ಹಳ್ಳಿಯ ಮನೆಗಳಿಗೆಲ್ಲಾ ನುಗ್ಗಿದೆ- ‘ಕೆಲ್ಲು’ ಎಂಬ ಈ ಅನಾಹುತಕಾರಿ ದುಂಬಿ.
ಹಳ್ಳಿಗಳಲ್ಲಿ, ಹಳ್ಳಿಗೆ ತಾಗಿದ ಪಟ್ಟಣಗಳಲ್ಲಿ ಈಗ ಬೆಳಕಿನ ದೀಪವನ್ನು ಹುಡುಕಿ ಬರುವ ಹಿಂಡು ಹಿಂಡು ದುಂಬಿಗಳು (ಕೆಲ್ಲು) ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಕೆಲವು ಜನ ಇದು ಯಾವುದೋ ಮಾರಿ. ದೆವ್ವದ ಉಪಟಳ ಎಂದು ಮಾತಾಡುತ್ತಿದ್ದಾರೆ. ವಾಸ್ತವವಾಗಿ ಇದು ನಾವೇ ಮಾಡಿಕೊಂಡ ಆವಾಂತರ. ಬಹುತೇಕ ಎಲ್ಲಾ ಮನೆಗಳಲ್ಲೂ ಇದು ಇದೆ. ರಸ್ತೆ ಸಂಚರಿಸುವಾಗ ಮೈಗೆ ತಾಗಿ ಮನೆ ಮನೆಗೆ ಪ್ರಸಾರವಾಗುತ್ತಿದೆ.ಮನೆಯ ಕಿಟಕಿ ಬಾಗಿಲು ಸಂದು, ಬಟ್ಟೆ ಬರೆ, ಪುಸ್ತಕಗಳು, ಹಂಚಿನ ಛಾವಣಿಯ ರೀಪು ಪಕ್ಕಾಸುಗಳಲ್ಲಿ, ಗೊಡೆ ಸಂದುಗಳಲ್ಲಿ,…