ತೆಂಗಿನ ಸಸಿ ಬೆಳವಣಿಗೆಗೆ ಇದು ದೊಡ್ದ ತಡೆ.

by | May 3, 2020 | Coconut (ತೆಂಗು), Pest Control (ಕೀಟ ನಿಯಂತ್ರಣ) | 0 comments

 ಮುಸ್ಸಂಜೆ ಮತ್ತು ಕತ್ತಲೆಗೆ ದೀಪದ ಬೆಳಕಿಗೆ ಬಂದು ಬಿಳುವ ದುಂಬಿಗಳಲ್ಲಿ ಕುರುವಾಯಿ ಕೀಟ ಒಂದು.ಈ ದುಂಬಿ ತೆಂಗಿನ ಬೆಳೆಗಾರರ ಅತೀ ದೊಡ್ದ ಶತ್ರು.

 

 • ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು.
 • ಯಾಕೆಂದರೆ ಕುರುವಾಯಿ ಅಷ್ಟು ಹಾನಿ ಮಾಡುತ್ತದೆ..
 • ಆದ ಕಾರಣ  ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು.

Injuring beetle

ಬಾಧೆಯ ಲಕ್ಷಣ:

Normal damage of weevil

 • ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ ಭಾಗದಲ್ಲಿ ಕುಳಿತು ಎಲೆ ಮತ್ತು ಅದರ ದಂಟನ್ನು  ಕೊರೆದು ರಸ ಹೀರುತ್ತದೆ.
 • ಸುಳಿ ಕೊರೆಯುವಾಗ ಅದರ ಎಲೆಗಳಿಗೆ ಮತ್ತು ಹೂ ಗೊಂಚಲಿಗೆ ತೀವ್ರ ಹಾನಿಯಾಗುತ್ತದೆ.
 • ಎಳೆಯದಿರುವಾಗ ಕೊರೆಯಲ್ಪಟ್ಟ ಭಾಗ ಬೆಳೆದಂತೇ ಹರಿದ ಎಲೆಗಳಾಗಿ ಕಾಣಿಸುತ್ತದೆ.
 • ಹೆಚ್ಚಿನ ಸಲ ದಂಟಿನ ಭಾಗ ಕೊರೆಯಲ್ಪಟ್ಟು ಸುಳಿ ಮೇಲೆ ಬೆಳೆಯುತ್ತಿದ್ದಂತೆ ದಂಟಿನಲ್ಲಿ ಶಕ್ತಿ ಇಲ್ಲದೆ ಮುರಿದು ಬೀಳುತ್ತದೆ.
 • ಹೂ ಗೊಂಚಲಿನಲ್ಲಿ ಕೊರೆದು ಹೂಗೊಂಚಲು ಬೆಳೆಯದೆ ಅಲ್ಲೇ ಒಣಗಿ ಹೋಗುತ್ತದೆ.
 • ದೊಡ್ಡ ಮರಗಳಲ್ಲಿ ಕೀಟದ ಹಾನಿಯಿಂದ ಮರ ಸಾಯಲಾರದು.
 • ಎಳೆ ಸಸಿಗಳಾದರೆ ಸಾಯುವ ಸಾಧ್ಯತೂ  ಇದೆ.

ಎಲ್ಲಿ ಹೆಚ್ಚು :

 • ಮರವು ಸುಮಾರು 20 ಅಡಿಗಿಂತ ಎತ್ತರಕ್ಕೆ ಬೆಳೆದ ಮೇಲೆ ಇದರ ಉಪಟಳ ಕಡಿಮೆ.
 • ಎಳೆಯ ಸಸಿಗಳಿಗೆ ಹೆಚ್ಚು. ಹೆಚ್ಚು ಮೃದು ಜಾತಿಯ ತಳಿಗಳಿಗೆ ತೀವ್ರ ಉಪಟಳ.
 • ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟು ಗೊಬ್ಬರ ಬಳಕೆ ಮಾಡುವಲ್ಲಿ ಇದು ಜಾಸ್ತಿ.
 • ತೆಂಗಿನ ನಾರು ಮತ್ತು ಹುಡಿ ಬಳಕೆ ಮಾಡುವಲ್ಲಿಯೂ ಜಾಸ್ತಿ.

