
ಕೃಷಿ ಉತ್ಪನ್ನಗಳ ರಕ್ಷಕ- ವ್ಯಾಕ್ಯೂಮ್ ಪ್ಯಾಕಿಂಗ್.
ಹಾಳಾಗುವ ಕೃಷಿ ಉತ್ಪನ್ನಗಳನ್ನು ರಕ್ಷಿಸಲು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡಲು ವ್ಯಾಕ್ಯೂಮ್ (ನಿರ್ವಾತ) ಪ್ಯಾಕಿಂಗ್ ವ್ಯವಸ್ಥೆ ಎಂಬುದು ಅತೀ ಸೂಕ್ತ. ಇಲ್ಲಿ ದೊಡ್ಡ ಗಾತ್ರದ ಸಾಮಾನುಗಳು ಒತ್ತಲ್ಪಟ್ಟು ಹದ ಗಾತ್ರಕ್ಕೆ ಬರುತ್ತವೆ. ಸ್ವಚ್ಚತೆ ಮತ್ತು ಆರೋಗ್ಯದ ದೃಷ್ಟಿಯಿಂದ ಇದು ಅತೀ ಅಗತ್ಯ. ಮಾರುಕಟ್ಟೆಯಿಂದ ತರುವ ಬಹಳಷ್ಟು ದಿನಸಿ ಸಾಮಗ್ರಿಗಳು ಅಂಗಡಿಯಿಂದ ತಂದು ಮನೆಯಲ್ಲಿ ಎರಡು ದಿನ ಇಟ್ಟು ಮತ್ತೆ ತೂಕ ಮಾಡಿದರೆ 50-100 ಗ್ರಾಂ ಕಡಿಮೆಯೇ. ಇನ್ನು ಜೀರಿಗೆಯು ಓಮದ ವಾಸನೆಯನ್ನೂ, ಮೆಣಸು ಸಾಬೂನಿನ ವಾಸನೆಯನ್ನೂ…