ಅಡಿಕೆ – ಅಧಿಕ ಇಳುವರಿಗೆ ಹೀಗೆ ಗೊಬ್ಬರ ಕೊಡಿ.

Good yield of arecanut

ಬಹಳ ಜನ ಅಡಿಕೆ ಬೆಳೆಯಲ್ಲಿ ಭವಿಷ್ಯ ಕಾಣುವವರಿದ್ದಾರೆ. ಅಧಿಕ ಇಳುವರಿ ಬೇಕು, ಯಾವ ಗೊಬ್ಬರ ಕೊಡಬೇಕು ಎಂಬ ಮಾಹಿತಿಗೆ ಕಾಯುತ್ತಿದ್ದಾರೆ. ಇಂಥ ಮಾಹಿತಿ ಇಲ್ಲಿದೆ.

  • ಒಂದು ಅಡಿಕೆ ಮರದ  ಗರಿಷ್ಟ ಉತ್ಪಾದಕತೆ  ಸುಮಾರು  ಮೂರು ಗೊನೆ.
  • ಒಂದು ಗೊನೆಯಲ್ಲಿ ಸರಾಸರಿ 1 ಕಿಲೋ ಅಡಿಕೆ. ನಾಲ್ಕು  ಕಿಲೋ ಅಡಿಕೆ ಬರುವುದು ಅಪರೂಪ.
  • ಸುಮಾರು 2 -3 ಕಿಲೋ ಅಡಿಕೆ ಉತ್ಪಾದನೆ ಪಡೆಯಲು  ವ್ಯವಸ್ಥಿತವಾದ  ಬೇಸಾಯ ಕ್ರಮ ಮತ್ತು ಪೋಷಕಾಂಶ ನಿರ್ವಹಣೆ ಅಗತ್ಯ.

ಯಾವ ನಿರ್ವಹಣೆ:

nominal yield in areca tree

  • ಅಡಿಕೆ ಮರಗಳ ಬೇರುಗಳು ಮಣ್ಣಿನ ಮೇಲು ಭಾಗದಲ್ಲಿ ಪಸರಿಸಿ ಆಹಾರ (Surface  feeders) ಸಂಗ್ರಹಿಸುವಂತವುಗಳು.
  • ಇದರ ಬೇರುಗಳಿಗೆ ಆಮ್ಲಜನಕ  ಬೇಕು. ಬೇರು ಚೆನ್ನಾಗಿ  ಹಬ್ಬಿ ಆಹಾರ ಸಂಗ್ರಹಿಸಲು ಮಣ್ಣು ಸಡಿಲವಾಗಿರಬೇಕು.

ಇದೆಲ್ಲಾ ಆಗಬೇಕಿದ್ದರೆ ಒಂದು ಮರಕ್ಕೆ ಏನಿಲ್ಲವೆಂದರೂ ವರ್ಷಕ್ಕೆ ಅದರದ್ದೇ ಅದ ತ್ಯಾಜ್ಯಗಳೂ ಸೇರಿದಂತೆ ಹೊರಭಾಗದ ಮೂಲಗಳಿಂದ 10 ಕಿಲೋ ಒಣ ತೂಕದ ಸಾವಯವ ಗೊಬ್ಬರ ಒದಗಿಸಬೇಕು..ಅಡಿಕೆ ಬೇಸಾಯಕ್ಕೆ ಸೂಕ್ತ ತಾಪಮಾನ ಗರಿಷ್ಟ 35 ಡಿಗ್ರಿ ಅದಕ್ಕಿಂತ ಹೆಚ್ಚಾಗದಂತೆ ತಡೆಯಲು ಸೂಕ್ತ ಲಾಭದಾಯಕ ಮಿಶ್ರ ಬೆಳೆ ಬೆಳೆಸುವುದು ಅಗತ್ಯ.

