ಹಿರಿಯಡ್ಕದ ಸುರೇಶ್ ನಾಯಕ್ ಇವರು ಕಳೆದ 8 ವರ್ಷಗಳಿಂದ ಕಲ್ಲಂಗಡಿ ಬೆಳೆಸುತ್ತಿದ್ದಾರೆ. ಕಲ್ಲಂಗಡಿ ಬೇಸಾಯದಲ್ಲಿ ಹೊಸ ಹೊಸ ಪದ್ದತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಕೃಷಿ ಮಾಡಿದವರು. 1 ಎಕ್ರೆಯಿಂದ ಪ್ರಾರಂಭಿಸಿ ಈಗ 14 ಎಕ್ರೆ ತನಕ ಬೆಳೆ ಬೆಳೆಸುತ್ತಾರೆ. ಈ ವರ್ಷ ಕೊರೋನಾ ಮಹಾ ಮಾರಿಯಿಂದ ಹಣ್ಣು ಹಂಪಲು ಬೆಳೆದ ರೈತರು ಸಂಕಷ್ಟ ಅನುಭವಿಸಿದಂತೆ ಇವರೂ ಒಮ್ಮೆ ಕಂಗಾಲಾಗಿದ್ದರೂ ಹೇಗಾದರೂ ಅದರಲ್ಲಿ ಗೆದ್ದೇ ಬಿಟ್ಟರು.
ಮಾಡಿದ್ದೇನು:
- ಬೆಳೆ ಬೆಳೆಯುವ ರೈತರಿಗೆ ಮಾರಾಟ ಮಾಡುವುದೂ ಗೊತ್ತಿರಬೇಕು.
- ಹಲವಾರು ಸಲ ಮಾರಾಟ ವ್ಯವಸ್ಥೆಯಲ್ಲಿ ಕೋಪಗೊಂಡು ಜಾತ್ರೆ , ಸಮಾರಂಭಗಳಲ್ಲಿ ಇವರು ತಮ್ಮ ಉತ್ಪನ್ನವನ್ನು ನೇರವಾಗಿ ರೈತರಿಗೆ ಮಾರಾಟ ಮಾಡಿದ್ದುಂಟು.
- 3 ವರ್ಷದ ಹಿಂದೆ ಮಂದರ್ತಿ ಜಾತ್ರೆಯಲ್ಲಿ ಮೂರು ದಿನಗಳ ಕಾಲ ಮೊಕ್ಕಾಂ ಹೂಡಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕಲ್ಲಂಗಡಿ ಮಾರಿದ್ದೂ ಉಂಟು.
- ನಿನ್ನೆ ಇವರು ತನ್ನ ಬೆಳೆಯನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ಕೊಟ್ಟಿದ್ದರು.
ಈ ದಿನ 2-04-2020 ಒಂದೇ ದಿನ ಇವರು ತನ್ನ ಕಟಾವಿಗೆ ಸಿದ್ದವಾದ ಒಂದು ಬ್ಲಾಕ್ ಸುಮಾರು 2 ಎಕ್ರೆಯ ಕಲ್ಲಂಗಡಿಯನ್ನು ಬೆಳೆಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆ ಒಳಗೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ.
- ನೂರಾರು ಜನ ಗ್ರಾಹಕರು ಕಲ್ಲಂಗಡಿ ಒಯ್ದಿದ್ದಾರೆ.
- ಸುರೇಶ್ ಇವರು ತನ್ನ ಜೀವಮಾನದ ಅನುಭವದಲ್ಲಿ ಇಂತದ್ದನ್ನು ಕಂಡಿಲ್ಲ ಎನ್ನುತ್ತಾರೆ.
- ಸುಮಾರು 9 ಗಂಟೆಗೆ ತಮ್ಮ ಕಲ್ಲಂಗಡಿ ಹೊಲ ಇರುವ ಹಿರಿಯಡಕದ ಸಮೀಪದ ಬೊಮ್ಮರಬೆಟ್ಟುವಿನಲ್ಲಿ ಕಾರುಗಳಿಂದ ಇಡೀ ರಸ್ತೆಯೇ ಜ್ಯಾಮ ಆದ ವಿದ್ಯಮಾನವನ್ನು ಸುರೇಶ್ ನಾಯಕ್ ಮೊದಲಾಗಿ ಹೇಳುತ್ತಾರೆ.