ಪರಿಣಾಮ:

 • ಸಸಿ/ಮರದ ಎಲೆ ಸಂಖ್ಯೆ ಕಡಿಮೆಯಾಗಿ ದ್ಯುತಿಸಂಸ್ಲೇಶಣ ಕ್ರಿಯೆ ಸಮರ್ಪಕವಾಗಿ ನಡೆಯದೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.
 • ಹೂಗೊಂಚಲು ಹಾನಿಯಾಗಿಯೂ ಇಳುವರಿ ಕ್ಷೀಣಿಸುತ್ತದೆ. ಕುರುವಾಯಿ ದುಂಬಿಯಿಂದ ತೆಂಗಿನಲ್ಲಿ 10-25 % ಇಳುವರಿ ನಷ್ಟವಾಗುತ್ತದೆ.
 • ಇದು ತೆಂಗು ಬೆಳೆಯಲಾಗುವ ಎಲ್ಲಾ ಕಡೆಗಳಲ್ಲೂ ಕಂಡು ಬರುತ್ತದೆ
 • ಕುರುವಾಯಿ ಬಾಧಿಸಿದ ಭಾಗದಲ್ಲಿ ಮರದ ಕಾಂಡದಲ್ಲಿ ಗಾಯ ಉಂಟಾಗುತ್ತದೆ.ಕೆಲವೊಮ್ಮೆ ಗಾಳಿಗೆ ಮರ ಬೀಳುವುದಿದ್ದರೆ ಈ ಭಾಗದಿಂದ.

 ಕುರುವಾಯಿ ಹೀಗಿರುತ್ತದೆ:

It suck tender tissues of plant

 • ನಮ್ಮ ಸ್ವುತ್ತಮುತ್ತ ಹಲವಾರು ಕುರುವಾಯಿಯನ್ನು ಹೋಲುವ ದುಂಬಿಗಳಿವೆ. ಎಲ್ಲವೂ ತೆಂಗಿನ ಮರಕ್ಕೆ ತೊಂದರೆ ಮಾಡುವ ದುಂಬಿಗಳಲ್ಲ.
 •  ಹಲವಾರು ಪರಾಗ ಸ್ಪರ್ಷಕ್ಕೆ ನೆರವಾಗುವ ಉಪಕಾರೀ ದುಂಬಿಗಳೂ ಇವೆ.
 • ತೆಂಗಿನ ಮರಕ್ಕೆ ಹಾನಿ ಮಾಡುವ ದುಂಬಿಯೆಂದರೆ ಕಪ್ಪು ಬಣ್ಣದ ಖಡ್ಗ ಜೀರುಂಡೆ ಮಾತ್ರ (Rhinoceros Beetle)
 • ಇದಕ್ಕೆ ತನ್ನ ಬಾಯಿಯ ಮೇಲೆ ಒಂದು ಖಡ್ಗದಂಥ ರಚನೆ ಇರುತ್ತದೆ.
 •  ಕುರುವಾಯಿಯನ್ನು ಹೋಲುವ ದುಂಬಿಗಳು ನಿಮ್ಮ ಮನೆಯ ದೀಪದ ಬೆಳಕಿಗೆ ಬರುತ್ತವೆ.
 • ಅದರಲ್ಲಿ ಖಡ್ಗ ಜೀರುಂಡಾದರೆ ಮಾತ್ರ ಕೊಲ್ಲಿ.
 • ತೆಂಗಿನ ಸಸಿಯ/ ಮರದ ಸುಳಿಗಳು ಮೂಡುವ ಭಾಗದಲ್ಲಿ ಚೀಪಿ ಹೊರ ಹಾಕಿದ ತಾಜಾ ನಾರಿನಂತ ಚೂರುಗಳಿದ್ದರೆ ಆಲ್ಲಿ ಕುರುವಾಯಿ ಕೀಟ ಇದೆ ಎಂದರ್ಥ.

 ಎಲ್ಲಿಂದ ಬರುತ್ತದೆ:

 •  ಮರದಲ್ಲಿ ಬರೇ ರಸ ಮಾತ್ರ ಹೀರುತ್ತದೆ.ಸಂತಾನಾಭಿವೃದ್ದಿಯನ್ನು ನೆಲದಲ್ಲಿ ಕಾಂಪೊಸ್ಟು  ಗೊಬ್ಬರದ ರಾಶಿಯಲ್ಲಿ ನಡೆಸುತ್ತದೆ.
 • ನಾವು ಗೊಬ್ಬರದ ರಾಶಿಯಲ್ಲಿ ಗೊಬ್ಬರದ ಹುಳುಗಳನ್ನು ಕಂಡವರು. ಇದುವೇ  ಕುರುವಾಯಿಯಾಗುವುದು.