  • ಪ್ರತೀ ಅಡಿಕೆ ಮರದ ಬೇರುಗಳಿಗೂ ಶ್ವಾಸೋಚ್ವಾಸಕ್ಕೆ ಅನುಕೂಲವಾಗುವ ಪರಿಸ್ಥಿತಿ ಇರಬೇಕು.
  • ಬೇರುಗಳು  ಸಮರ್ಪಕವಾಗಿ ಶ್ವಾಸೋಚ್ವಾಸ  ನಡೆಸುವುದರಿಂದ  ಮರದ ಆರೋಗ್ಯ ಉತ್ತಮವಾಗಿರುತ್ತದೆ.
  • ಮರಕ್ಕೆ ಶಕ್ತಿ ಸಿಗುತ್ತದೆ. ಮಳೆ ಅತಿಯಾಗಿರುವ ಕಡೆ ಅಡಿಕೆ ತೋಟಗಳಿಗೆ ಬಸಿಗಾಲುವೆ ಬೇಕು.
  • ಅಂತಹ ಖುಷ್ಕಿ ಭೂಮಿಯಾಗಿದ್ದರೆ, ಸಡಿಲ ಮಣ್ಣಿನ ಸ್ಥಿತಿ ಉಂಟಾಗುವ ಬೇಸಾಯ ಕ್ರಮ  ಬೇಕು.
  • ನೀರು ನಿಲ್ಲಲೇ ಬಾರದು.  ಸಸ್ಯಗಳು ಬಸಿಗಾಲುವೆ ಇರುವಲ್ಲಿ ತಮ್ಮ ಬೇರುಗಳ ಮೂಲಕ ಶ್ವಾಸೋಚ್ಜ್ವಾಸ ನಡೆಸುತ್ತವೆ.
  • ಬಸಿಗಾಲುವೆ ಇಲ್ಲದಿದ್ದಲ್ಲಿ ನೆಲದ ಮೇಲ್ಪಾಗದಲ್ಲಿ ಬೇರು ಪಸರಿಸಿ ಉಸಿರಾಟ ನಡೆಸುತ್ತವೆ. ಮಣ್ಣಿಗೆ ಸಾವಯವ ಮೇಲುಹಾಸಲು ( Mulching)  ಹಾಕುವುದರಿಂದ  ಇದಕ್ಕೆ ಸಾಕಷ್ಟು ಅನುಕೂಲವಾಗುತ್ತದೆ.
  • ಮಣ್ಣಿನ ಫಲವತ್ತತೆ ಹೆಚ್ಚು ಮಾಡಿಕೊಳ್ಳದೆ ಇದ್ದರೆ ಎಷ್ಟು ರಸಗೊಬ್ಬರ ಹಾಕಿದರೂ ಪ್ರಯೋಜನ ಕಡಿಮೆ.
Organic matter addition is important
ವರ್ಷ ವರ್ಷವೂ ಸಾಕಷ್ಟು ಸಾವಯವ ತ್ಯಾಜ್ಯಗಳನ್ನು ಹಾಕಲೇ ಬೇಕು.

ಪೋಷಕಾಂಶಗಳು:

  • ಒಂದು ಅಡಿಕೆ ಮರಕ್ಕೆ 100 ಗ್ರಾಂ ಸಾರಜನಕ(225 ಗ್ರಾಂ ಯೂರಿಯಾ)  ,40  ಗ್ರಾಂ ರಂಜಕ ( 250  ಗ್ರಾಂ ಶಿಲಾ ರಂಜಕ) ಮತ್ತು 140   ಗ್ರಾಂ ಪೊಟ್ಯಾಶ್ 250 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್) ಗೊಬ್ಬರ  ಕೊಡಬೇಕು ಎಂಬುದು ಶಿಫಾರಸು.
  • ಇಷ್ಟೇ ಗೊಬ್ಬರ ಕೊಟ್ಟರೆ  ಬರುವುದು,  ಮರಕ್ಕೆ ಕೇವಲ 1-2 ಗೊನೆ  ಅಡಿಕೆ ಮಾತ್ರ.
  • ಇದು ತುಂಬಾ ಫಲವತ್ತಾದ ಮಣ್ಣಿಗೆ ಸಾಕಾಗಬಹುದಾದರೂ ಫಲವತ್ತತೆ ಕಡಿಮೆ  ಇರುವ ಮಣ್ಣಿಗೆ  ಇದರ ದುಪ್ಪಟ್ಟು ಪೋಷಕಗಳು ಬೇಕಾಗುತ್ತದೆ.
Profitable inter crop is necessary for micro  climate
ಸೂಕ್ಷ್ಮ ವಾತಾವರಣಕ್ಕಾಗಿ ಲಾಭದಾಯಕ ಮಿಶ್ರ ಬೆಳೆ ಅಗತ್ಯ

ಒಂದು ಅಡಿಕೆ ಮರಕ್ಕೆ 10 ಕಿಲೋ ಒಣತೂಕದ ಅಥವಾ 30-40 ಕಿಲೋ ಹಸಿ ಗೊಬ್ಬರ  ಹಾಕಿದರೆ ಮೇಲಿನ ಪ್ರಮಾಣದ ಗೊಬ್ಬರದಲ್ಲಿ ಉತ್ತಮ ಇಳುವರಿ ಪಡೆಯಬಹುದು.

