krushiabhivruddi

ಗರಿ ಕತ್ತರಿಸಿ- ಅಡಿಕೆ ಸಸಿ ಬೆಳೆವಣಿಗೆ ಹೆಚ್ಚಿಸಿ.

ಅಡಿಕೆ ಸಸಿ ಬೆಳೆಸುವಾಗ ಮೊದಲೆರಡು  ವರ್ಷ ಉತ್ತಮವಾಗಿ ಬೆಳೆಸಿದರೆ ಅದರ ಭವಿಷ್ಯವೇ ಬದಲಾಗುತ್ತದೆ. ಮೊದಲ ಎರಡು ವರ್ಷ  ಬೆಳೆವಣಿಗೆ  ಉತ್ತೇಜಿಸಲು ಎಲೆ ಪ್ರೂನಿಂಗ್  ಸಹಕಾರಿ. ಇದನ್ನು ಕೆಲವು ರೈತರು ಮಾಡಿ ನೋಡಿದ್ದಾರೆ. ಹಿಂದೊಂಮ್ಮೆ ಅಡಿಕೆ ಸಸ್ಯದ ಗರಿ ಕತ್ತರಿಸಿ ಸಸ್ಯವನ್ನು ಕುಬ್ಜವಾಗಿಸಬಹುದು ಎಂಬ ಪ್ರಚಾರ ಬಹಳ ಸುದ್ದಿಯಾಗಿತ್ತು. ಆದರೆ ಅದರ ಹಿಂದೆ ಹೋದಾಗ ತಿಳಿದದ್ದು ಸಸಿ ಗಿಡ್ಡವಾಗುವುದಲ್ಲ. ಸಸ್ಯ ಬೆಳವಣಿಗೆ ಸ್ವಲ್ಪ ಹೆಚ್ಚಳವಾಗುವುದು. ಹಾಗೆಂದು ಎಲೆಗಳನ್ನೆಲ್ಲಾ ಕತ್ತರಿಸುವುದಲ್ಲ. ಹಿತ ಮಿತ ಪ್ರೂನಿಂಗ್ ಅಷ್ಟೇ.  ಮನುಷ್ಯ ಸಣ್ಣ ಪ್ರಾಯದಲ್ಲಿ …

Read more

ಕೆಂಪಡಿಕೆ ರಾಶಿ- 40,000 ಆಗಬಹುದು ಎನ್ನುತ್ತಾರೆ.

ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು  ವ್ಯಾಪಾರದ ಅನುಭವಿಗಳು. ಕೆಲವು ಮೂಲಗಳ ಪ್ರಕಾರ ಈಗ…

Read more
ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ

ಆಷಾಢ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ- ಕುಂಭ ಮಾಸಕ್ಕೆ ಸ್ವಾಗತ.

ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ  ಎನ್ನುತ್ತಾರೆ ಹಿರಿಯರು. ಇದರ ಅರ್ಥ ಕೃಷಿಕರಿಗೆ ಮಾತ್ರ ಅರ್ಥವಾಗಬಲ್ಲದು.ಮಕರ ಸಂಕ್ರಮಣ ಕಳೆದ ತರುವಾಯ ಎಲ್ಲವೂ ಹಚ್ಚ ಹಸುರು.ರೈತನ ಶ್ರಮಕ್ಕೆ ಹವಾಮಾನದ ಬೆಂಬಲ ದೊರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ. ಕೃಷಿ ಎಂಬ ವೃತ್ತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮ ಹಿರಿಯರು ತಿಳಿದಿದ್ದ ಕೆಲವು ಅನುಭವ ಸೂಕ್ಷ್ಮಗಳನ್ನು ಇಂದಿನ ವಿಜ್ಞಾನ ಅರ್ಥ ಬಿಡಿಸಿ ಜನತೆಗೆ ತಿಳಿಸಿದೆ. ಹಿರಿಯರ ಅನುಭವ ಇಂದಿನ ವಿಜ್ಞಾನಿಗಳ ತಿಳುವಳಿಕೆಗಿಂತ ಇಂದಿಗೂ ಮುಂದೆಯೇ ಇದೆ. ಆಟಿ (ಆಷಾಢ ಮಾಸ) ಕಳೆದರೆ …

Read more

ಅಡಿಕೆಗಿಂತಲೂ ಲಾಭದ್ದು ತೆಂಗಿನ ಬೆಳೆ.

