ಅಡಿಕೆಯ ಮಿಡಿಗಳು ಯಾಕೆ ಉದುರುತ್ತವೆ?

ಬೇಸಿಗೆಯಲ್ಲಿ ಏನೇನೋ ಕಸರತ್ತು ಮಾಡಿ ಹೂಗೊಂಚಲಿನಲ್ಲಿ ಮಿಡಿಗಳನ್ನು ಉಳಿಸಿರುತ್ತೇವೆ. ಆದರೆ ಅದು ಒಂದೆರಡು ಮಳೆ ಬಂದ ತಕ್ಷಣ ಉದುರಲಾರಂಭಿಸುತ್ತದೆ. ಕೆಲವು ಮುಂಚೆಯೇ ಉದುರುತ್ತದೆ. ಇದಕ್ಕೆ ಹಲವು ಕಾರಣಗಳಿದ್ದು, ರೈತರು ತಮ್ಮಲ್ಲಿ ಯಾವ ಸ್ಥಿತಿ ಇದೆಯೋ ಅದಕ್ಕನುಗುಣವಾಗಿ ಉಪಚಾರ ಮಾಡಿ ಅದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಮಳೆ ಒಂದು ಬಂದರೆ ಸಾಕು, ಅಡಿಕೆ ಮರದಲ್ಲಿ ಮಿಡಿಗಳು ಉದುರುತ್ತವೆ. ಕೆಲವೊಮ್ಮೆ ಒಂದೆರಡು  ಸಂಖ್ಯೆಯಲ್ಲಿ ಉದುರಿದರೆ  ಕೆಲವೊಮ್ಮೆ ಬಹುತೇಕ ಉದುರುತ್ತದೆ. ಅಂತಹಹ ಮಿಡಿಗಳಲ್ಲಿ ಆ ದಿನ ಉದುರಿದ ಮಿಡಿಯನ್ನು ಒಮ್ಮೆ ಸರಿಯಾಗಿ…

Read more

ಸಸ್ಯಗಳಿಗೆ ಬೋರಾನ್ ಬೇಕು- ಹೆಚ್ಚಾದರೆ ಹೀಗಾಗುತ್ತದೆ.

ಲಘು ಅಥವಾ ಸೂಕ್ಷ್ಮ ಪೋಷಕಾಂಶ ಎಂದರೆ ಅದು ಸಸ್ಯಕ್ಕೆ ಬೇಕಾಗುವುದು ತೀರಾ ಅಲ್ಪ. ಇದನ್ನು ಚಿಟಿಕೆ ಪ್ರಮಾಣದ  ಪೋಷಕ ಎನ್ನಬಹುದು.  ಇದು ಹೆಚ್ಚಾದರೆ ಸಸ್ಯಕ್ಕೆ ಅಪಾಯ. ನಿರಂತರ ಬೆಳೆಗಳನ್ನು  ಬೆಳೆಯುತ್ತಿರುವ ಹೊಲ, ಫಲವತ್ತಾಗಿಲ್ಲದ ಮಣ್ಣು  ಸಾವಯವ ವಸ್ತುಗಳಾದ ಸೊಪ್ಪು, ತರಗೆಲೆ, ಕೊಟ್ಟಿಗೆ ಗೊಬ್ಬರ ಇತ್ಯಾದಿ ಬಳಸದ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಇವು ಬೇಕಾಗುವುದು ಅತೀ ಅಲ್ಪ. ಕೊರತೆಯಾದರೇ ಆಗುವುದೂ ತುಂಬಾ ನಷ್ಟ. ಹೆಚ್ಚಾದರೆ ತೊಂದರೆ ಉಂಟಾಗುತ್ತದೆ. ಬೂದಿ ಹಾಕಿದರೆ ಒಳ್ಳೆಯದು. ಆದರೆ  ಹೆಚ್ಚು ಹಾಕಿದರೆ…

Read more
Weed less arecanut garden

ಕಳೆ ಹೆಚ್ಚು ಇದ್ದಲ್ಲಿ ಬೆಳೆ ತುಂಬಾ ಕಡಿಮೆ.

