ಚಳಿಗಾಲದ ಮೊದಲ ಹಣ್ಣು ಎಂದರೆ ಸೀತಾಫಲ. ಮಳೆಗಾಲ ಕಳೆದ ತಕ್ಷಣ ಈ ಹಣ್ಣು ಮಾರುಕಟ್ಟೆಯಲ್ಲಿ ಹಾಜರ್. ಎಂತಹ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಧಿಕಾ ನಾರಿನ ಅಂಶ ಉಳ್ಳ ಈ ಹಣ್ಣನ್ನು ಸೀಸನ್ ನಲ್ಲಿ ತಿನ್ನುವುದರಿಂದ ಆರೋಗ್ಯ ಬಹಳ ಒಳ್ಳೆಯದು. ಇದನ್ನು ಬರಗಾಲದ ನಾಡಿನಲ್ಲಿ ಬೆಳೆಯುವ ಹಣ್ಣು ಎನ್ನುತ್ತಾರೆ.
ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ ತುಂಬಾ ಕಡಿಮೆ ಇರುವ ಕಾರಣ ಬಳಕೆದಾರರಿಗೆ ಬೇಕಾದಂತೆ ಲಭ್ಯವಾಗದ ಸ್ಥಿತಿ ಇದೆ. ಸೇಬಿಗಿಂತಲೂ ಹೆಚ್ಚು ಬೆಲೆ ಇರುವ ಹಣ್ಣು.
- ಸೀತಾಫಲದ ಹಣ್ಣು ಸಿಹಿ ರುಚಿ ಮತ್ತು ಮತ್ತು ಅದಕ್ಕೆ ವಿಶಿಷ್ಟ ಸುವಾಸನೆ ಸಹ ಇದೆ.
- ಈ ಹಣ್ಣಿನ ಪ್ರಭೇಧದಲ್ಲಿ ರಾಮ ಫಲ ಹನುಮಫಲ ಎಂಬೆಲ್ಲಾ ವಿಧಗಳಿದ್ದು, ರಾಮಫಲAnnona reticulata ಸಹ ಉತ್ತಮ ಹಣ್ಣೇ ಆಗಿದ್ದರೂ ಅದರ ಹಣ್ಣಿನ ತಿರುಳು ಬೀಜಕ್ಕೆ ಅಂಟಿಕೊಂಡಿರುತ್ತದೆ.
- ಇದಕ್ಕೂ ಸುಮಾರು 200 -250 ರೂ. ತನಕ ಬೆಲೆ ಇದೆ.
- ಹನುಮ ಫಲ ಸ್ವಲ್ಪ ಹುಳಿ. ಔಷಧೀಯ ಬಳಕೆಗೆ ಮಾತ್ರ ಬಳಕೆ.
- ಇದು Annona squamosa ಕುಟುಂಬಕ್ಕೆ ಸೇರಿದ ಸಸ್ಯ ವರ್ಗ.
ಎಲ್ಲಿ ಬೆಳೆಯಬಹುದು?
- ಸೀತಾಫಲ ವನ್ನು ಅಂಗ್ಲ ಭಾಷೆಯಲ್ಲಿ cluserd appale ಎನ್ನುತ್ತಾರೆ.
- ಒಣ ಭೂಮಿಯಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
- ಮಹಾರಾಷ್ಟ್ರ , ರಾಜಸ್ಥಾನ ಆಂದ್ರ ಪ್ರದೇಶ, ತೆಲಂಗಾಣ, ಗುಜರಾತ್ ಮಧ್ಯ ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚು.
- ಕರ್ನಾಟಕದಲ್ಲಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಾಕಷ್ಟು ಬೇಸಾಯ ಇದೆ.
- ಇದನ್ನು ತೋಟ ಮಾಡಿಯೂ ಬೆಳೆಸಬಹುದು, ಬದುಗಳ ಸಸ್ಯವಾಗಿಯೂ ಬೆಳೆಸಬಹುದು.
- ಒಂದು ಗಿಡದಲ್ಲಿ ಸುಮಾರು 1500 ರೂ. ತನಕ ಉತ್ಪತ್ತಿ ಮಾರುಕಟ್ಟೆಗೆ ಮಾರಾಟ ಮಾಡಿದಾಗ ಪಡೆಯಬಹುದು.
- ಆನ್ ಲೈನ್ ಅಥವಾ ನೇರ ಮಾರುಕಟ್ಟೆ ಮಾಡಿದಾಗ ಹೆಚ್ಚು ಸಿಗುತ್ತದೆ.
