ಅಡಿಕೆ ತೋಟದಲ್ಲಿ ಏಲಕ್ಕಿ ಬೆಳೆದರೆ ಲಾಭವಿದೆ.

ಅಡಿಕೆ ತೋಟದಲ್ಲಿ ಏಲಕ್ಕಿ

ಸಾಂಬಾರ ಪದಾರ್ಥಗಳಲ್ಲಿ ರಾಣಿಯ ಸ್ಥಾನವನ್ನು ಅಲಂಕರಿಸಿದ ಬೆಳೆ ಅಂದರೆ ಏಲಕ್ಕಿ. ಅಂತರ ರಾಷ್ಟ್ರೀಯ  ಮಾರುಕಟ್ಟೆ ಜೊತೆಗೆ ದೇಶೀಯ ಮಾರುಕಟ್ಟೆ ಎರಡರಲ್ಲೂ ಯಾವಾಗಲೂ ಬೇಡಿಕೆ ಪಡೆದ ಬೆಳೆ. ಇದು ಮಲೆನಾಡು, ಅರೆಮಲೆನಾಡಿನ ಅಡಿಕೆ ತೋಟಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುದು. ಅಡಿಯಷ್ಟೇ ಆದಾಯವನ್ನೂ ಕೊಡಬಲ್ಲುದು.

ವಿಶಿಷ್ಟ ವಾತಾವರಣ ಬೆಳೆ:

  • ಪಶ್ಛಿಮ ಘಟ್ಟದ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಪರಿಮಳದ ಕಾಳನ್ನು ಬಿಡುತ್ತಿದ್ದ  ಸಸ್ಯವಾಗಿದ್ದ ಈ ಏಲಕ್ಕಿ, ಈಗ ರೈತರ ಹೊಲದಲ್ಲಿ  ಬೆಳೆಸಲ್ಪಡುತ್ತಿದೆ.
  • ವನಿಲ್ಲಾ ಎಂಬ ಸಾಂಬಾರ ಪದಾರ್ಥದ ನಂತರ ಇದಕ್ಕೇ ಎರಡನೇ ಸ್ಥಾನ.
  • ಇದನ್ನು ಕೆಲವು ವಾತಾವರಣ ಮಾರ್ಪಾಟು ಮಾಡಿ ಈಗ ಬೆಳೆಸಕಾಗುತ್ತಿದೆ.

ಅಡಿಕೆ ತೋಟದ ಏಲಕ್ಕಿ

ಏಲಕ್ಕಿಯ ಪ್ರಭೇಧಗಳು:

  • ಬೆಳೆ ಪ್ರದೇಶ, ಪುಷ್ಪಗೊಚ್ಚಲುಗಳ ಸ್ವಭಾವ, ಗಿಡಗಳ  ಗಾತ್ರ ಮತ್ತು ಇತರ ಲಕ್ಷಣಗಳಿಗನುಗುಣವಾಗಿ ಮೂರು ವಿಧಗಳಾಗಿ ವರ್ಗೀಕರಣ ಮಾಡಲಾಗಿದೆ. 
  • ಅದುವೇ ಮಲಬಾರ್ , ಮೈಸೂರು, ವಜುಕ್ಕಾ. ಮಲಬಾರ್ ತಳಿಯ ಪುಷ್ಪ ಗೊಚ್ಚಗಳು ನೆಲದ ಮೇಲೆ ಹಬ್ಬಿರುತ್ತವೆ.
  • ಕರ್ನಾಟಕದಲ್ಲಿ ಹೆಚ್ಚು ಬೆಳೆಯಲ್ಪಡುತ್ತದೆ.
  • ಮೈಸೂರು ಪ್ರಭೇಧದ ಗಿಡಗಳ ಪುಷ್ಫ ಗೊಚ್ಚಗಳು ನೇರವಾಗಿ ನಿಂತಿದ್ದು, ಕೇರಳ ಮತ್ತು ತಮಿಳುನಾಡುಗಳಲ್ಲಿ ಬೆಳೆಯಲ್ಪಡುತ್ತದೆ.
  • ವಾಜುಕ್ಕಾ  ಏಲಕ್ಕಿ ಪ್ರಭೇಧದ ಏಲಕ್ಕಿ ಮೈಸೂರು ಮತ್ತು ಮಲಬಾರ್ ತಳಿಗಳ ಪ್ರಾಕೃತಿಕ ಸಂಕರಣ ಆಗಿದ್ದು, ಪುಷ್ಫ ಗೊಚ್ಚುಗಳು ತೂಗು ಹಾಕಿದಂತೆ ಇರುತ್ತವೆ. ಕೇರಳದಲ್ಲಿ ಹೆಚ್ಚಾಗಿ ಬೆಳೆಯಲ್ಪಡುತ್ತದೆ.

