ಕಾಫೀ – ಬೋರರ್ ನಿಯಂತ್ರಣಕ್ಕೆ ಜೈವಿಕ ಪರಿಹಾರ.

ಕಾಫಿಯಲ್ಲಿ  ಕಾಯಿ ಕೊರಕ  ಎಲ್ಲಾ  ಕಡೆಯಲ್ಲೂ  ಕಂಡು ಬರುವ ದೊಡ್ದ  ಸಮಸ್ಯೆ.  ಕಪ್ಪು ಬಣ್ಣದ ಕೀಟವೊಂದು  ಕಾಫೀ ಕಾಯಿಯ ನಾಭಿ ಭಾಗದಲ್ಲಿ  ಒಳಸೇರಿ ಕೊರೆದು  ಕಾಯಿಯನ್ನು ಹಾಳು ಮಾಡುತ್ತದೆ. ಕಾಫಿಯ ಕಾಯಿಯ ಒಳಗೆ  ಪ್ರವೇಶ ಮಾಡಿ ಅಲ್ಲಿ ತೂತು ಕೊರೆದು  ಮೊಟ್ಟೆ ಇಡುತ್ತದೆ. ಅಲ್ಲೇ ಮೊಟ್ಟೆ  ಒಡೆಯುತ್ತದೆ. ಒಂದು ವರ್ಷದಲ್ಲಿ  ಕೀಟವು 8-10 ತಲೆಮಾರನ್ನು  ಅಲ್ಲೇ ಪೂರೈಸಿರುತ್ತದೆ.ಇದಕ್ಕೆ ವಿಷ ರಾಸಾಯನಿಕದ ಬದಲು ಜೈವಿಕ ವಿಧಾನ ಸುರಕ್ಷಿತ…

ಜೀವನ ಚಕ್ರ:

  • ಈ ಕೀಟ ಗಿಡದ ಮೇಲೆ  ಇರಲಿ, ನೆಲದಲ್ಲೇ  ಇರಲಿ 5 ತಿಂಗಳ ತನಕ ಬದುಕಿರಬಲ್ಲುದು.
  • ಒಂದು ಫಸಲಿನಿಂದ ಮತ್ತೊಂದು ಫಸಲಿನ ತನಕವೂ ತೋಟದಲ್ಲಿ  ಉಳಿದಿರುತ್ತದೆ.
  •   ಕೀಟದ ಬೆಳವಣಿಗೆ ಈಗಿನ ವಾತಾವರಣ  ಅನುಕೂಲ.
  • ಮಳೆ ಮತ್ತು ಗಾಳಿಯ ಮೂಲಕ  ಪ್ರಸಾರವಾಗುತ್ತದೆ.
  • ಸಂಜೆ ಹೊತ್ತು ಕಾಯಿಯಿಂದ ಹೊರ ಬರುತ್ತದೆ.
  • ಕಾಯಿ ಹಣ್ಣಾಗುವ ತನಕ ಗೋಚರವಾಗುವುದು  ಕಡಿಮೆಯಾದರೂ  ಹಣ್ಣಾಗುವ ಸಮಯದಲ್ಲಿ ಇಡೀ ತೋಟದಲ್ಲಿ ಕಾಣಿಸಿಕೊಳ್ಳುತ್ತದೆ.
  • ಇದರ ಹೆಣ್ಣು ಹುಳಗಳು ಕ್ರೊಟೋಲೇರಿಯಾ, ಲಂಟಾನಾ, ಹುಣಸೆ ಮುಂತಾದ  ಸಸ್ಯಗಳಲ್ಲಿ ಅಶ್ರಯ ಪಡೆದಿರುತ್ತವೆ.
  • ಹಾಗೆಂದು ಇವುಗಳಿಗೆ ಆಹಾರ ಕಾಫೀ ಬೀಜ ಮಾತ್ರ.

