Jack Anil grafting specialist

ಹಲಸು- ಇವರಲ್ಲಿ ಇಲ್ಲದ್ದು ಬೇರೆ ಎಲ್ಲೂ ಇಲ್ಲ.

ಹಲಸಿನ ತಳಿಯ ಎಲೆಯನ್ನು ನೋಡಿ ಇದ್ದು ಇಂತದ್ದೇ ಹಲಸು, ಅದೇ ರೀತಿ ಯಾವುದೇ ಹಣ್ಣಿನ ಗಿಡದ ಎಲೆ ನೊಡಿಯೇ ಇದು ಇಂತದ್ದು ಎಂದು ಹೇಳುವವರು.  ಇದರ ಕಾಯಿ ಹೀಗೆಯೇ ಇರುತ್ತದೆ ಎಂದು ಹೇಳಬಲ್ಲರು. ಇದೆಲ್ಲಾ  ಅನುಭವ.  ಕೇರಳದಿಂದ ಬಂದ ಜಾಕ್ ಅನಿಲ್ ಈಗ ಹಲಸಿನ ಸಸ್ಯಾಭಿವೃದ್ದಿ ವಿಷಯದಲ್ಲಿ  ಬಹಳ ಪ್ರಸಿದ್ದಿ. ಕೇರಳದ ಜನ ಎಲ್ಲೇ ಹೋಗಲಿ ಗೆದ್ದು ಬರುತ್ತಾರೆ,ಅದಕ್ಕೆ ಖುಷಿ ಪಡಬೇಕು. ಕೇರಳದ ಜನ ಇಲ್ಲಿಗೆ ಬಂದು ನಮಗೆ ಶುಂಠಿ ಬೆಳೆಸಲು ಹೇಳಿ ಕೊಟ್ಟರು. ಹಾಗೆಯೇ ರಬ್ಬರ್…

Read more

ಬಾಳೆ ಜೊತೆ ಮಿಶ್ರ ಬೆಳೆ – ಎಕ್ರೆಗೆ 5 ಲಕ್ಷದಷ್ಟು ಆದಾಯ.

ಬಾಳೆ 9-11 ತಿಂಗಳ ಬೆಳೆ. ಈ ಅವಧಿಯಲ್ಲಿ ಕೆಲವು ಲೆಕ್ಕಾಚಾರ ಹಾಕಿಕೊಂಡು ಮಿಶ್ರ  ಬೆಳೆಯನ್ನು ಬೆಳೆಸಲಿಕ್ಕಾಗುತ್ತದೆ. ಕೆಲವು ಬೆಳೆಗಳ ಜೊತೆಗೆ ಬಾಳೆ ಮಿಶ್ರ ಬೆಳೆಯೂ ಆಗುತ್ತದೆ. ಇದನ್ನು ಹಲವು ರೈತರು ಮಾಡುತ್ತಾರೆ.ಬಾಳೆ ನಾಟಿ ಮಾಡಿ 3-4 ತಿಂಗಳ ತನಕ ಮಧ್ಯಂತರದಲ್ಲಿ ಸಾಕಷ್ಟು ಬೆಳೆಕು ಇರುತ್ತದೆ. ಈ ಸಮಯದಲ್ಲಿ ಅಲ್ಪಾವಧಿ ಬೆಳೆಗಳನ್ನು ಎಡೆಯಲ್ಲಿ ಬೆಳೆಸಬಹುದು. ಕೆಲವು ಬೆಳೆಗಳನ್ನು ಮುಂಚೆಯೇ ಬೆಳೆಸಿ ಅದು ಕಠಾವಿಗೆ 3-4 ತಿಂಗಳು ಇರುವಾಗ ಬಾಳೆ ಹಾಕಿದರೆ ಅದನ್ನು ಕಠಾವು ಅಥವಾ ಒಕ್ಕಣೆ  ಮಾಡುವಾಗ ಅದರ…

Read more
ಅಡಿಕೆ ಯಾಕೆ ಸುರಿ ಬೀಳುತ್ತದೆ

ಅಡಿಕೆ ಯಾಕೆ ಸುರಿ ಬೀಳುತ್ತದೆ? – ಪರಿಹಾರ.