- ಆಮೆಝಾನ್ ಮಾರುಕಟ್ಟೆಯಲ್ಲಿ ಕಿಲೋ ಹಣ್ಣಿಗೆ 250 ರೂ ತನಕ ಬೆಲೆ ಇದೆ.
ತಳಿಗಳು:
- ಇದರಲ್ಲಿ ಅರ್ಕಾ ಸುಹಾನ್ ಎಂಬ ಹಬ್ರೀಡ್ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇವರು ಬಿಡುಗಡೆ ಮಾಡಿದ್ದಾರೆ.
- ಇದರಲ್ಲಿ 1 ಕಿಲೋ ಗೂ ಹೆಚ್ಚು ತೂಕದ ಹಣ್ಣು ಬರುತ್ತದೆ.
- ಇದು ಶುದ್ಧ ಸಿತಾಫಲ ಅಲ್ಲ.75 % ಸೀತಾ ಫಲ ಮತ್ತು 25 % ಚೆರಿಮೋಯೋ ಇದೆ.
- ಇದು ದೇಶದಲ್ಲೇ ಅತ್ಯುತ್ಕೃಷ್ಟ ಹಣ್ಣು ಎಂದು ಗುರುತಿಸಲ್ಪಟ್ಟಿದೆ, ಮಹಾರಾಷ್ಟ್ರದಲ್ಲಿ ಸೂಪರ್ ಗೋಲ್ದ್ , ಹನುಮಾನ್ , ಸರಸ್ವತಿ ಸಿತಾಫಲ್ ಎನ್ ಎಂ ಕೆ ಗೋಲ್ಡನ್ ಎಂಬ ಕೆಲವು ವಿಶಿಷ್ಟ ಸೀತಾಫಲದ ತಳಿಗಳು ಇದ್ದು ಇದರಲ್ಲಿ ಬಣ್ಣದ ತಳಿಗಳೂ ಇವೆ.
- ಸೊಲಾಪುರದಲ್ಲಿ ಸೀತಾಫಲದ ಸಸಿಗಳನ್ನು ಒದಗಿಸುವ ದೊಡ್ದ ದೊಡ್ಡ ನರ್ಸರಿಗಳಿದ್ದು, ಹೊಸ ಹೊಸ ತಳಿ ಪರಿಚಯಿಸುವಲ್ಲಿ ಇವರು ಮುಂದಿದ್ದಾರೆ.
- ಪುಣೆಯ ಕಿಸಾನ್ ಕೃಷಿ ವಸ್ತು ಪ್ರದರ್ಶನದಲ್ಲಿ ಈ ತಳಿಗಳ ಹಣ್ಣು, ಸಸಿಗಳನ್ನು ಮಾರಾಟ ಸಹ ಮಾಡುತ್ತಾರೆ.
- ಮಹಾಬಲೇಶ್ವರದಲ್ಲಿ ರಾಮ ಫಲ ಮತ್ತು ಸೀತಾಫಲವನ್ನು ವ್ಯಾಪಕವಾಗಿ ಬೆಳೆಯುತ್ತಾರೆ.
ಸೀತಾಫಲ ಹಣ್ಣಿನಲ್ಲಿ ಇರುವ ಆರೋಗ್ಯ ಗುಣಗಳು:
- ಹಣ್ಣಿನಲ್ಲಿ
ಅಧಿಕ ಕ್ಯಾಲೋರಿ ಒಳಗೊಂಡ ಹಣ್ಣು. ಇದರಲ್ಲಿ ಸರಳ ಸಕ್ಕರೆ , ಗ್ಲೂಕೋಸ್ ಫ್ರುಕ್ಟೋಸ್ ಮುಂತಾದವು ಇರುವ ಕಾರಣ ಸೇವಿಸಿದ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ.
- ಬಾಳೆ ಹಣ್ಣಿನಂತೆ. ಕಬ್ಬಿಣಾಂಶ ಹೆಚ್ಚಾಗಿರುವ ಕಾರಣ ಅನಿಮಿಯಾದಂತಹ ಖಾಯಿಲೆಗಳಿಗೆ ಇದು ಔಷಧಿ.