ಅಡಿಕೆಗೆ ಉತ್ತಮ ಬೆಲೆ ಇದೆ ಎಂದು ಎಲ್ಲರೂ ಅಡಿಕೆ  ಬೆಳೆಸುತ್ತಾರೆ. ಆದರೆ ಅದರ ಎಲ್ಲಾ ಖರ್ಚು ವೆಚ್ಚ ಮತ್ತು  ಕೊಯಿಲು, ಸಂಸ್ಕರಣೆ ಎಂಬ ನಮ್ಮ ಕೈಯಲ್ಲಾಗದ ಕೆಲಸ ನೋಡಿದರೆ ಅಡಿಕೆ ಬೆಳೆಯಷ್ಟು ಕಷ್ಟದ ಬೆಳೆ  ಬೇರೊಂದಿಲ್ಲ. ತೆಂಗಿನ ಬೆಳೆ ಇದಕ್ಕಿಂತ ಭಿನ್ನ. ಕೊಯಿಲಿಗೆ ಸಮಯ ನಿರ್ಭಂದ ಇಲ್ಲ. ಹಾಳಾಗುತ್ತದೆ ಎಂಬ ಭಯ ಇಲ್ಲ. ಬ್ಯಾನ್ ಆರೋಗ್ಯಕ್ಕೆ ಹಾಳು ಮುಂತಾದ ತೊಂದರೆಗಳೂ ಇಲ್ಲ. ತೆಂಗಿನ ಮರಗಳ ಮಧ್ಯಂತರದ ಸ್ಥಳಾವಕಾಶದಲ್ಲಿ ಬುಡ ಭಾಗದಲ್ಲಿ, ಮರದ ಕಾಂಡದಲ್ಲಿ, ಮಧ್ಯಂತರದಲ್ಲಿ  ಬೆಳಕಿನ ಲಭ್ಯತೆಗೆ…

Read more
mulching for water saving

ಇದು 75% ದಷ್ಟು ನೀರು ಉಳಿಸುವ ವಿಧಾನ.

 ಬೇಸಿಗೆ ಬಂದರೆ ಸಾಕು .ನೀರು- ನೀರಾವರಿ, ನೀರಿನ ಕೊರತೆ.  ದಿನಾ ಇದೇ ಕೆಲಸ. ಬೇಸಿಗೆ ಬಂದರೆ ಸಾಕು ಎಲ್ಲೂ ಹೋಗುವಂತಿಲ್ಲ. ನೀರಾವರಿಯದ್ದೇ ತಲೆಬಿಸಿ. ಇಷ್ಟೆಲ್ಲಾ ನೀರುಣಿಸಿದರೆ  ಅಂತರ್ಜಲ ಯಾಕೆ  ಭೂ ಗರ್ಭದ ಪಾತಾಳ ಜಲಕ್ಕೂ ಹೋಗಬೇಕಾಗ ಬಹುದು. ಇದಕ್ಕೆ  ಪರಿಹಾರ ಎಷ್ಟು ಬೇಕೋ ಅಷ್ಟು ನೀರು ಕೊಟ್ಟು, ಆವೀಕರಣವನ್ನು ಶೂನ್ಯ ಮಾಡುವುದು. ಆವೀಕರಣ ತಡೆದರೆ ಸಸ್ಯಕ್ಕೆ  ಬೇಕಾಗುವ ನೀರು ತುಂಬಾ ಕಡಿಮೆ. ಮಳೆ ಹಿಂದಿನಂತಿಲ್ಲ: ಪ್ರಕೃತಿಯ ನಡೆ ಹೇಗಿರುತ್ತದೆ ಎಂದು ಬಲ್ಲವರಾರೂ ಇಲ್ಲ. ಮಳೆ ಬಂದರೆ ಬಂತು….

Read more
Wide bole

ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಹೇಗೆ ಮತ್ತು ಇದರ ಪ್ರಯೋಜನ.

ತೆಂಗಿನ ಮರದ ಬುಡದಲ್ಲಿ ಬೆಳೆಯುವ ಒಂದು ರೀತಿಯ ಬೊಡ್ಡೆಯೇ (Bole) ಆ ಮರದ ಶಕ್ತಿ ಕೇಂದ್ರ. ಯಾವ ತೆಂಗಿನ ಮರಕ್ಕೆ  ಬೊಡ್ಡೆ ಇದೆಯೋ ಆ ಮರ ಸ್ವಲ್ಪ ಮಟ್ಟಿಗೆ ಬರ ನಿರೋಧಕ ಶಕ್ತಿಯನ್ನು ಪಡೆದಿರುತ್ತದೆ.    ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ  ಅದನ್ನು ಬಳಸಿಕೊಂಡು ಬದುಕುತ್ತದೆ. ಅದೇ ರೀತಿ ಕೆಲವು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಆಪತ್ಕಾಲಕ್ಕೆ  ಬಳಕೆಗಾಗುವಂತೆ ತಮ್ಮಲ್ಲಿ ಆಹಾರ ದಾಸ್ತಾನು ಇಟ್ಟುಕೊಂಡಿರುತ್ತವೆ….

Read more

ಅನನಾಸು ತಿಂದವರಿಗೆ ರೋಗ ಇಲ್ಲ.