ಹೆಣ್ಣು ದುಂಬಿ 70-100 ಮೊಟ್ಟೆ ಇಡುತ್ತದೆ. 14 ದಿನದಲ್ಲಿ ಮೊಟ್ಟೆ ಒಡೆಯುತ್ತದೆ.ಹುಳುವಾಗಿ ನಿರಂತರ ಕಳಿಯುವ ಸಾವಯವ ವಸ್ತುಗಳನ್ನು ಭಕ್ಷಿಸುತ್ತಾ 4 ತಿಂಗಳ ಕಾಲ ಬೆಳೆದು ನಂತರ ಸುಪ್ತಾವಸ್ಥೆಗೆ (ಪ್ಯೂಪೆ) ತಲುಪುತ್ತದೆ.ಇದು ಗೊಬ್ಬರದ ರಾಶಿಯಲ್ಲಿ5 ಮೀ. ನಿಂದ 1 ಮೀಟರ್ ತನಕವೂ ಇರುತ್ತದೆ.ಪ್ಯೂಪೆಯಾಗಿ ಸುಮಾರು 16-24 ದಿನಗಳ ಕಾಲ ಇರುತ್ತದೆ. ನಂತರ ಅದು ದುಂಬಿಯಾಗುತ್ತದೆ.ಹೊಸ ದುಂಬಿ ತಿಳಿ ಕಂದು ಬಣ್ಣದಲ್ಲಿರುತ್ತದೆ. 1-3 ವಾರಕಾಲ ಚಟುವಟಿಕೆಯಲ್ಲಿರದೇ, ನಂತರ ಹಾರಿ ಮರವನ್ನು ಹುಡುಕಿ ಕೊರೆಯಲಾರಂಭಿಸುತ್ತದೆ.ಒಂದು ವರ್ಷದಲ್ಲಿ ಇದು ಮೂರು ತಲೆಮಾರನ್ನು ಪೂರೈಸುತ್ತದೆ.

 • ಒಂದು ದುಂಬಿ 6 ತಿಂಗಳ ಕಾಲ ಬದುಕಿರುತ್ತದೆ.
 • ಒಂದು ಜೊತೆ ದುಂಬಿಯು 3 ವರ್ಷದಲ್ಲಿ 15 ಕೋಟಿ ಮರಿಗಳನ್ನು ಉತ್ಪಾದಿಸುತ್ತದೆ.

ಹತೋಟಿ:

This Traps will attracts the beetles

 • ಕುರುವಾಯಿ ಕೀಟದ ಸಂತಾನಾಭಿವೃದ್ದಿಯು ಕಳಿಯುತ್ತಿರುವ ಸಾವಯವ ವಸ್ತುಗಳ ರಾಶಿಯಲ್ಲಿ ನಡೆಯುವ ಕಾರಣ ಅಲ್ಲಿ ಅದರ ನಿಯಂತ್ರಣ ಸುಲಭ.
 • ಗೊಬ್ಬರದಲ್ಲಿ ಹುಳಗಳನ್ನು ಮೊಟ್ಟೆಗಳನ್ನು ನಾಶ ಮಾಡಬಹುದು. ಕಾಂಪೋಸ್ಟು ರಾಶಿಗೆ ಪ್ರತೀ 2 ತಿಂಗಳಿಗೊಮ್ಮೆ ಡೆಲ್ಟ್ರಾಮೆಥ್ರಿನ್ ಕೀಟನಾಶಕವನ್ನು ಸಿಂಪಡಿಸಬೇಕು.
 •  ಸಗಣಿ ಕಂಪೋಸ್ಟು ರಾಶಿಗಳನ್ನು ಮಾಡಿದರೆ, ಅದಕ್ಕೆ 2-3 ತಿಂಗಳಿಗೊಮ್ಮೆ ತಿರುವಿ ಕೀಟನಾಶಕ ಸಿಂಪಡಿಸಿದರೆ  ಹುಳ ಮತ್ತು ಮೊಟ್ಟೆಗಳು  ನಾಶ ವಾಗುತ್ತವೆ.
 • ಮರ/ ಸಸಿಯಲ್ಲಿಯೂ ಕೀಟವನ್ನು ಕೊಲ್ಲಬಹುದುತುದಿ ಕೊಕ್ಕೆಯಂತಿರುವ ಕಬ್ಬಿಣದ ಕಡ್ಡಿಯನ್ನು ದುಂಬಿ ತಿಂದು ಹೊರ ಹಾಕಿದ ತಾಜಾ ಚೂರುಗಳಿರುವಲ್ಲಿಗೆ ಚುಚ್ಚಿ, ತಿರುವಿ ದುಂಬಿಯನ್ನು ತೆಗೆದು ನಾಶಮಾಡಬಹುದು.
 • ಮರ/ ಸಸಿಯ ಗರಿಗಳು ಮೂಡುದ ಸುಳಿ ಭಾಗಕ್ಕೆ, ಮರಳು ಮತ್ತು ಡೇಲ್ಟ್ರಾಮೆಥ್ರಿನ್ ಸಿಂಪಡಿಸಿದರೆ ಸುಮಾರು 2 ತಿಂಗಳ ತನಕ ಅಲ್ಲಿ ದುಂಬಿ ಬರಲಾರದು.
 •  5 ಗ್ರಾಂ ಥಿಮೇಟನ್ನು ಒಂದು ಪ್ಲಾಸ್ಟಿಕ್ ಪೌಚ್ನಲ್ಲಿ ಹಾಕಿ ಬಾಯಿ ಕಟ್ಟಿ ಮಧ್ಯೆ ಒಂದೆರಡು ತೂತು ಮಾಡಿ, ಸುಳಿ ಭಾಗದಲ್ಲಿ ಗುಂಡು ಸೂಜಿಯಲ್ಲಿ ಚುಚ್ಚಿ ಇಟ್ಟರೆ, ಅದರ ವಾಸನೆಗೆ ಕೀಟ ಬರಲಾರದು.
 • ಕುರುವಾಯಿಯನ್ನು ಲಿಂಗಾಕರ್ಷಕ ಬಲೆ ಹಾಕಿ ಸಂತಾನ ಕ್ಷೀಣಿಸಬಹುದು.ಇದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ತೋಟದಲ್ಲಿ ಇಟ್ಟರೆ ಅದನ್ನು ಅರಸಿ ಗಂಡು ದುಂಬಿಗಳು ಬರುತ್ತವೆ.
 •  ಗಂಡು ದುಂಬಿ  ಸಂತತಿ ಕಡಿಮೆಯಾದರೆ ಹೆಣ್ಣು ಮೊಟ್ಟೆ ಇಡದೆ ಸಂತಾನಾಭಿವೃದ್ದಿ ಕಡಿಮೆಯಾಗುತ್ತದೆ.

