ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

Remusatia vivipara ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಮರಕೆಸು ಕೆಸು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಇದು ಮಳೆ ಬಂದ ನಂತರ ಹುಟ್ಟಿಕೊಂಡು ಬೆಳೆದು ಮಳೆ ಮುಗಿಯುವಾಗ ಮರೆಯಾಗುತ್ತದೆ. ಈ ಅವಧಿಯಲ್ಲಿ ಎಲೆಗಳು ದೊಡ್ಡದಾಗಿ ಬೆಳೆಯುವ ಆಷಾಢ ಮಾಸದಲ್ಲಿ ಇದರ ಖಾದ್ಯ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.

ಮರ ಕೆಸು, ಕಾಡುಗಡ್ಡೆ ( ತುಳುವಿನಲ್ಲಿ ಮರಚೇವು, ಕೊಂಕಣಿಯಲ್ಲಿ ರುಕಾಲುಮ್,ಮಲಯಾಳಂ ಮರಚೆಂಬು, ಮರಾಠಿ ಲಾಲ್ಖಂಡ್, ಸಂಸ್ಕೃತದಲ್ಲಿ ಲಕ್ಷ್ಮಣ ) ನೆಲ ಕೆಸುವಿನ ಜಾತಿಯದ್ದೇ. ಇದು ಮರಗಳನ್ನು  ಆಶ್ರಯಿಸಿ ಬೆಳೆಯುವ ಕಾರಣ ಇದಕ್ಕೆ  ಈ ಹೆಸರು.ಇದು ಅಧಿಕ ಹ್ಯೂಮಸ್  ಸಂಗ್ರಹವಾಗಿರುವ ಮರದ ಪೊಟರೆ, ಸಂದು, ಬದನಿಕೆ ತರಹದ ಜರಿಗಿಡ ಅಂಟಿಕೊಂಡ ಅದರ ಸಂದಿಗಳಲ್ಲಿ ಇದು ಬೆಳೆಯುತ್ತದೆ. ಅಲ್ಲೇ ಬೆಳೆದು , ಅಲ್ಲೇ ಬೀಜ ಪಸರಿಸಿ ವಂಶಾಭಿವೃದ್ದಿಯಾಗುತ್ತದೆ. ಆಟಿ ತಿಂಗಳಲ್ಲಿ ಎಲೆಯಲ್ಲಿ ವಿವಿಧ ಔಷಧಿಗಳು ನಿಹಿತವಾಗಿರುತ್ತವೆ ಎಂಬುದಾಗಿ ಪ್ರತೀತಿ ಹಾಗಾಗಿ ಇದನ್ನು ಈ ತಿಂಗಲಿನಲ್ಲಿ ಒಂದೆರಡು ಬಾರಿಯಾದರೂ ಖಾದ್ಯಮಾಡಿ ಸೇವಿಸಿದರೆ ಒಳ್ಳೆಯದಂತೆ.

ಮರಕೆಸುವಿನ ಔಷಧೀಯ ಗುಣ:

  • ಹೊಟ್ಟೆಯಲ್ಲಿ ಯಾವುದಾದರೂ ನಂಜು ಉಳಿದಿದ್ದರೆ ಅದರ ನಿರ್ಮೂಲನೆ ( ತುಳುವಿನಲ್ಲಿ ಕೈಮಾಸು ಎನ್ನುತ್ತಾರೆ ) ಮರಕೆಸುವಿನ ಎಲೆಗಳನ್ನು ಆಟಿ ತಿಂಗಳಿನ ( ಆಶಾಢ ಮಾಸ ) ಆಹಾರವಾಗಿ ಬಳಸುವುದರಿಂದ ಅದು ಕರಗಿ ಹೋಗುತ್ತದೆ ಎನ್ನುತ್ತಾರೆ .
  • ನೆಲಕೆಸುವಿನಿಂದ ಮಾಡುವ ಎಲ್ಲಾ ನಮೂನೆಯ ಖಾದ್ಯಗಳನ್ನು ಇದರಿಂದ ಮಾಡಬಹುದು.
  • ಆಳವಾಗಿ ಮುಳ್ಳು ಹೊಕ್ಕು ತೆಗೆಯಲಾಗದಿದ್ದರೆ ಅಥವಾ ಮುಳ್ಳಿನ ತುದಿ ಗಾಯದಲ್ಲಿ ಉಳಿದಿದ್ದರೆ , ಮರ ಕೆಸುವಿನ ಗಡ್ಡೆ ಔಷಧಿಯಾಗಿ ಬಳಸಿ ತೆಗೆಯಲು ಸಾಧ್ಯ .
  • ಬಳಸುವ ರೀತಿ : ಮರಕೆಸುವಿನ ಗಡ್ಡೆಯನ್ನು ಶುಚಿ ಮಾಡಿ ಸುಮಾರು ಒಂದು ಸೆಂಟಿಮೀಟರು ದಪ್ಪದ ಹಲಗೆಗಳ ನ್ನಾಗಿ ಸೀಳಬೇಕು .
  • ಉದ್ದ ಎಷ್ಟಿದ್ದರೂ ಆದೀತು . ಒಂದು ಹಲಗೆಯನ್ನು ಕೆಂಡದಲ್ಲಿ ಸುಟ್ಟು ಗಾಯವನ್ನು ಮುಳ್ಳು ಹೊರ ಬರಲು ಸಹಾಯವಾಗುವಂತೆ ಬಿಡಿಸಿ.
  • ಸಹಿಸಲು ಸಾಧ್ಯವಾದಷ್ಟು ಬಿಸಿಯಿರುವ ಗಡ್ಡೆಯ ಹಲಗೆಯನ್ನು ಗಾಯದ ಮೇಲಿಟ್ಟು ಗಟ್ಟಿಯಾಗಿ ಕಟ್ಟಬೇಕು .
  • ಮರುದಿನ ಬೇಂಡೇಜು ಬಿಚ್ಚಿದಾಗ ಮುಳ್ಳು ಹೊರ ಬಂದಿರುತ್ತದೆ .
  • ಆಳದಲ್ಲಿದ್ದರೆ ಮೂರು ದಿನ ಪ್ರಯೋಗಿಸಬಹುದು .
  • ಹಿಂದಿನ ಕಾಲದಲ್ಲಿ ವೈದ್ಯರ ಅಭಾವವಿದ್ದಾಗ ಹಳ್ಳಿಗರು ಶರಣಾಗಿದ್ದ ಸುಲಭ ಆಯುರ್ವೇದ ಚಿಕಿತ್ಸೆ . ಏನೂ ಅಡ್ಡ ಪರಿಣಾಮಗಳಿಲ್ಲ .
  • ಈ ಸಸ್ಯದ ಆರೋಗ್ಯ ಗುಣದ ಬಗ್ಗೆ ಅಧ್ಯಯನಗಳು ಆಗಿಲ್ಲದಿದ್ದರೂ ಸಾಂಪ್ರದಾಯಿಕವಾಗಿ ಈ ಎಲ್ಲಾ ಅಸ್ವಾಸ್ತ್ಯಗಳಿಗೆ Inflammation and arthritis treatment, analgesic, for disinfecting the Genitourinary tract, and treatment of reddish boils ಇದು ಔಷಧಿಯಾಗಿ ಕೆಲಸ ಮಾಡುತ್ತದೆ ಎಂಬ ಉಲ್ಲೇಖ ಇದೆ.  
ಮರದ ಪೊಟರೆ, ಸಂದು, ಬದನಿಕೆ ತರಹದ ಜರಿಗಿಡ ಅಂಟಿಕೊಂಡ ಅದರ ಸಂದಿಗಳಲ್ಲಿ ಇದು ಬೆಳೆಯುತ್ತದೆ.
ಮರದ ಪೊಟರೆ, ಸಂದು, ಬದನಿಕೆ ತರಹದ ಜರಿಗಿಡ ಅಂಟಿಕೊಂಡ ಅದರ ಸಂದಿಗಳಲ್ಲಿ ಇದು ಬೆಳೆಯುತ್ತದೆ.

ಮರಕೆಸು ಅಳಿಯುತ್ತಿದೆ!