  • ಕಾಫೀ ಬೀಜದ ತಿರುಳನ್ನು ರಂದ್ರ ಒರೆದು ಭಕ್ಷಿಸುತ್ತಾ ಆ ರಂದ್ರದಲ್ಲಿ ಪುಡಿಯನ್ನು  ಹೊರಹಾಕಿರುವುದನ್ನು  ಗಮನಿಸಬಹುದು.
  • ಬಾಧೆಗೊಳಗಾದ  ಪಾಚ್ ಮೆಂಟ್ ಕಾಫಿಯಲ್ಲಿ  ತೀ ಸೂಕ್ಷ್ಮ  ತೂತುಗಳನ್ನು  ಕಾಣಬಹುದು.
  • ಅದು ನೀಲಿಯಾಗಿರುತ್ತದೆ.  ಎಳೆಯ ಹಾಗೂ ಬಲಿತ  ಕಾಯಿಗಳೆರಡಕ್ಕೂ ತೊಂದರೆ ಮಾಡುತ್ತದೆ.
  • ಎಳೆಯ  ಕಾಯಿಗಳಾಗಿದ್ದಲ್ಲಿ ಅದು ಬಲಿಯುವ ಮುನ್ನ ಉದುರುತ್ತದೆ.
  • ಬೆಳೆದಾಗ ಬಾಧಿಸಿದರೆ  ಕಾಯಿ ಗಿಡದಿಂದ ಉದುರುವುದಿಲ್ಲ.
  • ಕೊಯಿಲು ಮಾಡುವಾಗ ಅದರ ಒಳಗೆ  ಇರುತ್ತದೆ. ಈ ಕೀಟದಿಂದ ಫಸಲು 30 % ದಿಂದ 80 % ಹಾನಿ ಉಂಟಾಗುತ್ತದೆ.
ಶೂಟ್ ಹೋಲ್ ಬೋರೆರ್  ಬಾಧೆಗೊಳಗಾದ ಸಸ್ಯ

ಹತೋಟಿ:

  • ತೋಟದ ನೈರ್ಮಲ್ಯ  ಅತೀ ಮುಖ್ಯ.
  • ಕಾಫಿ ಹಣ್ಣಾಗುವ ಸಮಯದಲ್ಲಿ ಯಾವುದೇ ಕೀಟನಾಶಕ ಸಿಂಪರಣೆ ಮಾಡಬಾರದು.
  • ಆದ ಕಾರಣ  ಸರಿಯಾಗಿ ಬೆಳವಣಿಗೆ ಆದಾಗ ಕೊಯಿಲು ಮಾಡಬೇಕು.
  • ಕೊಯ್ಯುವಾಗ ನೆಲದ ಮೇಲೆ  ಒಂದೂ ಕಾಯಿಯೂ  ಉಳಿಯದಂತೆ  ಪಾಲಿಥೀನ್ ಶೀಟು ಹಾಕಿ ಕೊಯಿಲು  ಮಾಡಬೇಕು.
  • ತೋಟಕ್ಕೆ ಸಾಗಿಸುವ ಗೋಣಿ ಚೀಲದಲ್ಲಿ ಕೀಟ ಇಲ್ಲದಂತೆ ಅದನ್ನು  ಉಪಚರಿಸಬೇಕು.
ಶೂಟ್ ಹೋಲ್ ಬೋರರ್ ಕೀಟ.
  • ಕಾಯಿ ಬಿದ್ದಿದ್ದರೆ  ಅದನ್ನು ಗುಡಿಸಿ ತೆಗೆದು  ನಾಶಮಾಡಬೇಕು.
  • ಬಾಧಿತ ಕಾಯಿಗಳನ್ನು   ಕುದಿಯುವ ಬಿಸಿ ನೀರಿನಲ್ಲಿ  2-3 ನಿಮಿಶ ಅದ್ದಬೇಕು.
  • ಒಣಗಿಸುವಾಗ ಪಾರ್ಚ್ ಮೆಂಟ್ ಕಾಫಿಯಲ್ಲಿ 10 % ಮತ್ತು  ರೋಬಸ್ಟಾ ಚೆರಿಯಲ್ಲಿ  11 ಮತ್ತು ಅರೇಬಿಕಾ ಚೆರಿಯಲ್ಲಿ 10.5 ತೇವಾಂಶ ಇರಬೇಕು.