ಬಹಳ ಜನ ಬೆಳೆಗಳಿಗೆ ನೀರು ಕೊಟ್ಟಷ್ಟೂ ಒಳ್ಳೆಯದು ಎಂಬು ಭಾವಿಸುತ್ತಾರೆ. ಮಳೆಗಾಲದ ಮಳೆಗೆ ನೆಲ ಮತ್ತು ಸಸ್ಯಗಳು ಹೇಗೆ ಇರುತ್ತವೆಯೋ ಅದೇ  ರೀತಿ ಬೇಸಿಗೆಯಲ್ಲಿಯೂ ಇರುವಂತೆ ನೋಡಿಕೊಳ್ಳುತ್ತಾರೆ.  ನಮ್ಮ ಈ ವಿಧಾನದಿಂದಾಗಿ ಭೂಮಿಯಲ್ಲಿ ವರ್ಷದಿಂದ ವರ್ಷಕ್ಕೆ ಫಲವತ್ತತೆ ಕ್ಷೀಣಿಸುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ಇದು ನಮ್ಮೆಲ್ಲರ ಸಮಸ್ಯೆ: ಸಾಮಾನ್ಯವಾಗಿ ನಿರಂತರ 3-4  ವರ್ಷ ಗೊಬ್ಬರ  ಕೊಡುತ್ತಿದ್ದರೆ , ಒಂದು ವರ್ಷ ಏನೂ ಗೊಬ್ಬರ ಕೊಡದಿದ್ದರೂ ಬೆಳೆಯಲ್ಲಿ ಇಳುವರಿ ಕಡಿಮೆಯಾಗಬಾರದು. ಆದರೆ ಆಗುತ್ತದೆ. ಕಾರಣ ನಾವು ವರ್ಷ ವರ್ಷ ಕೊಡುವ…

Read more

ಅಂತರ್ಜಲ ಬಳಕೆಗೂ ಬೇಕು – ಲಾಕ್ ಡೌನ್ .

ಒಂದುವರೆ ತಿಂಗಳ ಕಾಲ ಅಂತರ್ಜಲದೊಂದಿಗಿನ  ಅತ್ಯಾಚಾರಕ್ಕೆ ಸ್ವಲ್ಪ ಬಿಡುವಾಗಿತ್ತು. ಆದರೂ ರಾತ್ರೆ ಹೊತ್ತು ಹಳ್ಳಿಯ ಮೂಲೆಗಳಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಮತ್ತೆ ಅತ್ಯಾಚಾರ ಪ್ರಾರಂಭವಾಗಿದೆ. ಹಳ್ಳಿಯ ಪೆಟ್ರೋಲ್ ಪಂಪುಗಳ ಮುಂದೆ ಮೂರು ನಾಲ್ಕು ಬೋರ್ ಲಾರಿಗಳು ಮೊಕ್ಕಾಂ ಹೂಡಿವೆ. ಒಂದು ತಿಂಗಳು ಅಂತರ್ಜಲಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಯೇ ವರ್ಷದಲ್ಲಿ 2-3 ತಿಂಗಳು ಬಿಡುವು ಕೊಟ್ಟರೆ ಅದೆಷ್ಟೋ ಅಂತರ್ಜಲ ಶೋಷಣೆ ಕಡಿಮೆಯಾಗಬಹುದು. ಅಂತರ್ಜಲದ ಕ್ಷೀಣಿಸುತ್ತಿದೆ: ನಮ್ಮಲ್ಲಿ ಒಂದಷ್ಟು ಜನ ಬೆಳೆಗಳ ಅವಶ್ಯಕತೆಗೆ  ಬೇಕಾದಷ್ಟೇ ಬಳಸಲು ಅಂತರ್ಜಲವನ್ನು ಆವಲಂಭಿಸಿಲ್ಲ. ಅದನ್ನು…

Read more
ತೆಂಗಿನ ಮರ

ತೆಂಗಿನ ತೋಟದಲ್ಲಿ ಗರಿಷ್ಟ ಆದಾಯ ಕೊಡಬಲ್ಲ ಮಿಶ್ರ ಬೆಳೆ.

