ರೈತರು ಎಷ್ಟೇ ವ್ಯವಸ್ಥಿತವಾಗಿ ಬೆಳೆ ಬೆಳೆದರೂ ಕೆಲವು ವಾತಾವರಣ ಸಂಬಂಧಿತ ಮತ್ತು ಸಸ್ಯ ಮೂಲ ಸಂಬಂಧಿತ ರೋಗಗಳು ಫಸಲು ಕೊಡುವ ಸಮಯದಲ್ಲಿ ಹೆಚ್ಚುತ್ತವೆ. ಇದಂತದ್ದರಲ್ಲಿ ಒಂದು ಎಲೆ- ಕಾಯಿ- ಹಣ್ಣು ಕೊಳೆಯುವ ಚಿಬ್ಬು ರೋಗ. ಇದನ್ನು ಮುಂಜಾಗ್ರತೆ ವಹಿಸಿಯೇ ನಿಯಂತ್ರಣ ಮಾಡಿಕೊಳ್ಳಬೇಕು.
ರೋಗ ಲಕ್ಷಣ ಹೀಗಿರುತ್ತದೆ:
- ದ್ರಾಕ್ಷಿ ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಉಂಟಾಗಿ ಹಣ್ಣಿನ ನೋಟ ಅಸಹ್ಯವಾಗಿ ಕಾಣುವುದು ರೋಗದ ಲಕ್ಷಣ.
- ಇದಕ್ಕೆ ಅಂತ್ರಾಕ್ನೋಸ್ ರೋಗ ಎನ್ನುತ್ತಾರೆ.
- ಇದು ಕೇವಲ ಹಣ್ಣು ಆಗುವಾಗ ಬರುವುದು ಅಲ್ಲ.
- ಗಿಡಮೂಲದಿಂದಲೇ ಬರುವಂತದ್ದು. ಆಂತ್ರಾಕ್ನೋಸ್ ಎಂಬ ಆಗ್ಲ ಹೆಸರಿನ ಈ ರೋಗಕ್ಕೆ ಕನ್ನಡದಲ್ಲಿ ಚಿಬ್ಬು ರೋಗ ಎನ್ನಲಾಗುತ್ತದೆ.
- ಚಿಬ್ಬು ರೋಗ ಎಂದರೆ ಚರ್ಮ ರೋಗದ ತರಹದ್ದು.
- ಒಂದು ಚುಕ್ಕೆಯಂತೆ ಪ್ರಾರಂಭವಾಗಿ ಕೊಳೆಯುತ್ತಾ ಅಂತ್ಯವಾಗುವ ಖಾಯಿಲೆ.
- ದ್ರಾಕ್ಷಿಯ ಆಂತ್ರಾಕ್ನೋಸ್ ಕಾಯಿಲೆಗೆ ಕಾರಣವಾದ ಶಿಲೀಂದ್ರ ಕೊಲೆಟೋಟ್ರಕಂ ((colletotrichum) ಪ್ರಭೇದದ ಕೊಲೆಟ್ರೋಟ್ರೈಕಂ) gloeosporioides, colletrotrichum accutatum, colletotrichum capsisi ಶಿಲೀಂದ್ರಗಳು.
ರೋಗ ಬರುವ ಸಾಧ್ಯತೆ:
- ಚಿಗುರುವ ಹಂತದಲ್ಲಿ ಎಳೆ ಚಿಗುರು ಭಾಗಕ್ಕೆ ಬಾಧಿಸಿ ಅದರ ಬೆಳವಣಿಗೆಯನ್ನು ಕುಗ್ಗಿಸುತ್ತದೆ.
- ನರ್ಸರಿ ಹಂತದಲ್ಲಿ ಗಿಡವನ್ನೇ ಕೊಲ್ಲುತ್ತದೆ.
- ಶಿಲೀಂದ್ರ ಬೆಳೆಯಲು ಬಿಸಿ, ತಂಪು ಹಾವಾಮಾನ ಅನುಕೂಲಕರ . ಈ ಸಮಯದಲ್ಲಿ ಶಿಲೀಂದ್ರ ಗಣನೀಯ ಪ್ರಮಾಣದಲ್ಲಿ ವೃದ್ದಿಯಾಗಿ ತೊಂದರೆ ಉಂಟಾಗುತ್ತದೆ.
- ಬೇಸಿಗೆಯಲ್ಲಿ, ಚಳಿಗಾಲದ ಮಂಜು ಬೀಳುವ ಸಮಯದಲ್ಲಿಯೂ ಜಾಸ್ತಿಯಾಗುತ್ತದೆ.
- ಈ ಸಮಯದಲ್ಲಿ ಶಿಲೀಂದ್ರವು ಬೀಜಾಂಕುರಗೊಂಡು ತನ್ನ ರೋಗ ಚಕ್ರವನ್ನು ಪ್ರಾರಂಭಿಸುತ್ತದೆ.