  • ಯಾವಾಗಲೂ ನಾವು  ಕೊಡುವ ಪೋಷಕಾಂಶಗಳು ವಿಭಜಿತ ಕಂತುಗಳಲ್ಲಿ ಇರಬೇಕು.
  • ಇದನ್ನು ಯಾವುದೇ ಕಾರಣಕ್ಕೆ ತಡ ಮಾಡಬಾರದು.
  • ಮಳೆಗಾಲ ಪ್ರಾರಂಭವಾಗುವಾಗ ನೆಲೆ ತೇವವಾದ ತಕ್ಷಣ  1/3  ಭಾಗ. ಈ ಸಮಯದಲ್ಲಿ  ಯೂರಿಯಾ ಗೊಬ್ಬರವನ್ನು ಕೇವಲ 50  ಗ್ರಾಮ್  ಕೊಟ್ಟರೆ ಸಾಕು.
  • ಈ ಸಮಯದಲ್ಲಿ ಮಳೆಗೆ ಸಾಕಷ್ಟು ಸಾರಜನಕ ದೊರೆಯುತ್ತದೆ. ಯೂರಿಯಾ ಹೆಚ್ಚು ಕೊಟ್ಟರೆ  ರೋಗ ಹೆಚ್ಚಾಗುತ್ತದೆ.
  • ನಂತರ ಮಳೆಗಾಲ ಮುಗಿಯುವಾಗ  ಅಕ್ಟೋಬರ್  ತಿಂಗಳು 1/3 ಭಾಗ ಕೊಡಬೇಕು. ಮಳೆಗಾಲದಲ್ಲಿ  ಉಳಿಸಿದ ಸಾರಜನಕ ಗೊಬ್ಬರವನ್ನು ಈ  ಕಂತಿನಲ್ಲಿ ಸೇರಿಸಬೇಕು.
  • ಮಾರ್ಚ್ ತಿಂಗಳಲ್ಲಿ ಒಮ್ಮೆ 1/3  ಭಾಗ ದಂತೆ ಕನಿಷ್ಟ ಮೂರು ಕಂತುಗಳಲ್ಲಿ ಗೊಬ್ಬರ  ಕೊಡಬೇಕು.

Suitable drainage is important

ಮಾರ್ಚ್ ತಿಂಗಳ ತರುವಾಯ ಪ್ರತೀ ಮರಕ್ಕೆ ಮೂರೂ ಪೋಷಕ ಉಳ್ಳ ಕಾಂಪ್ಲೆಕ್ಸ್ ಗೊಬ್ಬರವಾದ ಸುಫಲಾವನ್ನು ದ್ರವರೂಪದಲ್ಲಿ ಕೊಡಬೇಕು. ಒಂದು 200 ಲೀ. ಬ್ಯಾರಲ್ ಗೆ 10 ಕಿಲೋ ಹಾಕಿ ನೀರು ಸೇರಿಸಿ ಅದನ್ನು ಚೆನ್ನಾಗಿ ಕಲಕಿ ಮರದ  ತೇವ ಇರುವ ಭಾಗಕ್ಕೆ 1 ಲೀ. ನಂತೆ ಪ್ರತೀ 15 ದಿನಕ್ಕೊಮ್ಮೆ ಕೊಡಬೇಕು.

  • ಆಗ NPK ತಲಾ 3  ಗ್ರಾಂ ತರಹ ದೊರೆಯುತ್ತದೆ.  ಅಧಿಕ ಇಳುವರಿ ಪಡೆಯುವಾಗ ಸಹಜವಾಗಿ ಮಣ್ಣಿನ ಸೂಕ್ಷ್ಮ ಪೋಷಕಗಳು ಬರಿದಾಗುತ್ತವೆ.
  • ಅದಕ್ಕೆ ಪ್ರತೀ ಮರಕ್ಕೆ ತಿಂಗಳಿಗೆ 1  ಗ್ರಾಂ ನಂತೆ, ಸೂಕ್ಷ್ಮ ಪೋಷಕಾಂಶ ಮಿಶ್ರಣ ಮತ್ತು ಬೋರಾನ್ ಅನ್ನು ಕೊಡಬೇಕು.

ವರ್ಷಕ್ಕೆ ಒಮ್ಮೆ ಕ್ಯಾಲ್ಸಿಯಂ ಗೊಬ್ಬರವಾಗಿ ಸುಣ್ಣ 100- 200  ಗ್ರಾಂ , ಮೆಗ್ನೀಶಿಯಂ ಸಲ್ಫೇಟ್ 25-50  ಗ್ರಾಂ , ಕೊಡಲೇ ಬೇಕು. ಇದು ಮರಕ್ಕೆ ರೋಗ ನಿರೋಧಕ ಶಕ್ತಿ ಮತ್ತು ಕೋಶ ಬೆಳವಣಿಗೆಗೆ ಅಗತ್ಯ.

