ಅಲಸಂಡೆ ಬೆಳೆಯಲ್ಲಿ ಹೇನು ನಿಯಂತ್ರಣ

ಅಲಸಂದೆ ಇಳುವರಿ

ಅಲಸಂಡೆ ಚಳಿಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆ.  ಈ ಸಮಯದಲ್ಲಿ ಇದರಲ್ಲಿ ಇಳುವರಿ ಜಾಸ್ತಿ. ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು.   ಇದರ  ನಿಯಂತ್ರಣ ಹೀಗೆ

ಈ ಹೇನು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಕಾಯಿಯ ಬೆಳವಣಿಗೆಯನ್ನು  ಕುಂಠಿತಗೊಳಿಸುತ್ತದೆ, ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ.  ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ.

ಸಸ್ಯ ಹೇನು ಎಂದರೇನು:

Aphids

  • ಸಸ್ಯ ಹೇನುಗಳಲ್ಲಿ ಸುಮಾರು 250 ಬಗೆಯ ಪ್ರಭೇಧಗಳಿದ್ದು, ಹೆಚ್ಚಿನವು ಬೆಳೆಗಳಿಗೆ ಹಾನಿ ಮಾಡುವವುಗಳಾಗಿವೆ.
  • ಇವು ರಸ ಹೀರುವುದು ಮಾತ್ರವಲ್ಲದೆ ಕೆಲವು ರೋಗಗಳನ್ನೂ ಸಹ ಪ್ರಸರಿಸುತ್ತವೆ.
  • ಇದರ ನಿಯಂತ್ರಣಕ್ಕೆ ಬೇರೆ ಬೇರೆ ಉಪಾಯಗಳಿದ್ದು, ರಾಸಾಯನಿಕವಾಗಿ ಡೈಮಿಥೋಯೇಟ್ ಕೀಟನಾಶಕವನ್ನು ಬಳಸಿ ಇದನ್ನು ನಿಯಂತ್ರಿಸಲಾಗುತ್ತದೆ.
  •  2.5 ಮಿಲಿ 1 ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

Aphids in leaf

  • ಡೈಮಿಥೊಯೇಟ್ (ರೋಗರ್) ಇದನ್ನು ಬಳಕೆ  ಮಾಡಿ ಸುಮಾರು 1 ವಾರ ತನಕವಾದರೂ ಅಲಸಂಡೆಯನ್ನುಬಳಕೆ  ಮಾಡಬಾರದು.
  • ಇಷ್ಟು ಸಮಯ ಬಿಟ್ಟರೆ ಆಗ ಅದು ಬೆಳೆದಿರುತ್ತದೆ. ಇದರ ಬದಲಿಗೆ ಇನ್ನೂ ಕೆಲವೊಂದು ಸುರಕ್ಷಿತ  ನಿವಾರಣಾ ಉಪಾಯಗಳಿವೆ.
  • ಹೆಚ್ಚಾಗಿ ಸಸ್ಯ ಹೇನುಗಳು ಎಳೆ ಚಿಗುರಿನ ಬಾಗದಲ್ಲಿ ಮೂಲತಹ ಕಂಡು ಬರುತ್ತದೆ. ಮೊದಲಾಗಿ ಇದನ್ನು ಗುರುತಿಸಿದ್ಡೇ ಆದರೆ ಎಲ್ಲಿ ಇದರ ಹಿಂಡು ಇದೆಯೋ ಆ ಭಾಗವನ್ನು  ಕತ್ತರಿಸಿ ತೆಗೆದು ಬೆಂಕಿಗೆ ಹಾಕಿ ನಾಶ ಮಾಡಬಹುದು.
  • ಅಧಿಕ ಒತ್ತಡದಲ್ಲಿ ನೀರನ್ನು  ಈ ಸಸ್ಯ ಹೇನುಗಳು ಇರುವ ಭಾಗಕ್ಕೆ  ಸಿಂಪಡಿಸಿದಾಗ ಅದು ಸಣ್ಣ ಜೀವಿಯಾದ ಕಾರಣ ತೊಳೆದು ಹೋಗಿ ನಿಯಂತ್ರಣಕ್ಕೆ ಬರುತ್ತದೆ.