ಯಾವಾಗ ಕಡಿಮೆ:
- ಮೂಲ ಪ್ರೂನಿಂಗ್ ಮಾಡುವಿಕೆ ಎಪ್ರೀಲ್ ಎರಡನೇ ವಾರದಿಂದ ಪ್ರಾರಂಭವಾಗುತ್ತದೆ.
- ನಂತರ 12-15 ದಿನದಲ್ಲಿ ಹೊಸ ಚಿಗುರುಗಳು ಬರಲಾರಂಭಿಸುತ್ತವೆ.
- ಈ ಸಮಯದಲ್ಲಿ ರೋಗಕಾರಕ ಶಿಲೀಂದ್ರಗಳ ಬಾಧೆ ಕಡಿಮೆ.
- 45 ರಿಂದ 50 ದಿನಗಳಲ್ಲಿ ಮತ್ತೆ (10-12 ಎಲೆ ಬಂದ ಮೇಲೆ) ಉತ್ತಮ ಚಿಗುರು ಬಳ್ಳಿ ಬರಿಸಲಿಕ್ಕಾಗಿ ಪ್ರೂನಿಂಗ್ ಮಾಡಿದಲ್ಲಿಯೂ ರೋಗ ಕಾರಕ ಶಿಲೀಂದ್ರಗಳ ಉಪಟಳ ಕಡಿಮೆ.
- ಆದರೆ ಮೇ ತಿಂಗಳಲ್ಲಿ ಪ್ರೂನಿಂಗ್ ಮಾಡಿದ ಕಡೆ ಮಳೆಗಾಲಕ್ಕೆ ಸರಿಯಾಗಿ ಎಳೆ ಚಿಗುರುಗಳು ಬರುವಂತಿದ್ದರೆ ಅಲ್ಲಿ ರೋಗ ಸಾಧ್ಯತೆ ಹೆಚ್ಚು.
- ಒಂದು ವೇಳೆ, ಮಳೆಯು ಚಿಗುರು ಮತ್ತು ಎಲೆ ಬೆಳವಣಿಗೆಯಾದ ಮೇಲೆ ಬಂದರೆ ರೋಗಕ್ಕೆ ಅದು ತಡೆದುಕೊಳ್ಳುತ್ತದೆ. ಚಿಗುರು ಮತ್ತು ಎಲೆಗಳು ಎಳೆಯದಿರುವಾಗ ಮಳೆ ಬಂದರೆ ಬಳ್ಳಿ ಹಾಗೂ ನಂತರ ಫಸಲಿಗೆ ತೊಂದರೆ ಉಂಟಾಗುತ್ತದೆ.
- ಶಿಲೀಂದ್ರ ಸೋಂಕು ತಗಲಿದಾಗ ಎಲೆಯ ಅಡಿ ಭಾಗದಲ್ಲಿ ಸಣ್ಣ ಸಣ್ಣ ಚುಕ್ಕೆಗಳು ಉಂಟಾಗಿ ಅದು ವಿಸ್ತಾರವಾಗುತ್ತಾ ಹೊಗುತ್ತದೆ. ಬಳ್ಳಿಯ ಭಾಗದಲ್ಲೂ ಸಹ ಚುಕ್ಕೆಗಳು ಉಂಟಾಗಿರುತ್ತವೆ.
- ಈ ಸಮಯದಲ್ಲಿ ಮತ್ತೂ ತೇವ ವಾತಾವರಣ ಮುಂದುವರಿದರೆ ಮತ್ತೆ ಅದು ಹೊಸ ಹೊಸ ಎಳೆ ಚಿಗುರುಗಳಿಗೆ ಪ್ರಸಾರವಾಗಲಾರಂಭಿಸುತ್ತದೆ.
- ಸಣ್ಣ ಮಳೆ ಬಂದರೂ, ಅಧಿಕ ಇಬ್ಬನಿ ಬಿದ್ದರೂ ಸಹ ರೋಗ ಶಿಲೀಂದ್ರಗಳು ಹೆಚ್ಚಾಗಿ ರೋಗ ಹೆಚ್ಚಳವಾಗುತ್ತದೆ.
- ತಿನ್ನುವ ತಳಿಗಳ ದ್ರಾಕ್ಷಿಯನ್ನು ಮೇ ಮೊದಲ ವಾರದಲ್ಲಿ ಪ್ರೂನಿಂಗ್ ಮಾಡಿದರೆ, ಆಗ ಮುಂಗಾರು ಮಳೆ ಬೇಗ ಬಂದರೆ ಸೋಂಕು ಹೆಚ್ಚುತ್ತದೆ.
- ಈ ರೋಗದ ಸಾಧ್ಯತೆಯು ಅಕ್ಟೋಬರ್ 15 ರ ನಂತರ ಪ್ರೂನಿಂಗ್ ಮಾಡಿದಲ್ಲಿ ಕಡಿಮೆ ಇರುತ್ತದೆ.
- ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ತನಕ ಮಳೆ ಬಂದರೆ ರೋಗ ಬರುವ ಸಾಧ್ಯತೆ ಹೆಚ್ಚು.
- ಕಡಿಮೆ ತಾಪಮಾನ ರೋಗ ಪ್ರಸರಕ್ಕೆ ಅನುಕೂಲಕರ.
- ನೈರುತ್ಯ ಮುಂಗಾರು, ವಾಯವ್ಯ ಮುಂಗಾರು ಮಳೆ ಬಂದರೆ ತೋಟದಲ್ಲಿ ಎಳೆಯ ಚಿಗುರುಗಳು, ಎಳೆಎಲೆಗಳು, ಹೂವುಗಳು, ಮಿಡಿ ಕಾಯಿಗಳು ಇದ್ದರೆ, (ನವೆಂಬರ್- ಡಿಸೆಂಬರ್) ರೋಗ ಬರುವ ಸಾಧ್ಯತೆ ಇರುತ್ತದೆ.
- ಹೊಸ ತೋಟಗಳಲ್ಲಿ ರೋಗಗ್ರಸ್ತ ನೆಡು ಸಾಮಾಗ್ರಿಯನ್ನು ಬಳಕೆ ಮಾಡಿದರೆ ಯಾವಾಗಲೂ ರೋಗ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.
- ಉತ್ತಮ ಮೂಲದಿಂದ ನೆಡು ಸಾಮಾಗ್ರಿ ಆಯ್ಕೆ ಮಾಡಬೇಕು.
- ಸಸ್ಯ ಮೂಲದ ಒಂದೆರಡು ತುಂಡುಗಳಲ್ಲಿ ಅಂತ್ರಾಕ್ನೋಸ್ನ ಶಿಲೀಂದ್ರ ಸೋಂಕು ಇದ್ದರೂ ಸಹ ರೋಗ ಬರುವ ಸಾಧ್ಯತೆ ಇದೆ.
- ಆಗಸ್ಟ್ ಸಪ್ಟೆಂಬರ್ ತಿಂಗಳುಗಳಲ್ಲಿ ಬೇರು ಮೂಲದ ಸಸಿಗೆ ಹೊಲದಲ್ಲೇ ಕಸಿ ಕಟ್ಟಿ ಹೊಸ ಬಳ್ಳಿ ಮಾಡುವಲ್ಲಿ
- ಅಂದರೆ ಅಕ್ಟೋಬರ್ ತಿಂಗಳಲ್ಲಿ, ಮಳೆ ಬಂದರೆ ರೋಗ ಬರುವ ಸಾಧ್ಯತೆ ಹೆಚ್ಚು.
- ಇದರಿಂದ ಹೊಸ ಚಿಗುರುಗಳೇ ಸಾಯಬಹುದು. 20 ಗಂಟೆಗೂ ಹೆಚ್ಚಿನ ಸಮಯ ತೇವಾಂಶವುಳ್ಳ ವಾತಾವರಣ ಇದ್ದರೆ ಈ ಶಿಲೀಂದ್ರದ ಬೀಜಾಣುಗಳು ಮೊಳೆತು ಸಂಖ್ಯಾಭಿವೃದ್ದಿಯಾಗುತ್ತದೆ.
ಆಂತ್ರಾಕ್ನೋಸ್ ಜೊತೆಗೆ ಡೌನೀಮಿಲ್ಡಿವ್, ಪೌಡ್ರೀ ಮಿಲ್ಡಿವ್, ಸಹ ಬರುತ್ತದೆ. ಇವು ಮೂರು ದ್ರಾಕ್ಷಿಯ ಪ್ರಮುಖ ರೋಗಗಳಾಗಿವೆ. ಇವು ಜಾಸ್ತಿಯಾಗಲು ಬಿಸಿ, ತಂಪು, ಆರ್ದ್ರ, ವಾತಾವರಣ ಅನುಕೂಲಕರ.
ದ್ರಾಕ್ಷಿಗೆ ಈ ರೋಗ ಹವಾಮಾನ ಆಧಾರಿತವಾಗಿ ಬರುವ ಕಾರಣ ಮುನ್ಸೂಚನೆ ದೊರೆಯುತ್ತದೆ. ನಿಯಂತ್ರಣಕ್ಕೆ ಇದು ಅನುಕೂಲವಾಗುತ್ತದೆ.
ಮುಂದೆ ನಿರೀಕ್ಷಿಸಿರಿ: ಚಿಬ್ಬು ರೋಗ ನಿಯಂತ್ರಣ ರಸಾಯನಿಕ ವಿಧಾನ, ಜೈವಿಕ ವಿಧಾನಗಳು.