  • ಹನಿ ನೀರಾವರಿಯ ಮೂಲಕ ಕೊಡುವವರು ನೀರಿನಲ್ಲಿ ಕರಗುವ ಸಾಲ್ಯುಬಲ್ ಗೊಬ್ಬರ ಕೊಡಬಹುದು.
  • ಅದು ಕಷ್ಟವಾಗುವವರು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಪ್ರಮಾಣಕ್ಕನುಗುಣವಾಗಿ  ಬ್ಯಾರಲ್ ಗೆ  ನೀರು ತುಂಬಿಸಿ, ಒಂದು ನೈಲಾನ್ ಚೀಲಕ್ಕೆ  ಗೊಬ್ಬರವನ್ನು ಹಾಕಿ ನೇತಾಡುವಂತೆ ಇಟ್ಟರೆ ಅದರ ಸಾರಮಾತ್ರ ಇಳಿಯುತ್ತದೆ.
  • ಅದನ್ನು ಒಂದು ದಿನ ಇಟ್ಟರೆ ಅದು ನೀರಿನಂತೆ ಆಗುತ್ತದೆ.
  • ಅದನ್ನು ವೆಂಚುರಿಯ ಹೀರಿಕೊಳ್ಳುವ ಭಾಗಕ್ಕೆ ಮೆಶ್ ಹಾಕಿ ಕೊಡಬಹುದು.
  • ಬೇರೆ ವ್ಯವಸ್ಥೆಗಳಾದರೂ ಮೆಶ್ ಹಾಕಿ ಕೊಟ್ಟರೆ ಹನಿ ನೀರಾವರಿ ಬ್ಲಾಕ್ ಆಗುವುದಿಲ್ಲ.
  • ತಳದಲ್ಲಿ ತಂಗಿದ ಮತ್ತು ಚೀಲದಲ್ಲಿ ತಂಗಿದ ಮಡ್ ನಲ್ಲಿ ಪೋಷಕಗಳು ಇರುವುದಿಲ್ಲ. ಅದನ್ನು ಸ್ವಲ್ಪ ಕರಗಿಸಿ ತೆಂಗಿನ ಮರ ಮುಂತಾದವುಗಳಿಗೆ ಹಾಕಿ ನೀರುಣಿಸಿ.

ಧೀರ್ಘಾವಧಿ ಬೆಳೆಗಳಿಗೆ ದುಬಾರಿ ಬೆಲೆಯ ಸಾಲ್ಯುಬುಲ್ ಗೊಬ್ಬರ ಅನಿವಾರ್ಯವಲ್ಲ.

ಅಗತ್ಯವಾಗಿ ಗಮನಿಸಿ:

  • ರಾಸಾಯನಿಕ ಗೊಬ್ಬರ ಕೊಡುವಾಗ ಮಣ್ಣಿನ ಫಲವತ್ತತೆ ಕಡಿಮೆಯಾಗದಂತೆ ನೊಡಿಕೊಳ್ಳಬೇಕು.
  • ವರ್ಷಕ್ಕೊಮ್ಮೆಯಾದರೂ ಜೈವಿಕ ಎನ್ ಪಿ ಕೆ ಗೊಬ್ಬರಗಳನ್ನು ಕೊಡಿ.
  • ಸಸ್ಯಗಳ ಬೇರು ಚೆನ್ನಾಗಿ ಬೆಳೆಯಲು ಅನುಕೂಲವಾಗುವಂತೆ ತೋಟದ ಪರಿಸ್ಥಿತಿಯನ್ನು ಇಟ್ಟುಕೊಳ್ಳಿ.
  • ಆಗ ಮಾತ್ರ ಅಧಿಕ ಇಳುವರಿ ಪಡೆಯಲು ಸಾಧ್ಯ.

ಪೋಷಕಗಳ ಅಸಮತೋಲನ ಬಹಳಷ್ಟು ಬೆಳೆಗಾರರ ತೋಟದಲ್ಲಿ ಕಂಡುಬರುವ ಸಮಸ್ಯೆ.  ಸಮತೋಲನ ಪ್ರಮಾಣದಲ್ಲಿ ಪೋಷಕಗಳನ್ನು ಕೊಡುವುದು ಅತೀ ಪ್ರಾಮುಖ್ಯ.

Leave a Reply

Your email address will not be published. Required fields are marked *

error: Content is protected !!