ADVT 2
ADVERTISEMENT
  • ಮರಕೆಸುವು ಹಿಂದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿತ್ತು .
  • ಈಗ ಮಲೆನಾಡಿನ ಕಾಡುಗಳಿಂದ ಕರಾವಳಿಗೆ ಬಸ್ಸುಗಳ ಮೂಲಕ ಆಮದು ಆಗುತ್ತಿದೆ!
  • ಆಟಿ ತಿಂಗಳಲ್ಲಿ ಮರಕೆಸು ಹುಡುಕಿ ಎರಡು ಮೂರು ಭಾರಿಯದರೂ ಅದರ ಅಡುಗೆ , ಪತ್ರೋಡೆ ಮಾಡುವುದು ಕರಾವಳಿಯ ಜನರ ಅಭ್ಯಾಸವಾಗಿತ್ತು .
  • ಈಗ ಮರ ಕೆಸುಗಳನ್ನು ಹುಡುಕುತ್ತಾ ಹೋದರೆ ಇಡೀ ದಿನ ಅಲೆದರೂ ಒಂದು ಸಲದ ಪತ್ರೋಡೆಗೆ ಕಷ್ಟ .
  • ಆದರೆ ಮಲೆನಾಡಿನಲ್ಲಿ ಶ್ರಿಂಗೇರಿ , ಕೊಪ್ಪ , ತೀಥಹಳ್ಳಿ , ಸಾಗರ , ಶಿರಸಿ ಮುಂತಾದ ಘಟ್ಟ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದೆ .
  • ಮರಗಳು ಹೇರಳವಾಗಿದ್ದು ತೂತಾದ , ಶಿಥಿಲವಾದ ಮರಗಳು ಇರುವಲ್ಲಿ ಅವುಗಳ ಸಂದಿನಲ್ಲಿ ಈ ಮರ ಕೆಸುವು ಬದುಕಿರುತ್ತದೆ .
  • ನೆಲದಲ್ಲೂ ಬದುಕುತ್ತದೆಯಾದರೂ ಇದಕ್ಕೆ ಮರ ಕಳಿತ ಸಾರ ಬೇಕಾಗುತ್ತದೆ ,
  • ಸಾಮಾನ್ಯವಾಗಿ ಯಾವುದಾದರೂ ಮರ ಬಿದ್ದು ಅದು ಮಣ್ಣಿನಲ್ಲಿ ಸೇರ್ಪಡೆಯಾಗು ತಿದ್ದರೆ ಅಲ್ಲಿ ಮರ ಕೆಸುವಿನ ಸಸ್ಯಗಳನ್ನು ಸಣ್ಣ ಸಸಿ ನೆಟ್ಟು ಬದುಕಿಸಬಹುದು .
  • ಅದೇ ಮರದಲ್ಲಿ ಗಡ್ಡೆಗಳಿದ್ದರೆ ಅದು ಹುಟ್ಟಿ ಬೆಳೆಯುತ್ತಿರುತ್ತದೆ .
  • ಮರಕ್ಕೆ ಜರಿ ಗಿಡದ ಬದನಿಕೆ ಬಂದಿದ್ದಲ್ಲಿ , ಗೋಳಿ ಸಸ್ಯವು ಮರಕ್ಕೆ ಅಂಟಿಕೊಂಡಿದ್ದಲ್ಲಿ ಈ ಮರಕೆಸುವಿನ ಸಸ್ಯಗಳು ಬೆಳೆಯುತ್ತವೆ .
  • ಮಳೆ ಚೆನ್ನಾಗಿ ಹಿಡಿಯುವಾಗ ಅ೦ದರೆ ಆಷಾಡ ಮಾಸದಲ್ಲಿ ಇದರ ಎಲೆಗಳು ಸ್ವಲ್ಪ ದೊಡ್ಡದಾಗಿ ಬಳಕೆಗೆ ಸೂಕ್ತವಾಗುತ್ತವೆ .
  • ಎಲೆ ಲಭ್ಯವಿದ್ದರೆ ಆಷಾಢ ಮಾಸದ ತರುವಾಯವೂ ಅಡುಗೆ ಮಾಡಬಹುದು .
  • ಬರೇ ಎಲೆ ಅಲ್ಲದೇ ಗಡ್ಡೆಯನ್ನೂ , ದ೦ಟನ್ನೂ ಅಡಿಗೆಗೆ ಬಳಕೆ ಮಾಡಲಾಗುತ್ತದೆ .
  • ಇದರ ಸಸ್ಯಾಭಿವೃದ್ಧಿಯು ಹಕ್ಕಿಗಳಿಂದ ನಡೆದಿರಹುದು .  
  • ಗಾಳಿಯ ಮೂಲಕ ಪ್ರಸಾರವಾಗುವಷ್ಟು ಸಣ್ಣದಾದ ಬೀಜಗಳು. ಹೆಚ್ಚಾಗಿ ಯಾವ ಮರದಲ್ಲಿ ಇತ್ತೋ ಅದರ ಬೇರೆ ಸಂದಿಗಳಲ್ಲಿ, ಕೆಲವೊಮ್ಮೆ ಬುಡದಲ್ಲಿ ಸಸಿಗಳು ಇರುತ್ತವೆ.
  • ಸಣ್ಣ ಗಾತ್ರದ ಗಡ್ಡೆಗಳೂ ಗಾಳಿಯ ಮೂಲಕ ಪಸರಿಸಿ ವಂಶಾಭಿವೃದ್ಧಿಯಾಗಿದೆ .
ಬೀಜ ಬಿದ್ದು ಹುಟ್ಟಿದ ಗಿಡಗಳು
ಬೀಜ ಬಿದ್ದು ಹುಟ್ಟಿದ ಗಿಡಗಳು

