ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾರುಕಟ್ಟೆ ವ್ಯವಸ್ಥೆಗೆ ಭಾರೀ ಸರ್ಜರಿ ಬೇಕು ಎಂದು ಮನಗಂಡ ಕೇಂದ್ರ ಸರಕಾರ ಕಿಸಾನ್ ಬಿಲ್ 2020 ನ್ನು ರಚಿಸಿ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಅಲ್ಲಿ ಅವರ ಅಂಕಿತ ಬಿದ್ದ ನಂತರ ಅದು ಜ್ಯಾರಿಗೆ ಬರಲಿದೆ. ಈ ಬಿಲ್ ಬಗ್ಗೆ ಜನ ಮನಬಂದಂತೆ ಮಾತಾಡುತ್ತಾರೆ. ಆದರೆ ಪ್ರಧಾನಿಗಳು ಅದರ ಬಗ್ಗೆ ಸ್ಪಷ್ಟಣೆಯನ್ನೂ ನೀಡಿದ್ದಾರೆ.
- ಕೃಷಿ ಕ್ಷೇತ್ರದ ಸುಧಾರಣೆಗೆ ಕೆಲವು ಕಾನೂನಾತ್ಮಕ ಬದಲಾವಣೆ ಬೇಕೇ ಬೇಕು.
- ವಾಸ್ತವವಾಗಿ ಈಗ ಇರುವ ವ್ಯವಸ್ಥೆಗಳು ಇದ್ದಂತೆ ಪರಿಹಾರಗಳನ್ನು ಕಂಡುಕೊಂಡು ರೈತರಿಗೆ ಅನುಕೂಲ ಆಗುವಂತದ್ದು ಉಳಿದುಕೊಳ್ಳುತ್ತದೆ.
- ರೈತರಿಗೆ ಅನುಕೂಲವಾಗುವಂತದ್ದನ್ನು ಆವರು ಆಯ್ಕೆ ಮಾಡಿಕೊಳ್ಳುತ್ತಾರೆ.
- ಬಿಲ್ ನಲ್ಲಿ ರೈತರಿಗೆ ಅನುಕೂಲ ಇದೆ ಎಂದು ಕಂಡರೆ ಅವರು ಸ್ವೀಕರಿಸುತ್ತಾರೆ.
- ಇಲ್ಲವಾದರೆ ಅದು ತನ್ನಷ್ಟಕ್ಕೇ ಹಳ್ಲ ಹಿಡಿಯುತ್ತದೆ.
ಕಿಸಾನ್ ಬಿಲ್ ನಲ್ಲಿ ಏನಿದೆ:
- ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020, ಮತ್ತು ರೈತರು ಬೆಳೆದ ಉತ್ಪನ್ನಕ್ಕೆ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020 –
- Farmer’s Produce Trade and Commerce (Promotion and Facilitation) Bill, 2020, and the Farmers (Empowerment and Protection) Agreement of Price Assurance and Farm Services Bill, 2020 –
ಮೊದಲ ಮಸೂದೆ:
- ಇದರಂತೆ ರೈತರಿಗೆ ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಸ್ವಾತಂತ್ರ್ಯವನ್ನು ನೀಡಲು ಪ್ರಯತ್ನಿಸುತ್ತದೆ. The first bill seeks to provide freedom to farmers to sell their produce anywhere in the country.
- ಯಾರಾದರೂ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡುವುದಿದ್ದರೆ ಅದಕ್ಕೆ ಯಾವ ಅಡ್ಡಿ ಆತಂಕ , ನಿರ್ಭಂಧಗಳು ಇರುವುದಿಲ್ಲ.
- ಈಗ ನಮ್ಮ ರೈತ ಬೆಳೆದ ಉತ್ಪಾದನೆಯನ್ನು ರಾಮನಿಂದ ಕೃಷ್ಣನಿಗೆ ಕೊಡಲು ಮಧ್ಯದಲ್ಲಿ ಒಬ್ಬ ಮಧ್ಯವರ್ತಿ ಇರುತ್ತಿದ್ದ.
