
ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.
ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ. ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ. ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ. ಹೀಗೆ ಆದರೆ…