ದಾಸ್ತಾನು ಇಟ್ಟ ಧವಸ ಧಾನ್ಯ ಏನೇ ಇದ್ದರೂ ಸಮರ್ಪಕವಾಗಿ ಇಲ್ಲದಿದರೆ ಅದಕ್ಕೆ ದಾಸ್ತಾನು ಕೀಟ (Storage pest) ಬಂದು ಸುರಿ ಬೀಳುವುದು  ಸಾಮಾನ್ಯ. ಈ ಕೀಟಗಳಲ್ಲಿ ಹಲವು ವಿಧಗಳು ಇದ್ದು, ಅಕ್ಕಿಗೆ ಬರುವ ಗುಗ್ಗುರು,ಅಡಿಕೆಗೆ ಬರುವ ಡಂಕಿ ಬೇರೆ ಹೀಗೆ ಬೇರೆ  ಬೇರೆ ಇದೆ. ಸಾಮಾನ್ಯವಾಗಿ ಸುಲಿದು ದಾಸ್ತಾನು ಇಡುವ ಅಡಿಕೆಗೆ ಈ ಸಮಸ್ಯೆ ಹೆಚ್ಚು. ಹಾಗೆಂದು ಸುಲಿಯದೇ ಇಡುವಲ್ಲಿಯೂ ಇಲ್ಲದಿಲ್ಲ. ಇದು ಮಹಾ ಮಾರಿ ಶತೃ ಎಂತಲೇ ಹೇಳಬಹುದು. ಒಮ್ಮೆ ಈ ಕೀಟ ಬಂದರೆ ಅದನ್ನು ಓಡಿಸುವುದೂ…

Read more
ಭತ್ತದ ಹುಲ್ಲಿನಲ್ಲಿ ಬೆಳೆಸಲಾದ ಅಣಬೆ

ಅಣಬೆ ಬೇಸಾಯದಿಂದ ಕೈತುಂಬಾ ವರಮಾನ.

ತಿನ್ನುವ ಅಣಬೆಗೆ ಉತ್ತಮ ಬೇಡಿಕೆ. ಪಟ್ಟಣಗಳಲ್ಲದೆ, ಹಳ್ಳಿಗಳಲ್ಲೂ ಸಹ ಅಣಬೆಯ ಉಪಯೋಗ ಪ್ರಾರಂಭವಾಗಿದೆ.    ಕಡಿಮೆ ಬಂಡವಾಳದಲ್ಲಿ  ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದಾದ ಕೃಷಿ ಪೂರಕ ವೃತ್ತಿ.  ಬೆಂಗಳೂರಿನ ಗ್ರಾಮಾಂತರ ಭಾಗಗಳಲ್ಲಿ ಹಲವರು ಜನ ಅಣಬೆ ಬೇಸಾಯ ಮಾಡುತ್ತಾರೆ. ಇದೇ ವೃತ್ತಿಯಲ್ಲಿ ಮೇಲೆ ಬಂದವರಿದ್ದಾರೆ. ಗೋವಾದಲ್ಲಿ  ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ  ಇದೆ. ಹೆಚ್ಚಿನ ಕಡೆಗೆ ಗೋವಾದಿಂದ ಅಣಬೆ  ಸರಬರಾಜು ಆಗುತ್ತದೆ. ಇತರ ಕಡೆಗಳಲ್ಲಿ ಬೆಳೆಸುವವರ ಸಂಖ್ಯೆ  ತುಂಬಾ  ಕಡಿಮೆ. ಹೇಗೆ ಪ್ರಾರಂಭಿಸಬೇಕು: ಅಣಬೆ ಬೇಸಾಯ ಮಾಡುವ ಮುನ್ನ…

Read more

ಅಂಜೂರ – ಒಣ ಭೂಮಿಗೆ ಲಾಭದ ಹಣ್ಣಿನ ಬೆಳೆ.

ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸಾಕು ಎನ್ನಿಸುತ್ತದೆ. ಇದೊಂದು ತಾಜಾ ಮತ್ತು ಒಣಗಿಸಿ ಸಂಸ್ಕರಣೆಗೆ  ಸೂಕ್ತವಾದ ಹಣ್ಣು. ಬಹಳಷ್ಟು ಹಣ್ಣುಗಳಲ್ಲಿ ಹುಳಿ ಅಂಶ ( ಆಮ್ಲತೆ ಇದ್ದರೆ, ಇದರಲ್ಲಿ ಅದು ಇಲ್ಲವೇ ಇಲ್ಲ. ಪೌಷ್ಟಿಕಾಂಶ ಭರಿತ ಕೆಲವೇ ಕೆಲವು  ಹಣ್ಣುಗಳಲ್ಲಿ ಇದು ಇದು ಒಂದು. ಕರ್ನಾಟಕದ ಮೈಸೂರಿನ ಶ್ರೀರಂಗಪಟ್ಟಣದ   ಗಂಜಾಮ್ ಎಂಬ ಊರಿನ ಅಂಜೂರದ  ಹಣ್ಣು ಇತಿಹಾಸ  ಪ್ರಸಿದ್ದಿ. ಈಗ ಈ ಪ್ರದೇಶವಲ್ಲದೆ ಹೊಸ…

Read more

ಬೆಂಡೆ ಬೆಳೆಯಬೇಕೆಂದಿರುವಿರೇ? ಸ್ವಲ್ಪ ಓದಿ.

