೀಪದ ಒಬ್ಬ ಕೃಷಿಕ ಲಕ್ಷೀಶ ಈ ಸೊಪ್ಪು ತರಕಾರಿಗಳನ್ನು ಬೆಳೆಸುತ್ತಿದ್ದು, ನಾಟಿ ಮಾಡುವಾಗಲೇ ಇದಕ್ಕೆ ಬೇಡಿಕೆ ಮತ್ತು ಬೆಲೆ ನಿರ್ಧಾರವಾಗುತ್ತದೆಯಂತೆ. ಅವುಗಳ ಪರಿಚಯ ಇಲ್ಲಿದೆ.
ಬಾಸಿಲ್(Basil):
- ಇದನ್ನು ಬಾಸಿಲ್ ಮೂಲಿಕೆ ಎಂದು ಕರೆಯಲಾಗುತ್ತದೆ.
- ಮಾನವ ಶರೀರದ ಎಲ್ಲಾ ನಮೂನೆಯ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಒಳಗೊಂಡಿವೆ.
- ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕಡಿಮೆ ಕ್ಯಾಲೊರಿಯ ಕೊಲೆಸ್ಟ್ರಾಲ್ ರಹಿತ ಆಹಾರ.
- ಈ ಸೊಪ್ಪಿನಲ್ಲಿ 23 ಕಿಲೋ ಕ್ಯಾಲೊರಿ ಶಕ್ತಿ ಇದೆ.
- ಅಷ್ಟೇ ಅಲ್ಲದೆ ಪ್ರೋಟೀನು 3.15 %, ಕಾರ್ಬೋಹೈಡ್ರೇಟ್ 2.6 ರಷ್ಟು,ಕೊಬ್ಬು0.60 ತನಕ, ಜೀರ್ಣಕಾರೀ ನಾರು 1.60 ಯಷ್ಟು , ವಿಟಮಿನ್ ಗಳು, ಬಹುತೇಕ ಎಲ್ಲಾ ಖನಿಜಾಂಶಗಳು ಈ ಸೊಪ್ಪಿನಲ್ಲಿ ಇದೆ.
- ಇದನ್ನು ಒಂದು ಪೂರಕ ಆಹಾರ ಅಥವಾ ಅಹಾರದ ಬದಲಿಗೆ ಅದಕ್ಕಿಂತ ಹೆಚ್ಚು ಪೋಷಕಗಳನ್ನು ಕೊಡುವ ವಸ್ತು ಎಂದು ಹೇಳಬಹುದು.
ಇದನ್ನು ನಮ್ಮ ಹೊಲದ ಮಣ್ಣಿನಲ್ಲಿ ಯಾವುದೇ ಕಷ್ಟವಿಲ್ಲದೆ ಬೆಳೆಸಬಹುದಾಗಿದೆ.
ಲೆಟ್ಯೂಸ್ ( Lettuce):
- ಹಸಿ ಸೊಪ್ಪಾಗಿ ಬಳಕೆ ಮಾಡುವ ಇದು ಸಮೃದ್ಧ ಪೋಷಕಗಳ ಆಗರ.
- ಪೋಷ ಇದು ಸಹ ಬಸಿಲ್ ಸೊಪ್ಪಿನಂತೆ ಎಲ್ಲಾ ದೇಹ ಪೋಷಕ ಸತ್ವಗಳನ್ನು ಒಳಗೊಂಡಿದೆ.
- ಕಡಿಮೆ ಕ್ಯಾಲೊರಿ ಕಾರ್ಬೋಹೈಡ್ರೇಟ್ಸ್, ನಾರು,ವಿಟಮಿನುಗಳು A B 12-6 C D E ಗಳು, ಕ್ಯಾಲ್ಸಿಯಂ ಸೇರಿದಂತೆ ಎಲ್ಲಾ ಖನಿಜಾಂಶಗಳು ಇವೆ.
ಬಕ್ಚೋಯಿ – ಪಕ್ಛೋಯಿ (Pak choi)( Bak Choi):
- ಇದನ್ನು ಸ್ಪಿನಚ್ ಲೀವ್ಸ್ ಅಥವಾ, ಚೈನೀಸ್ ಕ್ಯಾಬೇಜ್ ಎಲೆಗಳು ಎಂದೂ ಕರೆಯುತ್ತಾರೆ.
- ಚೈನಾ ಮೂಲದ ಈ ಸಸ್ಯ ಅತ್ಯಧಿಕ ಪೋಷಕಗಳನ್ನು ಒಳಗೊಂಡಿದೆ.
- ಇದರ ಎಲೆಯನ್ನು ಪ್ಲೇಟ್ ತರಹ ಬಳಸಿ ಪ್ಲೇಟ್ ಸಮೇತ ತಿನ್ನಲಾಗುತ್ತದೆ.
- ಇದನ್ನು ಕೆಲವು ಪದಾರ್ಥ ಮಾಡಲು, ಸೂಪ್ ತಯಾರಿಸಲು ಬಳಸುತ್ತಾರೆ.
- ಶರೀರದ ಎಲ್ಲಾ ರೀತಿಯ ಬೆಳವಣಿಗೆಗೆ ಇದು ಪೂರಕ.
- ಇದನ್ನು ವಂಡರ್ ಪ್ಲಾಂಟ್ ಎಂದು ಕರೆಯುತ್ತಾರೆ.
- ಸುಮಾರು 5000 ವರ್ಷಗಳಿಂದಲೂ ಇದು ಚೀನಾದ ಜನರ ಆಹಾರವಾಗಿದೆ.
- ಎಲುಬು ಸಂಬಂಧಿತ ಖಾಯಿಲೆಗಳಿಗೆ ಇದು ರಾಮಬಾಣ ಎನ್ನುತ್ತಾರೆ.
- ಕಣ್ಣು, ಹೃದಯ , ಹೊಟ್ಟೆ, ಹೃದಯ, ಚರ್ಮ, ರೋಗ ನಿರೋಧಕ ಶಕ್ತಿ, ಆಂಟಿ ಡಯಾಬೆಟಿಕ್, ಆಂಟಿ ಕ್ಯಾನ್ಸರ್ ಗುಣಗಳು ಇದರಲ್ಲಿ ಇವೆ.
ಪಾರ್ಸ್ಲೆ (Parsley):
- ಇದು ವಿಟಮಿನ್ ಸ್ಸೊಪ್ಪು ತರಹ ಎಂದೇ ಹೇಳಬಹುದು.
- A 12% C 16%ಮತ್ತು K 154% ವಿಟಮಿನ್ ಗಳು ಹೇರಳವಾಗಿರುತ್ತದೆ.
- ಕ್ಯಾಲೊರಿ ಮಾತ್ರ ತುಂಬಾ ಕಡಿಮೆ (2) ಬರೇ ಎರಡು ಚಮಚ ಇದರ ಸೊಪ್ಪನ್ನು ಸೇವಿಸಿದರೆ ನಮ್ಮ ಶರೀರಕ್ಕೆ ಬೇಕಾಗುವ K ವಿಟಮಿನ್ ಸತ್ವ ಪೂರೈಸುತ್ತದೆ.
- ವಿಟಮಿಸ್ C ಸತ್ವದ ಪ್ಯಾಕೆಟ್ ಇದ್ದಂತೆ.
- ಆದ ಕಾರಣ ಇದನ್ನು ಸೇವಿಸಿದರೆ ಹೃದಯ ಸಂಬಂಧಿ ತೊಂದರೆ ದೂರ.
- ಆರೋಗ್ಯಕರ ರಕ್ತದ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.
ಕಾಲೆ(Kale):
- ಕ್ಯಾಬೇಜ್ ಕುಟುಂಬದ ಸಸ್ಯ ಇದು.ಕಾಲೆ ಎಂದರೆ ಕಿಂಗ್ ಎಂದು ಕರೆಯಲಾಗುತ್ತದೆ.
- ಇದರಲ್ಲಿ ಹಸುರು, ಪಿಂಕ್ ( ಪರ್ಪಲ್) ಮುಂತಾದ ಮೂರು ಬಣ್ಣಗಳಿರುತ್ತದೆ.
- ಇದು ಸಕ್ಕರೆ ಖಾಯಿಲೆಗೆ ಔಷಧಿ ಎಂದೇ ಹೇಳಲಾಗುತ್ತದೆ.
- ಜ್ಞಾನ ವೃದ್ದಿಗೆ, ಇದು ಉತ್ತಮ. ಒಮೆಗಾ 3 ಸತ್ವ ಉಳ್ಳ ತರಕಾರಿ.