ಎಲ್ಲೆಲ್ಲಿಂದ ಜನ ಬಂದರು:
- ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಬಂದರೆ ಕೇಳಬೇಕೇ.
- ಜನ ಲಾಕ್ ಡೌನ್ ಅನ್ನು ಯಾವುದೇ ರೀತಿಯಲ್ಲಿ ಭಂಗ ಮಾಡದೆ, ಒಬ್ಬೊಬ್ಬರೇ ಕಾರಿನಲ್ಲಿ ಹೋಗಿ ತಮಗೆ ತಮ್ಮ ಕುಟುಂಬ ಮತ್ತು ನೆಂಟರಿಷ್ಟರಿಗೆ ಬೇಕಾಗುವಷ್ಟು ಕಲ್ಲಂಗಡಿ ಒಯ್ದರು.
- ಉಡುಪಿ, ಮಣಿಪಾಲ, ಕಾರ್ಕಳ, ಬೈಲೂರು, ಪೆರ್ಡೂರು, ಹೆಬ್ರಿ, ಬಂಟಕಲ್ಲು ಇಲ್ಲಿಂದೆಲ್ಲಾ ಜನ ಬಂದದ್ಡೇ ಬಂದದ್ದು.
- ಸುಮಾರು 40 ಟನ್ ಗೂ ಅಧಿಕ ಕಲ್ಲಂಗಡಿ ಮಾರಾಟವಾಯಿತು ಎನ್ನುತ್ತಾರೆ.
- ಇವರು ಮಾರಿದ ಬೆಲೆ ಕಿಲೋ 10 ರೂ. ಅವರವರು ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಂಡು ಹೋದರು.
- ವ್ಯಾಪಾರಿಗಳೂ ಸಹ 7-8-10 ತನಕ ಕೊಳ್ಳುತ್ತಾರೆ .
- ಆದರೆ ಗ್ರಾಹಕರಿಗೆ ಈ ಲಾಕ್ ಡೌನ್ ನೆಪದಲ್ಲಿ ಕಿಲೋ 30 ರೂ. ಗಳಿಗೆ ಮಾರಾಟ ಮಾಡುತ್ತಾರೆ.
- ನಮ್ಮಲ್ಲಿ ಕಲ್ಲಂಗಡಿ ಕೊರೋನಾಗೆ ಹಾಳು ಹಾಗಾಗಿ ಜನ ಒಯ್ಯುವುದಿಲ್ಲ ಎಂದು ಬೆಲೆ ಕಡಿಮೆ ಮಾಡುತ್ತಾರೆ.
- ಗ್ರಾಹಕರಿಗೆ ಲಾಕ್ ಡೌನ್ ನಿಂದ ಕಲ್ಲಂಗಡಿ ಒಟ್ಟು ಹಾಕುವುದೇ ಸಮಸ್ಯೆ . ಹಾಗಾಗಿ ದರ 30 ಎನ್ನುತ್ತಾ ಮಾರಾಟ ಮಾಡುತ್ತಾರೆ.
- ಈ ಸಲ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕಲ್ಲಂಗಡಿ ಕೊಟ್ಟ ತೃಪ್ತಿ ಇದೆ.
- ನನಗೆ ಬೆಳೆ ಬೆಳೆಸಿದ ಖರ್ಚು ಬಂದಿದೆ ಎಂದ ಸಂತೋಷ ಇದೆ ಎನ್ನುತ್ತಾರೆ.
- ತಮ್ಮ ಈ ಕಾರ್ಯಕ್ಕೆ ಬೆಂಬಲ ನೀಡಿದ ಹಲವಾರು ರೈತರ ಗ್ರೂಪ್ ಗಳಿಗೆ ಕೃತಜ್ಞತೆ ಹೇಳುತ್ತಾರೆ.
ಕಲ್ಲಂಗಡಿ ಕೊರೋನಾಕ್ಕೆ ಹಾಳೇ?