- ಆ ದಾರಿಯಲ್ಲಿ ರಾಮ ಬೆಳೆದ ಆಲೂಗಡ್ಡೆ ಉತ್ಪನ್ನವು ಕೃಷ್ಣನಿಗೆ ತಲುಪುವಾಗ 6 ರೂ. ಬೆಲೆ. ರಾಮನಿಗೆ ಸಿಗುವುದು 3 ರೂ. ಮದ್ಯದವನಿಗೆ 3 ರೂ. ಲಾಭವಾಗುತ್ತದೆ.
- ಈ ಹೊಸ ಬಿಲ್ ನಂತೆ ರಾಮನೇ ಕೃಷ್ಣನಿಗೆ 4ಅಥವಾ 5 ರೂ. ಗಳಿಗೆ ಆಲೂಗಡ್ಡೆಯನ್ನು ಮಾರಬಹುದು.
- ಎಪಿಎಂಸಿ ಗೆ ಹೋಗಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.
- ಮನೆ ಮನೆಗೂ ಹೋಗಿ ಮಾರಾಟ ಮಾಡಬಹುದು. ಆನ್ ಲೈನ್ ನಲ್ಲೂ ಮಾರಾಟ ಮಾಡಬಹುದು.
- ದೇಶದ ಯಾವ ಮೂಲೆಯಲ್ಲೂ ಮಾರಾಟ ಮಾಡಬಹುದು.
- ಇದಕ್ಕೆ ಯಾವ ನಿರ್ಭಂಧವೂ ಇಲ್ಲ. ಉಳಿದ ಹೆಚ್ಚಿನ ವು ಇದೇ ರೀತಿ ಇರುತ್ತವೆ.
- ಇದು ಕಿಸಾನ್ ಬಿಲ್ ನಲ್ಲಿ ಹೇಳಿರುವುದು.
- ಮಧ್ಯವರ್ತಿಯ ಪಾತ್ರವನ್ನು ಇಲ್ಲಿಂದ ಆಫ್ ಮಾಡಲಾಗುತ್ತದೆ!.
ಎರಡನೆಯ ಮಸೂದೆ:
- ಇದರಂತೆ ಕೃಷಿಕರಾದವರು -ವ್ಯಾಪಾರ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಅಥವಾ ಕೃಷಿಕರಿಗೆ ಸೇವೆ ಒದಗಿಸಬಲ್ಲವರೊಂದಿಗೆ , ದೊಡ್ಡ ಚಿಲ್ಲರೆ ವ್ಯಾಪಾರಿಗಳೊಂದಿಗೆ ಸೇರಿಕೊಂಡು ವ್ಯಾಪಾರ ಕುದುರಿಸಬಹುದು.
- ಇದು ಕಚ್ಚಾವಸ್ತು ಮತ್ತು ಅಂತಿಮ ಉತ್ಪನ್ನದ ಜೊತೆಗೆ ಸಂಪರ್ಕ. ಅಂದರೆ ರಾಮ, ಕೃಷ್ಣ, ಅಬ್ದುಲ್ಲಾ, ಹಿಲರಿ ಎಂಬ ಕೃಷಿಕರು ಒಂದು ಆಲೂಗಡ್ಡೆ ಸಂಸ್ಕರಣೆ ಮಾಡುವ
- ಉದ್ದಿಮೆದಾರರೊಂದಿಗೆ, ರಪ್ತು ಮಾಡುವವರೊಂದಿಗೆ ಅಥವಾ ಅತೀ ದೊಡ್ದ ವ್ಯಾಪಾರಿಯೊಂದಿಗೆ, ಅಥವಾ ಚಿಲ್ಲರೆ ವ್ಯಾಪಾರಿಯೊಂದಿಗೆ
- ಒಡಂಬಡಿಕೆ ಮಾಡಿಕೊಂಡು ತಾವು ಬೆಳೆದ ಉತ್ಪನ್ನವನ್ನು ಅವರಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರಾಟ ಒಪ್ಪಂದ ಮಾಡಿಕೊಂಡು ಪೂರೈಕೆ ಮಾಡಬಹುದು.
