ಈ ಮಣ್ಣು ಬೆಳೆಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಕೆ?
ಮಣ್ಣಿನ ಗುಣ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಣ್ಣಿನ ಗುಣ ಚೆನ್ನಾಗಿದ್ದರೆ ಕೃಷಿ ಲಾಭದಾಯಕವಾಗುತ್ತದೆ. ನಾವು ಬೆಳೆಯುವ ಬೆಳೆಯ ಫಸಲಿಗೆ ಗುಣಮಟ್ಟ ಬರುತ್ತದೆ. ಮಣ್ಣು ಎಂಬುದು ಶಿಲಾ ಶಿಥಿಲತೆಯಿಂದ ಆದ ವಸ್ತು. ಶಿಲೆಯಲ್ಲಿರುವ ಖನಿಜಗಳು, ಸಸ್ಯ , ಪ್ರಾಣಿಗಳ ಕಳಿಯುವಿಕೆಯಿಂದಾದ ಸಾವಯವ ವಸ್ತುಗಳು ಸೇರಿ, ಅದು ಬೇರೆ ಬೇರೆ ರೂಪಾಂತರ ಹೊಂದಿವೆ. ಒಂದೊಂದು ಕಡೆಯ ಮಣ್ಣು ಒಂದೊಂದು ರೀತಿಯಲ್ಲಿ ಇರುತ್ತವೆ. ಇದಕ್ಕೆಲ್ಲಾ ಕಾರಣ ಅಲ್ಲಿ ಆದ ಶಿಲೆ ಮತ್ತು ಅದರ ರೂಪಾಂತರ. ಕರಾವಳಿಯ ಮಣ್ಣು, ಮಲೆನಾಡಿನ ಮಣ್ಣು,…