ಸಾವಯವ- ನೈಸರ್ಗಿಕ ಕೃಷಿ

ಸಾವಯವ- ನೈಸರ್ಗಿಕ ಕೃಷಿಗೆ ಬನ್ನಿ- ಸರಕಾರಕ್ಕೆ 2.10 ಲಕ್ಷ ಕೋಟಿ ಉಳಿಸಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದ  ಭಾಷಣದಲ್ಲಿ ಕೃಷಿಕರಿಗೆ ನೀಡಿದ ಸಂದೇಶ ಸಾವಯವ – ನೈಸರ್ಗಿಕ ಕೃಷಿಗೆ ಬದಲಾಗಿ ದೇಶಕ್ಕೆ ಲಕ್ಷಾಂತರ ಕೋಟಿ ಉಳಿಸಿ ಎಂದು. ಪ್ರಧಾನಿಗಳ ಆಶಯ ಸರಿ. ದೇಶ ಈಗಾಗಲೇ ಕೃಷಿಗಾಗಿ ಬಳಕೆಮಾಡುವ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವುದಕ್ಕಾಗಿ 2.10 ಲಕ್ಷ ಕೋಟಿ ಹಣವನ್ನು ವಿದೇಶಗಳಿಗೆ ಸಂದಾಯ ಮಾಡುತ್ತದೆ. ದೇಶದಲ್ಲಿ ಬಹುಷಃ ರಸಗೊಬ್ಬರ ತಯಾರಾಗುವುದಿಲ್ಲ. ವಿದೇಶಗಳಿಂದ ಕಚ್ಚಾ  ಸಾಮಾಗ್ರಿಗಳನ್ನು ತಂದು ಇಲ್ಲಿ ಪ್ಯಾಕಿಂಗ್ ಮಾಡಿ ರೈತರಿಗೆ ಒದಗಿಸಲಾಗುತ್ತದೆ ಎನ್ನಿಸುತ್ತದೆ. ಪ್ರಧಾನ ಮಂತ್ರಿಗಳಲ್ಲ,…

Read more
ಕೃಷಿಯಲ್ಲಿ ಲಾಭವಿಲ್ಲವೇ? ಹಾಗಿದ್ದರೆ ಇದರಲ್ಲಿ ಖಾತ್ರಿಯ ಲಾಭವಿದೆ.

ಕೃಷಿಯಲ್ಲಿ ಲಾಭವಿಲ್ಲವೇ? ಇದರಲ್ಲಿ ಖಾತ್ರಿಯ ಲಾಭವಿದೆ.

ಕೃಷಿಕರಲ್ಲಿ ಹೊಲ ಇರುತ್ತದೆ.  ಬಹಳ  ಜನ ಹಿರಿಯ ಕೃಷಿಕರಿಗೆ ಕೃಷಿ ಮಾಡಿ ಲಾಭ ಮಾಡಿಕೊಳ್ಳಲು ಅಸಾಧ್ಯ ಎಂಬುದು ಮನವರಿಕೆಯಾಗಿದೆ. ಹೊಟ್ಟೆ ಬಾಯಿ ಕಟ್ಟಿ ಒಂದಷ್ಟು ಮೊತ್ತದ ಹಣವನ್ನು ತಮ್ಮ ವೃದ್ದಾಪ್ಯದ ಜೀವನಕ್ಕೆ ಬೇಕು ಎಂದು ಕೂಡಿಟ್ಟಿದ್ದರೆ ಅದನ್ನು  ಖಾತ್ರಿಯ ಲಾಭ ಇರುವ ಕಡೆ ಹೂಡಿಕೆ ಮಾಡಿ , ಠೇವಣಿ ಇತ್ಯಾದಿಗಳಿಂದ ಪಡೆಯುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಪಡೆಯಲು ಸಾದ್ಯ. ಮುಂದಿನ ದಿನಗಳಲ್ಲಿ ಏನಾಗಬಹುದು? ಈ ಯೋಚನೆ ಮಾಡಬೇಕಾದರೆ ಹಿಂದೆ ಏನೆಲ್ಲಾ ಆಗಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕಾಗುತ್ತದೆ….

Read more
ಕಿಸಾನ್ ಸಮ್ಮಾನ್ ಫಲಾನುಭವಿ ರೈತ

ರೈತರಿಂದ ಕಿಸಾನ್ ಸಮ್ಮಾನ್ ನಿಧಿ ದುರುಪಯೋಗ- ಮರುಪಾವತಿಗೆ ಆದೇಶ.

ಭಾರತ ಸರಕಾರ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಾಗಿ ಕೊಡುತ್ತಿರುವ ವಾರ್ಷಿಕ 6000 ರೂ.ಗಳಿಗೂ ನಕಲಿ ರೈತರು ನುಸುಳಿದ್ದಾರಂತೆ. ಕೇಂದ್ರ ಕೃಷಿ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್ ಇವರು ಪಾರ್ಲಿಮೆಂಟ್ ಗೆ ನೀಡಿದ ಹೇಳಿಕೆಯಂತೆ, ನಮ್ಮ ದೇಶದಲ್ಲಿ ಅರ್ಹತೆ ಇಲ್ಲದ  ಸುಮಾರು 42 ಲಕ್ಷ  ಮಂದಿ, ಸುಮಾರು 3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರಂತೆ. ಸರಕಾರ ಇದೆಲ್ಲದರ ಲೆಕ್ಕ ತೆಗೆದಿದೆ. ಮತ್ತು ಅದನ್ನು ಪಾವಾಸು ಪಡೆಯಲು ಮುಂದಾಗಿದೆ. ಸರಕಾರಕ್ಕೆ ಜನ ಮೋಸ ಮಾಡುವುದೋ ಅಥವಾ ಸರಕಾರ…

Read more
error: Content is protected !!