
ಸಾವಯವ ಅಂಶ ಮತ್ತು ಬೆಳೆ ಉತ್ಪಾದಕತೆ.
ಮಣ್ಣು ಕಲ್ಲು ಖನಿಜಗಳ ಶಿತಿಲತ್ವದಿಂದ ಉಂಟಾದುದು. ಮಣ್ಣಿನಲ್ಲಿ ಹುಟ್ಟಿ ಬೆಳೆದ ಸಸ್ಯ, ಪ್ರಾಣಿಗಳ ತ್ಯಾಜ್ಯಗಳು ಮಣ್ಣಿಗೆ ಸೇರಲ್ಪಟ್ಟು ಅದು ಸಾವಯವ ಅಂಶವನ್ನು ಹೆಚ್ಚಿಸುತ್ತಾ ಬಂದಿದೆ. ಸಾವಯವ ಅಂಶ ಇಲ್ಲದ ವಿನಹ ಮಣ್ಣು ಜೀವಂತಿಕೆಯಲ್ಲಿರುವುದಿಲ್ಲ….. ಏನು ಆಗಿದೆ? ಇತ್ತೀಚಿನ ದಿನಗಳಲ್ಲಿ ಅತೀಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಹಾಗೇಯೇ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅವುಗಳ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದರೂ ಅವುಗಳ ಚಟುವಟಿಕೆಗೆ ಅನುಕೂಲಕರವಾಗಿಲ್ಲ. ಇದರಿಂದಾಗಿ…