- The second bill is aimed at setting up of a framework under which farmers will be able to engage with agri-business firms, wholesalers, exporters or large retailers for farm services.
ಈಗ ಇರುವ ವ್ಯವಸ್ಥೆಗಳಲ್ಲಿ ಬದಲಾವಣೆ ಇಲ್ಲವಂತೆ:
- ಮಧ್ಯವರ್ತಿಗಳು ಎಂಬ ವ್ಯಾಪಾರದ ಅಂಗ ವನ್ನು ಬಿಟ್ಟೇ ವ್ಯಾಪಾರ ಮಾಡಬೇಕೆಂದೇನೂ ಇಲ್ಲ.
- ಯಾರಿಗಾದರೂ ಮಧ್ಯವರ್ತಿಗಳ ಮೂಲಕವೇ ಮಾರಾಟ ಮಾಡಬೇಕೆಂದಿದ್ದರೆ ಆ ದಾರಿಯಲ್ಲಿಯೇ ಮಾರಾಟ ಮಾಡಿಕೊಳ್ಳಬಹುದು.
- ನೇರವಾಗಿ ಮಾರಾಟ ಮಾಡುವಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಇಲ್ಲದಾಗುತ್ತದೆಯೋ ? ಅದೂ ಇಲ್ಲ.
- ಅದೂ ಸಹ ಯಥಾ ಪ್ರಕಾರ ಇರುತ್ತದೆ. ಆ ದಾರಿಯ ಮೂಲಕವೇ ಮಾರಾಟ ಮಾಡುವವರು ಅದೇ ದಾರಿಯಲ್ಲಿ ಮಾರಾಟ ಮಾಡಬಹುದು.
ಇದು ಕ್ಕೃಷಿ ಸುಧಾರಣಾ ಬಿಲ್ ನಲ್ಲಿ ಇರುವ ಅಂಶ. ಇದು ಇಂದಿಂದ ನಾಳೆಗೇ ಎಲ್ಲಾ ಬದಲಾವಣೆಗಳೂ ಆಗಿ ಬಿಡುತ್ತವೆ ಎಂದು ಭಾವಿಸುವಂತಿಲ್ಲ. ಹೊಸ ಚಾಲನೆಯನ್ನು ನಡೆಸಿ ಅದರಲ್ಲಿ ಯಶಸ್ಸು ಕಂಡು ಬಂದರೆ, ಆ ದಾರಿಯಲ್ಲಿ ಹೆಚ್ಚು ಹೆಚ್ಚು ಜನ ನಡೆದಾಡಿ ಹಳೆ ದಾರಿಯಲ್ಲಿ ಕಸ ಕಡ್ಡಿ, ಬಿದ್ದು, ಹುಲ್ಲು, ಗಿಡ ಗಂಟಿಗಳು ಬೆಳೆದು ಅದು ಇಲ್ಲದಂತಾದರೂ ಅಚ್ಚರಿ ಇಲ್ಲ. ಅಥವಾ ಅದರಲ್ಲೇ ಗಮನಾರ್ಹ ಬದಲಾವಣೆ ಆಗಿ, ಅದೇ ಮುಂದುವರಿದರೂ ಅಚ್ಚರಿ ಇಲ್ಲ. ಇದು ಒಂದು ದೀರ್ಘಾವಧಿಯಲ್ಲಿ ಬದಲಾವಣೆಗೆ ಸಂಚಲನ ನೀಡುವ ಯೋಚನೆಯಾಗಿದೆ ಎಂದು ಭಾವಿಸಬಹುದು.
ಇದರ ಕೆಲವು ನ್ಯೂನತೆಗಳು ಮತ್ತು ಅಗಬೇಕಾದ ಹೆಚ್ಚುವರಿ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಲು ಅವಕಾಶವಿದೆ. ತಮ್ಮ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ.