ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಇದು ಮಳೆ ಬರುವ ಮುನ್ಸೂಚನೆಯಾಗಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವ ಸಾಧ್ಯತೆ ಹೆಚ್ಚು.
- ನಮ್ಮ ಹಿರಿಯರು ಕೆಲವು ಹವಾಮಾನ ಮುನ್ಸೂಚನೆಗಳನ್ನು ಹೇಳಿದ್ದಾರೆ.
- ಗಣಪತಿ ಜಾತ್ರೆಯ ಓಕುಳಿಯಂದು ಮಳೆ ಬರುತ್ತದೆ.
- ಧರ್ಮಸ್ಥಳ ದೀಪೋತ್ಸವದಂದು ಮಳೆ ಬರುತ್ತದೆ.
- ಹಾಗೆಯೇ ಇನ್ನೂ ಕೆಲವು ವಿಷೇಶ ದಿನಗಳ ಸಂಧರ್ಭದಲ್ಲಿ ಮಳೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ.
- ಅದು ಸುಮ್ಮನೆ ಅಲ್ಲ. ಸಾಮಾನ್ಯವಾಗಿ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಇದು ನಿಜವಾಗುತ್ತದೆ.
ಮಳೆಯ ಈ ಮುನ್ಸೂಚನೆಯು ಹವಾಮಾನಕ್ಕೂ ಒಂದು ಸಂಬಂಧ ಇದೆ. ಆದ ಕಾರಣ ಮಳೆ ಬರುತ್ತಿತ್ತು.
ಈಗ ಮಳೆ ಬರಬಹುದು:
- ಕುಂಭ ಮಾಸದ ತರುವಾಯ ಮಳೆಗಾಲ ಇದು ನಮ್ಮ ಹಿರಿಯರು ಹಾಕಿಕೊಟ್ಟ ಮಳೆ ಕ್ಯಾಲೆಂಡರ್.
- ಕುಂಭ ಮಾಸ ಕಳೆದು ಮೀನ ಮಾಸ ಬಂದಿದೆ. ಕುಂಭ ಮಾಸದಲ್ಲೂ ಮಳೆ ಬಂದಿದೆ.
- ಮೀನ ಮಾಸದಲ್ಲೂ ಮಳೆ ಆಗಿದೆ. ಇದು ಇನ್ನೂ ಮುಂದುವರಿಯಲಿದೆ.
ವಾತಾವರಣದ ಬಿಸಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ದಿನದ ತಾಪಮಾನ ಏರಿಕೆಯಾಗುತ್ತಲೇ ಇದೆ ದಿನಾಂಕ-17 ರಂದು ಗರಿಷ್ಟ ತಾಪಮಾನ 40 ಡಿಗ್ರೀ ತನಕ ಹೋಗಿದೆ. ಈ ದಿನವೂ 40 ಡಿಗ್ರಿ ದಾಟಿದೆ. ಇದು ಹಾಗೆಯೇ ಮುಂದುವರಿದಿದ್ದು ಅಲ್ಲಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದೆ.
- ಕರಾವಳಿಯ ಒಳನಾಡಿನಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುಮಾರಾಗಿ ಪ್ರತೀ ದಿನ ಅಲ್ಲಲ್ಲಿ ಮಳೆಯ ಸಿಂಚನವಾಗುತ್ತಿದೆ.
- ಬಿಸಿಲಿನ ಪ್ರಖರತೆ ಈ ವರ್ಷ 40 ರಿಂದ 42 ಡಿಗ್ರಿ ತನಕ ಏರುವ ಸೂಚನೆ ಇದೆ.
- ಸಸ್ಯಗಳು ಮಳೆ ಬರುವ ಮುನ್ಸೂಚನೆಯನ್ನು ತಮ್ಮ ಎಲೆಗಳ ಮೂಲಕ ತೋರ್ಪಡಿಸುತ್ತಿವೆ.
- ಕೆಲವು ಉನ್ನತ ಸ್ಥರದ ಸಸ್ಯಗಳ ಎಲೆಯಲ್ಲೂ ಸೂರ್ಯ ರಶ್ಮಿಯ ಘ್ಹಾಸಿ ಕಂಡುಬರುತ್ತದೆ.
ಮಳೆಗಾಲ ಬೇಗ ಬರಬಹುದು:
- ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾತಾವರಣದ ಬಿಸಿ ಜಾಸ್ತಿಯಾಗಿದೆ.
%