ನೀಲಗಿರಿಯ ನೆಡುತೋಪುಗಳು ಪ್ರಾರಂಭವಾಗಿ ಸುಮಾರು 150 ವರ್ಷ ಕಳೆದಿದೆ. ಈಗ ಪ್ರಾರಂಭವಾಗಿದೆ ಈ ಮರದಿಂದ ನೀರು ಬರಿದಾಗುತ್ತದೆ ಎಂದು. ನಿಜಕ್ಕೂ ನೀರು ಬರಿದಾಗುವುದು ಹೌದೇ?ಅಥವಾ ಇದು ಒಂದು ಅಪ ಪ್ರಚಾರವೇ ಸ್ವಲ್ಪ ಚರ್ಚೆ ಮಾಡೋಣ. ತಜ್ಜರ ಪ್ರಕಾರ ಇದು ಹಾಳೂ ಅಲ್ಲ- ತೀರಾ ಒಳ್ಳೆಯದೂ ಅಲ್ಲ.
ನೀಲಗಿರಿ ಮರ ಏನು:
- ನೀಲಗಿರಿ Eucalyptus ಎಂಬ ಮರ ಬಹಳ ವೇಗವಾಗಿ ಬೆಳೆಯುವ ಮರ.
- ಆಸ್ಟ್ರೇಲಿಯಾ ಮೂಲದ ಈ ಮರವನ್ನು 1790 ರಲ್ಲಿ ಕರ್ನಾಟಕದ ರಾಜ್ಯದ ನಂದಿ ಬೆಟ್ಟಗಳಲ್ಲಿ ಬೆಳೆಸಲಾಯಿತು.
- ನಂತರ 1843 ರಲ್ಲಿ ನೀಲಗಿರಿ ಬೆಟ್ಟಗಳಲ್ಲಿ ಬೆಳೆಸಲಾಯಿತು.
- 1851 ರ ತರುವಾಯ ಇದು ದೇಶದಾದ್ಯಂತ (ಪಂಜಾಬ್, ಹರ್ಯಣಾ, ತಮಿಳುನಾಡು, ಆಂದ್ರ ಪ್ರದೇಶ )ನೆಡುತೋಪು ಬೆಳೆಯಾಗಿ ಪರಿಚಯಿಸಲ್ಪಟ್ಟಿತು.
- ದೇಶದಲ್ಲಿ 500 ಸಾವಿರ ಹೆಕ್ಟೇರಿಗೂ ಹೆಚ್ಚು ಇದರ ನೆಡು ತೋಪು ಇದೆ.
- ಇದು ಒಂದು ಕೀಟ ನಾಶಕ ಗುಣದ ಸಸ್ಯ. ಇದರ ಸೊಪ್ಪು ತರಕಾರಿಗಳ ಜೊತೆ ಹಾಕಿದರೆ ತಾಜಾ ಆಗಿ ಇರುತ್ತವೆ.
ನಮ್ಮ ದೇಶದಲ್ಲಿ 170 ವಿಧದ ನೀಲಗಿರಿಯಲ್ಲಿ ತಳಿಗಳನ್ನು ಕಾಣಬಹುದು. ಇದು 2000 ಮೀ. ಎತ್ತರದ ತನಕ, 4000-400 ಮಿಲಿ ಮೀ. ತನಕ ಮಳೆ ಬರುವ ಪ್ರದೇಶಗಳಲ್ಲೆಲ್ಲಾ ಬೆಳೆಯುತ್ತದೆ.
ನೀಲಗಿರಿ ಮರಗಳು ಯವಾಗಲೂ ಹಸುರುರಾಗಿಯೇ ಇರುತ್ತವೆ. ಎಲೆ ಉದುರಿದಂತೇ ಚಿಗುರುತ್ತಲೇ ಇರುತ್ತವೆ. ವರ್ಷದ ಎಲ್ಲಾ ಋತುಮಾನಗಳಲ್ಲೂ ಬೆಳೆವಣಿಗೆಯನ್ನು ಹೊಂದುವ ಮರ. 30 ಮೀ ತನಕವೂ ಏಕ ಕಾಂಡವಾಗಿ ಬೆಳೆಯುತ್ತದೆ. ನೆರಳು ಇಲ್ಲದಿದ್ದರೂ ಎಂತಹ ಭೂಮಿಯಲ್ಲೂ ಬೆಳೆಯುತ್ತದೆ. ಮೂಲ ದೇಶಕ್ಕಿಂತಲೂ ನಮ್ಮ ದೇಶದಲ್ಲಿ ಮರಗಳು ಎತ್ತರವಾಗಿ ಬೆಳೆಯಬಲ್ಲವು.
