
ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ.
ಈ ವರ್ಷದ ಬರಗಾಲ ಪರಿಸ್ಥಿತಿ ಹೇಳತೀರದು. ಮೇ ತಿಂಗಳು ಬಂದರೂ ಬೇಸಿಗೆ ಮಳೆ (Summer rain)ಆಗಿಲ್ಲ. ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದರೂ ಬಹಳಷ್ಟು ಕಡೆ ತುಂತುರು ಮಳೆ ಮಾತ್ರ. ಕರಾವಳಿ, ಮಲೆನಾಡು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗಿದೆ. ಜನ ಇಂದು ಮಳೆ ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಿದ್ದಾರೆ. ಮೋಡಗಳು ಬರುತ್ತವೆ, ಹಾಗೆಯೇ ಮಾಯವಾಗುತ್ತವೆ. ಹಾಗಾದರೆ ಮಳೆ ಯಾವಾಗ ಪ್ರಾರಂಭವಾಗಬಹುದು? ನವೆಂಬರ್ ತನಕ ಒಂದೊಂದು ಮಳೆಯಾಗುತ್ತಿತ್ತು. ಆ ನಂತರ ಹೋದದ್ದು ಮತ್ತೆ ಬರಲೇ ಇಲ್ಲ. ಎಲ್ಲೆಂದರಲ್ಲಿ ನೀರಿನ…