- ಖಂಡಿತವಾಗಿಯೂ ಹಾಳಲ್ಲ. ಇದೆಲ್ಲಾ ಜನ ಹುಟ್ಟು ಹಾಕಿದ ವದಂತಿಗಳು.
- ಕಲ್ಲಂಗಡಿಯನ್ನು ಕಳಪೆ ಐಸ್ ಹಾಕಿ ಜ್ಯೂಸ್ ಮಾಡಿ ಕುಡಿದರೆ ಗಂಟಲು ನೋವು ಬರಬಹುದು.
- ಕೆಲವರಿಗೆ ಗಂಟಲು ನೋವು ಬರುವುದು ಬೇಗ.
- ಅಂತವರಿಗೆ ಬಿಸಿಲಿಗೆ ಹೋಗಿ ತಕ್ಷಣ ಕಲ್ಲಂಗಡಿ ತಿಂದರೆ ಗಂಟಲು ಕೆರೆತ ಉಂಟಾಗಬಹುದು.
- ಕಲ್ಲಂಗಡಿಯನ್ನು ಪ್ರಿಝ್ ನಲ್ಲಿ ಇಟ್ಟು ತಿನ್ನಬೇಡಿ.
- ಶರೀರ ತಣ್ಣಗಾದ ಮೇಲೆ ಅಂದರೆ ಬಿಸಿಲಿಗೆ ಹೋಗಿ ಬಂದು ಬೆವರೆಲ್ಲಾ ಆರಿದ ನಂತರ ತಿಂದರೆ, ಯಾರಿಗೂ ಗಂಟಲು ನೋವು ಬರಲಾರದು.
- ನೀರೇ ಹಚ್ಚಿನ ಪ್ರಮಾಣದಲ್ಲಿ ಇರುವುದು. ಜೊತೆಗೆ ವಿಟಮಿನ್ ಎ , ವಿಟಮಿನ್ ಬಿ ಕಾಂಪ್ಲೆಕ್ ಮತ್ತು ವಿಟಮಿನ್ ಸಿ , ಕ್ಯಾಲ್ಸಿಯಂ,ಕಬ್ಬಿಣ, ಮೆಗ್ನೀಶಿಯಂ, ಹಾಗೂ ಇನ್ನಿತರ ಪೋಷಕಗಳು ಇರುತ್ತವೆ.
- ಅದು ಮನುಷ್ಯ ಶರೀರಕ್ಕೆ ಬೇಕಾದ ಪೋಷಕಗಳು. ಹಣ್ಣಿನಲ್ಲಿರುವ ನೀರು ಸಸ್ಯ ಶರೀರದ ಒಳಗೆ ಹೋಗಿ ತುಂಬಿದ ನೀರು
- ಅದು ಶುದ್ಧ ನೀರೇ ಆಗಿರುತ್ತದೆ.
- ಕಲ್ಲಂಗಡಿಯನ್ನು ತಿನ್ನುವಾಗ ಸ್ವಲ್ಪ ಉಪ್ಪು ಸೇರಿಸಿದರೆ ಯಾವ ಸಮಸ್ಯೆಯೂ ಇಲ್ಲ.
ರೈತರೊಬ್ಬರು ತಾನು ಬೆಳೆದ ಉತ್ಪನ್ನವನ್ನು ಹೇಗಾದರೂ ತಿನ್ನುವ ಗ್ರಾಹಕರಿಗೆ ತಲುಪಿಸಿದರು. ಅದನ್ನು ಹೊಲದಲ್ಲಿ ಮಣ್ಣು ಮಾಡಲಿಲ್ಲ. ಇದು ಮೆಚ್ಚಬೇಕಾದ ಸಂಗತಿ. ಜೈ ಕಿಸಾನ್.
ನಿಜವಾಗಿ ಒಳ್ಳೆಯ ಪ್ರಯತ್ನ sir ರೈತ ಅದು ಮಾಡಬೇಕು ಇದು ಮಾಡಬೇಕು ಏಳೂವವ್ರೇ ಹೆಚ್ಚು but ನೀವು ಸಾದಿಸಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು sir keep it up