ನೀಲಗಿರಿ ಬೆಳೆಯುವ ಪ್ರದೇಶದಲ್ಲಿ ಅಳವಾದ, ಫಲವತ್ತಾದ ನೀರು ನಿಲ್ಲದೇ ಇರುವ ಮಣ್ಣು ಇರಬೇಕು.ಭೂಮಿಯಲ್ಲಿ ತೇವಾಂಶ ಇದ್ದರೆ ಸಾಕು ಇದು ಹುಲುಸಾಗಿ ಬೆಳೆಯುತ್ತದೆ. ಇದಕ್ಕೆ ನೀರಾವರಿ ಮಾಡಿದವರಿಲ್ಲ. ನಮಲ್ಲಿ ಕೆಲವು ರೈತರು ಖಾಲಿ ಭೂಮಿಯಲ್ಲಿ, ಹೊಲದ ಬದುಗಳಲ್ಲಿ ಒಂದು ಪೂರಕ ಆದಾಯದ ಮರೆ ಬೆಳೆ ಎಂದು ಇದನ್ನು ಬೆಳೆಸುತ್ತಿದ್ದಾರೆ. ಸಾಗುವಾನಿ ಇತ್ಯಾದಿ ಮರಮಟ್ಟುಗಳಿಗಿಂತ ಉತ್ತಮ. ತಿರುಳು ಇಲ್ಲದ ಗಟ್ಟಿ ಮರ.
ಪರಿಚಯಿಸಿದ ಉದ್ದೇಶ:
- ದೇಶದ ಉರುವಲು ಅವಶ್ಯಕತೆ ನೀಗಿಸಲು ಮತ್ತು ತೋಟಗಳಾಗಿ ಮಾಡಿ ರೈತರ ಆದಾಯ ಹೆಚ್ಚಿಸಲು ಈ ಮರಗಳನ್ನು ಪರಿಚಯಿಸಲಾಯಿತು.
- ಇದನ್ನು ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಬೆಳೆಸಬಹುದು.
- ಇದು ಬರೇ ಉರುವಲು ಉದ್ದೇಶ ಮಾತ್ರವಲ್ಲದೆ ನಾಟಾ ಉದ್ದೇಶಕ್ಕೂ ಹೊಂದುವ ಮರವಾಗಿದ್ದು,ಇದಕ್ಕೆ ಸುರಿ ಬೀಳುವುದಿಲ್ಲ.
- ಇದನ್ನು ನಾಟಿ ಮಾಡಿ 4-5 ವರ್ಷದ ತರುವಾಯದಿಂದ ಕಡಿಯಲು ಪ್ರಾರಂಭಿಸಬಹುದು.
- ಅನುಕೂಲ ಇದ್ದರೆ ಧೀರ್ಘಾವಧಿಯ ತನಕ ಬೆಳೆಯಲು ಬಿಡಬಹುದು.
- ಕಡಿದ ತರುವಾಯ ಅದೇ ಬೊಡ್ಡೆಯಲ್ಲಿ ಹೊಸ ಚಿಗುರು ಬಂದು ಮತ್ತೆ ವೇಗವಾಗಿ ಬೆಳೆದು ಮರವಾಗುತ್ತದೆ.
- ಇದು ಸುಮಾರಾಗಿ ವರ್ಷದುದ್ದಕ್ಕೂ ನೆರಳನ್ನು ಕೊಡುವ ಮರ.
- ಕೆಳಭಾಗದಲ್ಲಿ ಚಿಕ್ಕ ಚಿಕ್ಕ ಪೊದೆಗಳು ಬೆಳೆಯುತ್ತವೆ.
- ಚಿಕ್ಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಕೊಡುತ್ತದೆ. ಮಣ್ಣು ಕೊಚ್ಚಣೆಯನ್ನು ತಡೆಯುತ್ತದೆ.
ಒಂದು ವೇಳೆ ನೀಲಗಿರಿ ಮರಗಳು ಇಲ್ಲದೆ ಇರುತ್ತಿದ್ದರೆ ಇಂದು ನಮ್ಮಲ್ಲಿ ಕಾಡೇ ಇರುತ್ತಿರಲಿಲ್ಲ. ಕಾರಣ ಅಷ್ಟೊಂದು ಪ್ರಮಾಣದಲ್ಲಿ ನೀಲಗಿರಿ ಮರಗಳು ಕಟ್ಟದ ನಿರ್ಮಾಣದ ಪೋಲ್ಸ್ ಗಳನ್ನೂ, ಕಟ್ಟಿಗೆ ಉರುವಲನ್ನೂ , ಬಡ ಜನರ ಮನೆಗಳಿಗೆ ನಾಟಾವನ್ನೂ ಒದಗಿಸಿವೆ.
ನೀಲಗಿರಿಯ ಬೆಗ್ಗೆ ಟೀಕೆ ಯಾಕೆ:
- ಮುಖ್ಯವಾಗಿ ಇದು ವಿದೇಶೀ ಮೂಲದ ಮರ ಮಟ್ಟು ಇದಕ್ಕಾಗಿ ಕೆಲವರು ಇದನ್ನು ಪರಿಸರಕ್ಕೆ ಹಾಳು ಎಂಬುದಾಗಿ ಹೇಳುತ್ತಾರೆ.
- ಇದು ಭೂ ಸಾರವನ್ನು ಕಬಳಿಸಿ ನಿಸ್ಸಾರಗೊಳಿಸುತ್ತದೆ ಎನ್ನುತ್ತಾರೆ.
- ಭೂ ಜಲ ನಿಕ್ಷೇಪವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ. ಅಂತರ್ಜಲ ಬರಿದು ಮಾಡುತ್ತದೆ ಎನ್ನುತ್ತಾರೆ.
- ಬೇರೆ ಸಸ್ಯ ವರ್ಗವನ್ನು ಬೆಳೆಯಲು ಬಿಡುವುದಿಲ್ಲ ಎಂಬುದೂ ಒಂದು ಟೀಕೆ.
- ವನ್ಯ ಮೃಗಗಳಿಗೆ ಮಾರಕ ಎನ್ನುತ್ತಾರೆ.
- ಭೂ ಸವಕಳಿ ಉಂಟಾಗುತ್ತದೆ ಎನ್ನುತ್ತಾರೆ.
ಅಪವಾದಗಳು ನಿಜವೇ?
- ಸಾಮಾನ್ಯವಾಗಿ ವೇಗವಾಗಿ ಬೆಳೆಯುವ ಯಾವುದೇ ಮರಗಳೂ ಅದರ ಬೆಳೆವಣಿಗೆಗೆ ಬೇಕಾಗುವ ನೀರು ಮತ್ತು ಆಹಾರಾವನ್ನು ಆ ಸ್ಥಳದಿಂದಲೇ ಬಳಕೆ ಮಾಡಿಕೊಳ್ಳಬೇಕು.
- ಈ ಸಸ್ಯವರ್ಗ ವೇಗವಾಗಿ ಬೆಳೆಯುವ ಗುಣದ್ದು. ಆಗ ಅದು ಲಭ್ಯವಿರುವ ಪೊಷಕವನ್ನು ಮತ್ತು ನೀರನ್ನು ಅಲ್ಲಿಂದಲೇ ಪಡೆಯುತ್ತವೆ.
- ಇದರ ಬೇರುಗಳು 3-7 ಅಡಿ ತನಕ ಆಳಕ್ಕೆ ಹೋಗುತ್ತದೆ. ಕವಲು ಬೇರುಗಳು 10 -15 ಅಡಿ ತನಕ ವ್ಯಾಪಿಸುತ್ತದೆ.
- ಈ ಭಾಗದಲ್ಲಿರುವ ಪೋಷಕಗಳನ್ನು ಅವು ಬಳಸಿಕೊಳ್ಳುತ್ತದೆಯೇ ವಿನಹ ಬೇರಿನವ್ಯಾಪ್ತಿಗಿಂತ ಹೊರ ಮೈಯಲ್ಲಿರುವ ನೀರನ್ನು, ಪೋಷಕವನ್ನು ಬಳಕೆ ಮಾಡಿಕೊಳ್ಳುವುದಿಲ್ಲ.
- ಅಂತರ್ ಜಲ ಬರಿದಾಗುವುದಕ್ಕೂ ನೀಲಗಿರಿಗೂ ಯಾವುದೇ ಸಂಬಂಧ ಇಲ್ಲ.
