ತೆಂಗಿನಲ್ಲಿ 150 ಕ್ಕೂ ಹೆಚ್ಚು ಕಾಯಿ ಪಡೆಯಲು ಕೊಡಬೇಕಾದ ಗೊಬ್ಬರ.
ತೆಂಗಿನ ಮರಕ್ಕೆ ಈ ಪ್ರಮಾಣದಲ್ಲಿ ಗೊಬ್ಬರಗಳನ್ನು ಕೊಟ್ಟರೆ ಸರಾಸರಿ 150 ಕಾಯಿ ಇಳುವರಿ ಪಡೆಯಬಹುದು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. 100 ತೆಂಗಿನ ಮರ ಇದ್ದರೆ ಅದರಲ್ಲಿ ವಾರ್ಷಿಕ ಕನಿಷ್ಟ 10,000 ತೆಂಗಿನ ಕಾಯಿ ಆಗಬೇಕು. ಮನೆ ಹಿತ್ತಲಲ್ಲಿ ಎರಡು ಮರ ಇದ್ದರೆ ಆ ಕುಟುಂಬಕ್ಕೆ ವರ್ಷಕ್ಕೆ…