- ಇದರಲ್ಲಿರುವ ವಿಟಮಿನ್ B5, ವಿಟಮಿನ್ C, ವಿಟಮಿನ್ A, ಸತು ಮತ್ತು ತಾಮ್ರದ ಅಂಶ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
- ಹುಣ್ಣು, ಮತ್ತು ತುರಿಕೆ ಮುಂತಾದ ಅಲರ್ಜಿ ಸಂಬಂಧಿತ ಸಮಸ್ಯೆ ಕಡಿಮೆಯಾಗಲು ಸೀತಾಫಲ ಸೇವಿಸಿದರೆ ಒಳ್ಳೆಯದು.
- ಹಲವಾರು ಸಂಶೋಧನೆಗಳಿಂದ ದೃಡಪಟ್ಟಂತೆ ಇದು ಕ್ಯಾನ್ಸರ್ ರೋಗವನ್ನು ಸ್ವಲ್ಪ ಮಟ್ಟಿಗೆ ಹತ್ತಿಕ್ಕುವಲ್ಲಿ ಸಹಕಾರಿಯಾಗಿದೆ.
- ನಿತ್ಯವೂ ಸೀತಾಫಲ ಸೇವಿಸುವುದರಿಂದ ಗದ್ದೆ ಬೆಳವಣಿಗೆ ಕುಂಠಿತವಾಗುತ್ತದೆ.
- ಉರಿಯೂತ ಕಡಿಮೆಯಾಗುತ್ತದೆ. ಅದೇ ಕಾರಣಕ್ಕೆ ಇದೇ ಕುಟುಂಬದ ಲಕ್ಷ್ಮಣ ಫಲವನ್ನು ಕ್ಯಾನ್ಸರ್ ನಿವಾರಕ ಎಂದು ಪ್ರಚಾರ ಮಾಡಲಾಗುತ್ತದೆ.
- ಸೀತಾಫಲದಲ್ಲಿ ಪಾಲಿಫಿನೋಲಿಕ್ ಎಂಬ ಅಂಶ ಈ ಹಣ್ಣಿನಲ್ಲಿ ಇರುವ ಕಾರಣ ಇದು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
- ಹಾಗಾಗಿ ಡಯಬಿಟಿಸ್ ಖಾಯಿಲೆ ಬಾರದಂತೆ ಮಾಡಲು ಈ ಹನ್ಣು ಸೇವಿಸಬಹುದು.
- ಈ ಹಣ್ಣಿನಲ್ಲಿರುವ ವಿಟಮಿನ್ B6 ಮೆದುಳಿನ ಚಟುವಟಿಕೆ ಹೆಚ್ಚಿಸಲು ಸಹಕಾರಿ. ನರಸಂಕೇತಗಳನ್ನು ಉತ್ತಮಪಡಿಸಿ,ಮನಸ್ಸಿನ ಕೇಂದ್ರೀಕರಣ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
- ಹೃದಯದ ಸಮರ್ಪಕ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿರುತ್ತದೆ. ಅಸಂತ್ರೂಪ್ತ ಕೊಬ್ಬು ಮತ್ತು ಒಮೇಗಾ 6 ಪ್ಯಾಟೀ ಅಸಿಡ್ ಇರುವ ಕಾರಣ ಹೃದಯ ವ್ಯವಸ್ಥೆಯನ್ನು ಬಲಪಡಿಸುವುದು.
- ವಿಟಮಿನ್ c ಹೇರಳವಾಗಿರುವ ಕಾರಣ ಸೀತಾಫಲವು ಆರೋಗ್ಯಕ್ಕೆ ಹಾನಿಕರ ಸೂಕ್ಷ್ಮಾಣು ಜೀವಿಗಳನ್ನು ದೇಹದ ಒಳಗೆ ಪ್ರವೇಶಿಸಲು ಅಡ್ಡಿಪಡಿಸುತ್ತದೆ.
- ದೇಹದೊಳಗಿನ ವಿಷಾಂಶ ಮತ್ತು ಸ್ವತಂತ್ರ ರಾಡಿಕಲ್ಸ್ ಗಳನ್ನು ಹೊರ ಹಾಕುತ್ತದೆ.
- ಕಣ್ಣಿನ ದೃಷ್ಟಿ ಉತ್ತಮವಾಗಿರಿಸಲೂ ಸಹ ಈ ಹಣ್ಣು ಸೇವನೆ ಉತ್ತಮ.ವಿಟಮಿನ್ C ಹೇರಳವಾಗಿರುವ ಕಾರಣ ಕಣ್ಣಿಗೆ ಸಂಬಂಧಿಸಿದ ನರಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಿ ದೃಷ್ಟಿ ಹಾಳಾಗದಂತೆ ರಕ್ಷಿಸುತ್ತದೆ.