- ಅಂರ್ಜಲಮಟ್ಟ ಇರುವ ತನಕ ಇದರ ಬೇರುಗಳು ವ್ಯಾಪಿಸುವುದಿಲ್ಲ.
ಭೂಮಿಯ ಫಲವತ್ತತೆ ಇದರಿಂದ ಕಡಿಮೆಯಾಗಲಾರದು. ಇದರ ತರಗೆಲೆಯನ್ನು ಅಲ್ಲೇ ಉಳಿಸುವುದರಿಂದ ಮಣ್ಣಿನ ರಚನೆ ಉತ್ತಮವಾಗುತ್ತದೆ.
- ಮೇಲು ಜಲವನ್ನು ಇದು ಬರಿದಾಗಿಸುತ್ತದೆ ಎನ್ನುತ್ತಾರೆ. ಇದು ನಿಜವಲ್ಲ.
- ಇದು ಕಡಿಮೆ ಮಳೆಯಾಗುವ ಪ್ರದೆಶಗಳಲಿ ಬೆಳೆಯುವ ಮರಮಟ್ಟು. ಅಲ್ಲಿ ಬರುವ ಮಳೆಯೇ ಕಡಿಮೆ.
- ಮಳೆ ಬಂದಾಗ ನೆಲ ತೇವ ಆಗಿರುವ ತನಕ ಆ ನೆಲದ ನೀರಿನ ಅಂಶವನ್ನು ಬಳಕೆ ಮಾಡಿಕೊಳ್ಳುತ್ತದೆ.
- ಇದರಿಂದ ಜಲಮಟ್ಟ ಬರಿದಾಗದು.
- ಇದನ್ನು ರಬ್ಬರ್ ಮರಗಳಂತೆ ಟೇರೇಸಿಂಗ್ ಮಾಡಿ ಬೆಳೆದರೆ ಜಲಮಟ್ಟ ಏರಿಕೆಯಾಗಬಹುದು.
ದಾಂಡೇಲಿಯ ಅರಣ್ಯದಲ್ಲಿ ನೀಲಗಿರಿಯ ಜೊತೆಗೆ ಬೇರೆ ಮರಗಳೂ ಅನಾಯಾಸವಾಗಿ ಬೆಳೆದಿವೆ. ಬೆಳೆಯುತ್ತವೆ.
- ಇದು ಕಾಡು ಪ್ರಾಣಿಗಳಿಗೆ ಆಶ್ರಯ ಕೊಡುವುದಿಲ್ಲ. ಇಲ್ಲಿ ಸ್ವಾಭಾವಿಕ ಅರಣ್ಯಕ್ಕಿಂತ ಕಡಿಮೆ ಪ್ರಾಣಿಗಳು ಪಕ್ಷಿಗಳು ಇರುತ್ತವೆ. ನಿಜ.
- ಆದರೆ ಇದನ್ನು ಕಾಡು ಬೆಳೆಯಾಗಿ ಬೆಳೆಸುತ್ತಿಲ್ಲ.
- ಇದನ್ನು ಖಾಲಿ ಭೂಮಿಯಲ್ಲಿ, ಹೊಲದ ಬದುಗಳಲ್ಲಿ ಕೃಷಿ ಪೂರಕ ಆದಾಯದ ಬೆಳೆಯಾಗಿ ಬೆಳೆಯಲಾಗುತ್ತದೆ.
- ಜೇನು ನೊಣಗಳಿಗೆ ಇದರಿಂದ ಆಹಾರ ಇರುವುದಿಲ್ಲ. ಇದು ನಿಜ.
ನೀಲಗಿರಿ ಬೆಳೆ ಎಲ್ಲಾ ದೃಷ್ಟಿಯಲ್ಲೂ ಉತ್ತಮ ಎಂಬ ಅಭಿಪ್ರಾಯ ಅಲ್ಲ. ನಮ್ಮ ನೈಸರ್ಗಿಕ ಕಾಡುಗಳು ಉಳಿಯಲು ಇದು ಸಹಾಯಕ ಎಂದು ಹೇಳಬಹುದು.
ನೀಲಗಿರಿ ಮರ ಜಮೀನಿನಲ್ಲಿ ಬೆಳೆಯಲು ಅವಕಾಶ ಇದೆಯೆ ತಿಳಿಸಿ