ಎಲೆಗಳ ಮೇಲೆ ತಾಮ್ರದ ಕಲೆಗಳು ಕಂಡು ಬಂದು ಅದು ಒಣಗಿ ಎಲೆಗಳು ಉದುರಿ ಸಸ್ಯದಲ್ಲಿ ಬರೇ ಕಡ್ಡಿ ತರಹದ ಗೆಲ್ಲುಗಳು ಮಾತ್ರ ಉಳಿಯುವ ಈ ರೋಗ ಇತ್ತೀಚೆಗೆ ಕಾಫೀ ಬೆಳೆಯಲಾಗುವ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿದೆ. ಇದು ಬೆಳೆಗಾರರಲ್ಲಿ ಅತಂಕವನ್ನು ಉಂಟುಮಾಡಿದೆ..
- ಎಲೆ ತುಕ್ಕು ರೋಗ , ಅರಶಿನ ಚುಕ್ಕೆ ಅಥವಾ ಎಲೆ ಚುಕ್ಕೆ ರೋಗ, leaf rust ಎಂಬುದು ಇದರ ಹೆಸ ರು.
- ಈ ರೋಗ ಆರ್ಥಿಕವಾಗಿ ಬೆಳೆಗಾರರಿಗೆ ಹೆಚ್ಚಿನ ಹಾನಿಯನ್ನು ತರುವಂತ ದ್ದು.
- ಇದರಿಂದ ಶೇ. 70 ಕೂ ಹೆಚ್ಚು ಬೆಳೆ ನಷ್ಟ ಉಂಟಾಗುತ್ತದೆ.
- ವಿದೇಶಗಳಲ್ಲಿ ಇದು ಬಾರೀ ಹಾನಿ ಮಾಡಿದ ವರದಿ ಇದೆ.
- ನಮ್ಮ ದೇಶಕ್ಕೆ ಇದು ಸುಮಾರು 200 ವರ್ಷಕ್ಕೆ ಹಿಂದೆ ಬಂದು ಅಲ್ಲಲ್ಲಿ ಸಾಕಷ್ಟು ಹಾನಿ ಮಾಡಿದೆ.
ಎಲ್ಲಿಂದ ಬಂತು:
- ಈ ರೋಗ ಮೊತ್ತಮೊದಲು ಆಫ್ರಿಕಾ ದೇಶದಲ್ಲಿ,ನಂತರ ಅದು ಶ್ರೀಲಂಕಾ ಆ ನಂತರ ಬ್ರೆಝಿಲ್ ನಲ್ಲೂ ಕಂಡು ಬಂತು. ಇದು ಹಾಗೆಯೇ ಭಾರತಕ್ಕೂ ಕಾಲಿಟ್ಟಿತು.
- ಪ್ರಪಂಚದ ಬೇರೆ ಬೇರೆ ವರ್ಗದ ಕೀಟ ಬಾಧೆಗಳಲ್ಲಿ ಈ ರೋಗವನ್ನು ಪ್ರಮುಖ ಏಳನೇ ರೋಗವೆಂದು ಪರಿಗಣಿಸಲಾಗಿದೆ.
- ಇದರ ತೀವ್ರತೆ ಹೆಚ್ಚಾದರೆ ಇಡೀ ಕಾಫೀ ತೋಟವೇ ಹಾಳಾಗುವ ಸಾಧ್ಯತೆ ಇದೆ.
ಶ್ರೀಲಂಕಾದಲ್ಲಿ ಈ ರೋಗ ಕಾರಣದಿಂದ ಕಾಫೀ ತೋಟಗಳೇ ನಿರ್ನಾಮವಾದ ಬಗ್ಗೆ ಮಾಹಿತಿ ಇದೆ. ಇಲ್ಲಿ ಬೆಳೆಗಾರರು ಕಾಫಿಯ ಬದಲು ಚಹ ಬೆಳೆಸಲು ಮುಂದಾದುದೇ ಈ ಕಾರಣಕ್ಕೆ ಎನ್ನಲಾಗುತ್ತದೆ.
ಹೇಗೆ ರೋಗ ಬರುತ್ತದೆ:
- ಎಲ್ಲಾ ಸಮಯದಲ್ಲೂ ಈ ರೋಗ ಹರಡುವುದಿಲ್ಲ.
- ಕೆಲವು ಅನುಕೂಲಕರ ವಾತಾವರಣದಲ್ಲಿ ಮಾತ್ರ ಹೆಚ್ಚಾಗಿ ಹರಡುತ್ತದೆ.
- ಮೇ ತಿಂಗಳಿನಿಂದ ನವೆಂಬರ್ ಡಿಸೆಂಬರ ತನಕದ ಅವಧಿಯಲ್ಲಿ ತಂಪು ಆರ್ಧ್ರ ಹವಾಮಾನದಲ್ಲಿ ಈ ರೋಗಕ್ಕೆ ಕಾರಣವಾದ ಶಿಲೀಂದ್ರದ ಹರಡುವಿಕೆ ಹೆಚ್ಚು.
- ಮಳೆ – ಬಿಸಿಲು ಇರುವಾಗ ಇದರ ಹರಡುವಿಕೆಗೆ ಅನುಕೂಲ.
- ಹಾಗೆಂದು ಇದು ನಿರ್ದಿಷ್ಟ ಕಾಲಮಾನದಲ್ಲಿ ಮಾತ್ರ ಬರುವ ರೋಗ ಅಲ್ಲ.