ಸುಲಭ ವಿಧಾನ:

 •  ಮಣ್ಣಿನ ಮಡಿಕೆಯಲ್ಲಿ ಕೊಳೆಯುವ ವಸ್ತುಗಳನ್ನು ಹಾಕಿ(ನೆಲಕಡ್ಲೆ ಹಿಂಡಿ, ಸಗಣಿಅದರ ವಾಸನೆಗೆ ಬರುವ ದುಂಬಿಗಳು ಅದರೊಳಗೆ ಬೀಳುವಂತೆ ಮಾಡುತ್ತಾರೆ.
 • ಇದೂ ಉತ್ತಮ ವಿಧಾನವೇ ಆದರೂ ಇದಕ್ಕೆ ಉಪಕಾರೀ ದುಂಬಿಗಳೂ ಬೀಳುವುದಿದೆ.
 • ಗೊಬ್ಬರದ ಗುಂಡಿಗೆ ಇಟ್ಟಾಯಿ, ಬಸವನ ಪಾದ, ನಿರ್ಗುಂಡಿ ಸಸ್ಯವನ್ನು  ಮಿಶ್ರಣ ಮಾಡುವುದರಿಂದ ಕುರುವಾಯಿ ಕೀಟ  ಸಂತಾನಾಭಿವೃದ್ದಿಯಾಗುವುದಿಲ್ಲ
 • ಇದು ತೆಂಗು ಅಭಿವೃದ್ದಿ ಮಂಡಳಿಯವ ರ ಸಲಹೆ. ಕೆಲವು ಬ್ಯಾಕ್ಟೀರಿಯಾ, ಶಿಲೀಂದ್ರ ಹಾಗೂ ಹಕ್ಕಿಗಳು ಇದರ ನಾಶಕ್ಕೆ ನೆರವಾಗುತ್ತದೆಯಾದರೂ ಅದು ಅನುಸರಿಸಲು ಕಷ್ಟ.

ಕುರುವಾಯಿ ಕೀಟದಿಂದ ತೆಂಗನ್ನು 5 ವರ್ಷ ತನಕ ರಕ್ಷಿಸಿದರೆ ತೆಂಗಿನ ಬೆಳೆ ಕೈ ಹಿಡಿಯುತ್ತದೆ.

 
_________________________End of Article__________
Search Keywords : dumbi, kuruwai,kuruwayi ,coconut,beetel,red palm .black plam beetel, insect , coconut pronlem, leaf cut.
 
 

0 Comments

Submit a Comment

Your email address will not be published.

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

[email protected]
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!