ಹಿಂದಿನಿಂದಲೂ ಕೃಷಿ ಮಾಡುವವರು ಹಸು ಸಾಕಾಣಿಕೆ ಮಾಡುತ್ತಿದ್ದರು. ಈಗಲೂ ಹೆಚ್ಚಿನ ಜನ ಕೃಷಿಗೆ ಗೊಬ್ಬರ ಬೇಕು ಎಂಬ ಉದ್ದೇಶಕ್ಕಾಗಿ ಹಸು ಸಕಾಣೆ ಮಾಡುತ್ತಾರೆ. ಕೆಲವು ಜನ ಹಸು ಸಾಕಣೆ ಇಲ್ಲದೆ ಕೃಷಿ ಮಾಡಬಹುದು ಎನ್ನುವ ವಾದದವರೂ ಇದ್ದಾರೆ. ಮಣ್ಣಿನ ಫಲವತ್ತೆತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಅಗತ್ಯ.
- ಮಿತವ್ಯಯದಲ್ಲಿ ಸಾವಯವ ಗೊಬ್ಬರ ಆಗುವುದಿದ್ದರೆ ಅದು ಹಸುವಿನ ತ್ಯಾಜ್ಯಗಳಿಂದ ಮಾತ್ರ.
- ಅಲ್ಲದೆ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರಕ್ಕೂ ಹಸು ಸಾಕಾಣಿಕೆ ಅಗತ್ಯ.
- ಒಂದೇ ದಿನದಲ್ಲಿ ಗೊಬ್ಬರ ಆಗಬೇಕೇ, ಅದನ್ನು ಮಾಡಿಕೊಡುವ ಒಂದು ಕಾರ್ಖಾನೆ ಇದ್ದರೆ ಅದು ಹಸು, ಎಮ್ಮೆ, ಅಥವಾ ಆಡು.
- ಇಂದು ಸಂಜೆ 25 ಕಿಲೋ ದಷ್ಟು ಹಸುರು ಮೇವನ್ನು ತಿನ್ನಲು ಕೊಟ್ಟರೆ ನಾಳೆ ಬೆಳೆಗ್ಗೆ ಅದು ಗೊಬ್ಬರವಾಗಿ ಸಿಗುತ್ತದೆ.
- ಇದನ್ನು ಬೇರೆ ಯಾವ ವಿಧಾನದಲ್ಲೂ ಮಾಡಲು ಸಾಧ್ಯವಿಲ್ಲ.
- ನಮ್ಮ ದೇಶದಲ್ಲಿ 20.5 ಮಿಲಿಯನ್ ಜನರು ತಮ್ಮ ಜೀವನೋಪಾಯಕ್ಕಾಗಿ ಜಾನುವಾರುಗಳನ್ನು ಸಾಕುತ್ತಾರೆ.
- ಸುಮಾರು 16% ಜನರಿಗೆ ಇದು ಆದಾಯದ ಮೂಲವೂ ಆಗಿರುತ್ತದೆ.
- ಪಶು ಸಂಗೋಪನಾ ಕ್ಷೇತ್ರವು ದೇಶದ ಒಟ್ಟು ಜಿಡಿಪಿಯಲ್ಲಿ 4.11% ಮತ್ತು ಕೃಷಿ ಜಿಡಿಪಿಗೆ 25.6% ಕೊಡುಗೆ ನೀಡುತ್ತದೆ.
- ಕೃಷಿ ಮತ್ತು ಪಶು ಪಾಲನೆ ಒಟ್ಟೋಟ್ಟಿಗೆ ಇದ್ದರೆ ಅದು ಸಮೃದ್ದಿ.
ಭಾರತದಲ್ಲಿ ಜಾನುವಾರು ಸಂಪನ್ಮೂಲಗಳು·
- ವಿಶ್ವದಲ್ಲಿ ಅತಿ ಹೆಚ್ಚು ಜಾನುವಾರುಗಳು ಭಾರತದಲ್ಲಿವೆ- ಸುಮಾರು 535.78 ಮಿಲಿಯನ್·
- ವಿಶ್ವದ ಒಟ್ಟು ಎಮ್ಮೆ ಜನಸಂಖ್ಯೆಯಲ್ಲಿ ಭಾರತವು ಮೊದಲನೆಯ ಸ್ಥಾನದಲ್ಲಿದೆ. – 109.85 ಮಿಲಿಯನ್ ಎಮ್ಮೆಗಳು·
- ಆಡುಗಳ ಜನಸಂಖ್ಯೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ – 148.88 ಮಿಲಿಯನ್ ಆಡುಗಳು·
- ವಿಶ್ವದ ಎರಡನೇ ಅತಿದೊಡ್ಡ ಕೋಳಿ ಮಾರುಕಟ್ಟೆ ಭಾರತದಲ್ಲಿದೆ.·
- ಮೀನುಗಳ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರ ನಮ್ಮದು.·
- ಕುರಿಗಳ ಜನಸಂಖ್ಯೆಯಲ್ಲಿ ಮೂರನೇ ಸ್ಥಾನ ನಮ್ಮ ದೇಶಕ್ಕೆ -74.26 ಮಿಲಿಯನ್·
- ಬಾತುಕೋಳಿಗಳು ಮತ್ತು ಕೋಳಿಗಳ ಜನಸಂಖ್ಯೆಯಲ್ಲಿ ಐದನೇ ಸ್ಥಾನದಲ್ಲಿದೆ -851.81 ಮಿಲಿಯನ್·
- ವಿಶ್ವದ ಒಂಟೆ ಜನಸಂಖ್ಯೆಯಲ್ಲಿ ಹತ್ತನೇ ಸ್ಥಾನದಲ್ಲಿದೆ – 2.5 ಲಕ್ಷ (ಮೂಲ: 20 ನೇ ಜಾನುವಾರು ಗಣತಿ)
ಜಾನುವಾರುಗಳಿಂದ ಲಾಭ:
- ಜಾನುವಾರುಗಳು ಮಾನವನ ಬಳಕೆಗಾಗಿ ಹಾಲು, ಮೊಸರು, ತುಪ್ಪ ಮುಂತಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒದಗಿಸುತ್ತವೆ.
- ಭಾರತವು ವಿಶ್ವದ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
- ಇದು ಒಂದು ವರ್ಷದಲ್ಲಿ (2017-18) ಸುಮಾರು 176.34 ಮಿಲಿಯನ್ ಟನ್ ಹಾಲು ಉತ್ಪಾದಿಸುತ್ತಿದೆ.
- ಒಂದು ವರ್ಷದಲ್ಲಿ ಸುಮಾರು 95.22 ಶತಕೋಟಿ ಮೊಟ್ಟೆಗಳನ್ನು, 7.70 ದಶಲಕ್ಷ ಟನ್ ಮಾಂಸವನ್ನು ಉತ್ಪಾದಿಸುತ್ತಿದೆ.
ಜಾನುವಾರು ಕ್ಷೇತ್ರದ ಉತ್ಪಾದನೆಯ ಮೌಲ್ಯವು 2016-17ರ ಅವಧಿಯಲ್ಲಿ ಪ್ರಸ್ತುತ ಬೆಲೆಗಳಲ್ಲಿ 9,17,910 ಕೋಟಿ ರೂ. ಆಗಿದ್ದು, ಇದು ಕೃಷಿ ಮತ್ತು ಸಂಬಂಧಿತ ವಲಯದ ಉತ್ಪಾದನೆಯ ಮೌಲ್ಯದ ಸುಮಾರು 31.25% ಆಗಿದೆ. ನಿರಂತರ ಬೆಲೆಗಳಲ್ಲಿ ಜಾನುವಾರುಗಳಿಂದ ಉತ್ಪಾದನೆಯ ಮೌಲ್ಯವು ಒಟ್ಟು ಕೃಷಿ ಮತ್ತು ಸಂಬಂಧಿತ ವಲಯದ ಉತ್ಪಾದನೆಯ ಮೌಲ್ಯದ ಸುಮಾರು 31.11% ಆಗಿತ್ತು.
- ಕೃಷಿ ಕಾರ್ಯಗಳಿಗೆ ಯಾಂತ್ರಿಕ ಶಕ್ತಿಯ ಬಳಕೆ ಇದ್ದಾಗ್ಯೂ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ವಿವಿಧ ಕೃಷಿ ಕೆಲಸಗಳಿಗೆ ಎತ್ತುಗಳನ್ನು ಬಳಸುತ್ತಾರೆ.
