ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶ ಅತ್ಯಂತ ಮಹತ್ವದ ಗೊಬ್ಬರವಾಗಿದ್ದು, ರೈತರು ಸಮಯಾಧಾರಿತವಾಗಿ ಇದನ್ನು ಕೊಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಕಬ್ಬಿನ ಬೆಳೆ ಬೆಳೆಯುವಾಗ ಅದರಿಂದ ನಾವು ಮರಳಿ ಪಡೆಯುವುದು ಬರೇ 12 % ಸಕ್ಕರೆ ಮಾತ್ರ . ಉಳಿದ ರವದಿ, ಮಡ್ಡಿ, ಕಾಕಂಬಿ, ಮುಂತಾದವುಗಳನ್ನು ಮಣ್ಣಿಗೆ ಸೇರಿಸಿದರೆ ಕಬ್ಬಿಗೆ ಬೇರೆ ಪೋಷಕಾಂಶವನ್ನು ಕಡಿಮೆ ಕೊಟ್ಟೂ ಬೆಳೆ ಬೆಳೆಸಬಹುದು.
- ಇವೆಲ್ಲಾ ಬರೇ ಹೇಳಲಿಕ್ಕಷ್ಟೇ ಚಂದ . ಪ್ರಾಯೋಗಿಕವಾಗಿ ಇದನ್ನು ಮಾಡಲಿಕ್ಕಾಗುವುದಿಲ್ಲ.
- ಕಬ್ಬಿನ ಹೊಲ ಒಂದು ಕಡೆ, ಸಕ್ಕರೆ ಕಾರ್ಖಾನೆ ಇನ್ನೊಂದು ಕಡೆ.
- ಕಾಕಂಬಿಯನ್ನು ಮಧ್ಯಸಾರಕ್ಕೆ ಬಳಕೆ ಇದೆಲ್ಲಾ ಇರುವ ಕಾರಣ ಆಷ್ಟು ಪೋಷಕಗಳನೂ ಮರಳಿ ಹೊಲಕ್ಕೆ ಬಳಸಲಿಕ್ಕೆ ಆಗುವುದಿಲ್ಲ.
- ಹೊರಮೂಲದಿಂದಲೇ ಅದನ್ನು ಹೊಂದಿಸಿಕೊಳ್ಳಬೇಕು.
ಕಬ್ಬಿಗೆ ಮುಖ್ಯವಾಗಿ ಬೇಕಾಗುವ ಪ್ರಧಾನ ಪೋಷಕಾಂಶಗಳು ಸಾರಜನಕ ರಂಜಕ ಮತ್ತು ಪೊಟ್ಯಾಶಿಯಂ. ಇದಲ್ಲದೆ ಹೆಚ್ಚು ಸಲ ಕಬ್ಬು ಬೆಳೆಯುವ ಕಡೆ ಫಲವತ್ತತೆ ಕಡಿಮೆ ಇರುವ ಮಣ್ಣಿನಲ್ಲಿ, ಹೆಚ್ಚು ಸಾರಜನಕವನ್ನೇ ಬಳಸುವ ಕಡೆಗಳಲ್ಲಿ ಬೆಳೆಯುವಾಗ ಗುಣಮಟ್ಟದ ಕಬ್ಬು ಉತ್ಪಾದನೆಗೆ ಸತು, ಕಬ್ಬಿಣ ಕೊರೆತೆ ಕಂಡು ಬರುತ್ತದೆ. ಜೊತೆಗೆ ದ್ವಿತೀಯ ಪೋಷಕಗಳ. ಕ್ಯಾಲ್ಸಿಯಂ, ಮೆಗ್ನಿಶಿಯಂ, ಮತ್ತು ಗಂಧಕವನ್ನೂ ತಪ್ಪದೇ ಕೊಡಬೇಕಾಗುತ್ತದೆ.
ಸಾರಜನಕದ ಪರಿಣಾಮ:
- ಕಬ್ಬಿನ ಇಳುವರಿಯ ಮೇಲೆ ಪ್ರಬಾವ ಬೀರುವ ಪ್ರಮುಖ ಪೋಷಕ ಎಂದರೆ ಸಾರಜನಕ.
- ಹೆಚ್ಚು ಮೊಳಕೆ ಬರಲು, ಎಲೆ ಹೆಚ್ಚು ಬರಲು, ಉದ್ದ ಬೆಳೆಯಲು, ದಪ್ಪ ಆಗಲು, ಹೆಚ್ಚು ಹೆಚ್ಚು ಆಹಾರ ಸಂಗ್ರಹಣೆಗೆ ಒಟ್ಟಾರೆಯಾಅಗಿ ದ್ಯುತಿ ಸಂಸ್ಲೇಶಣ ಕ್ರಿಯೆ ಚೆನ್ನಾಗಿರಲು ಸಾರಜನ ಬೇಕು.
- ಸಕ್ಕರೆ ಉತ್ಪಾದನೆಗೆ ಸಾರಜನಕ ಅತ್ಯವಶ್ಯಕ.