- ಉತ್ತಮ ಆಂಟಿ ಆಕ್ಸಿಡೆಂಟ್ ಆಗಿರುತ್ತದೆ.
ಸಾಗೆ (Sage):
- ಇದು ದೊಡ್ಡ ಪತ್ರೆ ಸೊಪ್ಪಿನ ತರಹದ್ದು, ಮಿಂಟ್ ತರಹ.
- ಆದರೆ ಎಲೆಯ ಮೇಲೆ ಸಣ್ಣ ಕೂದಲುಗಳು ಇರುತ್ತವೆ.ಸ್ವಲ್ಪ ಉದ್ದ .
- ಇದು ಮೆಡಿಟರೇನಿಯನ್ ಮೂಲದ್ದು.
- ಬಸಿಲ್ ಕುಟುಂಬ. ಇದಕ್ಕೆ ಸುವಾಸನೆ ಇದೆ.
- ಇದನ್ನು ಆಂಟೀ ಆಕ್ಸಿಡೆಂಟ್ ಸಸ್ಯ ಎನ್ನಲಾಗುತ್ತದೆ.
- ಇದರ ಪ್ರಭೇಧದ ಸುಮಾರು 900 ವಿಧಗಳು ಪ್ರಪಂಚದಾದ್ಯಂತ ಇದೆ.
- ಇದರ ಎಣ್ಣೆ ತೆಗೆಯುತ್ತಾರೆ.
ಸ್ಪಿನಚ್:(Spinach)
- ಇದು ಶಕ್ತಿ ವರ್ಧಕ ಸಸ್ಯ. ಆರೋಗ್ಯವಂತ ಚರ್ಮ, ಉತ್ತಮ ಕೂದಲು, ಸಧೃಢ ಎಲುಬು, ಉತ್ತಮ ಜೀರ್ಣ ಕ್ರಿಯೆ, ಹೃದಯ ಖಾಯಿಲೆ ಪ್ರತಿಬಂಧಕ.
- ಪೊಟಾಶಿಯಂ , ಮೆಗ್ನೀಶಿಯಂ ಸತ್ವದ ಆಗರ.
- ಒಂದು ಕಪ್ ಸ್ಪಿನಚ್ ನಲ್ಲಿ 839 ಮಿಲಿ ಗ್ರಾಂ, 100 ಗ್ರಾಂ ಬಾಳೆ ಹಣ್ಣಿನಲ್ಲಿ 539 ಮಿಲಿ ಗ್ರಾಂ ಪೊಟಾಶಿಯಂ ಇರುತ್ತದೆ.
ಹೇಗೆ ಬೆಳೆಯುವುದು:
- ಇದನ್ನು ನೆಲದಲ್ಲಿ ಸಾಲು ಮಾಡಿ ಬೆಳೆಸಬಹುದು.
- ಮಣ್ಣು ರಹಿತ ಮಾಧ್ಯಮಗಳಲ್ಲಿ ಹೈಡ್ರೋಫೋನಿಕ್ಸ್ ತರಹ ಬೆಳೆಸಬಹುದು.
- ಕುಂಡಗಳಲ್ಲಿ ಬೆಳೆಸಬಹುದು.
- ಥರ್ಮೋಕೋಲ್ ಚಟ್ಟಿಗಳಲ್ಲಿ ಮನೆ ಸುತ್ತ ಬೆಳೆಸಿ ಉಪಯೋಗಿಸುತ್ತಾರೆ.
- ಇದು ನಮ್ಮ ರಾಜ್ಯದ ಎಲ್ಲಾ ಕಡೆ ಬೆಳೆಯಬಹುದಾದ ಉತ್ತಮ ಬೇಡಿಕೆಯ ಅಧಿಕ ಸತ್ವದ ಸೊಪ್ಪು ತರಕಾರಿಗಳು.
ಮನೆಯಲ್ಲಿ ಚಟ್ಟಿಯಲ್ಲಾದರೂ ಈ ಸಸ್ಯಗಳನ್ನು ಬೆಳೆಸಿ ಅದನ್ನು ನಿತ್ಯ ಸೇವಿಸಿ ಆರೋಗ್ಯವಂತರಾಗಿರಿ.