ಬೆಂಡೆ ಬೆಳೆಯಲ್ಲಿ ನಿಮ್ಮ ಕೈ ಮೀರಿ ಅಗುವ ನಷ್ಟ ಎಂದರೆ ಎಲೆ ಹಳದಿಯಾಗುವಿಕೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ. ಇದಕ್ಕೆ ಕಾರಣ ಒಂದು ವೈರಸ್. ಈ ರೋಗ ಬಂದರೆ ಅದಕ್ಕೆ ಔಷಧಿ ಇಲ್ಲ. ಯಾವ ಗಿಡಕ್ಕೆ  ಯಾವಾಗ ಬರುತ್ತದೆ ಎಂಬುದೂ ಹೇಳಲಿಕ್ಕೆ  ಸಾಧ್ಯವಿಲ್ಲ. ಹೀಗಿರುವಾಗ ಬೆಂಡೆ ಬೆಳೆಸಬೇಕೆಂಬ ಆಸಕ್ತಿ ಇದ್ದರೆ , ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳನ್ನೇ ಬೆಳೆಸಿ. ಆಗ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗದು. ಈ ರೋಗಕ್ಕೆ ಔಷಧಿ ಇಲ್ಲದ…

Read more
ತೆಂಗಿನ ಮರಗಳು

ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರದಿಂದ ಇಳುವರಿ ಸಿಗುವುದು ಯಾವಾಗ?

ಹೆಚ್ಚಿನ ರೈತರು ಹೇಳುವುದುಂಟು, ಈ ವರ್ಷ ನಾವು  ತೆಂಗಿನ ಮರಕ್ಕೆ ಸಾಕಷ್ಟು ಗೊಬ್ಬರ ಕೊಟ್ಟಿದ್ದೇವೆ. ಮುಂದಿನ ವರ್ಷ  ಫಸಲು ಹೆಚ್ಚಬಹುದು ಎಂದು.  ಆದರೆ ವಾಸ್ತವಿಕತೆ ಬೇರೆಯೇ ಇದೆ. ಈ ವರ್ಷ ಹಾಕಿದ ಗೊಬ್ಬರದ ಫಲದಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ  ದೊರೆಯುವುದಿಲ್ಲ. ಅದು ದೊರೆಯುವುದು ಮುಂದಿನ 32 ತಿಂಗಳ ನಂತರ. ತೆಂಗಿನ ಮರದ ಕಾಂಡದಲ್ಲಿ ಹುಟ್ಟುವ  ಅದರ ಹೂ ಗೊಂಚಲು ಮೊನ್ನೆ ಮೊನ್ನೆಮೂಡಿದ್ದು ಎಂದು ತಿಳಿಯದಿರಿ. ಇದರೆ ಹುಟ್ಟು,(Innitiation)  ಸುಮಾರು ಮೂರು ವರ್ಷಗಳ ಹಿಂದೆಯೇ ಆಗಿರುತ್ತದೆ. ಆಗಲೇ ಅದರಲ್ಲಿ…

Read more
Suresh nayak on his farm

ರೈತರ ಉದ್ದಾರಕ್ಕೆ ಇದೊಂದೇ ಪರಿಹಾರ.

ರೈತನೊಬ್ಬ ತಾನು ಬೆಳೆದ ಉತ್ಪನ್ನವನ್ನು ತಾನೇ ಮಾರಿ ಸಮಾನ ಮನಸ್ಕರಿಗೂ ಮಾರುಕಟ್ಟೆ ಒದಗಿಸಿಕೊಟ್ಟಿರುವುದು ಬಹುಷಃ  ಇನ್ನೆಲ್ಲೂ ಇರಲಿಕ್ಕಿಲ್ಲ. ಇದು ಈ ಹಿಂದೆಯೂ ಆದ ಉದಾಹರಣೆ ಇಲ್ಲ. ಇದೊಂದು ಹೊಸ ಪರಿಕಲ್ಪನೆ. ಕೊರೋನಾ ಮಹಾಮಾರಿ ದೇಶದ ಅಸಂಖ್ಯಾತ ಜನರಿಗೆ ಬಾರೀ ತೊಂದರೆಯನ್ನು ಉಂಟು ಮಾಡಿತು. ಉದ್ದಿಮೆಗಳು ಮುಚ್ಚಿದವು. ಕೆಲಸಗಾರರು ಕೆಲಸ ಕಳೆದುಕೊಂಡರು. ರೈತರು ಬದುಕಿಗಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಯಿತು. ಇಂತಹ ಸಂದರ್ಭದಲ್ಲಿ  ಒಬ್ಬ ಕೃಷಿಕ ಮಾಡಿದ ಸಾಧನೆ  ಮಾತ್ರ ಕೃಷಿಕರೆಲ್ಲರಿಗೂ ಅನುಕರಣೀಯ. ಹಿರಿಯಡ್ಕದ…

Read more

ಬಾಳೆಗೆ 50% ಗೊಬ್ಬರ ಕಡಿಮೆ ಮಾಡಬಹುದಾದ ವಿಧಾನ.