- ಎತ್ತುಗಳಿ0ದ ಇಂಧನದ ಮೇಲಿನ ಅವಲಂಬನೆ ಸಾಕಷ್ಟು ಕಡಿಮೆಯಾಗುತ್ತಿವೆ.ಎತ್ತುಗಳ ಜೊತೆಗೆ ಒಂಟೆಗಳು, ಕತ್ತೆಗಳು, ಕುದುರೆಗಳು, ಹೇಸರಗತ್ತೆಗಳು ಇತ್ಯಾದಿಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸರಕುಗಳನ್ನು ಸಾಗಿಸಲು ವ್ಯಾಪಕವಾಗಿ ಬಳಸಲಾಗುತ್ತಿದೆ.
- ಗುಡ್ಡಗಾಡು ಪ್ರದೇಶಗಳಲ್ಲಿ ಹೇಸರಗತ್ತೆಗಳು ಮತ್ತು ಕುದುರೆಗಳು ಸರಕುಗಳನ್ನು ಸಾಗಿಸಲು ಏಕೈಕ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ.
- ಅಂತೆಯೇ, ಎತ್ತರದ ಪ್ರದೇಶಗಳಲ್ಲಿ ವಿವಿಧ ವಸ್ತುಗಳನ್ನು ಸಾಗಿಸಲು ಸೈನ್ಯವು ಸಹ ಈ ಪ್ರಾಣಿಗಳನ್ನು ಅವಲಂಬಿಸಬೇಕಾಗುತ್ತದೆ.
ಪ್ರಾಣಿತ್ಯಾಜ್ಯದ ಲಾಭ:
- ಸಗಣಿ ಮತ್ತು ಇತರ ಪ್ರಾಣಿ ತ್ಯಾಜ್ಯಗಳು ಉತ್ತಮ ಗೊಬ್ಬರವಾಗಿದೆ.
- ಅದರ ಮೌಲ್ಯವು ಹಲವಾರು ಕೋಟಿ ರೂಪಾಯಿಗಳೆಂದರೂ ತಪ್ಪಾಗಲಾರದು.
- ಇಂದು ಭೂಮಿಯ ಫಲವತ್ತತೆ ಉಳಿದುಕೊಂಡಿದ್ದರೆ ಅದಕ್ಕೆ ಗಣನೀಯ ಕೊಡುಗೆ ನೀಡಿದ ಜೀವಿಗಳಲ್ಲಿ ಹಸು, ಎಮ್ಮೆ, ಆಡು ಕುರುಗಳು ಎನ್ನಬಹುದು.
- ಗ್ರಾಮೀಣ ಪ್ರದೇಶದ ಜನರಿಗೆ ಇದು ಇಂಧನವಾಗಿಯೂ (ಜೈವಿಕ ಅನಿಲ), ಉಪಯುಕ್ತ.ಜಾನುವಾರುಗಳನ್ನು ‘ಚಲಿಸುವ ಬ್ಯಾಂಕುಗಳು’ ಎಂದು ಕರೆಯಲಾಗುತ್ತದೆ.
- ಜಾನುವಾರುಗಳು ಬಂಡವಾಳ ಇದ್ದಂತೆ. ತುರ್ತು ಸಂದರ್ಭಗಳಲ್ಲಿ ಅದರ ಮಾರಾಟದಿಂದ ಹಣ ತಕ್ಷಣ ಲಭ್ಯವಾಗುತ್ತದೆ.
- ಪ್ರಾಣಿಗಳ ತ್ಯಾಜ್ಯ ವಸ್ತುಗಳನ್ನು ಕಳೆಗಳ ಜೈವಿಕ ನಿಯಂತ್ರಣವಾಗಿಯೂ ಬಳಸಲಾಗುತ್ತದೆ.
- ಜೀವ ಇರುವಾಗಲೂ ಜಾನುವಾರುಗಳು ಮಣ್ಣನ್ನು ಪೋಷಿಸುತ್ತದೆ. ಸತ್ತ ನಂತರವೂ ಅದು ಗೊಬ್ಬರವಾಗಿ ಮಣ್ಣನ್ನು ಶ್ರೀಮಂತಗೊಳಿಸುತ್ತದೆ.