ಎಲ್ಲಿ ಬೆಳೆಯಬಹುದು;

ಏಲಕ್ಕಿ ಹಣ್ಣು

  • ಏಲಕ್ಕಿಯ ಮೂಲಸ್ಥಾನ ಎಂದರೆ ಅತಿಯಾಗಿ ಮಳೆ ಬೀಳುವ ಕಾಡುಗಳು. ಹಂಚಿಕೊಂಡು ವರ್ಷದಲ್ಲಿ 1500-2500  ಮಿಲಿ ಮೀಟರು ತನಕ ಮಳೆ ಬೀಳುವ 15-25 ಡಿಗ್ರಿ ತನಕ ತಾಪಮಾನ ಇರುವ 600-1200 ಮೀ. ಎತ್ತರ ಇರುವ ಕಡೆ ಬೆಳೆಸಲಾಗುತ್ತದೆ.
  • ಆಮ್ಲೀಯ ಮಣ್ಣು 5.5 -6.5  ತನಕ ಇರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
  • ಫಲವತ್ತಾದ ಕಾಡು ಮಣ್ಣು ಇರುವ ಸ್ಥಳ ಆಗಿರಬೇಕು.
  • ನೀರಿನ ಲಭ್ಯತೆ ಚೆನ್ನಾಗಿರಬೇಕು.
  • ಕರಾವಳಿಯ ಘಟ್ಟ ಪ್ರದೇಶದ ತಪ್ಪಲು,( ಘಾಟಿ ಬುಡ) ಮಲೆನಾಡಿನ ಎಲ್ಲಾ ಭಾಗಗಳಲ್ಲಿ,  ಹಾಗೂ ಮಲೆನಾಡಿಗೆ ತಾಗಿಕೊಂಡ ಅರೆಮಲೆನಾಡಿನ ಭಾಗಗಳಲ್ಲಿ ಮಿಶ್ರ ಬೆಳೆಯಾಗಿ  ಬೆಳೆಯಲಾಗುತ್ತದೆ.

ಸಸ್ಯಾಭಿವೃದ್ಧಿ ಹೇಗೆ:

  • ಇದನ್ನು ಬೀಜಗಳನ್ನು ಮೊಳಕೆ ಬರಿಸಿ ಸಸಿ ಮಾಡುತ್ತಾರೆ.
  • ಸಸಿಗಳಲ್ಲಿ ಬರುವ ಕಂದುಗಳನ್ನು ಬೇರು ಸಮೇತ ಪ್ರತ್ಯೇಕಿಸಿಯೂ ಸಸ್ಯಾಭಿವೃದ್ಧಿ ಮಾಡುತ್ತಾರೆ.
  • ಬೀಜಗಳನ್ನು ಪಾತಿಯಲ್ಲಿ ಹಾಕಿ ಸಸಿ ಮಾಡಿ ಪಾಲಿಥೀನ್ ಚೀಲಕ್ಕೆ ವರ್ಗಾಯಿಸಿ ನಂತರ ನೆಡಲಾಗುತ್ತದೆ.
  • ಕಂದುಗಳನ್ನು ನೇರವಾಗಿಯೂ ನೆಡಬಹುದು.
ಅಡಿಕೆ ತೋಟದಲ್ಲಿ ಅಸಾಂಪ್ರದಾಯಿಕ ಪ್ರದೇಶದಲ್ಲಿ ವಾತಾವರಣ ನಿಯಂತ್ರಿಸಿ ಏಲಕ್ಕಿ ಬೆಳೆ
ಅಡಿಕೆ ತೋಟದಲ್ಲಿ ಅಸಾಂಪ್ರದಾಯಿಕ ಪ್ರದೇಶದಲ್ಲಿ ವಾತಾವರಣ ನಿಯಂತ್ರಿಸಿ ಏಲಕ್ಕಿ ಬೆಳೆ

ಏಲಕ್ಕಿ ಸಂಶೊಧನೆ:

  • ಏಲಕ್ಕಿ ಒಂದು ಸಾಂಬಾರ  ಬೆಳೆಯಾಗಿದ್ದು, ಇದರ ಉಸ್ತುವಾರಿಗೆ ಸಾಂಬಾರ ಮಂಡಳಿ ಇರುತ್ತದೆ.
  • ಕೇರಳದ  ಕೊಚ್ಚಿನ್ ನಲ್ಲಿ  ಇದರ ಮುಖ್ಯ ಕಚೇರಿ ಇದ್ದು, ಏಲಕ್ಕಿ ಬೆಳೆ ಸಂಶೊಧನೆಗೆ  ಕರ್ನಾಟಕದ ಸಕಲೇಶಪುರದ ದೋಣಿಗಾಲ್ ನಲ್ಲಿ ಸಂಶೋಧನಾ ಕೇಂದ್ರವನ್ನೂ ಹೊಂದಿದೆ.

