ವಯಸ್ಸಿನಲ್ಲಿ ಮರ – ಗಾತ್ರದಲ್ಲಿ ಗಿಡ.

by | Jan 23, 2020 | Mango(ಮಾವು) | 0 comments

ಇವು ವಯಸ್ಸಿನಲ್ಲಿ  ಮರಗಳಾದರೂ  ನೋಡಲು  ಸಸಿಗಳು. ಇದು ನಾವು ಮಾಡುವುದು. ಇದರ ಉದ್ದೇಶ ಭವಿಷ್ಯದಲ್ಲಿ ಕೃಷಿಗೆ ಎದುರಾಗಲಿರುವ  ಕಾರ್ಮಿಕರ ಕೊರತೆಗೆ ಪರಿಹಾರ.

 •  ಮರ ಸಣ್ಣದಿರಬಹುದು. ಇದಕ್ಕೆ  ನೀರು, ಗೊಬ್ಬರ, ಮತ್ತು ಇನ್ನಿತರ ನಿರ್ವಹಣೆ  ಮಾಡಿದಾಗ  ಇದರಲ್ಲಿ ದೊಡ್ದ  ಮರದಲ್ಲಿ ಪಡೆಯುವಷ್ಟೇ ಇಳುವರಿಯನ್ನು  ಪಡೆಯಬಹುದು.
 • ಇದುವೇ ಅತ್ಯಧಿಕ ಸಾಂದ್ರ ಬೇಸಾಯ ತಾಂತ್ರಿಕತೆ.

ಅಧಿಕ ಸಾಂದ್ರ ಬೆಳೆ:

 • ಸಾಂಪ್ರದಾಯಿಕವಾಗಿ ಮಾವನ್ನು 30 ಅಡಿ ಅಂತರದಲ್ಲಿ ಬೆಳೆಸುತ್ತಾರೆ. ಆಗ ಅದು ದೊಡ್ದ ಮರ
 • ಈ ಪ್ರಕಾರ  ಬೆಳೆಸಿದಾಗ ಎಕ್ರೆಗೆ  80 ಗಿಡ ಹಿಡಿಯುತ್ತದೆ.
 • ಅತ್ಯಧಿಕ  ಸಾಂದ್ರ ಬೇಸಾಯದಲ್ಲಿ 3X2, 3X3X3, 4X2  ಮೀಟರಿನ  ಅಂತರದಲ್ಲಿ ಸಸಿಗಳನ್ನು  ಬೆಳೆಸಿ ಎಕ್ರೆಗೆ 750 ಗಿಡ ಹಿಡಿಸಲಾಗುತ್ತದೆ.
 • ಮಾವಿನ ಸಸಿ ವಯಸ್ಸಿನಲ್ಲಿ ಮರವಾಗಿದ್ದರೂ ನೋಟದಲ್ಲಿ ಸಸಿಯಂತೇ ಇರುತ್ತದೆ.
 • ಪ್ರತೀ ಮರದ ಎತ್ತರ ಗರಿಷ್ಟ  6 ಅಡಿ ಮಾತ್ರ. ಮರದ ಸುತ್ತಳತೆ  ಮತ್ತೊಂದು ಮರಕ್ಕೆ ತಾಗುವಷ್ಟು ಮಾತ್ರ.

ಮರಕ್ಕೆ ಎಷ್ಟು ಪ್ರಾಯವಾದರೂ ಅದರ ಎತ್ತರ ಮತ್ತು, ಬೆಳವಣಿಗೆಯ  ಸುತ್ತಳತೆ ಇದೇ  ರೀತಿ ಇರುತ್ತದೆ. ಈ ಕ್ರಮದಲ್ಲಿ ಎಲ್ಲಾ ತಳಿಯ  ಮಾವನ್ನೂ ಬೆಳೆಸಬಹುದು. ಮುಖ್ಯವಾಗಿ ಪಾಲಿಸಬೇಕಾದ್ದು , ಬೇಸಾಯ  ಕ್ರಮಗಳನ್ನು.