ಪತ್ರೋಡೆ ಎಂದರೆ, ಕೆಸುವಿನ ಎಲೆಗೆ ಬೆಳ್ಳಿಗೆ ಅಕ್ಕಿ ಬೆಲ್ಲ ಮೆಣಸು , ಹುಳಿ ಮುಂತಾದ ಸಾಂಬಾರ ಹಾಕಿ ಅರೆದ ಹಿಟ್ಟನ್ನು ತೆಳುವಾಗಿ ಲೇಪಿಸಿ ಅದನ್ನು ಎರಡು ಬದಿಗಳನ್ನು ಮೊದಲು ಮಡಚಿ ನಂತರ ಚಾಪೆಯಂತೇ ಮಡಚಿ ಅದನ್ನು ಹಬೆಯಲ್ಲಿ ಬೇಯಿಸಿ ತಿನ್ನುವ ತಿಂಡಿ

ಸಸ್ಯಾಭಿವೃದ್ದಿ:

ಮರಕೆಸುವುವಿನ ಸಸಿ
ಮರಕೆಸುವುವಿನ ಸಸಿ
  • ಮರಕೆಸು ಸಸ್ಯ ಬೆಳೆದಾಗ ತುದಿಯಲ್ಲಿ ಹೂವೂ ಆಗುತ್ತದೆ .
  • ಈ ಹೂವಿನಿಂದಾದ ಬೀಜಗಳು ಪಸರಿಸಿ ಗಾಳಿಯಲ್ಲಿ ವಂಶಾಭಿವೃದ್ಧಿಯಾಗುತ್ತದೆ .
  • ಅವ್ಯಾಹತವಾಗಿ ಇದೇ ರೀತಿ ಮರಮಟ್ಟುಗಳನ್ನು ನಾಶ ಮಾಡುತ್ತಾ ಬಂದರೆ ಇನ್ನು ಕೆಲವೇ ವರ್ಷಗಳಲ್ಲಿ ಮಳೆಕಾಡಿನಲ್ಲಿ ಕಂಡು ಬರುವ ವಿಶಿಷ್ಠ ಮರ ಕೆಸು ಅವನತಿಯಾದರೂ ಅಚ್ಚರಿ ಇಲ್ಲ .
  • ಇದು ನಮ್ಮ ಪ್ರಾದೇಶಿಕತೆಯ ಒಂದು ಅಂಗ , ಇದನ್ನು ಅಳಿಯಲು ಬಿಡಬಾರದು .
  • ಕುಂಡಗಳಲ್ಲಿ ಉತ್ತಮ ಕಳಿತ ಮರದ ತ್ಯಾಜ್ಯ ಹಾಕಿ ಅದರಲ್ಲಿ ಚೆನ್ನಾಗಿ ಬೆಳೆಸಬಹುದು.
  • ಮರಕೆಸು ಬೆಳೆದಿರುವ ಶಿಥಿಲಾವಸ್ಥೆಯ ಮರಗಳಲ್ಲಿ ಕಂಡು ಬರುವ ಸಸಿಯನ್ನು ಅವರವರ ಹೊಲದ ಶಿಥಿಲಾವಸ್ಥೆಯ ಮರ ಮಟ್ಟುಗಳ ಸಂದಿನಲ್ಲಿ ಬೆಳೆಸಬಹುದು .  
  • ತರಗೆಲೆಯ ರಾಶಿಯಲ್ಲಿ ನೆಟ್ಟರೆ ಬದುಕಿಕೊಂಡು ಇರುತ್ತದೆ.
  • ಒಟ್ಟಿನಲ್ಲಿ ಈ ವರ್ಗದ ಕೆಸುವು ಹೂಮಸ್ ಯುಕ್ತ ಮಾಧ್ಯಮದಲ್ಲಿ ಬೆಳೆಯುವ ಸಸ್ಯವಾಗಿದ್ದು ಅದನ್ನು ಒದಗಿಸಿಕೊಟ್ಟು ಬೆಳೆಸುವುದು ಸುಲಭ .
  • ಈ ಸಸ್ಯದ ಬಗ್ಗೆ ಓದುಗರಿಗೆ ಹೆಚ್ಚಿನದು ತಿಳಿದಿದ್ದರೆ ಬರೆಯಿರಿ .
ಕುಂಡದಲ್ಲಿ ಬೆಳೆಸಿದ ಸಸಿ
ಕುಂಡದಲ್ಲಿ ಬೆಳೆಸಿದ ಸಸಿ