- ಸಾಮಾನ್ಯವಾಗಿ 95 % ಕ್ಕೂ ಹೆಚ್ಚಿನ ಭೂಮಿಯಲ್ಲಿ ಸಾರಜನಕದ ಕೊರತೆ ಇರುತ್ತದೆ.
- ಅದನ್ನು ಒದಗಿಸಬೇಕು. ಸಾರಜನಕವು ಕೋಶದ ಉತ್ಪತ್ತಿಗೆ ಮತ್ತು ಊತಕದ ಬೆಳೆವಣಿಗೆಗೆ ಅತೀ ಮುಖ್ಯ.
- ಸಾರಜನಕ ಪ್ರಮಾಣ ಸಾಕಷ್ಟು ಇದ್ದಾಗ ಮಾತ್ರ ಇನ್ನುಳಿದ ಪೊಷಕಗಳ ಲಭ್ಯತೆ ಚೆನ್ನಾಗಿರುತ್ತದೆ.
- ಸಸ್ಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಸಾಕಷ್ಟು ಸಾರಜನಕ ಇದ್ದಾಗ ಮಾತ್ರ ಸಸಿ ಚೆನ್ನಾಗಿ ಬೆಳೆಯಬಲ್ಲುದು.
- ಬೆಳೆಗಳಲ್ಲಿ ಶ್ರಕರ ಪಿಷ್ಟ ( ಕಾರ್ಬೋ ಹೈಡ್ರೇಟ್ಸ್) ಚೆನ್ನಾಗಿದ್ದರೆ ಮಾತ್ರ ಸಸ್ಯ ಬೆಳವಣಿಗೆ ಉತ್ತಮವಾಗಿರುತ್ತದೆ.
- ಇದನ್ನು ಒದಗಿಸಿಕೊಡುವ ಮೂಲ ಪೋಷಕ ಸಾರಜನಕ.
ಸಾರಜನಕ ಹೇಗೆ ಕೊಡಬೇಕು:
- ಸಾರಜನಕವನ್ನು ಮಣ್ಣಿನಲ್ಲಿ ಮೇಲ್ಭಾಗದಲ್ಲಿ ಕೊಡಬಾರದು.
- ಸಾಧ್ಯವಾದಷ್ಟು ಮಣ್ಣನ್ನು 4-5 ಇಂಚು ಆಳಕ್ಕೆ ಕೆರೆದು ಮಣ್ಣಿನ ಕೆಳಭಾಗದಲ್ಲಿ ಹಾಕಬೇಕು.
- ಸಾರಜನಕ ಗೊಬ್ಬರ ಪೂರೈಕೆ ಮಾಡಿದಾಗ ಮಣ್ಣಿನಲ್ಲಿ ತೇವಾಂಶ ಇರಬೇಕು.
- ಸಾರಜನಕ ಆಳದಲ್ಲಿ ಕೊಡುವುದರಿಂದ ಬೇರುಗಳು ಮೇಲ್ಬಾಗದಲ್ಲಿ ಬೆಳೆಯದೆ ಕೆಳಭಾಗದಲ್ಲಿ ಬೆಳೆದು ಕಬ್ಬು ಅಡ್ಡ ಬೀಳುವುದು ತಡೆಯಲ್ಪಡುತ್ತದೆ.
- ಹಾಗೆಂದು ಹೆಚ್ಚು ಸಾರಜಕವನ್ನು ಕೊಟ್ಟರೆ ಹುಲುಸಾಗಿ ಬೆಳೆಯುತ್ತದೆ.
- ಕಬ್ಬಿಗೆ ಗಟ್ಟಿತನ ಬರುವುದಿಲ್ಲ. ಸಾರಜನಕದ ಜೊತೆಗೆ ರಂಜಕ ಮತ್ತು ಪೊಟ್ಯಾಶಿಯಂ ಕೊಟ್ಟಾಗ ಸಾರಜನಕದ ಲಾಭ ದೊರೆಯುತ್ತದೆ.
- ಸಾರಜನಕ ಗೊಬ್ಬರ ಕೊಟ್ಟಾಗ ಬೇರು ಎಲ್ಲಿಯವರೆಗೆ ಹಬ್ಬಿದ್ದೆಯೋ ಅಲ್ಲಿತನಕ ಮಾತ್ರ ಅದು ಚಲಿಸುವಂತೆ ನೀರಾವರಿ ಮಾಡಬೇಕು.
- ಹೆಚ್ಚು ನೀರಾವರಿ ಮಾಡಿದರೆ ಪೋಷಕ ವ್ಯರ್ಥವಾಗುತ್ತದೆ.