ಮಿಶ್ರ ಬೆಳೆ ಬೆಳೆಸಲು ಅತೀ ಸೂಕ್ತ ವಾದ ತೋಟ ಎಂದರೆ ತೆಂಗಿನ ತೋಟ. ಇದರ ಮಧ್ಯಂತರದಲ್ಲಿರುವ ಸ್ಥಳಾವಕಾಶ ಬೇರೆ ಯಾವ ಬೆಳೆಯಲ್ಲೂ ಸಿಗದು. ಆದ ಕಾರಣ  ತೆಂಗನ್ನು ಏಕ ಬೆಳೆಯಾಗಿ  ಉಳಿಸಿಕೊಳ್ಳದೆ ಸಾಧ್ಯವಾದಷ್ಟು ಮಿಶ್ರ ಬೆಳೆಗಳನ್ನು  ಬೆಳೆಸಿರಿ. ಒಂದು ತೆಂಗಿನ ತೋಟದಲ್ಲಿ ಮರವೊಂದರಲ್ಲಿ 100 ಕಾಯಿ ಸಿಕ್ಕರೂ ಸಹ  ಒಂದು ಎಕ್ರೆಯಲ್ಲಿ ಸುಮಾರು 8000  ಕಾಯಿಗಳು. ಇದರ ಮಾರಾಟದಿಂದ ಸಿಗಬಹುದಾದ ಸರಾಸರಿ ಉತ್ಪತ್ತಿ, ಸುಮಾರು 80,000 ರೂ. ಗಳು. ಒಂದು ಎಕ್ರೆಗೆ ಇಷ್ಟು ಉತ್ಪತ್ತಿ ಸಾಕೇ?  ಖಂಡಿತವಾಗಿಯೂ …

Read more
Good yield of arecanut

ಅಡಿಕೆ – ಅಧಿಕ ಇಳುವರಿಗೆ ಹೀಗೆ ಗೊಬ್ಬರ ಕೊಡಿ.

ಬಹಳ ಜನ ಅಡಿಕೆ ಬೆಳೆಯಲ್ಲಿ ಭವಿಷ್ಯ ಕಾಣುವವರಿದ್ದಾರೆ. ಅಧಿಕ ಇಳುವರಿ ಬೇಕು, ಯಾವ ಗೊಬ್ಬರ ಕೊಡಬೇಕು ಎಂಬ ಮಾಹಿತಿಗೆ ಕಾಯುತ್ತಿದ್ದಾರೆ. ಇಂಥ ಮಾಹಿತಿ ಇಲ್ಲಿದೆ. ಒಂದು ಅಡಿಕೆ ಮರದ  ಗರಿಷ್ಟ ಉತ್ಪಾದಕತೆ  ಸುಮಾರು  ಮೂರು ಗೊನೆ. ಒಂದು ಗೊನೆಯಲ್ಲಿ ಸರಾಸರಿ 1 ಕಿಲೋ ಅಡಿಕೆ. ನಾಲ್ಕು  ಕಿಲೋ ಅಡಿಕೆ ಬರುವುದು ಅಪರೂಪ. ಸುಮಾರು 2 -3 ಕಿಲೋ ಅಡಿಕೆ ಉತ್ಪಾದನೆ ಪಡೆಯಲು  ವ್ಯವಸ್ಥಿತವಾದ  ಬೇಸಾಯ ಕ್ರಮ ಮತ್ತು ಪೋಷಕಾಂಶ ನಿರ್ವಹಣೆ ಅಗತ್ಯ. ಯಾವ ನಿರ್ವಹಣೆ: ಅಡಿಕೆ ಮರಗಳ…

Read more
coconut palm

ತೆಂಗಿನ ಸಸಿ ಬೆಳವಣಿಗೆಗೆ ಇದು ದೊಡ್ದ ತಡೆ.

 ಮುಸ್ಸಂಜೆ ಮತ್ತು ಕತ್ತಲೆಗೆ ದೀಪದ ಬೆಳಕಿಗೆ ಬಂದು ಬಿಳುವ ದುಂಬಿಗಳಲ್ಲಿ ಕುರುವಾಯಿ ಕೀಟ ಒಂದು.ಈ ದುಂಬಿ ತೆಂಗಿನ ಬೆಳೆಗಾರರ ಅತೀ ದೊಡ್ದ ಶತ್ರು.   ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು. ಯಾಕೆಂದರೆ ಕುರುವಾಯಿ ಅಷ್ಟು ಹಾನಿ ಮಾಡುತ್ತದೆ.. ಆದ ಕಾರಣ  ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು. ಬಾಧೆಯ ಲಕ್ಷಣ: ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ…

Read more

ಪೊಟ್ಯಾಶಿಯಂ ಫೋಸ್ಫೋನೇಟ್- ಶಿಲೀಂದ್ರ ರೋಗಕ್ಕೆ ರಾಮಬಾಣ.