ವೈಜ್ಞಾನಿಕ ಅಂಶಗಳು:

  • ಮರಕೆಸು ಎಂಬುದು ಋತುಮಾನದ ಆಹಾರ. ಋತುಮಾನದಲ್ಲಿ ಸಿಗುವ ಆಹಾರವಸ್ತುಗಳನ್ನು ಬಳಕೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.
  • ಕೆಸು ಹೊಟ್ಟೆಯ ಕಶ್ಮಲಗಳನ್ನು ಹೊರಹಾಕುತ್ತದೆ ಕಾರಣ ಇದರಲ್ಲಿ ಸೆಲ್ಯುಲೋಸ್  ಇರುತ್ತದೆ. 
  • ಹ್ಯೂಮಸ್ ಎಂಬ ಫಲವತ್ತಾದ ಮಾಧ್ಯಮದಲ್ಲಿ ಬೆಳೆಯುವ ಕಾರಣ ಅದರ ಸತ್ವ ಸಸ್ಯದಲ್ಲಿ ಇರುತ್ತದೆ.
  • ಹ್ಯೂಮಸ್ ಎಂಬುದು ಸಂತೃಪ್ತ ವಸ್ತುವಾಗಿದ್ದು, ಎಲ್ಲಾ ನಮೂನೆಯ ಸಸ್ಯ ಬೆಳವಣಿಗೆ ಪೊಷಕವನ್ನೂ ಹೊಂದಿರುತ್ತದೆ.
  • ಮರಕೆಸುವನ್ನು ನಮ್ಮಲ್ಲಿ ಮಾತ್ರ ಬಳಕೆ ಮಾಡುವುದಲ್ಲ.
  • ಮಹಾರಾಷ್ಟ್ರ, ಗುಜರಾತ್ , ಹಾಗೆಯೇ ಈಶಾನ್ಯ ರಾಜ್ಯಗಳಲ್ಲೂ ಬಳಕೆ ಮಾಡುತ್ತಾರೆ.
  • ಅಧಿಕ ಬೆಲೆ ಇರುವ ಕೆಸುವಾಗಿದೆ. ಇದನ್ನು ನೆಟ್ಟು ಬೆಳೆಸಿ ಕೃಷಿ ಮಾಡಬಹುದು.

ನಮ್ಮ ಹಿರಿಯರು ಆಯಾಯಾ ಋತುಮಾನಕ್ಕೆ ಅನುಗುಣವಾಗಿ ಕೆಲವು ಆಹಾರಗಳ ಬಳಕೆಯನ್ನು ತಿಳಿಸಿರುತ್ತಾರೆ. ಇದರ ಹಿಂದೆ ಕೆಲವು ವೈಜ್ಞಾನಿಕ ಅಂಶಗಳೂ ಇವೆ. ಇದನ್ನು ನಾವು ಬಿಡಬಾರದು, ನಮ್ಮ ತಲೆಮಾರಿಗೆ ಇದರ ಸಂದೇಶ ರವಾನೆಯಾಗಬೇಕು. ಅದಕ್ಕಾಗಿ ನಾವು ಇದನ್ನು ಮುಂದುವರಿಸಬೇಕು

Leave a Reply

Your email address will not be published. Required fields are marked *

error: Content is protected !!