ಯಾವ ರೂಪದ ಸಾರಜನಕ ಉತ್ತಮ:
- ಕಬ್ಬಿಗೆ ನೈಟ್ರೇಟ್ ರೂಪದ ಮತ್ತು ಅಮೋನಿಯಾ ರೂಪದ ಸಾರಜನಕವನ್ನು ಕೊಟ್ಟರೆ ಉತ್ತಮ. (ಅಮೋನಿಯಂ ನೈಟ್ರೇಟ್,ಕ್ಯಾಲ್ಸಿಯಂ ನೈಟ್ರೇಟ್ )
- ಸಾರಜನಕವನ್ನು ಸಿಂಪಡಿಸಿದಾಗಲೂ ಕಬ್ಬು ಉತ್ತಮವಾಗಿ ಸ್ಪಂದಿಸುತ್ತದೆ.
- ಕಬ್ಬಿಗೆ ಮೊದಲ ಹಂತದಲ್ಲಿ ಉತ್ತಮ ಸಾರಜನಕವನ್ನು ಕೊಡಬಹುದು.
- ಕೊನೇ ಹಂತದಲ್ಲಿ ಸಾರಜನಕ ಕಡಿಮೆ ಮಾಡಬೇಕು.
- ಕಬ್ಬು ಕಠಾವಿನ ಸಮಯದಲ್ಲಿ ಅದರಲ್ಲಿ ಸ್ವಲ್ಪವೂ ಸಾರಜನಕದ ಅಂಶ ಇರಬಾರದು.
- ಕೊನೆ ಹಂತದಲ್ಲಿ ಸಾರಜನಕ ಹೆಚ್ಚು ಕೊಟ್ಟಾಗ ಕಬ್ಬು ನೀರು ಕಬ್ಬಾಗುತ್ತದೆ.
ಎಷ್ಟು ಸಾರಜನಕ ಕೊಡಬೇಕು:
- ಕರ್ನಾಟಕದ ಬೆಳಗಾವಿ, ತುಂಗಬಧ್ರಾ ಮತ್ತು ಬಧ್ರಾ ಪ್ರದೇಶಗಳಲ್ಲಿ ಮಂಡ್ಯ ಮೈಸೂರು ಪ್ರದೇಶಗಳಿಗೆ ಎಕ್ರೆಗೆ 100 ಕಿಲೋ ಗ್ರಾಂ ಸಾರಜನಕ ಕೊಡಬಹುದು.
- ಹೆಚ್ಚು ಮಳೆ ಬೀಳುವ ಕರಾವಳಿಯ ಪ್ರದೇಶಕ್ಕೆ ಎಕ್ರೆಗೆ 75 ಕಿಲೋ ತನಕ ಕೊಡಬಹುದು.
ಯಾವಾಗೆಲ್ಲಾ ಕೊಡಬೇಕು:
- ಯಾವಾಗಲೂ ಸಾರಜನಕವನ್ನು ಒಂದೇ ಬಾರಿಗೆ ಕೊಡಬಾರದು.
- ಮಣ್ಣು , ನೀರು ಮಳೆ ಗೆ ಅನುಗುಣವಾಗಿ ಕನಿಷ್ಟ ನಾಲು ಬಾರಿ ವಿಭಜಿಸಿ ಕೊಡಬೇಕು.
- ನೆಡುವಾಗ 10%, ಆ ನಂತರ ಬೆಳೆಗೆ 6 ವಾರ ಆದಾಗ ಶೇ. 20 ಮತ್ತು ಬೆಳೆಗೆ 10 ವಾರ ಆದಾಗ ಶೇ. 30 ಮತ್ತು 14 ನೇವಾರದ ತರುವಾಯ ಶೇ. 40 ಪ್ರಮಾಣವನ್ನು ಒದಗಿಸಬೇಕು.
- ಸಂಶೋಧನೆಗಳಲ್ಲಿ ಕಂಡು ಬಂದಂತೆ ಯಾವ ರೂಪಾ ಸಾರಜನಕವಾಅದರೂ ಅಂತಹ ಇಳುವರಿ ವೆತ್ಯಾಸ ಬಾರದ ಕಾರಣ ರೈತರು ಮಾರುಕಟ್ಟೆಯಾಲ್ಲಿ ಕಡಿಮೆ ಬೆಲೆಗೆ ದೊರೆಯುವ ಸಾರಜನಕ ಗೊಬ್ಬರವನ್ನು ಕೊಡುವುದು ಉತ್ತಮ.
- ಪೋಷಕಗಳನ್ನು ನೆಡುವಾಗ, ನೆಟ್ಟು 30 ನೇ ದಿನಕ್ಕೆ , 60 ನೇ ದಿನಕ್ಕೆ ಮತ್ತು 90 ನೇ ದಿನಕ್ಕೆ ಕೊಡುವುದರಿಂದ ಫಲಿತಾಂಶ ಉತ್ತಮವಾಗುತ್ತದೆ.
ಬರೇ NPK ಅಲ್ಲದೆ ದ್ವಿತೀಯ ಪೋಷಕಾಂಶಗಳು, ಲಘು ಪೋಷಕಾಂಶಗಳೂ ಅಗತ್ಯವಾಗುತ್ತದೆ.