 • ಈ ವಿಧಾನದ ಅನುಕೂಲತೆ ಎಂದರೆ ಮಾವಿನ ಕಾಯಿಯನ್ನು  ಕೈಯಿಂದಲೇ ಕೊಯಿಲು ಮಾಡಬಹುದು.
 • ಯಾವುದೇ ಸಿಂಪರಣೆ, ನಿರ್ವಹಣೆಗೆ  ಕಷ್ಟ ಇಲ್ಲ.

ಫ್ರೂನಿಂಗ್ ಮಾಡಿ ಆಕಾರ ಕೊಟ್ಟಿರುವುದು

 ಗುಣಮಟ್ಟ ದ ಫಸಲು:

 • ನಮ್ಮ ದೇಶದಲ್ಲಿ ಮಾವಿನ ಉತ್ಪಾದನೆ ಹೇರಳವಾಗಿದೆ. ಆದರೆ ಈ ಉತ್ಪಾದನೆಯಲ್ಲಿ ಗರಿಷ್ಟ  ಪ್ರಮಾಣದ ಕಾಯಿಗಳು ಕೊಯಿಲು ಸಮರ್ಪಕವಾಗಿಲ್ಲದೆ ಹಾಳಾಗುತ್ತದೆ.
 • ಮಾವಿನ ಮರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇಳುವರಿ ಕುಂಠಿತವಾಗುತ್ತದೆ.
 • ಇದನ್ನೆಲ್ಲಾ ತಪ್ಪಿಸಿ ನಿರ್ಧರಿತ ಇಳುವರಿ ಪಡೆಯಲು ಈ ವಿಧಾನ  ಸಹಕಾರಿಯಾಗುತ್ತದೆ.
 • ಅಧಿಕ ಸಾಂದ್ರ ವಿಧಾನದಲ್ಲಿ ಸಸ್ಯವನ್ನು ಕೊಯಿಲಿನ ನಂತರ  ಪ್ರೂನಿಂಗ್ ಮಾಡಿ ಬೆಳವಣಿಗೆ ನಿಯಂತ್ರಿಸಲಾಗುತ್ತದೆ.
 •  ಮಾವಿನ  ಕಾಯಿಯನ್ನು  ಕೊಯಿಲು ಮಾಡಲು ನುರಿತವರು ಬೇಕಾಗಿಲ್ಲ ಹೆಣ್ಣು ಆಳುಗಳೂ ಸಹ ಕೊಯಿಲು ಮಾಡಬಹುದು.
 • 100%  ಉತ್ತಮ  ಕಾಯಿ ದೊರೆಯುತ್ತದೆ.

ಕೊಯ್ಯಿಲು ಮಾಡುವಾಗ ಕೊಕ್ಕೆಗಳುನ್ನು ಬಳಸಿ ನೆಲಕ್ಕೆ ಹಾಕಿದರೆ, ಅರ್ಧಕ್ಕರ್ಧ ನೆಲಕ್ಕೆ ಬಿದ್ದು ಹಾಳಾಗುತ್ತದೆ.  ಹಣ್ಣು  ಕೊಳೆಯುತ್ತದೆ,ಅದಕ್ಕಾಗಿ  ಒತ್ತಾಯದಲ್ಲಿ ಹಾನಿಕಾರಕ ರಾಸಾಯನಿಕ ಬಳಸಿ ತಕ್ಷಣ ಹಣ್ಣು ಮಾಡಿ ಮಾರಾಟ ಮಾಡುತ್ತಾರೆ.

 • ಆದರೆ ಕೈಯಿಂದಲೇ ಇದನ್ನು ಕೊಯಿಲು ಮಾಡಿದರೆ ಈ ಸಮಸ್ಯೆ ಇರುವುದಿಲ್ಲ.
 • ಕಾಯಿ ಹಾಳಾಗುವುದಿಲ್ಲ. ರಪ್ತು ಸಹ ಮಾಡಲು ಸಾಧ್ಯ.
 • ಹುಳ( ಹಣ್ಣು ನೊಣ) ಆಗದಂತೆ ತಡೆಯಲು ಸೊಳ್ಳೆ ಪರದೆಯಂತ ಬಲೆಯನ್ನು ಹಾಕಬಹುದು.