- ರೈತರ ಆರ್ಥಿಕತೆಯಲ್ಲಿ ಜಾನುವಾರುಗಳ ಪಾತ್ರರೈತರ ಆರ್ಥಿಕತೆಯಲ್ಲಿ ಜಾನುವಾರುಗಳು ಪ್ರಮುಖ ಪಾತ್ರವಹಿಸುತ್ತವೆ.
- ಹಸುವಿನ , ಎಮ್ಮೆಯ ಹಾಲು ಮಾರಾಟ ಮಾಡುವುದರಿಂದ ಅದರ ನಿರ್ವಹಣೆಯ ಖರ್ಚು ಹುಟ್ಟುತ್ತದೆ.
- ಹಸು, ಕುರು, ಅಡು, ಎಮ್ಮೆ, ಕೋಳೀ ಸಾಕಣೆಯಲ್ಲಿ ದೊರೆಯುವ ಅವುಗಳ ತ್ಯಾಜ್ಯಗಳು ಉತ್ತಮ ಪೋಷಕಾಂಶಗಳಾಗಿದ್ದು, ಅದನ್ನು ಅವರವರ ಹೊಲಕ್ಕೆ ಗೊಬ್ಬರವಾಗಿಯೂ, ಮಿಗತೆಯಾದುದನ್ನು ಮಾರಾಟ ಮಾಡಲೂ ಆಗುತ್ತದೆ.
- ಒಂದು ಬುಟ್ಟಿ( 25-30 ಕಿಲೋ) ಹಸಿ ಸಗಣಿಗೆ 30 ರೂ. ತನಕ ಬೆಲೆ ಇದೆ. ಕುರಿ ಆಡಿನ ಮಲಕ್ಕೆ ಇದಕ್ಕಿಂತಲೂ ಹೆಚ್ಚಿನ ಮೌಲ್ಯವಿದೆ.
- ಸ್ವಾವಲಂಭಿ ಜೀವನಕ್ಕೆ ಹಸು, ಕೋಳಿ, ಆಡು ಎಮ್ಮೆ ಸಾಕಾಣೆ ಒಂದು ಉತ್ತಮ ವೃತ್ತಿ. ಹೊರಗಡೆಯಿಂದ ಖರೀದಿಸಿ ತರುವುದನ್ನು ಇದು ಕಡಿಮೆ ಮಾಡಿ ಅಷ್ಟು ಆದಾಯವನ್ನು ಉಳಿಸುತ್ತದೆ.
ಹಸು, ಎಮ್ಮೆ , ಆಡು , ಕೋಳಿ, ಸಾಕಣೆ ಮಾಡಿ, ಕರುಗಳನ್ನು ಮಾರಾಟ ಮಾಡುವುದರಿಂದ ಲಾಭವಾಗುತ್ತದೆ. ಕೃಷಿಕರು ಬರೇ ಕೃಷಿಯನ್ನೊಂದೇ ಮಾಡುವ ಬದಲು ಸಾಧ್ಯವಾದಷ್ಟು ಹಸು, ಎಮ್ಮೆ, ಅಡು ಕುರಿ ,ಕೋಳಿ ಸಾಕಣೆ ಮಾಡುತ್ತಾ ಆಹಾರ ಸ್ವಾವಲಂಬನೆ, ಗೊಬ್ಬರ ಸ್ವಾವಲಂಬನೆ ಹೊಂದಬಹುದು. ಹಾಗೆಯೇ ಆದಾಯಕ್ಕೂ ಇದು ಪೂರಕವಾಗಿರುತ್ತದೆ.
ಲೇಖಕರು: ವೀಣಾ ಭುಶೆಟ್ಟಿ, ಶ್ರುತಿ ಮುದಿಗೌಡ್ರು, ಸಂಧ್ಯಾ ರ್ಯಾವನಕಿ , ಪೂಜಾ ಎಸ್ ಪಿ , ಕೃಷಿ ವಿಶ್ವವಿಧ್ಯಾನಿಲಯ, ಬೆಂಗಳೂರು , ಕೃಷಿ ವಿಶ್ವವಿಧ್ಯಾನಿಲಯ ಧಾರವಾಡ.
End of the article:—————————————————————-
search words: Organic manure# animal husbandry # goat farming# buffalo farming# poultry farming # animal waste manure # farmers income# increasing farm income#