ಪೊಟ್ಯಾಶಿಯಂ ಫೋಸ್ಫೋನೇಟ್ ಅಥವಾ ಪೊಟಾಶಿಯಂ ಸಾಲ್ಟ್ ಆಫ್ ಫೋಸ್ಫೊರಸ್ ಅಸಿಡ್, ಅಥವಾ ಫೊಟ್ಯಾಶಿಯಂ ಸಾಲ್ಟ್ ಆಫ್ ಫೊಸ್ಫೋನಿಕ್ ಅಸಿಡ್   ಇದು ನೀರಿನಲ್ಲಿ ಕರಗುವ ಒಂದು ಅಂತರ್ ವ್ಯಾಪೀ ಶಿಲೀಂದ್ರ ನಾಶಕ.  ಇದು ನೋಡಲು ಬಿಳಿ ಹರಳು ರೂಪದಲ್ಲಿರುತ್ತದೆ.  ಇದರ ಪಿಎಚ್ ಮೌಲ್ಯ 5.29  ರಷ್ಟು ಇರುತ್ತದೆ.    ಇದು ವಿಶ್ವದಾದ್ಯಂತ ಬಳಕೆಯಲ್ಲಿರುವ ಒಂದು ಪರಿಣಾಮಕಾರೀ ಅಂತರ್ ವ್ಯಾಪೀ ಶಿಲೀಂದ್ರ ನಾಶಕ. ಅಡಿಕೆ, ದ್ರಾಕ್ಷಿ, ಕಾಳುಮೆಣಸು ಬೆಳೆಗಳ ಶಿಲೀಂದ್ರ ರೋಗಕ್ಕೆ ಇದು ಪರಿಣಾಮಕಾರೀ ಎಂದು ನಮ್ಮಲ್ಲೂ ಸಾಬೀತಾಗಿದೆ. ಇದರ…

Read more

ಬಾಳೆ ಜೊತೆ ಮಿಶ್ರ ಬೆಳೆ – ಎಕ್ರೆಗೆ 5 ಲಕ್ಷದಷ್ಟು ಆದಾಯ.

ಬಾಳೆ 9-11 ತಿಂಗಳ ಬೆಳೆ. ಈ ಅವಧಿಯಲ್ಲಿ ಕೆಲವು ಲೆಕ್ಕಾಚಾರ ಹಾಕಿಕೊಂಡು ಮಿಶ್ರ  ಬೆಳೆಯನ್ನು ಬೆಳೆಸಲಿಕ್ಕಾಗುತ್ತದೆ. ಕೆಲವು ಬೆಳೆಗಳ ಜೊತೆಗೆ ಬಾಳೆ ಮಿಶ್ರ ಬೆಳೆಯೂ ಆಗುತ್ತದೆ. ಇದನ್ನು ಹಲವು ರೈತರು ಮಾಡುತ್ತಾರೆ.ಬಾಳೆ ನಾಟಿ ಮಾಡಿ 3-4 ತಿಂಗಳ ತನಕ ಮಧ್ಯಂತರದಲ್ಲಿ ಸಾಕಷ್ಟು ಬೆಳೆಕು ಇರುತ್ತದೆ. ಈ ಸಮಯದಲ್ಲಿ ಅಲ್ಪಾವಧಿ ಬೆಳೆಗಳನ್ನು ಎಡೆಯಲ್ಲಿ ಬೆಳೆಸಬಹುದು. ಕೆಲವು ಬೆಳೆಗಳನ್ನು ಮುಂಚೆಯೇ ಬೆಳೆಸಿ ಅದು ಕಠಾವಿಗೆ 3-4 ತಿಂಗಳು ಇರುವಾಗ ಬಾಳೆ ಹಾಕಿದರೆ ಅದನ್ನು ಕಠಾವು ಅಥವಾ ಒಕ್ಕಣೆ  ಮಾಡುವಾಗ ಅದರ…

Read more
error: Content is protected !!