ಮಲ್ಚಿಂಗ್ ಶೀಟು ಹಾಕಿ ಬೆಳೆ

ನಿರ್ವಹಣೆ ಸುಲಭ:

 •  ವರ್ಷವೂ ಏಕ ಪ್ರಕಾರವಾಗಿ ಇಳುವರಿ ನೀಡಲು ಹೂ ಬರಿಸಲು ಪ್ರಚೋದಕ ಬಳಕೆ ಮಾಡಬಹುದು.
 • ಸಣ್ಣ ಗಾತ್ರದ ಮರವಾದಾಗ ಈ ಉಪಚಾರ ಮಾಡುವುದಕ್ಕೆ  ಅನುಕೂಲವಾಗುತ್ತದೆ.
 • ಮಾವಿನ ಸಸಿಯನ್ನು ನೆಟ್ಟ  ಮೇಲೆ ಪ್ರತೀ ವರ್ಷ ಗೆಲ್ಲು ಸವರುವಿಕೆ ಮಾಡುತ್ತಾ, ಹಳೆ ಗೆಲ್ಲುಗಳ ಚಿಗುರುಗಳನ್ನು ಪ್ರೂನಿಂಗ್ ಮಾಡುತ್ತಾ ಹೊಸ ಆರೋಗ್ಯವಂತ ಚಿಗುರನ್ನು ಪಡೆಯಬೇಕು.
 •  ಈ ರೀತಿ ಪ್ರೂನಿಂಗ್ ಮಾಡುವುದರಿಂದ ಇಳುವರಿ ಕೊಡುವ ಉತ್ಪಾದಕ ಗೆಲ್ಲುಗಳು ಹೆಚ್ಚುತ್ತದೆ.
 • ಗಿಡ ಸಣ್ಣದಾದಷ್ಟು ನಿರ್ವಹಣೆ ಸುಲಭ. ಇದಕ್ಕೆ ಅಧಿಕ ಸಾಂದ್ರ ಬೇಸಾಯ ಹೇಳಿ ಮಾಡಿಸಿದ್ದು.

ಇತ್ತೀಚೆಗಿನ ದಿನಗಳಲ್ಲಿ ಸಂಶೋಧನಾ ಕೇಂದ್ರಗಳೂ ಅಧಿಕ ಸಾಂದ್ರ ಬೇಸಾಯಕ್ಕೆ  ಒತ್ತು ಕೊಡುತ್ತಿವೆ.  ತೋಟಗಾರಿಕಾ ಬೆಳೆಗಳ ಭವಿಷ್ಯ ಈ ತಾಂತ್ರಿಕತೆಯ ಮೇಲೆ ನಿಂತಿದೆ. ಆದರೆ ಸಮರ್ಪಕ ನಿರ್ವಹಣೆ  ಮಾಡಿದಾಗ ಮಾತ್ರ ಇದರ ಯಶಸ್ಸು ಸಾಧ್ಯ.

 ಮುಂದಿನ ದಿನಗಳಲ್ಲಿ ಕೈ ಕೆಸರು ಮಾಡಿಕೊಂಡು, ಹೊಟ್ಟೆಗೆ ಮೊಸರು ತಿನ್ನಬೇಕು ಎಂಬಷ್ಟು ಕೃಷಿ ಜಠಿಲವಾದರೆ ಹೊಸ ತಲೆಮಾರು ಖಂಡಿತಾ ಕೃಷಿ ಹೊಲದತ್ತ ತಲೆ ಹಾಕಿ ಹಾಕಲಾರರು.

ಕೃಷಿ  ಸರಳವಾಗಬೇಕು, ಆಧುನೀಕರಣ ಆಗಬೇಕು,  ಅದಕ್ಕೆ ಕೃಷಿ ವಿಧಾನದ ಮಾರ್ಪಾಡು ಅಗತ್ಯ. ಈ ನಿಟ್ಟಿನಲ್ಲಿ ಅಧಿಕ ಸಾಂದ್ರ ಬೇಸಾಯ ಉತ್ತಮ.

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!