- ಇದಷ್ಟೇ ಅಲ್ಲದೆ ಅಧಿಕ ನಾರಿನ ಅಂಶ ಇರುವ ಕಾರಣ ಜೀರ್ಣ ಕ್ರಿಯೆಗೆ ಒಳ್ಳೆಯದು. ಮಲವಿಸರ್ಜನೆ ಉತ್ತಮವಾಗಿರುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆ ಕಡಿಮೆಯಾಗುತ್ತದೆ.
ಸಾಂಗ್ಲಿ ಜಿಲ್ಲೆಯ ಜೆತ್ತಡ್ಕದ ಸಿದ್ದಣ್ಣ ಎಂಬವರು ಬರೇ 11 ಗಿಡಕ್ಕೆ 18000 ರೂ ಆದಾಯ ಪಡೆದಿದ್ದಾರೆ. 2 ಕಿಲೋ ತನಕದ ಕಾಯಿಯನ್ನೂ ಪಡೆದಿದ್ದಾರೆ. ಒಂದು ಗಿಡದಲ್ಲಿ 50 ರಷ್ಟು ಕಾಯಿಗಳು ಬಂದಿವೆ ಎಂಬ ವರದಿ ಇದೆ.
- ಅರ್ಕಾ ಸುಹಾನ ಒಂದು ಉತ್ತಮ ತಳಿ. ಇದರಲ್ಲಿ ಬೀಜ ಕಡಿಮೆ. ಚಮಚದಲ್ಲಿ ತಿನ್ನಬಹುಹುದು. ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಹಣ್ಣು ಸಿಗುತ್ತದೆ.
- ಸೀತಾಫಲ ವರ್ಷಕ್ಕೆ ಒಮ್ಮೆ ಮಾತ್ರ ಇಳುವರಿ ಕೊಡುವಂತದ್ದು.
- ಮಾರುಕಟ್ಟೆಯಲ್ಲಿ ಬೇರೆ ಹಣ್ಣುಗಳು ತುಂಬಾ ಕಡಿಮೆ ಇರುವ ಸಮಯ ಸಪ್ಟೆಂಬರ್ – ಅಕ್ಟೋಬರ್ – ನವೆಂಬರ್ ಗೆ ಫಸಲು ಸಿಗುತ್ತದೆ.
ನೆಟ್ಟು 3 ವರ್ಷಕ್ಕೆ ಇಳುವರಿ ಪ್ರಾರಂಭವಾಗುತ್ತದೆ. ಕಸಿ ಮಾಡಿದ ಗಿಡಗಳಾಗಿರಬೇಕು. ಒಣ ಪ್ರದೇಶದಲ್ಲಿ ತೀರಾ ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದು. ಜ್ಯೂಸ್ ತಯಾರಿಕೆಗೆ ಅತೀ ಹೆಚ್ಚು ಬಳಕೆಯಾಗುತ್ತದೆ.
- ಜವಾರಿ ತಳಿಯಲ್ಲಿ ಬೀಜ ಜಾಸ್ತಿ. ಜವಾರಿ ತಳಿ ಎಲ್ಲಾ ಮುಗಿದ ಮೇಲೆ ಹೈಬ್ರೀಡ್ ತಳಿ ಹಣ್ಣಾಗುತ್ತದೆ.
- ಹೈಬ್ರೀಡ್ ತಳಿಯನ್ನು ಹೆಚ್ಚು ಸಮಯ 8 ದಿನ ತನಕ ಇಡಬಹುದು.
- ಹೂ ಬಿಟ್ಟು 3 ತಿಂಗಳಲ್ಲಿ ಬೆಳೆದು ಹಣ್ಣಾಗುತ್ತದೆ.
ಈ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಕ್ಯಾನ್ಸರ್ ಕೋಶಗಳನ್ನೂ ಸಹ ಸಾಯಿಸುತ್ತದೆ ಎನ್ನುತ್ತಾರೆ. ಒಣ ಭೂಮಿಯಲ್ಲಿ ಬೆಳೆಯಬಹುದಾದ ಅತ್ಯಂತ ಲಾಭದಾಯಕ ಹಣ್ಣಿನ ಬೆಳೆ.ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುವುದಿಲ್ಲ. ಒಣ ಭಾಗಗಳಲ್ಲಿ ಅತ್ಯುತ್ತಮವಾಗಿ ಬರುತ್ತದೆ.