ಜೈವಿಕ  ನಿಯಂತ್ರಣ:

  • ಜೈವಿಕವಾಗಿ ಈ ಕೀಟವನ್ನು ಬೆವೇರಿಯಾ ಬಾಸಿಯಾನಾ, ಮತ್ತು ಪೆಸಿಲೋಮೈಸಿಸ್  ಜೀವಾಣುವನ್ನು ಬಳಸಿ ಹತೋಟಿ ಮಾಡಬಹುದು.
  • ಕಾಫೀ  ಮಂಡಳಿಯವರು  ಈ ಜೈವಿಕ ಕೀಟನಾಶಕವನ್ನು ತಯಾರಿಸಿಕೊಳ್ಳುವ ಬಗ್ಗೆ  ಸಲಹೆ ನೀಡುತ್ತಾರೆ.
  • ಆದರೆ ಈಗ ಅವು ಬಳಕೆಗೆ  ಸಿದ್ದ ರೂಪದಲ್ಲೇ ದೊರೆಯುತ್ತವೆ.
  • ಮಾರುಕಟ್ಟೆಯಲ್ಲಿ ದೊರೆಯುವ  ಈ ಜೈವಿಕ ಕೀಟ ನಾಶಕವನ್ನು  ನಿರ್ದಿಷ್ಟ  ಪ್ರಮಾಣದಲ್ಲಿ  ನೀರಿಗೆ ಮಿಶ್ರಣ ಮಾಡಿ ಚೆನ್ನಾಗಿ  ಕಲಕಿ ಅಂಟು ಬೆರೆಸಿ ಸಿಂಪರಣೆ  ಮಾಡಬೇಕು.
ಕಾಂಡಕ್ಕೆ ಹಾನಿ
  • ಗಿಡದಲ್ಲಿ ಕಾಯಿಗಳಿಗೆ ಬೀಳುವಂತೆ, ನೆಲಕ್ಕೂ ಬೀಳುವಂತೆ  ಸಿಂಪಡಿಸುವುದರಿಂದ ಕಾಯಿಯಲ್ಲಿ ಆಡಗಿರುವ, ನೆಲದಲ್ಲಿ  ಅಡಗಿರುವ ಕೀಟಕ್ಕೆ  ಅವು ಪರಾವಲಂಭಿಯಾಗಿ ಬೆಳೆದು 3-4 ದಿನದಲ್ಲಿ  ಸಾಯಿಸುತ್ತದೆ.
  • ಹೆಚ್ಚು ಸಮಯದ ತನಕ  ಈ ಶಿಲೀಂದ್ರಗಳು ಕಾಯಿಯ ಮೇಲು ಭಾಗದಲ್ಲಿ  ವಾಸಿಸಿ ಕೀಟಗಳನ್ನು  ನಾಶಮಾಡುತ್ತದೆ.

ಕೇವಲ ಕಾಯಿ ಕೊರಕಕ್ಕೆ ಮಾತ್ರವಲ್ಲದೆ  ಶಾಟ್ ಹೋಲ್ ಬೋರರ್ ಎಂಬ  ಗಂಡು ರಂದ್ರ ಕೊರಕ ಕೀಟದ ತೊಂದರೆಗೂ ಇದು ಪರಿಣಾಮಕಾರಿಯಾಗಿದೆ. ಶಾಟ್ ಹೋಲ್ ಬೋರರ್ ಕೀಟವು ಹಸುರಾಗಿರುವ ದಷ್ಟ ಪುಷ್ಟ ರೆಂಬೆಗಳಿಗೆ ಬಾಧಿಸುತ್ತದೆ.

ಇದನ್ನು  ಮಳೆಗಾಲ ಮುಗಿದ ತಕ್ಷಣ, ಅಥವಾ ರೈ ಗನ್ ಮೂಲಕ ನೀರಾವರಿ ಮಾಡುವಾಗ ಸಿಂಪರಣೆ  ಮಾಡಬೇಕು. ಈ ಸಮಯದಲ್ಲಿ ಹೆಚ್ಚು ಉಷ್ಣತೆ ಇರುವುದಿಲ್ಲ.ಆರ್ಧ್ರತೆಯೂ ಹೆಚ್ಚು  ಇರುವ ಕಾರಣ ಶಿಲೀಂದ್ರಗಳ ಬೆಲವಣಿಗೆಗೆ ಅನುಕೂಲವಾಗುತ್ತದೆ.  ಕಾಯಿಯ ತಿರುಳು ಗಟ್ಟಿಯಾಗುವ ಮೊದಲೇ  ಸಿಂಪರಣೆ  ಮಾಡುವುದರಿಂದ ಪರಿಣಾಮ ಹೆಚ್ಚು. 

Leave a Reply

Your email address will not be published. Required fields are marked *

error: Content is protected !!