ಕಬ್ಬು ಬೆಳೆಗೆ ರಂಜಕ ಗೊಬ್ಬರ ಮತ್ತು ಇಳುವರಿ.
ಕಬ್ಬಿನ ಬೇಸಾಯದಲ್ಲಿ ಇಳುವರಿ ಹೆಚ್ಚಬೇಕಾದರೆ ಬೇರುಗಳು ಅಧಿಕ ಪ್ರಮಾಣದಲ್ಲಿ ಇರಬೇಕು. ಸಸ್ಯಗಳಿಗೆ ಬೇರೇ ಆಧಾರ. ಹೆಚ್ಚು ಹೆಚ್ಚು ಬೇರುಗಳಿದ್ದರೆ ಆಹಾರ ಸಂಗ್ರಹಣೆ ಹೆಚ್ಚಿ ಬೆಳೆ ಆರೋಗ್ಯವಾಗಿರುತ್ತದೆ. ಬೇರಿನ ಬೆಳೆವಣಿಗೆ ಮತ್ತು ಕಾಂಡದ ಬೆಳೆವಣಿಗೆಗೆ ರಂಜಕ ಗೊಬ್ಬರ ಅವಶ್ಯಕ. ಕಬ್ಬು ಸಸ್ಯದ ಬೇರು ಸಮರ್ಪಕವಾಗಿ ಬೆಳೆಯದಿದ್ದರೆ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕಾಂಶ ಇಲ್ಲದಿದ್ದರೆ , ದ್ಯುತಿ ಸಂಶ್ಲೇಷಣ ಕ್ರಿಯೆ ಸರಿಯಾಗಿ ನಡೆಯದು. ಬೇರಿನ ಭಾಗದಲ್ಲಿ ಉಷ್ಣತಾಮಾನವು 16- 22 ಡಿಗ್ರಿ ತನಕ ಇದ್ದಾಗ ಬೇರುಗಳು…