- ವರ್ಷದ ಎಲ್ಲಾ ಕಾಲದಲ್ಲೂ ಬರುತ್ತದೆ.
- ಉಲ್ಬಣಗೊಳ್ಳಲು ಮಳೆಗಾಲದ ಹವಾಮಾನ ಪೂರಕ.
- ಶುಷ್ಕ ವಾತಾವರಣದಲ್ಲಿ ರೋಗ ಕಾರಕ ಶಿಲೀಂದ್ರ ಇದ್ದರೂ ಸಹ ಅದು ಹೆಚ್ಚು ಚಾಟುವಟಿಕೆಯಲ್ಲಿರುವುದಿಲ್ಲ.
- ರೈನ್ ಗನ್ ನೀರಾವರಿ ಮಾಡಿ ಕೆಲವೇ ಸಮಯದಲ್ಲಿ ಅತಿಯಾಗಿ ಮಳೆ ಬಂದರೆ ಚಟುವಟಿಕೆ ಹೆಚ್ಚುತ್ತದೆ.
ರೋಗ ಕಾರಕ ಶೀಲೀಂದ್ರದ ಹೆಸರು Uredospores. ಇದು ಗಾಳಿ , ನೀರು, ಮಂಜು, ಕೀಟ ಪ್ರಾಣಿ ಮತ್ತು ಮನುಷ್ಯರ ಮೂಲಕ ಹರಡುತ್ತದೆ.
- ಎಲೆಗಳ ಅಡಿ ಭಾಗದಲ್ಲಿ ನಸು ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ.
- ನಂತರ ಅದು ದೊಡ್ಡದಾಗುತ್ತಾ ಎಲೆ ಎಲ್ಲಾ ಹಳದಿಯಾಗಿ ಉದುರುತ್ತದೆ.
- ಇವು ರೋಗ ಬಂದಾಗ ಗಿಡದ ಎಲೆಗಳು ಉದುರುತ್ತವೆ.
ನಿಯಂತ್ರಣ:
- ಪ್ರಾರಂಭದಲ್ಲಿ ಈ ರೋಗ ನಿವಾರಣೆಗೆ ಬೊರ್ಡೋ ದ್ರಾವಣದ ಸಿಂಪರಣೆ ಯನ್ನು ಶಿಫಾರಸು ಮಾಡಲಾಗುತ್ತಿತ್ತು.
- ಇದರಲ್ಲಿ ಫಲಿತಾಂಶ ಸಿಗದ ಕಾರಣ ಇದರ ಬದಲಿಗೆ ಬೇರೆ ಶಿಲೀಂದ್ರ ನಾಶಕದ ಅರಸುವಿಕೆ ಅಗತ್ಯವಾಯಿತು.
- ಹಾಗೆಂದು ಇದು ಕೆಲವು ಕಡೆ ಫಲಿತಾಂಶ ಕೊಟ್ಟಿದೆ.
ಫೆಬ್ರವರಿ- ಮಾರ್ಚ್ ಹೂ ಮೊಗ್ಗು ಮೂಡುವ ಸಮಯ ಮತ್ತು ಮೇ – ಜೂನ್ ಮಳೆ ಗಾಲಕೆ ಮುಂಚೆ, ಹಾಗೂ ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಮಳೆ ಮುಗಿಯುವ ಸಮಯದಲ್ಲಿ ಶೇ. 0.5 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ ಶಿಲೀಂದ್ತದ ಬೀಜಾಂಕುರ ತಡೆಯಲ್ಲಡುತ್ತದೆ.
- ಅಂತರ್ ವ್ಯಾಪೀ ಶಿಲೀಂದ್ರ ನಾಶಕವಾದ Bayleton ( Triadimefon ) ವನ್ನು ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಒಮ್ಮೆ
- ಮಳೆಗಾಲ ಮುಗಿಯುವ ಸಮಯದಲ್ಲಿ ಒಮ್ಮೆ ಸಿಂಪರಣೆ ಮಾಡಿದರೆ ರೋಗಕಾರಕ ಶಿಲೀಂದ್ರ ನಿಯಂತ್ರಣಕ್ಕೆ ಬರುತ್ತದೆ.’
- ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಬೆಳೆಸಿದರೆ ಬೆಳೆಗಾರರು ನಿಶ್ಚಿಂತರಾಗಿರಬಹುದು.
ಈ ರೋಗ ಹತೋಟಿಗೆ ಶೇ 0.5 ರ ಬೋರ್ಡೋ ದ್ರಾವಣದಷ್ಟು ಅಗ್ಗದ ಶಿಲೀಂದ್ರ ನಾಶಕ ಬೇರೆ ಇಲ್ಲ. ಇದು ಬರೇ ಈ ರೋಗ ಮಾತ್ರವಲ್ಲ ಎಲೆ, ಕಾಯಿ ಕೊಳೆ ರೋಗವನ್ನು ಸಹ ತಡೆಯುವ ಕಾರಣ ಇದನ್ನು ಬಳಸಿ ನಿಯಂತ್ರಣ ಆಗದಿದ್ದ ಪಕ್ಷದಲ್ಲಿ ಮಾತ್ರ ಬೇರೆ ಬಳಕೆ ಮಾಡಿ.