aphids adults
ಸಾಬೂನಿನ ದ್ರಾವಣ( ಧೋಬಿ ಸಾಬೂನು ಅಥವಾ ಡಿಷ್ ವಾಶ್): 50 ಗ್ರಾಂ ನಷ್ಟು ಇರುವ ಒಂದು ತುಂಡು ಸಾಬೂನನ್ನು ನೀರಿನಲ್ಲಿ ಕರಗಿಸಿ ಅದನ್ನು ಸುಮಾರು 5 ಲೀ ನೀರಿಗೆ ಮಿಶ್ರಣ ಮಾಡಿ ಅದನ್ನು ಸಿಂಪರಣೆ ಮಾಡುವುದರಿಂದ ಸಸ್ಯ ಹೇನುಗಳು ಕಡಿಮೆಯಾಗುತ್ತವೆ.

  • ಸಾಬೂನಿನ ಖಾರ ಸಸ್ಯ ಹೇನುಗಳಿಗೆ ಮಾರಕವಾಗುತ್ತದೆ.
  • ಬೇವಿನ ಎಣ್ಣೆ ಅಥವಾ ಹೊಂಗೆ ಎಣ್ಣೆಯನ್ನು  ಸಾಬೂನು ನೀರಿನ ಜೊತೆಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಣ ಮಾಡಬಹುದು.
Aphid eater
ಈ ರೀತಿಯ ಗುಲಗುಂಜಿ ಕೀಟ (ಕೆಂಪು ಮತ್ತು ಹಳದಿ) ಸಿಕ್ಕರೆ ಅದನ್ನು ಹೊಲದಲ್ಲಿ ಬಿಡಿ.ಅದು ಹೇನನ್ನು ತಿನ್ನುತ್ತದೆ.
  • ಈ ಸಿಂಪರಣೆಯನ್ನು ಮಾಡುವಾಗ ಅಧಿಕ ಒತ್ತಡದಲ್ಲಿ ಹೇನುಗಳು ಇರುವ ಭಾಗಕ್ಕೆ  ಬೀಳುವಂತೆ ಸಿಂಪಡಿಸಬೇಕು.
  • ಕೆಲವು ಕಡೆ ಕೀಟ ನಿಯಂತ್ರಕ ಸಾಬೂನುಗಳು ಲಭ್ಯವಿದೆ. ಈ ಸಾಬೂನಿನಲ್ಲಿ ಬೇವು, ಹೊಂಗೆ  ಜೊತೆಗೆ ಸಾಬೂನಿಗೆ ಬಳಕೆ ಮಾಡುವ ಮೂಲವಸ್ತುಗಳನ್ನು ಸೇರಿಸಿರುತ್ತಾರೆ.
  • ಇದನ್ನು ಕಲಕಿ ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಿಸಬಹುದು.
  • ಪ್ರಕೃತಿಯಲ್ಲಿ ಕೆಲವೊಂದು ಉಪಕಾರೀ ಕೀಟಗಳಿದ್ದು ಹಸುರು ಬಣ್ಣದ ಮಿಡತೆ, ಕೆಲವು ಇರುವೆ ಹಾಗೆಯೇ ಕೆಲವು ಪಕ್ಷಿಗಳು ಸಸ್ಯ ಹೇನುಗಳನ್ನು ತಿನ್ನುತ್ತದೆ.
  • ಇದನ್ನು ಗುರುತಿಸಿ ಅಲಸಂಡೆ ಬೆಳೆಯುವಲ್ಲಿ ಬಿಡುವುದರಿಂದ ಸಸ್ಯ ಹೇನು ನಿಯಂತ್ರಿಸಬಹುದು.

Leave a Reply

Your email address will not be published. Required fields are marked *

error: Content is protected !!