ಬಾಳೆ ಬೆಳೆಗೆ ಅತ್ಯಧಿಕ ಪೋಷಕಾಂಶಗಳು ಬೇಕು. ಇದು ಕಡಿಮೆ  ಸಮಯದಲ್ಲಿ ದಷ್ಟ ಪುಷ್ಟವಾಗಿ ಬೆಳೆಯುವ ಸಸ್ಯವಾದ ಕಾರಣ ಅಷ್ಟೇ ಪೋಷಕಗಳು ಬೇಕಾಗುತ್ತವೆ. ನಾವು ಕೊಡುವ ಎಲ್ಲಾ ಪೋಷಕಗಳೂ  ಮೊದಲ ಬೆಳೆಗೇ ಬಳಕೆಯಾಗದೆ ಸ್ವಲ್ಪ ಬಾಳೆಯ ಅಂಗಾಂಶಗಳಲ್ಲಿ ಉಳಿದುಕೊಂಡಿರುತ್ತದೆ. ಅದನ್ನು ಸದುಪಯೋಗಮಾಡಿಕೊಂಡರೆ  ಮುಂದಿನ ಕೂಳೆ ಬೆಳೆ ಉತ್ತಮವಾಗಿರುತ್ತದೆ. ಕಂದುಗಳೂ ಆರೋಗ್ಯವಾಗಿರುತ್ತವೆ.   ಎಲ್ಲಾ ಬೆಳೆಗಳೂ ತಮ್ಮ ಬೆಳೆವಣಿಗೆಗೆ ಬಳಕೆ ಮಾಡಿದ ಪೋಷಕಗಳನ್ನು  ಪೂರ್ಣವಾಗಿ  ಉಪಯೋಗಿಸಿಕೊಂಡಿರುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಅದು ಎಲೆಗಳಲ್ಲಿ ಉಳಿದಿರುತ್ತದೆ. ಅದು ಉದುರಿ ಬಿದ್ದಾಗ ಅದರ ಜೊತೆಗೆ…

Read more
ತೆಂಗಿನ ಮರ ಏರುವ ಇಲಿ ನಿಯಂತ್ರಣ ವಿಧಾನ

ತೆಂಗಿನ ಮರಕ್ಕೆ ಇಲಿ ಕಾಟವೇ- ಇದು ಪರಿಹಾರ?

ತೆಂಗಿನ ಮರದ ಮೇಲೆ ಹೋಗಿ ಇಲಿ ಪಾಶಾಣ ಇಡಲಿಕ್ಕೆ ಆಗುವುದಿಲ್ಲ. ಮರ ಏರಿ ಇಲಿ ಕೊಲ್ಲಲಿಕ್ಕೆ ಆಗುವುದಿಲ್ಲ.  ಇಲಿಗಳು ಹಾಳು ಮಾಡುವ ಎಳೆ ಕಾಯಿಗಳನ್ನು ನೋಡಿದರೆ ಮಾತ್ರ ಬೆಳೆದವರಿಗೆ  ಬಹಳ ನಷ್ಟ. ಇಲಿಗಳನ್ನು ಕಾದು ಕುಳಿತುಕೊಳ್ಳಲು ಆಗುತ್ತದೆಯೇ? ಇಲ್ಲ. ಇದನ್ನು  ಕೆಲವು ಉಪಾಯಗಳಿಂದಲೇ  ನಿಯಂತ್ರಿಸಬೇಕು. ನಮ್ಮ ರೈತರ ತಲೆಯಲ್ಲಿ ಕೆಲವು  ಸಣ್ಣ ಸಣ್ಣ ಯೋಚನೆಗಳು ಇರುತ್ತವೆ. ಇದರ ಅನುಕೂಲ ಮಾತ್ರ  ಬಹಳ ದೊಡ್ಡದು. ಇತ್ತೀಚೆಗೆ ನಮ್ಮಲ್ಲಿ ಇಂತಹ ಯುಕ್ತಿಗಳನ್ನು ತಿಳಿದವರು ತುಂಬಾ ಕಡಿಮೆಯಾಗುತ್ತಿದ್ದಾರೆ. ಇಂತಹ ಹಿರಿಯರು ನಮ್ಮೊಂಡನೆ…

Read more
error: Content is protected !!