ಅನನಾಸು ಗಾತ್ರ ದೊಡ್ದದಾಗಬೇಕೇ ಹೀಗೆ ಮಾಡಿ.
ಬಹಳ ಜನ ಅನನಾಸು ದೊಡ್ದದಾಗುವುದಕ್ಕೆ ಅದರ ಜುಟ್ಟಿಗೆ ರಾಸಾಯನಿಕ ಹಾಕಬೇಕು ಎಂದು ತಿಳಿದಿದ್ದಾರೆ. ಅದು ತಪ್ಪು. ಸರಳ ಕ್ರಮದಲ್ಲಿ ಜುಟ್ಟನ್ನು ಸಣ್ಣದು ಮಾಡಿ, ಕಾಯಿ ದೊಡ್ಡದಾಗುವಂತೆ ಮಾಡಬಹುದು. ಅನನಾಸು ಬೆಳೆದವರು ಮಾರಾಟ ಮಾಡುವಾಗ ಜುಟ್ಟು ದೊಡ್ದದಿದ್ದರೆ ಕೊಳ್ಳುವವ ಕೇಳುತ್ತಾನೆ, ಕಾಯಿಗೆಷ್ಟು ಬೆಲೆ, ಜುಟ್ಟಿಗೆಷ್ಟು ಬೆಲೆ ಎಂದು. ಜುಟ್ಟು ಸಣ್ಣದಿದ್ದರೆ ಬೆಲೆ ಹೆಚ್ಚು. ಜುಟ್ಟು ದೊಡ್ಡದಾದರೆ ಬೆಲೆ ಕಡಿಮೆ. ಜುಟ್ಟು ದೊಡ್ಡದಾಗುವುದು, ಸಣ್ಣದಾಗುವುದು ಬಿಸಿಲು ಮತ್ತು ನೆರಳಿನ ಕಾರಣದಿಂದ. ದೊಡ್ಡದಾದ ಜುಟ್ಟನ್ನು ಚಿವುಟುವ ಮೂಲಕ ಸಣ್ಣದಾಗುವಂತೆ ಮಾಡಬಹುದು. ಇದಕ್ಕೆ…