
ಬೆದರು ಬೊಂಬೆ – ದೃಷ್ಟಿ ಬೊಂಬೆಗಳಿಂದ ಕೃಷಿಗೆ ಲಾಭ ಏನು?
ವಿಜ್ಜಾನ ಕೆಲವೊಂದು ಆಚರಣೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯಕೀಯದಲ್ಲಿ ಅಗೋಚರ ಶಕ್ತಿಗೆ ಬೆಲೆ ಇಲ್ಲ. ಆದರೆ, ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರು ಕೊನೆಗೆ ಎಲ್ಲಾ ಭಾರವನ್ನೂ ದೇವರ ಮೇಲೆಯೇ ಹಾಕಿಕೊಳ್ಳಿ ಎಂದು ನಮ್ಮನ್ನು ಸಂತೈಸುತ್ತಾರೆ. ಹೀಗಿರುವಾಗ ನಂಬುವಂತದ್ದಲ್ಲ ಎಂದು ಯವುದನ್ನೂ ಬದಿಗಿಡುವಂತಿಲ್ಲ. ಫಲ ಕೊಡಲಿ, ಕೊಡದಿರಲಿ ನಂಬಿಕೆ ಇಟ್ಟರೆ ನಷ್ಟ ಏನೂ ಇಲ್ಲ. ಸಾಂಪ್ರದಾಯಿಕ ಬೆಳೆ ರಕ್ಷಣೆ: ರೈತರು ತಾವು ಬೆಳೆಯುವ ಬೆಳೆಯನ್ನು ರಕ್ಷಿಸಿಕೊಳ್ಳಲು ಕೆಲವು ಸಾಂಪ್ರದಾಯಿಕ ವಿಧಾನಗಳನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಇದನ್ನು ಜನಪದ ಆಚರಣೆ ಎಂದು…