ಇದಲ್ಲದೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು  ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯನ್ನು ಕೇರಳದ ಕಲ್ಲಿಕೊಟೆ ಯಲ್ಲಿ ಸ್ಥಾಪಿಸಿದೆ. ಇದರ ಪ್ರಾದೇಶಿಕ ಸಂಶೋಧನಾ ಕೇಂದ್ರವು ಮಡಿಕೇರಿಯ ಅಪ್ಪಂಗಳ ದಲ್ಲಿ ಇದೆ. ಇದಲ್ಲದೆ ಎಲ್ಲೆಲ್ಲಿ ಬೆಳೆ ಇದೆಯೋ ಅ ಸರಹದ್ದಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರಗಳೂ ಸಹ ಸಂಶೋಧನೆ ಮತ್ತು ರೈತರಿಗೆ ಮಾಹಿತಿಯನ್ನು ಕೊಡುತ್ತವೆ.

  •  ಬೆಳೆ ಬೆಳೆಸುವ ಬಗ್ಗೆ ,ಕೀಟ ರೋಗ ನಿಯಂತ್ರಣದ ಬಗ್ಗೆ, ತಳಿ ಅಭಿವೃದ್ದಿ ಬಗ್ಗೆ ನಿರಂತರ ಸಂಶೊಧನೆಗಳು ನಡೆಯುತ್ತವೆ.
  • ರೈತರಿಗೆ ತರಬೇತಿ, ರೈತರ ಹೊಲ ಸಂದರ್ಶನ ಮುಂತಾದ ವಿಸ್ತರಣಾ ಕಾರ್ಯಗಳನ್ನೂ ಮಾಡುತ್ತವೆ.
Climate altretion required in some hot areas
ಹವಾಮಾನದ ಏರಿಳಿತ ತಡೆಯಲು ಈ ರೀತಿ ನೆರಳನ್ನು ಮಾಡಿಕೊಳ್ಳಬಹುದು

ಎಲ್ಲೆಲ್ಲಿ ಬೆಳೆ ಇತ್ತು:

  • ನಮ್ಮ ರಾಜ್ಯದಲ್ಲಿ ಕೊಡಗಿನ ಮಡಿಕೇರಿ, ಹಾಸನದ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆ ಹೊನ್ನೂರು, ಶ್ರಿಂಗೇರಿ, ಕೊಪ್ಪ ಕಡೆ ಹಾಗೂ ಆಗುಂಬೆ, ಶಿರಸಿ, ಸಾಗರದ  ಸುತ್ತಮುತ್ತ ಹಿಂದೆ ಏಲಕ್ಕಿಯನ್ನು ಅಡಿಕೆ ತೋಟಗಳಲ್ಲಿ  ಮತ್ತು ಕಾಡಿನಂತಹ ಸ್ಥಳದಲ್ಲಿ ಬೆಳೆಸುತ್ತಿದ್ದರು.
  • ಈಗ ಬೆಳೆ ಪ್ರದೇಶ ತುಂಬಾ ಕಡಿಮೆಯಾಗಿದೆ. ಸಕಲೇಶಪುರದಲ್ಲಿ ಏಲಕ್ಕಿಯ ಹರಾಜು ಕೇಂದ್ರ ಇತ್ತು.
  • ಈಗಲೂ ಸಣ್ಣ ಮಟ್ಟಿಗೆ ವ್ಯವಹಾರ ನಡೆಯುತ್ತಿದೆ.
  • ಈಗ ಮತ್ತೆ ಬೆಳೆ ಬೆಳೆಸುವ ಹುರುಪು ಹೆಚ್ಚಾಗಿದ್ದು, ಸಾಕಷ್ಟು ಜನ ಬೆಳೆಸಲು ಪ್ರಾರಂಭಿಸಿದ್ದಾರೆ.

ಏಲಕ್ಕಿ ಬೆಳೆಸಲು ಅನುಕೂಲಕರ  ಹವಾಗುಣ ಇರುವಲ್ಲಿ ರೈತರು ಇದನ್ನು ಬೆಳೆಸಿದರೆ ಉತ್ತಮ ಆದಾಯ ಪಡೆಯಬಹುದು. ಉತ್ತಮ ಗಾತ್ರದಕಾಳು ಕೊಡುವ ತಳಿಗಳನ್ನು ಆಯ್ಕೆ ಮಾಡಿ ಬೆಳೆಯಿರಿ.

end of the article:———————————————————————–
search words: Spice crop# Areca inter crop# Cardamom  cultivation# Cardamom crop# Inter crop# profitable intercrop#
 

Leave a Reply

Your email address will not be published. Required fields are marked *

error: Content is protected !!