ನಾವು ಏನೇನೂ ಹಣ್ಣುಗಳನ್ನು ಆರೋಗ್ಯಕ್ಕೆ ಉತ್ತಮ ಎಂದು ದುಬಾರಿ ಬೆಲೆ ಕೊಟ್ಟು ಖರೀದಿಸಿ ತಿನ್ನುತ್ತೇವೆ. ಆದರೆ ಕಾಲಬುಡದಲ್ಲೇ ಇರುವ ಎಲ್ಲಕ್ಕಿಂತ ಶ್ರೇಷ್ಟ ಹಣ್ಣನ್ನು ಮಾತ್ರ ತಾತ್ಸರದಿಂದ ಕಾಣುತ್ತೇವೆ. ನಿಜವಾಗಿ ಹುಳಿ ಸಿಹಿ ಮಿಶ್ರ ಅರೋಗ್ಯಕರ ಹಣ್ಣು ಎಂದರೆ ಅನನಾಸು. ಇದಕ್ಕೆ  ಸಾಟಿಯಾದ ಬೇರೆ ಹಣ್ಣು ಇಲ್ಲ ಎನ್ನುತ್ತಾರೆ ಅಮೇರಿಕನ್ನರು.   ವಿಷೇಶ ಗುಣಗಳು: ಅನನಾಸಿನಲ್ಲಿ ಸಿ ಅನ್ನಾಂಗ ಹೇರಳವಾಗಿದ್ದು ಅದನ್ನು ಸೇವಿಸುವುದು ಎಲ್ಲಾ ವಯೋಮಾನದವರಿಗೂ ಒಳ್ಳೆಯದು. ಬೀಡಿ ಸೇದುವವರು ಕೆಮ್ಮು ಕಡಿಮೆಯಾಗಲು ಅನನಾಸು ಒಳ್ಳೆಯದೆಂದು  ಹೇಳುತ್ತಾರೆ. ಕಾರಣ,…

Read more

ಕೃತ್ರಿಮ ವಿಧಾನ- ಜೈಲು ಶಿಕ್ಷೆ.

ನಮ್ಮ ದೇಶದಲ್ಲಿ ಹಣ್ಣು ಹಂಪಲುಗಳನ್ನು ಬೇಗ ಹಣ್ಣು ಮಾಡಲು ಕೆಲವು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ಬಹಿರಂಗ ವಿಚಾರ. ಇನ್ನು ಮುಂದೆ ಈ ರೀತಿ ಮಾಡಿದರೆ  ಮಾಡಿದವನಿಗೆ ಜೈಲು ಶಿಕ್ಷೆ ಆಗುತ್ತದೆ. ಇದು ದೆಹಲಿ ಹೈಕೋರ್ಟು ನೀಡಿದ ತೀರ್ಪು.   ಹಿನ್ನೆಲೆ: ಹಣ್ಣುಹಂಪಲುಗಳನ್ನು ಗಿರಾಕಿಗಳು ಕೊಳ್ಳುವುದು ಅದರ  ಆಕರ್ಷಕ ಮೈ ಬಣ್ಣ ಮತ್ತು ಗಾತ್ರವನ್ನು ನೋಡಿ.   ಹಣ್ಣು ಹಂಪಲುಗಳಿಗೆ ಅತೀ ದೊಡ್ಡ ಸಮಸ್ಯೆ ಎಂದರೆ ಹಣ್ಣಿನ ಒಳಗೆ  ಹುಳ ಆಗುವುದು ಮತ್ತು ಸಿಪ್ಪೆ ಕೊಳೆಯುವುದು. ಇದರಿಂದ…

Read more
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.

ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ  ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ  ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ. ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ. ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ. ಹೀಗೆ ಆದರೆ…

Read more

ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

ಅಡಿಕೆ ಉಳಿಯಬೇಕು. ದುಡ್ಡು ಆಗಬೇಕು ನಿಜ. ಆದರೆ ದುಡ್ಡಿನಲ್ಲಿ ಆರೋಗ್ಯವನ್ನು ಖರೀದಿಸಲಿಕ್ಕೆ ಆಗುವುದಿಲ್ಲ. ಅನಾರೋಗ್ಯ ಬಂದರೆ ನಮ್ಮ ಸಂಪಾದನೆಯಲ್ಲಿ ಆಸ್ಪೆತ್ರೆಯವರು- ವೈದ್ಯರು ಪಾಲುದಾರರಾಗುತ್ತಾರೆ. ಅವರನ್ನು ಸಾಕುವ ಕೆಲಸ ಬೇಡ. ಅಡಿಕೆ ಬೆಳೆಗಾರರಿಗೆ ಸಲಹೆಗಳ ಸುರಿಮಳೆಗಳೇ ಹರಿದು ಬರುತ್ತಿವೆ. ಯಾವ ರೈತರು ಪ್ರಧಾನ ಮಂತ್ರಿಗಳ ಕೃಷಿ ವಿಕಾಸ ಯೋಜನೆಯ 6000 ರೂ. ಫಲಾನುಭವಿಗಳಿದ್ದಾರೆಯೋ ಅವರಿಗೆ  ಮೊಬೈಲ್ ನಂಬ್ರಕ್ಕೆ ಸಂದೇಶಗಳು ಬರುತ್ತಿವೆ. ಇದರಲ್ಲೆಲ್ಲಾ ಅಷ್ಟು ಇಷ್ಟು ರಾಸಾಯನಿಕ ಬಳಕೆ ಮಾಡಿ ಬೆಳೆ ಸಂರಕ್ಷಿಸಿಕೊಳ್ಳಿ ಎಂಬ ಸಂದೇಶ ಇದೆ. ರೈತರೇ ಇದನ್ನು…

Read more
error: Content is protected !!